ಶಾರ್ಪ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್

Posted By:
ಶಾರ್ಪ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್

ಆಂಡ್ರಾಯ್ಡ್ ಮಾಡಲ್ ಇಷ್ಟ ಪಡುವವರಿಗೆ ಒಂದು ಸಿಹಿ ಸುದ್ಧಿ. ಈಗ ಶಾರ್ಪ್ ತನ್ನದೆ ಆದ ಆಂಡ್ರಾಯ್ಡ್ ಸಿಸ್ಟಮ್ ಹೊಂದಿರುವ ಮೊಬೈಲ್ AQUOS SH-01D ತಯರಿಸಿದೆ. ಆದರೆ ಈ ಫೋನ್ ಇನ್ನು ಬಿಡುಗಡೆಯಾಗ ಬೇಕಷ್ಟೆ. ಈ ಮೊಬೈಲ್ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವುದು ಎಂದು ಹೇಳಲಾಗುತ್ತಿದೆ.

ಇದು ಮೊದಲು ಜಪಾನಿನಲ್ಲಿ ಬಿಡುಗಡೆಯಾಗಲಿದ್ದು ಈ ಮೊಬೈಲ್ ನೀಲಿ, ಕಪ್ಪು, ಬಿಳಿಯೆಂಬ 3 ಬಣ್ಣವನ್ನು ಹೊಂದಿದೆ. ಇದರ ಡೊಡ್ಡದಾದ ಡಿಸ್ ಪ್ಲೇಯಿಂದ ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಈ ಫೋನ್ 9.7 mm ದಪ್ಪವನ್ನು ಹೊಂದಿದೆ. ಫೋನ್ ನೋಡಲು ಸ್ವಲ್ಪ ದೊಡ್ಡದಾಗಿ ಕಂಡರೂ ಕೈಯಲ್ಲಿ ಹಿಡಿದುಕೊಳ್ಳ ಬಹುದು. ಇದು 138 ಗ್ರಾಂ ತೂಕವನ್ನು ಹೊಂದಿದೆ. ಈ ಮೊಬೈಲ್ ವಾಟರ್ ಫ್ರೂಫ್ ಆಗಿದ್ದು ಮಳೆಯಲ್ಲಿ ನೆನೆಯುತ್ತಾ ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋದರೂ ಯಾವುದೇ ಹಾನಿ ಆಗುವುದಿಲ್ಲ.

ಈ ಮೊಬೈಲ್ ನಲ್ಲಿ ಸ್ಕ್ರೀನ್ ಸೈಜ್ 4.5 ಇದ್ದು ಸ್ಕ್ರೀನ್ ರೆಸ್ಯೂಲೇಶನ್ 1280 x 720 ಹೊಂದಿದೆ. ಇದರ ಸ್ಕ್ರೀನ್ 3D ವಿಶ್ಯೂಲ್ಸ್ ನೀಡುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಈ ಮೊಬೈಲ್ ನಲ್ಲಿ ಡ್ಯೆಯೆಲ್ ಕೋರ್ 1GHz OMAP 4430ಪ್ರೊಸೆಸರ್ ಬಳಸಲಾಗಿದ್ದು, ಇದರಲ್ಲಿ 2 ಕೆಮೆರಾ ಇದ್ದು ಕ್ಯಾಮೆರಾ ಪ್ಯಾಕ್ ರೆಸ್ಯೂಲೇಶನ್ 12 ಮೆಗಾ ಪಿಕ್ಸಲ್ ಹೊಂದಿದೆ. ಇದರಲ್ಲಿರು ಫ್ರೆಂಟ್ ಕ್ಯಾಮೆರಾವನ್ನು ವೀಡಿಯೊ ಕಾಲಿಂಗ್ ಉದ್ದೇಶಕ್ಕೆ ಬಳಸಬಹುದಾಗಿದೆ.

ಇದರಲ್ಲಿ ಮೆಮೋರಿಯನ್ನು 32 GBವರೆಗೆ ವಿಸ್ತರಿಸಬಹುದಾಗಿದೆ. ಇದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ 3G ನೆಟ್ ವರ್ಕ್ ನಲ್ಲಿ 450 ನಿಮಿಷ ಟಾಕ್ ಟೈಮ್, GSM ನೆಟ್ ವರ್ಕ್ ನಲ್ಲಿ 290 ನಿಮಿಷ ಟಾಕ್ ಟೈಮ್ ಸಾಮರ್ಥ್ಯ ಹೊಂದಿದ್ದು ಇದರಲ್ಲಿ ಬ್ಲೂಟುಥ್, ವೈಫೈ ಸಂಪರ್ಕದ ಸೌಲಭ್ಯವಿದೆ.

ಈ ಮೊಬೈಲ್ ನ ಬೆಲೆಯ ಬಗ್ಗೆ ಕಂಪನಿಯು ಸಧ್ಯದಲ್ಲಿಯೆ ನಿಗದಿ ಪಡಿಸಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot