MP3 ಪ್ಲೇಯರಿಗೆ ಸನ್ಸಾ ಕ್ಲಿಪ್ ಜಿಪ್

|
MP3 ಪ್ಲೇಯರಿಗೆ  ಸನ್ಸಾ ಕ್ಲಿಪ್ ಜಿಪ್

MP3 ಪ್ಲೇಯರಿಗೆ ಸನ್ ಡಿಸ್ಕ್ ನ ಸನ್ಸಾ ಕ್ಲಿಪ್ ಜಿಪ್ ಸರಿ ಹೊಂದುವ ಹಾಗೆ ಬೇರೆ ಯಾವುದು ಅಷ್ಟಾಗಿ ಹೊಂದಿಕೆಯಾಗುವುದಿಲ್ಲ. ಆದರೆ ಈಗ ಹೊಸ ಸನ್ಸಾ AAC ಫಾರ್ಮೇಟ್ ಗೂ ಬೆಂಬಲವನ್ನು ನೀಡುತ್ತದೆ. ಈ ಟ್ರ್ಯಾಕ್ ಯನ್ನು ಐಟ್ಯೂನ್ ಸ್ಟೋರ್ ನ ಮುಖಾಂತರ ಐಟ್ಯೂನ್ ಲೈಬ್ರರಿಯಲ್ಲಿ ಸೇರಿಸಿ ಹಾಡುಗಳನ್ನು ಕೇಳಬಹುದಾಗಿದೆ.

ಈ ಕ್ಲಿಪ್ ಅನ್ನು ಧರಿಸಿರುವ ಬಟ್ಟೆಯಲ್ಲಿ ಸಿಕ್ಕಿಸಿ ವ್ಯಾಯಾಮ, ಡ್ರೈವ್ , ಕೆಲಸ ಮಾಡಬಹುದಾಗಿದ್ದು ಬಳಕೆದಾರರ ಮೆಚ್ಚುಗೆಯನ್ನು ಗಳಿಸುವಂತೆ ಇದೆ.ಈ ಸನ್ಸಾ ಕ್ಲಿಪ್ ಜಿಪ್ 8GB ಮತ್ತು 4GB ಮೆಮೊರಿಯಲ್ಲಿ ಲಭ್ಯವಿದ್ದು ಈ ಮೆಮೊರಿಯನ್ನು 32GBವರೆಗೂ ವಿಸ್ತರಿಸಬಹುದಾದ ಸಾಮರ್ಥ್ಯವನ್ನು ಕೂಡ ಹೊಂದಿದೆ.

ಇದರ ಮೆಮೊರಿಯನ್ನು ಮೈಕ್ರೊSD ಕಾರ್ಡ್ ಬಳಸಿ ವಿಸ್ತರಿಸಬಹುದಾಗಿದ್ದು ಇದರಲ್ಲಿ ಮೊತ್ತ 40GB ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ.ಈ ಸಾಧನ 1.1 ಇಂಚಿನ ಕಲರ್ ಸ್ಕ್ರೀನ್ ಹೊಂದಿದೆ. ಇದು AAC ಅಲ್ಲದೆ MP3, WAV, FLAC, WMA & WMADRM ಗಳಲ್ಲೂ ಸಹ ಬಳಸಬಹುದಾಗಿದೆ.

ವಿಂಡೋಸ್ XP SP2 ಆಪರೇಟಿಂಗ್ ಸಿಸ್ಟಮ್ ಅಥವಾ ಲೈನಕ್ಸ್ ಅಥವಾ ಮ್ಯಾಕ್ 10.3, ವಿಂಡೋಸ್ ಮೀಡಿಯಾ ಪ್ಲೇಯರ್ 10+, CD-ROM ಡ್ರೈವ್, USB 2.0 ಪೋರ್ಟ್ ಹೊಂದಿರುವ ಪರ್ಸನಲ್ ಕಂಪ್ಯೂಟರ್ , ಲ್ಯಾಪ್ ಟಾಪ್, ಆಪಲ್ ಡೆಸ್ಕ್ ಟಾಪ್ ನಲ್ಲಿ ಸನ್ಸಾವನ್ನು ಪರಿಷ್ಕೃತ ಗೊಳಿಸಬಹುದು, ಆದರೆ ಇದಕ್ಕೆ ಇಂಟರ್ ಸೌಲಭ್ಯವಿರಬೇಕು.ಈ ಸನ್ಸಾ ಕ್ಲಿಪ್ 2.25 x 1.42 x 0.58 ಇಂಚಿನ ಡೈಮೆಂಶನ್ ಹೊಂದಿದ್ದು 7 ಆಕರ್ಷಕ ಬಣ್ಣದಲ್ಲಿ ಲಭ್ಯವಿದೆ.

ಈ ಸನ್ಸಾ ಕ್ಲಿಪ್ ಜಿಪ್ ವಿದೇಶಿ ಮಾರುಕಟ್ಟೆಯಲ್ಲಿ ರು.2, 400 ಹೊಂದಿದ್ದು ಭಾರತದಲ್ಲಿ ಇದರ ಬೆಲೆ ಇನ್ನು ಸ್ವಲ್ಪ ಹೆಚ್ಚಾಗಿರುತ್ತದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X