ಸಂಗೀತ ಅಭ್ಯಾಸಕ್ಕೆ ಬೆಸ್ಟ್ ಈ ಸೋಲ್ ಕರೋಕೆ ಅಪ್ಲಿಕೇಶನ್

|
ಸಂಗೀತ ಅಭ್ಯಾಸಕ್ಕೆ ಬೆಸ್ಟ್ ಈ ಸೋಲ್ ಕರೋಕೆ ಅಪ್ಲಿಕೇಶನ್

ಹಾಡುಗಳನ್ನು ಕೇಳುತ್ತಿದ್ದರೆ ನಮಗೆ ಕೂಡ ಅದರ ಜೊತೆ ಹಾಡಬೇಕೆಂದು ಅನಿಸುವುದು ಸಹಜ. ಆದರೆ ಹಾಡವ ಅಭ್ಯಾಸವನ್ನು ಬೆಳೆಸಬೇಕೆಂದು ಬಯಸುವವರಿಗೆ ಸೋಲೋ ಕರೋಕೆ ತುಂಬಾ ಸಹಾಯಕ್ಕೆ ಬರುತ್ತಿದೆ. ಇದನ್ನು ಬಳಸಿ ಹಾಡುಗಳ ಜೊತೆ ಹಾಡಿ ಸಂಗೀತವನ್ನು ಅಭ್ಯಾಸ ಮಾಡಬಹುದು.

ಸೋಲೋ ಕರೋಕೆ ಒಂದು ಒಂದು ಜನಪ್ರಿಯವಾದ ಅಪ್ಲಿಕೇಶನ್ ಆಗಿದೆ. ಇದರ ಲೈಬ್ರರಿಯಲ್ಲಿ ನಿಮ್ಮ ಆಯ್ಕೆಯ ಅನೇಕ ಹಾಡುಗಳಿರುತ್ತದೆ. ಈ ಅಪ್ಲಿಕೇಷನ್ ಎಲ್ಲಾ 3ಜಿ ಮೊಬೈಲ್ ಮತ್ತು ಐಪ್ಯಾಡ್ ಸಾಧನಗಳಿಗೆ ಸ್ಪರ್ಧೆಯನ್ನು ನೀಡುತ್ತದೆ. ನೀವು ಹಾಡಿದ ಹಾಡುಗಳನ್ನು ರೆಕಾರ್ಡ್ ಮಾಡಬೇಕೆಂದು ಬಯಸಿದರೆ ಅದರಲ್ಲಿರುವ ಮೈಕ್ರೊಫೋನ್ ಬಳಸಿ ರೆಕಾರ್ಡ್ ಮಾಡಬಹುದು. ಆದರೆ ಇದನ್ನು ಮ್ಯೂಸಿಕ್ ರೆಕಾರ್ಡಿಂಗ್ ಮಾಡಲು ಸಾಧ್ಯವಿಲ್ಲ. ಮೊದಲೆ ಹೇಳಿದ ಹಾಗೆ ಹಾಡುಗಳ ಅಭ್ಯಾಸದಲ್ಲಿ ಬಳಸಬಹುದು.

ಈ ಮೈಕ್ರೊಪೋನ್ ಸರಳವಾದ ವಿನ್ಯಾಸವನ್ನು ಹೊಂದಿದ್ದು ಇದನ್ನು ಸುಲಭವಾಗಿ ಹೆಡ್ ಫೋನ್ ಗೆ ಪ್ಲಗ್ ಮಾಡಬಹುದಾಗಿದೆ. ಇದರಲ್ಲಿ ಆಡಿಯೊ ಜಾಕ್ ಇದ್ದು ಬೇರೆ ಹೆಡ್ ಪೋನ್ ಬೇಕಾದರೆಜೋಡಿಸಬಹುದು. ಈ ಅಪ್ಲಿಕೇಶನ್ ನಲ್ಲಿ ವೀಡಿಯೊ ಔಟ್ ಪುಟ್ ಸೌಲಭ್ಯ ಕೂಡ ಇದೆ. ಆದರೆ ಈ ವೀಡಿಯೊ ಔಟ್ ಪುಟ್ ಎಚ್ ಡಿ ಮೂಡ್ ನಲ್ಲಿ ಕಾಣಲು ಸಾಧ್ಯವಿಲ್ಲ. ಇದರಲ್ಲಿರುವ HDMI ಸಂಪರ್ಕ ಬಳಸಿ ರೆಕಾರ್ಡ್ ಮಾಡಿದ್ದನ್ನು ಕೇಳಬಹುದು.

ಈ ಅಪ್ಲಿಕೇಶನ್ ಬಳಕೆ ಮಾಡಲು ಸುಲಭವಾಗಿದೆ. ಈ ಮೈಕ್ರೊಫೋನ್ ಗುಣಮಟ್ಟದಾಗಿದ್ದು ಸಂಗೀತವನ್ನು ಅಭ್ಯಾಸ ಮಾಡುವವರಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ.

ಇದು ಮಾರುಕಟ್ಟೆಯಲ್ಲಿ ರು 3, 500 ರಿಂದ 5,000 ದರಗಳಲ್ಲಿ ದೊರೆಯುವುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X