500 ರೂಪಾಯಿಗೆ ಉತ್ತಮ ಹೆಡ್ ಫೋನ್

Posted By: Varun
500 ರೂಪಾಯಿಗೆ ಉತ್ತಮ ಹೆಡ್ ಫೋನ್

ಕಡಿಮೆ ಬಜೆಟ್ ನ ಎಂಪಿ 3 ಪ್ಲೇಯರುಗಳು ಬಂದ ಮೇಲೆ ಜಾಗಿಂಗ್ ಮಾಡುವಾಗ, ಬಸ್ಸಿನಲ್ಲಿ ಹೋಗುವಾಗ, ಕೆಲಸ ಮಾಡುವಾಗ, ಅಷ್ಟೇ ಏಕೆ, ನಿದ್ದೆ ಬಂದಿಲ್ಲವೆಂದರೆ ಮಲಗಿಕೊಂಡೇ ಹಾಡು ಕೇಳಲು ಅನುಕೂಲವಾಗಿದೆ.

ಆದರೆ ಲ್ಯಾಪ್ಟಾಪ್ ನಿಂದ ಕೇಳುವಾಗ, ಕಂಪ್ಯೂಟರ್ ನಿಂದ ಕೇಳಬೇಕಾದರೆ ಇಯರ್ ಫೋನ್ ಅನ್ನು ಕನೆಕ್ಟ್ ಮಾಡಿ ಕೇಳಲು ಆಗುವುದಿಲ್ಲ. ಅದಷ್ಟೇ ಅಲ್ಲದೆ ಫಿಲಂ ಅನ್ನು ಕೂಡ ನೋಡಲು ಸರಿಹೊಗಲ್ಲ. ಹೀಗಿರುವಾಗ ಮ್ಯೂಸಿಕ್ ನ ಅನುಭೂತಿಯನ್ನು ಮತ್ತಷ್ಟು ಹೆಚ್ಚಿಸಲು ಹಾಗು ಫಿಲಂ ನ ಮಜವನ್ನು ಪೂರ್ಣವಾಗಿ ಅನುಭವಿಸಲು ಒಂದು ಒಳ್ಳೆಯ ಹೆಡ್ ಫೋನ್ ಅತ್ಯಾವಶ್ಯಕ.

ಮಾರುಕಟ್ಟೆಯಲ್ಲಿ ಹಲವಾರು ಹೆಡ್ ಫೋನುಗಳು ಇದ್ದರೂ ಕಡಿಮೆ ಬಜೆಟ್ಟಿಗೆ ಉತ್ತಮ ಬಾಸ್ ಎಫೆಕ್ಟ್ ಇರುವ ಹಾಗು ಎಂಪಿ3 ಪ್ಲೇಯರುಗಳಿಗೆ, ಲ್ಯಾಪ್ಟಾಪ್, ಎಲ್ಲದಕ್ಕೂ ಕನೆಕ್ಟ್ ಮಾಡಲು ಇರುವ ಸೆಟ್ ಗಳು ಸಿಗುವುದಿಲ್ಲ.

ಇಷ್ಟೆಲ್ಲಾ ಇರುವ ಫಿಲಿಪ್ಸ್ ನ SHP 1900 ಹೆಡ್ ಸೆಟ್ ಆನ್ಲೈನ್ ನಲ್ಲಿ ಕೇವಲ 500 ರೂಪಾಯಿಗೆ ಸಿಗಲಿದ್ದು, ನೋಡಲಿಕ್ಕೆ ಆಕರ್ಷಕವಾಗಿದ್ದು, ಉತ್ತಮ ಬಾಸ್ ಎಫೆಕ್ಟ್ ಹೊಂದಿದೆ. ಗಂಟೆಗಟ್ಟಲೆ ಮ್ಯೂಸಿಕ್ ಕೇಳಿದರೂ ಕಿವಿಗೆ ನೋವಾಗದ ಸಾಫ್ಟ್ ಕುಶನ್ ಹೊಂದಿದ್ದು, 200 ಗ್ರಾಂ ತೂಕವಿದ್ದು, 2 ಮೀಟರ್ ಕೇಬಲ್ ಹೊಂದಿದೆ.

ನಿಮ್ಮ ತಲೆಗೆ ಸರಿಹೊಂದುವಂತೆ ಅಡ್ಜಸ್ಟ್ ಮಾಡಬಹುದಾದಂಥ ಹೆಡ್ ಬ್ಯಾಂಡ್ ಇರುವ ಇದು ಕಡಿಮೆ ಬಜೆಟ್ ನ ಇತರೆ ಹೆಡ್ ಫೋನ್ ಗಳಾದ ಐಬಾಲ್ ಹಾಗು ಕ್ರಿಯೇಟಿವ್ ಗೆ ಹೋಲಿಸಿದರೆ ಅತ್ಯುತ್ತಮವಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot