ಪ್ರಪಂಚದಲ್ಲಿಯೆ ಚಿಕ್ಕದಾದ ಟಚ್ ಸೌಲಭ್ಯದ ಪ್ಲೇಯರ್ !

|
ಪ್ರಪಂಚದಲ್ಲಿಯೆ ಚಿಕ್ಕದಾದ ಟಚ್ ಸೌಲಭ್ಯದ ಪ್ಲೇಯರ್ !

ತಂತ್ರಜ್ಞಾನ ಬೆಳದಂತೆ ತಾಂತ್ರಿಕ ವಸ್ತುಗಳ ಗಾತ್ರ ಚಿಕ್ಕದಾಗುತ್ತಿವೆ. ಚಿಕ್ಕದಾಗಿದ್ದು ಅಧಿಕ ಸಾಮರ್ಥ್ಯವನ್ನು ಹೊಂದಿರುವ ಸಾಧನಗಳನ್ನು. ಇದೀಗ ತುಂಬಾ ಚಿಕ್ಕದಾದ ಮತ್ತು ತೆಳುವಾದ MP3 ಪ್ಲೇಯರ್ ಎಂಬ ಹೆಗ್ಗಳಿಕೆಗೆ ' ದಿಕ್ಯೂಬ್ 2' ಪಾತ್ರವಾಗಿದೆ. ಈ ಸಾಧನವನ್ನು 2012 ರ ಜನವರಿ ತಿಂಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯನ್ನು ಹೊಂದಿದೆ. ಹೊಸ ವರ್ಷ ಸಧ್ಯದಲ್ಲಿಯೆ ಬರುವುದರಿಂದ ಈ ಸಾಧನವು ಈ ಸಾಧನವು ಶೀಘ್ರವೆ ಸಂಗೀತ ಪ್ರಿಯರ ಕೈಯಲ್ಲಿ ರಾರಾಜಿಸಲಿದೆ.

ಆಕರ್ಷಕವಾಗಿರುವ ಈ ಪುಟ್ಟ ಸಾಧನವು ನೋಡಲು ಚೌಕಾಕಾರದಲ್ಲಿದ್ದು ಸಿಲ್ವರ್ ಮ್ಯಾಟ್ ಫಿನಿಷಿಂಗ್ ಇರುವ ಅಲ್ಯುಮಿನಿಯಂನಿಂದ ತಯಾರಿಸಲಾದ ಸಾಧನವಾಗಿದೆ. ಈ ಪ್ಲೇಯರ್ 4GB ಮೆಮೊರಿ ಸಾಮರ್ಥ್ಯ ಹೊಂದಿದ್ದರೂ ಅದನ್ನು ಮೈಕ್ರೊ ಎಸ್ ಡಿ ಮೆಮೊರಿ ಕಾರ್ಡ್ ಬಳಸಿ 32GBವರೆಗೆ ವಿಸ್ತರಿಸಬಹುದಾಗಿದೆ. ಇದರಲ್ಲಿ 8,000 ಹಾಡುಗಳನ್ನು ಸಂಗ್ರಹಿಸಿ ಇಡಬಹುದಾಗಿದ್ದು , ಈ ಪ್ಲೇಯರ್ ತುಂಬಾ ಹಗುರವಾಗಿದೆ.

ಇದರಲ್ಲಿ ಇಯರ್ ಫೋನ್ ಕೂಡ ಲಭ್ಯವಿದ್ದು , ಇದನ್ನು ಬಳಸಿ ಬಳಕೆದಾರರು ಉತ್ತಮ ಗುಣಮಟ್ಟದ ಶಬ್ದದಲ್ಲಿ ಹಾಡುಗಳನ್ನು ಕೇಳಬಹುದು. ಈ ಸಾಧನದ ಮೇಲೆ ಇರುವ ಕವಚವನ್ನು ತೆಗೆಯಬಹುದಾದರಿಂದ ಬಳಕೆದಾರರು ತಮಗೆ ಇಷ್ಟವಾದ ಬಣ್ಣದ ಕವಚವನ್ನು ಧರಿಸಬಹುದು.

ಇದರಲ್ಲಿ ಲೀಥಿಯಂ ಬ್ಯಾಟರಿ ಬಳಸಲಾಗಿದ್ದು ಒಮ್ಮೆ ರೀಚಾರ್ಜ್ ಮಾಡಿದರೆ 6 ಗಂಟೆಗಳವರೆಗೆ ನಿರಂತರವಾಗಿ ಹಾಡುಗಳನ್ನು ಕೇಳಬಹುದು.ಈ ಸಾಧನವನ್ನು ಆನ್ ಮಾಡಲು ಪ್ಲೇಯರ್ ನ ಎಡ ಬದಿಯಲ್ಲಿ ಹೆಬ್ಬರಳಿನಿಂದ 2 ನಿಮಿಷದವರೆಗೆ ಒತ್ತಿ ಹಿಡಿಯಬೇಕು. ಇದೆ ರೀತಿ ಬಲ ಭಾಗದಲ್ಲಿ ಮಾಡಿದರೆ ಪ್ಲೇಯರ್ ಸ್ವಿಚ್ ಆಫ್ ಆಗುತ್ತದೆ.

ಸಧ್ಯದಲ್ಲಿಯೆ ಮಾರುಕಟ್ಟೆಗೆ ಬರಲಿರುವ ಈ ಪ್ಲೇಯರ್ ಬೆಲೆ ರು. 2,500 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X