ಆಪಲ್ ಲುನಾಟಿಕ್ ಲಿಂಕ್ ವಾಚ್ ಬ್ಯಾಂಡ್ ಪ್ಲೇಯರ್

|
ಆಪಲ್ ಲುನಾಟಿಕ್ ಲಿಂಕ್ ವಾಚ್ ಬ್ಯಾಂಡ್ ಪ್ಲೇಯರ್

ಆಪಲ್ ಐಪೋಡ್ ಸಂಗೀತ ಲೋಕದಲ್ಲಿ ಒದು ಹೊಸ ಕ್ರಾಂತಿಯನ್ನು ಉಂಟು ಮಾಡಿದೆ. ಇದರ ಜನಪ್ರಿಯತೆಯನ್ನು ನೋಡಿ ಅನೇಕ ಕಂಪನಿಗಳು ಇದೆ ಮಾದರಿಯ ಸಂಗೀತ ಸಾಧನಗಳನ್ನು ತಯಾರಿಸಿದ್ದರೂ ಸಹ ಅವುಗಳಿಗೆ ಮಾರುಕಟ್ಟೆಯಲ್ಲಿ ಇದನ್ನು ಹಿಂದೆ ಹಾಕಲು ಸಾಧ್ಯವಾಗಲಿಲ್ಲ. ಇದು ಮತ್ತಷ್ಟು ಆಧುನಿಕ ತಂತ್ರಜ್ಞಾನವನ್ನು ಬಳಸಿ ಐಪೋಡ್ ನ್ಯಾನೊ ತಯಾರಿಸಿದ ಬಳಿಕವಂತೂ ಇದರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು.ಈಗ ಈ ಐಪೋಡ್ ನ್ಯಾನೊದ ಅಲ್ಟ್ರಾ ಮೊದಲ ಆವೃತಿ ಲುನಾಟಿಕ್ ಲಿಂಕ್ ಈಗಾಗಲೆ ಗ್ಯಾಡ್ಜೆಟ್ ಪ್ರೇಮಿಗಳ ಮೆಚ್ಚುಗೆಯನ್ನು ಗಳಿಸಿದೆ.

ಈ ಇದರಲ್ಲಿ ಬೇಕಾದ ಕಂಟ್ರೋಲ್ ಮತ್ತು ಸ್ಕ್ರೀನ್ ಕಣ್ಣಿಗೆ ಕಾಣುವ ರೀತಿಯಲ್ಲಿದ್ದು ಇದನ್ನು ವಾಚ್ ನ ರೀತಿ ಕೈಗೆ ಕಟ್ಟಿಕೊಳ್ಳಬಹುದಾಗಿದೆ.ಈ ಸಾಧನದ ಮುಖ್ಯವಾದ ಭಾಗದಲ್ಲಿ ಅಲ್ಯುಮಿನಿಯಂನ ಫ್ರೇ ಇದ್ದು , ಇದರಲ್ಲಿರುವ ಎರಡು ಭಾಗಗಳಿದ್ದು, ಇದು ಫ್ರಂಟ್ ಗ್ಲಾಸ್ ಮತ್ತು ಎರಡು ಭಾಗವನ್ನು ಬಿಟ್ಟು ಐಪೋಡ್ ನ್ಯಾನೊವನ್ನು ಪೂರ್ಣವಾಗಿ ಒಳಗೊಳ್ಳುತ್ತದೆ. ಇದರಲ್ಲಿ ಬಳಸಿರುವ ಅಲ್ಯುಮಿನಿಯಂ ಕವಚವು ಇದನ್ನು ಬಳಸಿದಾಗ ಯಾವುದೆ ರೀತಿಯ ಶಾಕ್ ಹೊಡೆಯದಾಗೆ ರಕ್ಷಿಸುತ್ತದೆ. ಆದರೆ ಇದರ ಸ್ಕ್ರೀನ್ ಗೆ ಯಾವುದೆ ರಕ್ಷಣೆ ಇಲ್ಲ.

ಇದರಲ್ಲಿರುವ ಒಂದು ಚಿಕ್ಕ ಸಮಸ್ಯೆ ಅಂದರೆ ಐಪೋಡ್ ನ್ಯಾನೊವನ್ನು ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ. ಈ ಸಾಧನವನ್ನು ಪಡೆಯಬೇಕೆಂದರೆ ಸ್ಕ್ರಿವ್ ಅನ್ನು ಸಡಿಲ ಮಾಡಬೇಕಾಗುತ್ತದೆ, ಏಕೆಂದರೆ ಈ ಸ್ಕ್ರಿವ್ ಫ್ರೇಮ್ ಅನ್ನು ಹಿಡಿದಿಟ್ಟು ಕೊಂಡಿರುತ್ತದೆ.ಈ ಲ್ಯುನಾಟಿಕ್ ಲಿಂಕ್ ಬಳಕೆದಾರರು ಐಪೋಡ್ ನ್ಯಾನೊವನ್ನು ಅವರ ಮಣಿಕಟ್ಟಿನಲ್ಲಿರುವ ಬಳಕೆ ಮಾಡುವಂತೆ ಬಯಸುತ್ತದೆ. ಮಣಿಕಟ್ಟಿನಲ್ಲಿ ಪ್ಲೇಯರ್ ಇರುವಾಗ ಹೆಡ್ ಫೋನ್ ಅನ್ನು ಇದಕ್ಕೆ ಜೋಡಿಸಿ ಸಂಗೀತವನ್ನು ಕೇಳಬಹುದಾಗಿದೆ.

ಆದರೆ ಇದರಲ್ಲಿರುವ ಒಂದು ಸಮಸ್ಯೆ ಅಂದರೆ ಯೂನಿವರ್ಸಲ್ ಐಪೋಡ್ ಡಾಕ್ ಸೇರಿಸಿ ಅನೇಕ ಡಾಕ್ ಅನ್ನು ಬಳಸಿಕೊಳ್ಳುವಂತೆ ಇಲ್ಲ. ಇದನ್ನು ಬೇಕು ಎನ್ನುವರು ಅದನ್ನು ಡಾಕಿಂಗ್ ಕೇಬಲ್ ಗೆ ಜೋಡಿಸಿ ಪಡೆದುಕೊಳ್ಳಬಹುದಾಗಿದೆ. ಆದರೆ ಇದನ್ನು ಬಳಸಿಕೊಳ್ಳುವುದು ಸ್ವಲ್ಪ ಕಷ್ಟಕರ ಸಹವಾಗಿದೆ. ಇದರ ಬ್ಯಾಂಡ್ ನಲ್ಲಿ ರಬ್ಬರ್ ಅನ್ನು ಬಳಸಿದ್ದು ತೂಕವನ್ನು ಕಡಿಮೆ ಮಾಡುವುದರ ಜೊತೆ ಫ್ಲಕ್ಸಿಬಿಲಿಟಿಯನ್ನು ನೀಡುತ್ತದೆ. ಇದರ ಲಿಂಕ್ ಅನ್ನು ಪೇಪರ್ ಕ್ಲಿಪ್ ಬಳಸಿ ಬಿಚ್ಚ ಬಹುದಾಗಿದೆ.

ಈ ಲ್ಯುನಾಟಿಕ್ ಲಿಂಕ್ ಬೆಲೆಯಲ್ಲಿ ಸ್ವಲ್ಪ ಅಧಿಕವಾಗಿದ್ದು ಸರಿ ಸುಮಾರು ಐಪೋಡ್ ನ್ಯಾನೊ ಬೆಲೆಗೆ ಸರಿ ಸಮವಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X