ಮಲ್ಟಿ ಫಂಕ್ಷನ್ ಆಪಲ್ ಐಪೋಡ್ ಟಚ್

|
ಮಲ್ಟಿ ಫಂಕ್ಷನ್ ಆಪಲ್ ಐಪೋಡ್ ಟಚ್

ಆಪಲ್ ಐಪೋಡ್ ಗಳಲ್ಲಿ ಐಪೋಡ್ ಟಚ್ ಅತ್ಯಧಿಕವಾದ ಮಾರುಕಟ್ಟೆಯನ್ನು ಹೊಂದಿರುವ ಐಪೋಡ್ ಆಗಿದೆ. ಇದೀಗ ಈ ಐಪೋಡ್ ಟಚ್ ಲೇಟಸ್ಟ್ ಮಾಡಲ್ ಬಿಡುಗಡೆಯಾಗಿದ್ದು ಅತ್ಯುತ್ತಮವಾದ ಗುಣ ಲಕ್ಷಣವನ್ನು ಹೊಂದಿದೆ. ಈ ಸಾಧನವು ತುಂಬ ತೆಳುವಾಗಿದ್ದು 110 mm x 58.9 mm x 7.2 mm ಡೈಮೆಂಶನ್ ಮತ್ತು 101ಗ್ರಾಂ ತೂಕವನ್ನು ಹೊಂದಿದೆ. ಈ ಸಾಧನವು ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದ್ದು, ಈ ಎರಡು ಬಣ್ಣದಲ್ಲಿ ಇಷ್ಟ ಬಂದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇದರ ಟಾಪ್ ನಲ್ಲಿ ಒಂದು ಚಿಕ್ಕ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ. ಇದರಲ್ಲಿ 3 ಬಟನ್ ಇದ್ದು ಅವುಗಳನ್ನು ಬಳಸಿ ಇದರ ಶಬ್ದವನ್ನು ಹೆಚ್ಚು ಕಡಿಮೆ ಮಾಡುವುದು, ಆನ್ ಅಥವಾ ಆಫ್ ಗಳನ್ನು ಮಾಡಬಹುದಾಗಿದೆ. ಈ ಐಪೋಡ್ ನ ಡಿಸ್ ಪ್ಲೇ ಸೈಜ್ 3.5 ಇಂಚು ಆಗಿದ್ದು ಮಲ್ಟಿ ಟಚ್ ಫಂಕ್ಷನ್ ಸಪೋರ್ಟ್ ಹೊಂದಿದೆ. ಇದರಲ್ಲಿ ಸ್ಕ್ರೀನ್ ರೆಸ್ಯೂಲೇಶನ್ 960 x 640 ಪಿಕ್ಸಲ್, ಮತ್ತು ಪ್ರತಿ ಇಂಚಿಗೆ 326 ಪಿಕ್ಸಲ್ ಹೊಂದಿದೆ. ಇದುವರೆಗಿನ ಐಪೋಡ್ ಗಳಲ್ಲಿ LCD ಬ್ಯಾಕ್ ಲಿಟ್ ಪ್ಲೇ ಮತ್ತು ಅಧಿಕ ರೆಸ್ಯೂಲೇಶನ್ ಹೊಂದಿರುವ ಐಪೋಡ್ ಇದಾಗಿದೆ.

ಈ ಐಪೋಡ್ ಟಚ್ ನಲ್ಲಿ 2 ಕ್ಯಾಮೆರಾ ಇದ್ದು ಅದರ ಒಂದು ಮುಂಭಾಗದಲ್ಲಿ ಇನ್ನೊಂದು ಹಿಂಭಾಗದಲ್ಲಿ ಬಳಸಲಾಗಿದೆ. ಇದನ್ನು ಬಳಸಿ 960 x 720 ಪಿಕ್ಸಲ್ ರೆಸ್ಯೂಲೇಶನ್ ನಲ್ಲಿ ಫೋಟೊವನ್ನು ತೆಗೆಯಬಹುದಾಗಿದೆ. ಈ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಬಹುದಾಗಿದ್ದು 720p ರೆಸ್ಯೂಲೇಶನ್ ಹೊಂದಿದೆ. ಇದರಲ್ಲಿ ಮುಂಭಾಗದಲ್ಲಿರುವ ಕ್ಯಾಮೆರಾ ಬಳಸಿ ವೀಡಿಯೊ ಕಾಲ್ ಸಹ ಮಾಡಬಹುದಾಗಿದೆ. ಈ ಆಪಲ್ ನಲ್ಲಿ ಏರ್ ಪ್ಲೇ ಸೌಲಭ್ಯ ಇರುವುದರಿಂದ ಸಂಗೀತ ಪ್ರೇಮಿಗಳ ಮನವನ್ನು ಗೆಲ್ಲುವುದರಲ್ಲಿ ಯಾವುದೆ ಸಂಶಯವಿಲ್ಲ.

ಆಪಲ್ ಏಪೋಡ್ ಟಚ್ 8, 32 ಮತ್ತು 64GB ಮಾಡಲ್ ಗಳಲ್ಲಿ ಲಭ್ಯವಿದ್ದು ಇದರ ಬೆಲೆ ಕ್ರಮವಾಗಿ ರು. .10, 500/, ರು.15, 600/- ಮತ್ತು ರು.21, 000 ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X