Subscribe to Gizbot

ಬ್ಲೂಟ್ರೆಕ್ ನಿಂದ ಪ್ರಪ್ರಥಮ ಕಾರ್ಬನ್ ಫೈಬರ್ ಬ್ಲೂಟೂಥ್

Posted By:
ಬ್ಲೂಟ್ರೆಕ್ ನಿಂದ ಪ್ರಪ್ರಥಮ ಕಾರ್ಬನ್ ಫೈಬರ್ ಬ್ಲೂಟೂಥ್
ಬ್ಲೂಟೂಥ್ ತಂತ್ರಜ್ಞಾನದಲ್ಲಿ ಮೊದಲಿಗರಾದ ಬ್ಲೂಟ್ರೆಕ್ ತನ್ನ ಅನ್ವೇಷಣೆಯಗಾಗಿ ಪ್ರೆಸ್ಟೇಜ್ಸ್ 2012 ಡಿಸೈನ್ ಮತ್ತು ಇಂಜಿನಿಯರಿಂಗ್ ಅವಾರ್ಡ್ ಅನ್ನು ಇಂಟರ್ ನೇಷನಲ್ CES ಇನ್ನೋವೇಷನ್ಸ್ ನೀಡಿ ಗೌರವಿಸಿದೆ. ಕಾರ್ಬನ್ ಬ್ಲೂಟೂತ್ ಹೆಡ್ ಸೆಟ್ ಮತ್ತು ಸ್ಪೀಕಿ ಬ್ಲೂಟೂಥ್ ಕಾರ್ ಸ್ಪೀಕರ್ ಫೋನ್ ನಲ್ಲಿ ವೈರ್ ಲೆಸ್ ತಂತ್ರಜ್ಞಾನ ನೀಡಿದರ ಫಲವಾಗಿ ಈ ಪ್ರಶಸ್ತಿ ಲಭಿಸಿದೆ.

ಕಾರ್ಬನ್ ಫೈಬರ್ ಹಗುರವಾಗಿದ್ದರು ತುಂಬಾ ಗಟ್ಟಿಯಾದ ವಸ್ತು, ಆದ್ದರಿಂದ ಇದನ್ನು ಅಧಿಕವಾಗಿ ಏರ್ ಕ್ರಾಫ್ಟ್ ಮತ್ತು ಮೋಟರ್ ರೇಸಿಗ್ ವಸ್ತುಗಳನ್ನು ತಯಾರಿಸುವಾಗ ಇದನ್ನು ಬಳಸಲಾಗುತ್ತಿದೆ. ಈ ತಂತ್ರಜ್ಞಾನವನ್ನು ಮೊಟ್ಟ ಮೊದಲಿನದಾಗಿ ಹೆಡ್ ಸೆಟ್ ನಲ್ಲಿ ಬಳಸಿದೆ.

ಈ ಕಾರ್ಬನ್ ಬ್ಲೂಟೂಥ್ ತೂಕ 5.9 ಗ್ರಾಂ ನಷ್ಟಿದ್ದು ಇದನ್ನು ಕಾರ್ಬನ್ ಫೈಬರ್ ಬಳಸಿ ಮಾಡಲಾಗಿದೆ. ಇದರಲ್ಲಿರು ಮೈಕ್ರೋಫೋನ್ ಸ್ಟೆಮ್ ಸ್ಪಷ್ಟವಾದ ಸಂವಹನಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿ ಬ್ಲೂಟೂಥ್ ನ 3.0 ಕಾಂಪ್ಲಿಯೆನ್ಸಿ ಇದ್ದು ಬಳಕೆದಾರರಿಗೆ ಎಷ್ಟು ಹೊತ್ತು ಬಳಕೆ ಮಾಡಿದರೂ ಯಾವುದೆ ಕಿರಿಕಿರಿ ಉಂಟಾಗುವುದಿಲ್ಲ.

ಸ್ಪೀಕಿ ಅನ್ನುವುದು ಮೊಬೈಲ್ ಬ್ಲೂಟಥ್, ಇದನ್ನು ಸಹಾಯದಿಂದ ವಾಹನ ಚಾಲನೆ ಮಾಡುವಾಗ ಮಾತನಾಡಬಹುದಾಗಿದೆ. ಇದರಲ್ಲಿ ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ ಬಳಕೆದಾರರು ಕಾರಿನ ಒಳಗಡೆ ಬಂದ ತಕ್ಷಣ ಅದರಷ್ಟಕ್ಕೆ ಅದು ಆನ್ ಆಗುತ್ತದೆ. ಇದನ್ನು ಯಾವಾಗ ರೀಜಾರ್ಜ್ ಮಾಡಬೇಕು ಎಂಬುದನ್ನು ಅದೆ ಬಳಕೆದಾರರ ಗಮನಕ್ಕೆ ತರುತ್ತದೆ.

ಈ ಸೂಪರ್ ವಸ್ತುಗಳ ಬೆಲೆ ಪ್ರತಿ ಒಂದಕ್ಕು ರು.3, 500 ಆಗಿದ್ದು ಇದನ್ನು Buy.com ಮತ್ತು Amazon.com ಮುಖಾಂತರ ಬೇಡಿಕೆ ಸಲ್ಲಿಸಿ ಪಡೆದುಕೊಳ್ಳಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot