Subscribe to Gizbot

ಸಾಹಸಪ್ರೇಮಿಗಳಾಗಿ ಬರುತ್ತಿದೆ Zzಒನ್ ರವೈನ್ 2 ಮೊಬೈಲ್

Posted By:
ಸಾಹಸಪ್ರೇಮಿಗಳಾಗಿ ಬರುತ್ತಿದೆ Zzಒನ್ ರವೈನ್ 2 ಮೊಬೈಲ್

ಕ್ಯಾಸಿಯೊ ಕಂಪನಿ ಬಿಡುಗಡೆ ಮಾಡುವ ಮೊಬೈಲ್ ತನ್ನದೆಯಾದ ಗುಣ ಲಕ್ಷಣವನ್ನು ಹೊಂದಿದ್ದು ಜನರನ್ನು ಯಾವಾಗಲು ಬೆರಗು ಕಣ್ಣಿನಿಂದ ನೋಡುವಂತೆ ಮಾಡುತ್ತದೆ. ಈಗ ಅಂತದೆ ಬೆರಗನ್ನು ತರುವಂತಹ ಮೊಬೈಲ್ Zzಒನ್ ರವೈನ್ 2.

ಈ ಮೊಬೈಲ್ ಫೋನ್ ಸಾಹಸ ಪ್ರೇಮಿಗಳಾಗಿಯೆ ಮಾಡಲಾಗಿದ್ದು ಈ ಮೊಬೈಲ್ ಬಾಹ್ಯ ರೂಪ 1.38 ಆಗಿದೆ. ಇದರ ಡಿಸ್ ಪ್ಲೇಯನ್ನು ವಾಚ್ ರೀತಿಯಲ್ಲಿ ಸಹ ಬಳಸಬಹುದಾಗಿದೆ. ಇದರ ಸ್ಕ್ರೀನ್ ಸೈಜ್ ನೋಡಲು ಅಷ್ಟು ಆಕರ್ಷಕವಾಗಿ ಇಲ್ಲವಾದರೂ ಇದರ ಕ್ಯಾಮೆರಾ ಮತ್ತು ಮೆಮೊರಿ ಸಾಮಾರ್ಥ್ಯದಿಂದಾಗಿ ಇದರ ಕಡೆಗೆ ಮೆಚ್ಚುಗೆಯನ್ನು ಉಂಟುಮಾಡುತ್ತದೆ. ಇದರ ಮೆಮೊರಿ ಸಾಮರ್ಥ್ಯ 32 GB ಆಗಿದ್ದು, ಇದರ ಕ್ಯಾಮೆರಾ ಸಾಮರ್ಥ್ಯ 3.2 ಮೆಗಾ ಪಿಕ್ಸಲ್ ಆಗಿದೆ.

ಇದರಲ್ಲಿ ಇಂಟರ್ ನೆಟ್ ಸೌಲಭ್ಯಕ್ಕಾಗಿ ಅತ್ಯಾಧುನಿಕವಾದ ಒಪೆರಾ ಮಿನಿ ಬಳಸಬೇಕಾಗುತ್ತದೆ. ಅಲ್ಲದೆ ಉಪಗ್ರಹದಿಂದ GPS ಸೌಲಭ್ಯವನ್ನು ಪಡೆಯಬಹುದಾಗಿದೆ. ಇದರಿಂದಾಗಿ ನಾವಿಗೇಶನ್ ಗೆ ಸಹಾಯಕವಾಗುತ್ತದೆ. ಈ ಹ್ಯಾಂಡ್ ಸೆಟ್ ಅನ್ನು ಇದರ ಸಾಧನಗಳಲ್ಲಿ ಬ್ಲೂಟೂಥ್ ನಿಂದ ಬಳಕೆ ಮಾಡಬಹುದಾಗಿದೆ.

ಈ ಮೊಬೈಲ್ ಉತ್ತಮ ಗುಣಮಟ್ಟದ ಶಬ್ದದ ಸ್ಪಷ್ಟತೆಯ ಜೊತೆಗೆ ಅಧಿಕ ಕಾಲದವರೆಗೆ ಬ್ಯಾಟರಿ ಸಾಮರ್ಥ್ಯವನ್ನು ಸಹ ಹೊಂದಿರುತ್ತದೆ.ಗ್ಯಾಡ್ಜೆಟ್ ಡೊಡ್ಡದಾದ ಸ್ಕ್ರೀನ್ ಮತ್ತು ಅಧಿಕ ಪಿಕ್ಸಲ್ ಕ್ಯಮೆರಾ ಹೊಂದಿಲ್ಲವಾದರೂ ಅತ್ಯುತ್ತಮವಾಗಿರುತ್ತದೆ ಎಂಬುದಕ್ಕೆ ಉದಾಹರಣೆ ಈ Zzಒನ್ ರವೈನ್ 2. ಈ ಮೊಬೈಲ್ ನವಂಬರ್ 17 ಕ್ಕೆ ಬಿಡುಗಡೆಯಾಗಲಿದ್ದು ಇದರ ಬೆಲೆಯ ಬಗ್ಗೆ ಯಾವುದೆ ಮಾಹಿತಿ ತಿಳಿದು ಬಂದಿಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot