ರೇಝರ್ ನಿಂದ ಆಡಿಯೊ, ಗೇಮಿಂಗ್ ಹೆಡ್ ಫೋನ್

Posted By:
ರೇಝರ್ ನಿಂದ ಆಡಿಯೊ, ಗೇಮಿಂಗ್ ಹೆಡ್ ಫೋನ್

ರೇಝರ್ ಕಂಪನಿ ಈಗಾಗಲೆ ಸಾಕಷ್ಟು ಗೇಮಿಂಗ್ ಹೆಡ್ ಸೆಟ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅವುಗಳ ಬಳಕೆದಾರರ ಮೆಚ್ಚುಗೆಯನ್ನು ಕೂಡ ಗಳಿಸಿದೆ. ಈಗ ಈ ಕಂಪನಿ ಮತ್ತೊಂದು ರೇಝರ್ ಎಲೆಕ್ಟ್ರಾ ಹೆಡ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು ಇದನ್ನು ಆಡಿಯೊ ಮತ್ತು ಗೇಮಿಂಗ್ ನಲ್ಲೂ ಕೂಡ ಬಳಸಬಹುದಾಗಿದೆ.

ಈ ಹೆಡ್ ಫೋನ್ ಅನ್ನು ದಪ್ಪ ಲೆದರ್ ಪ್ಯಾಡ್ ನಲ್ಲಿ ಬಳಸಿದ್ದು , ಇದು ಸ್ವಲ್ಪ ದೊಡ್ಡ ಗಾತ್ರದಲ್ಲಿದ್ದರೂ ಇದನ್ನು ಪ್ರತಿನಿತ್ಯದ ಸಂವಹನದಲ್ಲಿ ಬಳಸ ಬಹುದಾಗಿದೆ. ಈ ಹೆಡ್ ಫೋನ್ ತೂಕ 284ಗ್ರಾಂ ಹೊಂದಿದೆ.ಇದರಲ್ಲಿ 40 mmನ ಡ್ರೈವರ್ ಇದ್ದು ನಿಯೊಡೈನಿಯಂ ಮ್ಯಾಗ್ನೆಟ್ ತಾಮ್ರದ ಹೊರಮೈಯನ್ನು ಹೊಂದಿರುವ ಅಲ್ಯುಮಿನಿಯಂ ವಾಯ್ಸ್ ಕಾಯಿಲ್ ಹೊಂದಿದೆ. ಇದರ ಕಂಪನಾಂಕ 25 Hz ಮತ್ತು 16, 000 Hz ನಡುವೆ ಇದೆ. ಈ ಸಾಧನದ ಸೆನ್ಸೆಟಿವಿಟಿ 1 KHz ಹೊಂದಿದೆ.

ಈ ಹೆಡ್ ಫೋನ್ ನಲ್ಲಿ ಇನ್ ಲೈನ್ ಮೈಕ್ರೊಫೋನ್ ಇದ್ದು ಇದು ಓಮ್ನಿ ಡೈರೆಕ್ಷನ್ ಆಗಿದ್ದು ಗೇಮ್ ನಲ್ಲಿ ಬಳಸಲು ಉತ್ತಮವಾಗಿದೆ. ಈ ಮೈಕ್ರೊಫೋನ್ ನ ಸೆನ್ಸಟಿವಿಟಿ 1 KHz ಇದ್ದು 100Hz -10, 000 Hz ಕಂಪನಾಂಕವನ್ನು ಹೊಂದಿದೆ.ಈ ಹೆಡ್ ಫೋನ್ ಆಪಲ್ ಐಫೋನ್, ಎಚ್ ಟಿ ಸಿ, ಬ್ಲ್ಯಾಕ್ ಬೆರಿಯಲ್ಲಿ ಬಳಸಲು ಉತ್ತಉತ್ತಮವಾಗಿದೆ.

ಈ ಹೆಡ್ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಭಾರತೀಯ ಮಾರುಕಟ್ಟೆ ಬೆಲೆ ರು. 2, 700 ಆಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot