ರೆಕಾರ್ಡಿಂಗ್ ಗೆ ಸೂಕ್ತವಾಗಿದೆ ಈ ಮೈಕ್ರೊಫೋನ್

MXL ಟೆಂಪೊ USB ಕಂಡೆನ್ಸರ್ ಮೈಕ್ರೊಫೋನ್ ಅತ್ಯತ್ತಮವಾದ ಕಾರ್ಯ ವೈಖರಿ ಹೊಂದಿದ್ದು ಇದನ್ನು ಸ್ಕೈಪ್, ಐಚಾಟ್, ಗೂಗಲ್ ಟಾಕ್ ಮೊದಲಾದವುಗಳಲ್ಲಿ ಬಳಸಬಹುದಾಗಿದೆ.ಲ್ಯಾಪ್ ಟಾಪ್ ಜೊತೆ ಈ ಮೈಕ್ರೊಪೋನ್ ಬಳಸುವಾಗ ಐಪ್ಯಾಡ್ ಕ್ಯಾಮೆರಾ ಕನೆಕ್ಷನ್ ಕಿಟ್ ಕೂಡ ಬಳಸಬಹುದು.
MXL ಟೆಂಪೊ USB ಕಂಡೆನ್ಸರ್ ಮೈಕ್ರೊಫೋನ್ ಈ ಕೆಳಗಿನ ತಾಂತ್ರಿಕ ಗುಣ ಲಕ್ಷಣಗಳನ್ನು ಹೊಂದಿದೆ.
* ಕಂಪನಾಂಕ 40 Hz ಯಿಂದ 18 KHzರಷ್ಟು
* ಆಕರ್ಷಕ ವಿನ್ಯಾಸ
* USB v1.1 ಮತ್ತು v2.0 ಫೋರ್ಟ್ ಗೆ ಹೊಂದಿಕೆಯಾಗುತ್ತದೆ.
* ಸ್ಯಾಂಪಲಿಂಗ್ ರೇಟ್ ರೇಂಜ್ 44.1 KHz ಯಿಂದ 48 KHzವರೆಗೆ
* ಸುತ್ತಳತೆ 47 x 190 ಮಿ ಮಿ
* 3.5 ಮಿಮಿ ಹೆಡ್ ಫೋನ್ ಜಾಕ್
* ಚಾಟಿಂಗ್ ಮಾಡಲು ಮಾತ್ರವಲ್ಲ ಪೋಡ್ ಕಾಸ್ಟಿಂಗ್ ಮಾಡಲು ಕೂಡ ಸೂಕ್ತವಾದ ಮೈಕ್ರೊಫೋನ್
* ಮೈಕ್ರೊಸಾಫ್ಟ್ ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಮತ್ತು ಆಪಲ್ ಮ್ಯಾಕ್ ಆಪರಟಿಂಗ್ ಸಿಸ್ಟಮ್
* ಚಿಕ್ಕ ಮೈಕ್ ಸ್ಟ್ಯಾಂಡ್ ಮತ್ತಯ ಹಾರ್ಡ್ ಮೌಂಟ್ ಅಡಾಪ್ಟರ್
ಈ ಗುಣಮಟ್ಟವನ್ನು ಕೊಂಡುಕೊಳ್ಳ ಬೇಕು ಎಂದು ಬಯಸುವವರಿಗೆ ಕೆಂಪು ಮತ್ತು ಬೆಳ್ಳಿ ಬಣ್ಣ ಅಥವಾ ಕಪ್ಪು ಮತ್ತು ಕೆಂಪು ಬಣ್ಣದಲ್ಲಿ ಈ ಮೈಕ್ರೊಫೋನ್ ಲಭ್ಯವಿದ್ದು ಇಷ್ಟವಾದ ಬಣ್ಣದ ಮೈಕ್ರೊಫೋನ್ ಆಯ್ಕೆ ಮಾಡಿಕೊಳ್ಳಬಹುದು.
ಈ ಮೈಕ್ರೊಫೋನ್ ಮಾರುಕಟ್ಟೆಯಲ್ಲಿ ಕೈಗೆಟುಕುವ ದರ ರು. 4,500ಕ್ಕೆ ಲಭ್ಯವಿದೆ.


Click it and Unblock the Notifications








