ಫ್ರೆಂಡ್ಸ್ ಜೊತೆ ಸಂಗೀತದ ಮಸ್ತ್ ಗೆ ಈ ಸ್ಪೀಕರ್

|
ಫ್ರೆಂಡ್ಸ್ ಜೊತೆ ಸಂಗೀತದ ಮಸ್ತ್ ಗೆ ಈ ಸ್ಪೀಕರ್

ಹೊರಗಡೆ ಪಿಕ್ ನಿಕ್ ಹೋದಾಗ, ಅಥವಾ ಸ್ನೇಹಿತರ ಜೊತೆ ಹರಟೆ ಹೊಡೆಯುವಾಗ ಸಂಗೀತ ಕೇಳಬೇಕೆಂದು ಅನಿಸಿದಾಗ ಎಲ್ಲರೊಂದಿಗೆ ಸಂಗೀತದ ಸವಿಯನ್ನು ಅನುಭವಿಸಲು ಜೊತೆಗೆ ಕೊಂಡೊಯ್ಯಬಹುದಾದ ಸ್ಪೀಕರ್ ಅತ್ಯುತ್ತಮವಾದ ಆಯ್ಕೆ ಆಗಿದೆ. ಅಂತಹ ಸ್ಪೀಕರ್ ಗಳನ್ನು ಕೊಳ್ಳಬಯಸುವವರಿಗೆ ಐ ಮೇನ್ ಗೋ 2 ಮತ್ತು ಐ ಮೇನ್ ಗೋ ಎಕ್ಸ್ ಸ್ಪೀಕರ್ ಬೆಸ್ಟ್. ಈ ಸ್ಪೀಕರ್ ಗಳು ನೀವು ಬಯಸಿದಂತಹ ಉತ್ತಮಗುಣಮಟ್ಟದ ಶಬ್ದವನ್ನು ನೀಡುವ ಸಾಮರ್ಥ್ಯ ಹೊಂದಿದೆ.

ಐ ಮೇನ್ ಗೋ 2 ಸ್ಪೀಕರ್ ಗಾತ್ರದಲ್ಲಿ 3.8 inch x 2.4 inch x 5.7 ಇಂಚಿನ ಡೈಮೆಂಶನ್, 255 ತೂಕ ಹೊಂದಿದೆ. ಇದರಲ್ಲಿ ಟಚ್ ಸ್ಕ್ರೀನ್ ಸೌಲಭ್ಯವಿದ್ದು ಬೇಕಾದ ಹಾಡಿಗೆ ಸುಲಭವಾಗಿ ಬದಲಾಯಿಸಬಹುದಾಗಿದೆ. ಈ ಸ್ಪೀಕರ್ ಸಿಸ್ಟಮ್ ಮುಖ್ಯವಾಗಿ 2 ಭಾಗವನ್ನು ಹೊಂದಿದ್ದು ಒಂದು ಭಾಗದಲ್ಲಿ ಸ್ಪೀಕರ್ ಮತ್ತು ಬ್ಯಾಟರಿ, ಮತ್ತೊಂದು ಭಾಗದಲ್ಲಿ ಪ್ಲೇಯರ್ ಹೊಂದಿದೆ. ಈ ಸ್ಪೀಕರ್ ಟ್ಯಾಬ್ಲೆಟ್ ಮತ್ತು ಸ್ಪೀಕರ್ ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.

ಐ ಮೇನ್ ಗೋ ಎಕ್ಸ್ ಸ್ಪೀಕರ್ ಶಬ್ದ, ಬೆಲೆ ಮತ್ತು ಬ್ಯಾಟರಿಯಲ್ಲಿ ಐ ಮೇನ್ ಗೋ 2 ಸ್ಪೀಕರ್ ಗಿಂತ ಭಿನ್ನವಾಗಿದೆ. ಇದರಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯನ್ನು ಬಳಸಲಾಗಿದೆ. ಆದ್ದರಿಂದ ದೂರ ಪ್ರಯಾಣ ಮಾಡುವಾಗ ಚಾರ್ಜರ್ ಅನ್ನು ಕೊಂಡೊಯ್ಯುವ ಅಗ್ಯತವಿಲ್ಲ. ಆದರೆ ಆ ಸ್ಪೀಕರ್ ನಲ್ಲಿ ಯಾವುದೆ ಸೋಕೆಟ್ ಇಲ್ಲದಿರುವುದರಿಂದ ಜೊತೆಯಲ್ಲಿಯೆ ಚಾರ್ಜರ್ ಅನ್ನು ಕೊಂಡೊಯ್ಯಬೇಕಾಗುತ್ತದೆ. ಒಟ್ಟಿನಲ್ಲಿ ಈ ಸ್ಪೀಕರ್ ಗಳು ಆಕರ್ಷಕವಾದ ಶಬ್ದವನ್ನು ನೀಡುತ್ತವೆ.

ಈ ಸ್ಪೀಕರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇವುಗಳ ದರ ಐ ಮೇನ್ ಗೋ 2 ರು. 2, 000 ಮತ್ತು ಐ ಮೇನ್ ಗೋ ಎಕ್ಸ್ ಗೆ ರು. 3,500 ಇವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X