ಮ್ಯೂಸಿಕ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಸೋಂಗ್ಜಾ ಖರೀದಿ ಗೂಗಲ್‌ನಿಂದ

Written By:

ಮ್ಯೂಸಿಕ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಅನ್ನುವಂತಹುದ್ದು ತಂತ್ರಜ್ಞಾನ ಭೂಪರು ಎಂದೆನಿಸಿಕೊಂಡ ಫೇಸ್‌ಬುಕ್, ಆಪಲ್, ಹಾಗೂ ಇದೀಗ ಗೂಗಲ್ ಕೂಡ ಆಸಕ್ತಿಕರ ಕ್ಷೇತ್ರವಾಗಿ ಪರಿಣಮಿಸಿದೆ. ಮ್ಯೂಸಿಕ್ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳನ್ನು ಖರೀದಿಸುವ ಮುಂಚೂಣಿಯಲ್ಲಿ ನಾ ಮುಂದು ತಾ ಮುಂದು ಎಂಬ ನುಗ್ಗಾಟ ಇಲ್ಲಿ ಉಂಟಾಗುತ್ತಿದೆ.

ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಯಾದ ಸೋಂಗ್ಜಾ ಬಗ್ಗೆ ನಾವಿಲ್ಲಿ ಮಾತನಾಡುತ್ತಿದ್ದೇವೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ ಈ ಸ್ಟ್ರೀಮಿಂಗ್ ಸೇವೆಯನ್ನು ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿ ಗೂಗಲ್ ಕೆಲವೊಂದು ಯೋಜನೆಗಳನ್ನು ಮಾಡುತ್ತಿದೆ.

ಗೂಗಲ್ ಯೋಜನೆ ಮ್ಯೂಸಿಕ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಸೋಂಗ್ಜಾ

ಆಪಲ್ ಈಗಾಗಲೇ ಬೀಟ್ ಇಲೆಕ್ಟ್ರಾನಿಕ್ಸ್ ಅನ್ನು ಹೆಚ್ಚು ಮೌಲ್ಯ ಕೊಟ್ಟು ಖರೀದಿಸಿದ್ದು ತನ್ನ ಮ್ಯೂಸಿಕ್ ಗುಣಮಟ್ಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಖರೀದಿಯನ್ನು ಮಾಡಿತ್ತು. ಇದೇ ರೀತಿ ಗೂಗಲ್ ಕೂಡ ತನ್ನ ಸಂಗೀತದ ಮಟ್ಟವನ್ನು ಅತ್ಯುನ್ನವಾಗಿಸುವ ಗುರಿಯನ್ನು ಹೊಂದಿದ್ದು ಹದಿನೈದು ಮಿಲಿಯನ್‌ನಲ್ಲಿ ಸೋಂಗ್ಜಾವನ್ನು ಗೂಗಲ್ ಖರೀದಿಸಲಿದೆ. ಸೋಂಗ್ಜಾ 5.5 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದ್ದು ತನ್ನ ಸ್ಪರ್ಧಿಗಳಾದ ಸ್ಪೋಟಿಫೈ ಮತ್ತು ಪಂಡೋರಾ ತಲಾ 10 ಮಿಲಿಯನ್ ಮತ್ತು 77 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ಎಲ್ಲಾ ಪ್ರಮುಖ ಪ್ಲಾಟ್‌ಫಾರ್ಮ್‌ಗಳಾದ ಆಂಡ್ರಾಯ್ಡ್, ಬ್ಲಾಕ್‌ಬೆರ್ರಿ, ಐಓಎಸ್ ಮತ್ತು ವಿಂಡೋಸ್ ಫೋನ್‌ಗಳಲ್ಲಿ ಇದು ಅಪ್ಲಿಕೇಶನ್‌ಗಳನ್ನು ಹೊಂದಿದೆ. ಅಲ್ಲದೆ ಗೂಗಲ್ ತನ್ನದೇ ಆದ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಯಾದ ಗೂಗಲ್ ಪ್ಲೇ ಮ್ಯೂಸಿಕ್ ಅನ್ನು ಹೊಂದಿದ್ದು, ಇದರೊಂದಿಗೆ ಆರು ವರ್ಷಗಳಷ್ಟು ಹಳೆಯದಾದ ಕಂಪೆನಿ ಸೋಂಗ್ಜಾವನ್ನು ಖರೀದಿಸುತ್ತಿದ್ದು ವಿವಿಧ ಥೀಮ್‌ಗಳು ಮತ್ತು ಅಂಶಗಳನ್ನು ಆಧರಿಸಿ ಮ್ಯೂಸಿಕ್ ಮಿಕ್ಸ್‌ಗಳನ್ನು ಇದು ರಚಿಸುತ್ತದೆ.

ಗೂಗಲ್ ಈ ಕಂಪೆನಿಯನ್ನು ಹೇಗೆ ಖರೀದಿಸಲಿದೆ ಎಂಬುದರ ಬಗ್ಗೆ ನಾವಿನ್ನೂ ಖಾತ್ರಿಯನ್ನು ಹೊಂದಿಲ್ಲದ್ದರಿಂದ, ಸೋಂಗ್ಜಾ ಪ್ಲೇ ಲಿಸ್ಟ್‌ಗಳು ಗೂಗಲ್ ಪ್ಲೇ ಮ್ಯೂಸಿಕ್‌ನೊಂದಿಗೆ ಇಂಟಿಗ್ರೇಟ್ ಆಗಬಹುದೆಂಬ ನಿರೀಕ್ಷೆ ನಮ್ಮದಾಗಿದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot