ವೈರ್ ಲೆಸ್ ಬ್ಲೂಟೂಥ್ ರೇಡಿಯೊ

Posted By:
ವೈರ್ ಲೆಸ್ ಬ್ಲೂಟೂಥ್ ರೇಡಿಯೊ

ಸ್ಮಾರ್ಟ್ ಫೋನ್ ಗಳು, Mp3 ಪ್ಲೇಯರ್ ಗಳು ಬಂದ ಮೇಲೆ ವಾಕ್ ಮೆನ್ ಗಳು ತಮ್ ಪ್ರಾಮುಖ್ಯತೆಯನ್ನು ಕಳೆದುಕೊಂಡು ಬಿಟ್ಟವು. ಆದರೆ ನಂತರ ರೇಡಿಯೊಗಳು ಮೊಬೈಲ್ ಫೋನ್ ಗಳಲ್ಲಿ ಲಭ್ಯವಾದರೂ, ಪ್ರತ್ಯೇಕ ರೇಡಿಯೊವನ್ನು ಯಾರೂ ಕೊಂಡೊಯ್ಯುತ್ತಿಲ್ಲ.

ಆದರೆ ರೇಡಿಯೊ ಪುನಃ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಲು ಉತ್ತಮ ಸ್ಪೀಕರ್ ಅಂದರೆ 'ಹಿಡನ್ ರೇಡಿಯೊ' ಮಾರುಕಟ್ಟೆಗೆ ಬಂದಿದೆ. ಈ ಸ್ಪೀಕರ್ ನೋಡಲು ಎಲೆಕ್ಟ್ರಾನಿಕ್ಸ್ ವಸ್ತುವಿನ ಹಾಗೆ ಕಾಣುವುದಿಲ್ಲ, ಅದು ನೋಡಲು ಒಂದು ಚಿಕ್ಕ ಡಬ್ಬದ ಹಾಗೆ ಕಾಣುತ್ತದೆ. ಕೂಲಂಕಷವಾಗಿ ಪರಿಶೀಲಿಸಿದಾಗ ಅದು ಸ್ಪೀಕರ್ ಎಂದು ಗೊತ್ತಾಗುತ್ತದೆ.

ಬೇರೆ ಸ್ಪೀಕರ್ ಗಳಿಗೆ ಹೋಲಿಸಿದರೆ ಇದರ ವಿನ್ಯಾಸವೆ ಇದನ್ನು ಇತರ ಸ್ಪೀಕರ್ ಗಳಿಂದ ಭಿನ್ನವಾಗಿ ನಿಲ್ಲಿಸುತ್ತದೆ. ಈ ಸ್ಪೀಕರ್ ನಲ್ಲಿ ಯಾವುದೆ ವೈರ್ , ಪೋರ್ಟ್ ಆಗಲಿ ಇಲ್ಲದೆ ಬಳಕೆದಾರರ ಮೆಚ್ಚುಗೆಯನ್ನು ಗಳಿಸುವಂತೆ ಇದನ್ನು ತಯಾರಿಸಲಾಗಿದೆ. ಈ ವೈರ್ ಲೆಸ್ ಸ್ಪೀಕರ್ ಬ್ಲೂಟೂಥ್ ಇರುವ ಯಾವುದೆ ಸಾಧನದಲ್ಲಿ ಸಹ ಕಾರ್ಯವನ್ನು ನಿರ್ವಹಿಸುತ್ತದೆ. ಇದು ಆಪಲ್ ನ ಲ್ಯಾಪ್ ಟಾಪ್ , ಐಪೋಡ್, ಟ್ಯಾಬ್ಲೆಟ್ , ಸ್ಮಾರ್ಟ್ ಫೋನ್ ಗಳಲ್ಲಿ ಬಳಸಲು ಉತ್ತಮವಾಗಿದೆ.

ಇದರ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 30 ಗಂಟೆಗಳ ಕಾಲ ನಿರಂತರವಾಗಿ ಸಂಗೀತವನ್ನು ಕೇಳಬಹುದಾದಷ್ಟು ಸಾಮರ್ಥ್ಯ ಹೊಂದಿದೆ. ಇದರಲ್ಲಿ 3.5 mm ಆಡಿಯೊ ಜಾಕ್ ಇದ್ದು ಇದನ್ನು ಬಳಸಿ ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಜೋಡಿಸಬಹುದಾಗಿದೆ.

ಈ ಸ್ಪೀಕರ್ ಅನ್ನು Kickstarter.com ಮುಖಾಂತರ ಕೊಳ್ಳಬಹುದಾಗಿದ್ದು ಇದರ ಬೆಲೆ ರು. 6,500 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot