ಭಾರತದ ಮಾರುಕಟ್ಟೆಗೆ ಸೋನಿ ಮೈಕ್ರೊ ಸಿಸ್ಟಮ್

Posted By:
 ಭಾರತದ ಮಾರುಕಟ್ಟೆಗೆ ಸೋನಿ ಮೈಕ್ರೊ ಸಿಸ್ಟಮ್

ಸೋನಿ ಆಡಿಯೊ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆ ಇದ್ದೇ ಇರುತ್ತದೆ. ಇದೀಗ ಸೋನಿ ತನ್ನ ಮತ್ತೊಂದು ಹೊಸ ಉತ್ಪನ್ನವಾದ WHG-SLK20D ಮೈಕ್ರೊ ಹೈ ಫೈ ಸಿಸ್ಟಮ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.ಈ ಸಾಧನ ಕಪ್ಪು ಬಣ್ಣದಲ್ಲಿ ನೋಡಲು ಆಕರ್ಷಕವಾಗಿದ್ದು LCD ಪ್ಯಾನಲ್ ಹೊಂದಿದೆ. ಈ ಸಾಧನದ ಎರಡೂ ಬದಿಯಲ್ಲಿ 2 ಸ್ಪೀಕರ್ ಇದ್ದು ಈ ಸೋನಿ ಸಾಧನವು ಮುಖ್ಯವಾಗಿ ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.

* ಇದರ ಆಡಿಯೊ WMA, MP3, AAC ಹೊಂದಿಕೆಯಾಗುತ್ತದೆ.

* ಈ ಸೋನಿ MPEG-4, DivX ವೀಡಿಯೊ ಮಾದರಿಯನ್ನು ಬೆಂಬಲಿಸುತ್ತದೆ.

* JPEG ನಲ್ಲಿರುವ ಫೋಟೊಗಳು ಇದರಲ್ಲಿ ಅತ್ಯುತ್ತಮವಾಗಿ ಕಾಣಿಸುತ್ತದೆ.

* ಈ ಸ್ಪೀಕರ್ 40mm ಟ್ವೀಟರ್ ಮತ್ತು 130mm ವೂಫರ್ಸ್ ಹಾಗೂ 90Wx2 RMS ಪವರ್ ಔಟ್ ಪುಟ್ ಹೊಂದಿದೆ.

ಈ ಸಿಸ್ಟಮ್ ನೋಡಲು ಸುಂದರವಾಗಿದ್ದರೂ ವೀಡಿಯೊ ಪ್ಲೇ ಬ್ಯಾಕ್ ಆಯ್ಕೆ ತುಂಬಾ ಮಿತಿಯಲ್ಲಿದೆ. ಇದರಲ್ಲಿರುವ ಇಂಟರ್ ಫೇಸ್ ಬಳಕೆದಾರರಿಗೆ ಬಳಸಲು ಅಷ್ಟು ಸುಲಭವಾಗಿಲ್ಲ, ಅಲ್ಲದೆ ಇದರಲ್ಲಿ LCD ಸ್ಕ್ರೀನ್ ತುಂಬಾ ಚಿಕ್ಕದಾಗಿದೆ. ಈ ಸಿಸ್ಟಮ್ ಬೆಲೆ ರು. 20,000 ಆಗಿದ್ದು ಇದರಲ್ಲಿ ಹೇಳುಕೊಳ್ಳುವಂತಹ ಹೆಚ್ಚಿನ ಸೌಲಭ್ಯಗಳು ಇಲ್ಲದ ಕಾರಣ ಇದರ ಬೆಲೆ ಗ್ರಾಹಕರಿಗೆ ಸ್ವಲ್ಪ ಹೆಚ್ಚು ಅನಿಸಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot