ಆಕರ್ಷಿತವಾಗಿದೆ ಫಿಲಿಪ್ಸ್ ಬ್ಲೂ ರೇ ಪ್ಲೇಯರ್

ಫಿಲಿಪ್ಸ್ ಕಂಪನಿ ಇದೀಗ ಫಿಲಿಪ್ಸ್ BDP5200 3D ಬ್ಲೂ ರೇ ಪ್ಲೇಯರ್ ಪರಿಚಯಿಸಿದೆ. ಈ ಫಿಲಿಪ್ಸ್ BDP5200 3D ಬ್ಲೂ ರೇ ಪ್ಲೇಯರ್ ನಲ್ಲಿ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ಅದೇನೆಂದು ಇಲ್ಲಿ ತಿಳಿದುಕೊಳ್ಳಿ.
ಫಿಲಿಪ್ಸ್ BDP5200 3D ಬ್ಲೂ ರೇ ಪ್ಲೇಯರ್ ವಿಶೇಷತೆ:
* 435 x 42 x 208.5 ಎಂಎಂ ಸುತ್ತಳತೆ
* 1.65 ಕೆಜಿ ತೂಕ
* ವಿಡಿಯೋ ಔಟ್ ಪುಟ್
* ಡಿಜಿಟಲ್ ಆಡಿಯೋ ಔಟ್ ಪುಟ್ (ಕಾಕ್ಸಿಯಲ್ ಮತ್ತು ಆಪ್ಟಿಕಲ್)
* HDMI ಔಟ್ ಪುಟ್, USB v2.0 ಪೋರ್ಟ್
* ಎಥೆರ್ನೆಟ್ ಪೋರ್ಟ್
* SD/SDHC ಕಾರ್ಡ್ ಸ್ಲಾಟ್
* 148 MHz ಆಡಿಯೊ D/A ಕನ್ವರ್ಟರ್
* ಡಾಬ್ಲಿ ಟ್ರೂ HD ಪಿಕ್ಚರ್ ಸಾಮರ್ಥ್ಯ
* DTS ಡಿಜಿಟಲ್ ಆಡಿಯೋ ಔಟ್ ಪುಟ್
* DVD/DVD-R/RW ವಿಡಿಯೋ ಫಾರ್ಮೆಟ್ ಪ್ಲೇ ಬ್ಯಾಕ್
* CD-R/RW ವಿಡಿಯೊ ಫಾರ್ಮೆಟ್ ಪ್ಲೇಬ್ಯಾಕ್
* JPEG ಇಮೇಜ್ ಬೆಂಬಲಿತ
* ಸಿಂಗಲ್/ ಡ್ಯೂಯಲ್ ಲೇಯರ್ BD-ROM ಪ್ಲೇಬ್ಯಾಕ್ ಮತ್ತು BD-R/RE ಪ್ಲೇಬ್ಯಾಕ್
* ಅವಶ್ಯಕ ವಿದ್ಯುತ್: 220V-240V at 50-60 Hz.
ಬೂದು ಮತ್ತು ಕಪ್ಪು ಫಿನಿಶಿಂಗ್ ನಲ್ಲಿ ಫಿಲಿಪ್ಸ್ BDP5200 ಬ್ಲೂ ರೇ ಪ್ಲೇಯರ್ ಅತ್ಯಾಕರ್ಷಕವಾಗಿ ಮೂಡಿಬಂದಿದೆ. ಈ ಪ್ಲೇಯರ್ ನ ಮುಂಭಾಗದಲ್ಲಿ USB ಪೋರ್ಟ್ ಅಳವಡಿಸಲಾಗಿದೆ. ಬಟನ್ ಗಳ ನಿರ್ವಹಣೆಯೂ ಕೂಡ ತುಂಬಾ ಸುಲಭವಾಗಿದೆ.
ಪ್ಲೇಯರ್ ಕಾರ್ಯವೈಖರಿಗೆ Load/Eject, Play/Pause ಮತ್ತು ON/OFF ಬಟನ್ ಗಳು ಇವೆ. ಈ ಪ್ಲೇಯರ್ ನ ಹಿಂಭಾಗದಲ್ಲಿ I/O ಪೋರ್ಟ್ ಗಳಾದ SD/SDHC ಕಾರ್ಡ್ ಸ್ಲಾಟ್, HDMI ಔಟ್ ಪುಟ್, ವಿಡಿಯೋ ಔಟ್ ಪುಟ್, ಅನಲಾಗ್ ಪೋರ್ಟ್ ಮತ್ತು ಎಥರ್ನೆಟ್ ಪೋರ್ಟ್ ಇದೆ.
ಈ ಫಿಲಿಪ್ಸ್ BDP5200 ನ ರಿಮೋಟ್ ಕಂಟ್ರೋಲರ್ ನಲ್ಲಿ ರಬ್ಬರ್ ಬಟನ್ ಇದ್ದು ಬಳಕೆಗೆ ಸುಲಭವೆನಿಸಲಿದೆ. ಇದರಲ್ಲಿ ಸುಲಭವಾಗಿ 3D ಪೂರ್ಣ HD 1080p ವಿಡಿಯೋ ಫೈಲ್ ಗಳನ್ನು ಪ್ಲೇ ಮಾಡಬಹುದು. ಇದು ಇಂಟರ್ನೆಟ್ ವಿಡಿಯೋ ಪ್ಲೇಬ್ಯಾಕನ್ನೂ ಬೆಂಬಲಿಸುತ್ತದೆ. ಈ ಪ್ಲೇಯರ್ ನಿಂದ NTFS/FAT32 ಗ್ರಹಿಕೆಯೂ ಸಾಧ್ಯವಾಗಲಿದೆ. BDP5200 ಪ್ಲೇಯರ್ ಗೆ ಎಥರ್ನೆಟ್ ಪೋರ್ಟ್ ಮೂಲಕ LAN ಕೇಬಲ್ ಬಳಸಿಕೊಂಡು ಇಂಟರ್ನೆಟ್ ನಿಂದಲೂ ವಿಡಿಯೋ ಪಡೆಯಬಹುದಾಗಿದೆ.
ಈ ಫಿಲಿಪ್ಸ್ BDP5200 3D ಬ್ಲೂ ರೇ ಬೆಲೆ 13,000ರು ಎಂದು ತಿಳಿದುಬಂದಿದೆ.


Click it and Unblock the Notifications








