ಆಪಲ್ ಐಪೋಡ್ ಶಫಲ್ ಗಾಗಿ ಹೊಸ ಮಾದರಿಯ ಹೆಡ್ ಫೋನ್

Posted By:
ಆಪಲ್ ಐಪೋಡ್ ಶಫಲ್ ಗಾಗಿ ಹೊಸ ಮಾದರಿಯ ಹೆಡ್ ಫೋನ್

ಪ್ರಯಾಣ ಮಾಡುವಾಗ ಅಥವಾ ಕರೆ ಮಾಡುವಾಗ ಕೈಯಲ್ಲಿ ಫೋನ್ ಹಿಡಿಯಲು ಕಿರಿಕಿರಿಯಾಗುತ್ತದೆ. ಅದಕ್ಕಾಗಿ ಹೆಡ್ ಫೋನ್ ಬಳಸಿ ಈ ಸಮಸ್ಯೆಯನ್ನು ತಪ್ಪಿಸಲು ಹೆಡ್ ಫೋನ್ ಬಳಸಲಾಯಿತು, ಆದರೆ ಹೆಡ್ ಫೋನ್ ವೈರ್ ಯಾವುದಾದರೂ ವಸ್ತುಗಳಿಗೆ ಸಿಕ್ಕಿ ಹಾಕಿ ಕೊಂಡರೆ ಬಳಕೆದಾರರಿಗೆ ಅದೊಂದು ಮುಜುಗರ.

ಆದರೆ ವೈರ್ ಲೆಸ್ ಹೆಡ್ ಫೋನ್ ಬಂದ ನಂತರ ಬಳಕೆದಾರರಿಗೆ ಹೆಡ್ ಫೋನ್ ಬಳಿಕೆದಾರರಿಗೆ ಆ ಸಮಸ್ಯೆಯಿಲ್ಲದೆ ಹೆಡ್ ಪೋನ್ ಮತ್ತಷ್ಟು ಪ್ರಿಯವಾಗಿದೆ. ಈ ವೈರ್ ಲೆಸ್ ಹೆಡ್ ಫೋನ್ ನಲ್ಲಿ ಸಹ ಅನೇಕ ರೀತಿಯ ಬದಲಾವಣೆಗಳು ಕಂಡು ಬರುತ್ತಿವೆ. ಅದರಂತೆ ಜೆರ್ಮಿ ಸ್ಯಾಕ್ಸ್ ಟೋನ್ ಮತ್ತು ಜಾಕೊಬ್ ಆಪಲ್ ಐಪೋಡ್ ಶಫಲ್ ಗಾಗಿ ಒಂದು ಹೊಸ ರೀತಿಯ ಹೆಡ್ ಪೋನ್ ತಯಾರಿಸಿದ್ದು ODDIO 1 ಎಂದು ಕರೆಯಲಾಗಿದೆ.

ಈ ಹೆಡ್ ಪೋನ್ ಗುಣಮಟ್ಟದಲ್ಲಿ ಉತ್ತಮವಾಗಿದ್ದು ನೈಲಾನ್ ಪ್ಲಾಸ್ಟಿಕ್ ನಿಂದ ತಯಾರಿಸಲಾಗಿರುವುದರಿಂದ ಹಗುರವಾಗಿದ್ದು ನೋಡಲು ಸಹ ಆಕರ್ಷಕವಾಗಿದೆ. ಇದರ ಇಯರ್ ಕ್ಯೂಷನ್ ಅನ್ನು ಹೈಗ್ರೇಡ್ ಸಿಲಿಕಾನ್ ಬಳಸಿ ತಯಾರಿಸಲಾಗಿದೆ. ಈ ಹೆಡ್ ಫೋನ್ ಕಪ್ಪು ಮತ್ತು ಬೂದಿ ಬಣ್ಣದಲ್ಲಿ ಲಭ್ಯವಿದೆ. ಈ ODDIO 1 ಹೆಡ್ ಫೋನ್ 30 mm ಉದ್ದದ ಡ್ರೈವರ್ಸ್ ಹೊಂದಿದ್ದು ಇದನ್ನು ಬಳಸಿ ಉತ್ತಮ ಗುಣ ಮಟ್ಟದ ಶಬ್ದವನ್ನು ಉತ್ಪತ್ತಿಮಾಡುವ ಸಾಮರ್ಥ್ಯವನ್ನು ಹೊಂದಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot