Subscribe to Gizbot

ಅ.26 ಕ್ಕೆ ಮೈಕ್ರೋಸಾಫ್ಟ್‌ನಿಂದ ಎಕ್ಸ್‌ಬಾಕ್ಸ್‌ ಮ್ಯೂಸಿಕ್‌ ಬಿಡುಗಡೆ

Posted By: Staff
ಅ.26 ಕ್ಕೆ ಮೈಕ್ರೋಸಾಫ್ಟ್‌ನಿಂದ ಎಕ್ಸ್‌ಬಾಕ್ಸ್‌ ಮ್ಯೂಸಿಕ್‌ ಬಿಡುಗಡೆ

ಸಾಫ್ಟ್‌ವೇರ್‌ ಲೋಕದ ದೊಡ್ಡಣ್ಣ ಮೈಕ್ರೋಸಾಫ್ಟ್‌ ತನ್ನದೇ ಆದಂತಹ ಮ್ಯೂಸಿಕ್‌ ಸಿಸ್ಟಂ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. "ಎಕ್ಸ್‌ಬಾಕ್ಸ್‌ ಮ್ಯೂಸಿಕ್‌" ಹೆಸರಿನ ನೂತನ ಮ್ಯೂಸಿಕ್‌ ಸಿಸ್ಟಂ ಅಕ್ಟೋಬರ್‌ 26 ರಂದು ಬಿಡುಗಡೆ ಯಾಗಲಿದೆ. ಅಂದಹಾಗೆ ಈ ಮ್ಯೂಸಿಕ್‌ ಸಿಸ್ಟಂ ಸ್ಪೂಟಿಫೈನಂತೆ ಕಾರ್ಯನಿರ್ವಹಿಸಲಿದೆ. ಅಂದರೆ ಉಚಿತ ಬಳಕೆದಾರರು ಜಾಹಿರಾತು ಸಹಿತ ಮ್ಯೂಸಿಕ್‌ ಕೇಳಿದರೆ ಪಾವತಿ ಮಾಡಿದ ಬಳಕೆದಾರರು ಯಾವುದೇ ಜಾಹಿರಾತು ಗಳಿಲ್ಲದೆ ಮ್ಯೂಸಿಕ್‌ ಆನಂದಿಸ ಬಹುದಾಗಿದೆ.

ಕಾಕತಾಳೀಯ ಎಂಬಂತೆ ಮೈಕ್ರೋಸಾಫ್ಟ್‌ ವಿಂಡೋಸ್‌ 8 ಹಾಗೂ ವಿಂಡೋಸ್‌ ಫೋನ್‌ 8 ಆಪರೇಟಿಂಗ್‌ ಸಿಸ್ಟಂ ಬಿಡುಗಡೆಯ ದಿನದಂದೇ ಬಿಡುಗಡೆ ಮಾಡಲಿದೆ. ಅಂದಹಾಗೆ ಬಳಕೆದಾರರು ಎಕ್ಸ್‌ಬಾಕ್ಸ್ ಮ್ಯೂಸಿಕ್‌ಗೆ ಸ್ಕೈ ಡೈವ್‌ ಮೂಲಕ ಮ್ಯೂಸಿಕ್‌ ಸ್ಟೋರ್‌ ಮಾಡಬಹುದಾಗಿದೆ.

ಮೂಲಗಳ ಪ್ರಾಕಾರ ಎಕ್ಸ್‌ಬಾಕ್ಸ್‌ ಮ್ಯೂಸಿಕ್‌ ಸಿಸ್ಟಂ ಅತಿ ಶೀಘ್ರದಲ್ಲಿಯೇ ಎಕ್ಸ್‌ಬಾಕ್ಸ್‌ 360 ಸಾಧನಗಳಿಗೂ ಪ್ರವೇಶ ಪಡೆಯಲಿದೆ ಎಂದು ತಿಳಿಸಿದೆ. ಹಾಗೂ ಶೀಘ್ರದಲ್ಲೇ IOS ಹಾಗೂ ಆಂಡ್ರಾಯ್ಡ್‌ ಸಾಧನಗಳಿಗೆ ಎಕ್ಸ್‌ಬಾಕ್ಸ್‌ ಮ್ಯೂಸಿಕ್‌ ಆಪ್‌ ಕೂಡ ಬಿಡುಗಡೆ ಮಾಡಲಿದೆ. ಮೈಕ್ರೋಸಾಫ್ಟ್‌ ಈ ಮೊದಲು ಎಕ್ಸ್‌ಬಾಕ್ಸ್‌ ಮ್ಯೂಸಿಕ್‌, ಗೇಮ್ಸ್‌ ಹಾಗೂ ಎಕ್ಸ್‌ಬಾಕ್ಸ್‌ ಸ್ಮಾರ್ಟ್‌ಗ್ಲಾಸ್‌ ಸೇರಿದಂತೆ ಹಲವಾರು ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಮೈಕ್ರೋಸಾಫ್ಟ್‌ನ ಪ್ರಕಾರ ನೂತನ ಎಕ್ಸಬಾಕ್ಸ್‌ ಮ್ಯೂಸಿಕ್‌ ಸಿಸ್ಟಂ ಸಂಸ್ತೆಯು ಈ ಮೊದಲು ಬಿಡುಗಡೆ ಮಾಡಿದ್ದ ಝೂನ್‌ ಮ್ಯೂಸಿಕ್‌ ಸಿಸ್ಟಂನಲ್ಲಿದ್ದ ಕೊರತೆಯನ್ನು ನೀಗಿಸಲಿದೆ ಎಂದು ಹೇಳಿದ್ದರು.

ಈ ನೂತನ ಮ್ಯೂಸಿಕ್‌ ಸಿಸ್ಟಂ ಕೇವಲ ಎಕ್ಸ್‌ಬಾಕ್ಸ್‌ಗೆ ಮಾತ್ರವಲ್ಲ ವಿಂಡೋಸ್‌ 8 ಹಾಘು ವಿಂಡೋಸ್‌ ಫೋನ್‌ 8 ಸೇರಿದಂತೆ ಆಂಡ್ರಾಯ್ಡ್‌ ಹಾಗೂ ಆಂಡ್ರಾಯ್ಡ್‌ IOS ಸಾಧನಗಳಿಗೂ ಸಹಕರಿಸಲಿದೆ. ಸಂಸ್ಥೆಯ ಮೂಲಗಳು ತಿಳಿಸಿರುವಂತೆ ಎಕ್ಸ್‌ಬಾಕ್ಸ್‌ ಬ್ರಾಂಡ್‌ ಹೆಸರಿನ ಮೂಲಕ ನೂತನ ಮ್ಯೂಸಿಕ್‌ ಸಿಸ್ಟಂ ಹೆಚ್ಚು ಪ್ರಚಾರ ಪಡೆಯಲಿದೆ ಎಂದು ತಿಳಿಸಿವೆ.

Read In English...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot