ಅತಿವೇಗದ ಇಂಟರ್ನೆಟ್ ಹೊಂದಿರುವ ಭಾರತದ ಒಂದೇ ಹಳ್ಳಿ

  By Shwetha
  |

  ಇಂದಿನ ಆಧುನಿಕ ಯುಗದಲ್ಲಿ ಇಂಟರ್ನೆಟ್ ಬಳಕೆ ನಮ್ಮ ಜೀವನದ ಅವಿಭಾಜ್ಯ ಅಂಗಗಳಲ್ಲೊಂದಾಗಿಬಿಟ್ಟಿದೆ. ನೀವು ಬಳಸುತ್ತಿರುವ ಇಂಟರ್ನೆಟ್ ಸೇವೆ ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ದೊರೆಯುವಂಥದ್ದಾಗಿರಬಹುದು ಅಥವಾ ಸಾರವಜನಿಕವಾಗಿ ಲಭ್ಯವಾಗಿರುವಂಥದ್ದೇ ಆಗಿರಬಹುದು ಅಂತೂ ಅತೀವೇಗದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಇದು ಒದಗಿಸುತ್ತದೆ.

  ಓದಿರಿ: FM ರೇಡಿಯೊ ಬಳಸಿ ವೈಫೈ ಸಿಗ್ನಲ್ ಸುಧಾರಿಸಿ

  ಇನ್ನು ಹಳ್ಳಿಗಳೂ ಇಂಟರ್ನೆಟ್‌ನ ಪ್ರಯೋಜನವನ್ನು ಪಡೆದುಕೊಂಡು ಮುಂದುವರಿಯಬೇಕೆಂಬ ಉದ್ದೇಶದಿಂದ ಸರಕಾರ ಸಾರ್ವಜನಿಕವಾಗಿ ವೈಫೈ ವಿತರಣೆಯನ್ನು ಮಾಡುತ್ತಿದೆ. ರೈಲು ನಿಲ್ದಾಣಗಳು, ಬಸ್ಸು ನಿಲ್ದಾಣಗಳು, ವಿಮಾನ ನಿಲ್ದಾಣಗಳು ಹೀಗೆ ಪ್ರಮುಖ ಸ್ಥಳಗಳಲ್ಲಿ ವೈಫೈ ವಿತರಣೆಯನ್ನು ಸರಕಾರ ಸಾರ್ವಜನಿಕರಿಗೆ ಒದಗಿಸುತ್ತಿದೆ. ಆದರೆ ನಿಮಗೆ ಇಲ್ಲೊಂದು ಆಶ್ಚರ್ಯಕರ ಸುದ್ದಿಯನ್ನು ನಾವಿಂದು ತಿಳಿಸಲಿದ್ದೇವೆ.

  ಓದಿರಿ: ವೈಫೈ ವೇಗಗೊಳಿಸಬೇಕೇ ಇಲ್ಲಿದೆ ಸಲಹೆಗಳು

  ರಾಜಸ್ಥಾನದ ಒಂದು ಪುಟ್ಟ ಹಳ್ಳಿಯಾದ ಬಾದ್ರಾ ಮರುಭೂಮಿ ವಲಯವಾಗಿದ್ದರೂ ಇಂದು ಅತಿವೇಗದ ಕಡಿಮೆ ದರದ ಸಾರ್ವಜನಿಕ ವೈಫೈ ಲಭ್ಯವಾಗುವ ಸ್ಥಳ ಎಂಬುದಾಗಿ ಜನಪ್ರಿಯಗೊಂಡಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಅತಿವೇಗದ ವೈಫೈ ಒದಗಿಸುವ ಹಳ್ಳಿ

  40,000 ಜನಸಂಖ್ಯೆಯ ಈ ಪುಟ್ಟ ಹಳ್ಳಿಯಲ್ಲಿ ಪ್ರತೀ ದಿನ ನಾಲ್ಕು ರೈಲುಗಳು ಓಡಾಟವನ್ನು ನಡೆಸುತ್ತಿವೆ.ಭಾರತದ ರಾಜಧಾನಿ ದೆಹಲಿಯಿಂದ 275 ಕಿಮೀ ದೂರದಲ್ಲಿರುವ ಈ ಊರು ಇದೀಗ ಕಡಿಮೆ ದರದ ಅಂತೆಯೇ ಅತಿವೇಗದ ವೈಫೈ ಒದಗಿಸುವ ಹಳ್ಳಿಯಾಗಿ ಜನಜನಿತವಾಗಿದೆ.

  ಸಾರ್ವಜನಿಕ ವೈಫೈ ವ್ಯವಸ್ಥೆ

  ಭಾರತದಲ್ಲಿ ಕೆಲವು ಮಹಾನಗರಗಳಾದ ಬೆಂಗಳೂರು, ಪುಣೆ, ಕೊಚ್ಚಿ, ದೆಹಲಿಗಳಲ್ಲೂ ಸಾರ್ವಜನಿಕ ವೈಫೈ ವ್ಯವಸ್ಥೆ ಇದ್ದು ಇದರ ಪರಿಣಾಮ ಬಹಳ ಕಡಿಮೆ

  ಇಂಟರ್ನೆಟ್‌ಗೆ ಸಂಪರ್ಕ

  ಬಾದ್ರಾದ ಬಸ್ಸುನಿಲ್ದಾಣ, ರೈಲ್ವೇ ನಿಲ್ದಾಣ ಮಾರುಕಟ್ಟೆ ರಸ್ತೆಗಳು ಇಂಟರ್ನೆಟ್‌ಗೆ ಸಂಪರ್ಕಗೊಂಡಿವೆ. ಇದರ ಪರೀಕ್ಷೆ ಕೂಡ ನಡೆದಿದ್ದು ನಿಜಕ್ಕೂ ಇದು ಅದ್ಭುತವಾಗಿದೆ.

  ವೈಫೈ ಸೌಲಭ್ಯ

  ಪೂರ್ಣ ಪ್ರಮಾಣದ ಚಲನಚಿತ್ರವನ್ನು ತಮ್ಮ ಫೋನ್‌ನಲ್ಲಿಯೇ ಈ ವೈಫೈ ಸೌಲಭ್ಯವನ್ನು ಬಳಸಿಕೊಂಡು ಡೌನ್‌ಲೋಡ್ ಮಾಡುತ್ತಿದ್ದು ಹಣ ವರ್ಗಾವಣೆ ಆನ್‌ಲೈನ್ ಸಂಬಂಧಿತ ಕೆಲಸಗಳನ್ನು ಇಲ್ಲಿನ ನಿವಾಸಿಗಳು ಸೂಸುತ್ರವಾಗಿ ನಿರ್ವಹಿಸುತ್ತಿದ್ದಾರೆ.

  ವೈಫೈ ವರದಾನ

  ಇನ್ನು ವಿದ್ಯಾರ್ಥಿಗಳಿಗೆ, ಜಾಬ್ ಅಪ್ಲಿಕೇಶನ್ ಪಡೆದುಕೊಳ್ಳಲು, ಸೂಚನೆಗಳ ಮಾಹಿತಿಗಾಗಿ ಹೀಗೆ ಪ್ರತಿಯೊಂದಕ್ಕೂ ಬಾದ್ರಾದ ಸಾರ್ವಜನಿಕ ವೈಫೈ ವರದಾನವಾಗಿದೆ.

  ವೇಗದ ಮತ್ತು ಕಡಿಮೆ ದರದ ವೈಫೈ ವ್ಯವಸ್ಥೆ

  1ಜಿಬಿ ಡೇಟಾದ ದರ ರೂ 64 ಆಗಿದ್ದು ಪ್ರತೀ ತಿಂಗಳು ಇದೇ ದರವಾಗಿದೆ. ವೇಗದ ಮತ್ತು ಕಡಿಮೆ ದರದ ವೈಫೈ ವ್ಯವಸ್ಥೆ ಹೇಗೆ ಜನರ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂಬುದಕ್ಕೆ ಬಾದ್ರಾ ಉತ್ತಮ ಉದಾಹರಣೆಯಾಗಿದೆ.

  ಚೀಪ್ ಇಂಟರ್ನೆಟ್ ವ್ಯವಸ್ಥೆ

  ರಾಜಸ್ಥಾನ ಮೂಲದ ಎಮ್‌ಟಿಎಸ್ ಕಂಪೆನಿ ಬಾದ್ರಾದ ಚೀಪ್ ಇಂಟರ್ನೆಟ್ ವ್ಯವಸ್ಥೆಯ ರುವಾರಿ ಎಂದೆನಿಸಿದ್ದಾರೆ. ಇಂತಹ ಪುಟ್ಟ ಹಳ್ಳಿಗಳಲ್ಲಿ ನಾವು ತರುವಂತಹ ಸಣ್ಣ ಪ್ರಗತಿಗಳು ಭಾರತದ ಭವಿಷ್ಯವನ್ನೇ ಉಜ್ವಲಗೊಳಿಸಲಿದೆ.

  ಸಣ್ಣ ಸಣ್ಣ ಹಳ್ಳಿ

  ಈ ಊರಿನಲ್ಲಿ ಪ್ರತೀ ದಿನದ ಡೇಟಾ ಬಳಕೆ 160 ಜಿಬಿಯಾಗಿದೆ. ರಾಜ್ಯದ ಇನ್ನೂ 11 ಸಣ್ಣ ಸಣ್ಣ ಹಳ್ಳಿಗಳಿಗೆ ಇದೇ ವ್ಯವಸ್ಥೆಯನ್ನು ಒದಗಿಸುವ ಯೋಜನೆಯಲ್ಲಿ ಕಂಪನಿ ಇದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  This unremarkable place, 275km (170 miles) from the Indian capital, Delhi, is in news these days: it is the first town in India to offer full and cheap wi-fi coverage.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more