2005-06ರ ಐಪೋಡ್ ನ್ಯಾನೂ ಆರೋಗ್ಯಕ್ಕೆ ಒಳ್ಳೆಯದಲ್ಲ-ಆಪಲ್

Posted By:
2005-06ರ ಐಪೋಡ್ ನ್ಯಾನೂ ಆರೋಗ್ಯಕ್ಕೆ ಒಳ್ಳೆಯದಲ್ಲ-ಆಪಲ್

ಆಡಿಯೊ ಸಾಧನಗಳಲ್ಲಿ ಆಪಲ್ ಹೆಸರು ತುಂಬಾ ಚಿರಪರಿಚಿತ. ಇದರ ಐ ಪೋಡ್ ಮತ್ತು ಐಫೋನ್ ಗಳಿಗೆ ಸರಿ ಸಾಟಿಯಾದ ಸಂಗೀತ ಸಾಧನ ಮತ್ತೊಂದು ಇದುವರೆಗೆ ಬಂದಿಲ್ಲ. ಹೀಗೆ ಆಡಿಯೊ ಕ್ಷೇತ್ರದಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿರುವ ಆಪಲ್ ಇದೀಗ ತನ್ನ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಅನೇಕ ಪ್ರಯೋಗವನ್ನು ಮಾಡುತ್ತಿದೆ ಎಂಬ ಸುದ್ಧಿಯು ಕೇಳಿ ಬರುತ್ತಿದೆ.

ಆಪಲ್ ಸಾಧನವು ಬಿಸಿಯಾಗಿ ಸ್ಪೋಟಗೊಂಡಿರುವ ಘಟನೆ ತುಂಬಾ ವಿರಳ. ಆದರೆ ಈ ರೀತಿ ಬ್ಯಾಟರಿ ಸ್ಪೋಟ ಗೊಂಡರೆ ಕಂಪನಿ ಹೆಸರಿಗೂ ಕೂಡ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಹೆಚ್ಚಿನ ಗಮನವನ್ನು ನೀಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಆಪಲ್ ಒಂದೆ ಬ್ಯಾಟರಿ ಕಂಪನಿಯನ್ನು ಅವಲಂಬಿಸಿದ್ದು ಇದರಿಂದ ಬ್ಯಾಟರಿ ಗುಣಮಟ್ಟ ಉತ್ತಮವಾಗಿರುವುದಲ್ಲದೆ ಈ ರೀತಿಯ ಘಟನೆಗಳನ್ನು ತಪ್ಪಿಸಬಹುದೆಂದು ಈ ಆಪಲ್ ಕಂಪನಿ ಯೋಚಿಸಿದೆ.

ಬ್ಯಾಟರಿಯ ಕಾಲಾವಧಿ ಹೆಚ್ಚು ನೀಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಕೂಡ ಹೆಚ್ಚು ಆದ್ದರಿಂದ ಬ್ಯಾಟರಿಯನ್ನು ಅತಿ ಹೆಚ್ಚು ಕಾಲ ಬಳಸ ಬಾರದು ಎಂದು ಆಪಲ್ ತನ್ನ ಬಳಕೆದಾರರಿಗೆ ಹಿತವಚನವನ್ನು ನೀಡಿದೆ. ಈ ಕಂಪನಿಯು 2005-2006ರ ಅವಧಿಯಲ್ಲಿ ಐಫೋನ್ ನ್ಯಾನೊ ಕೊಂಡ ಗ್ರಾಹಕರಿಗೆ ಅದರ ಬ್ಯಾಟರಿಯನ್ನು ಬದಲಾಯಿಸುವಂತೆ ಸಲಹೆಯನ್ನು ಕೂಡ ನೀಡಿದೆ.

ಇದರ ಬಗ್ಗೆ ಅಧಿಕ ಮಾಹಿತಿಗೆ ಆಪಲ್ ಸೈಟ್ ಕೂಡ ನೋಡಬಹುದು ಅಲ್ಲದಿದ್ದರೆ ಸಮೀಪದ ಆಪಲ್ ಸೆಂಟರ್ ಗಳಲ್ಲಿ ಇದರ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot