H2O ದಿಂದ ವಾಟರ್ ಫ್ರೂಫ್ ಹೆಡ್ ಫೋನ್

|
H2O ದಿಂದ ವಾಟರ್ ಫ್ರೂಫ್ ಹೆಡ್ ಫೋನ್

ನೀವು ನಿಮ್ಮ ಹೆಡ್ ಫೋನ್ ನೀರು ಅಥವಾ ಬೆವರಿನಿಂದಾಗಿ ಹಾಳಾಗುತ್ತದೆ ಎಂದು ಚಿಂತೆ ಮಾಡಬೇಕಾಗಿಲ್ಲ. ಏಕೆಂದರೆ H2O ಆಡಿಯೊ ಕಂಪನಿಯು ವಾಟರ್ ಫ್ರೂಫ್ ಹೆಡ್ ಫೋನ್ ಟ್ರಾಕ್ಷ್ ಬಿಡುಗಡೆ ಮಾಡಿದೆ. ಈ ಹೆಡ್ ಫೋನ್ ಪ್ರಮುಖ ಲಕ್ಷಣವೆಂದರೆ ಇದರಲ್ಲಿ 5 ರೀತಿಯ ಇಯರ್ ಪ್ಲಗ್ ನೀಡಲಾಗುತ್ತಿದೆ.

ಮಡಚಬಹುದಾದ ಮೆಮೊರಿ ವೈರ್, ಅಲ್ಲದೆ ನೋಡಲು ಸಿಗದಂತಹ ಹೈ ವಿಸಿಬಿಲಿಟಿ ಕಾರ್ಡ್ ಮತ್ತು ವಾಟರ್ ಫ್ರೂಫ್ ಮತ್ತು ಸ್ವೆಟ್ ಫ್ರೂಫ್ ಹೊಂದಿರುವ ಈ ಹೆಡ್ ಫೋನ್ ಉತ್ತಮ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತದೆ. ಆದ್ದರಿಂದ ಿದನ್ನು ಯಾವುದೆ ರೀತಿಯ ಹವಾಗುಣದಲ್ಲಿ ಧರಿಸಬಹುದಾಗಿದೆ.

ಈ ಹೆಡ್ ಫೋನ್ ಇಯರ್ ಬಡ್ಸ್ ಅನ್ನು ಬಳಕೆದಾರರು ತಮ್ಮ ಇಷ್ಟದಂತೆ ಧರಿಸಲು ವಿನ್ಯಾಸಗೊಳಿಸಲಾಗಿದೆ. ಅದಕ್ಕಾಗಿಯೆ ಮೆಮೊರಿ ವೈರ್ ಅನ್ನು ಮಡಚುವ ರೀತಿಯಲ್ಲಿ ತಯಾರಿಸಲಾಗಿದೆ. ಈ ವೈರ್ ಇಯರ್ ಹುಕ್ ನಲ್ಲಿ ಸುಲಭವಾಗಿ ಬಳಸಬಹುದಾಗಿದ್ದು , ಇದರಿಂದ ಬಳಕೆದಾರರು ವೈರ್ ಮುಖಕ್ಕೆ ಬಂದು ಬೀಳುವ ಕಿರಿಕಿರಿಯನ್ನು ತಪ್ಪಿಸಬಹುದಾಗಿದೆ.

ಇದರ ಕೇಬಲ್ ಕಾಣುವಂತೆ ಇದ್ದು, ಇದರಲ್ಲಿ ನೀಡಿರುವ 5 ರೀತಿಯ ಇಯರ್ ಪ್ಲಗ್ ಕಿವಿಯಲ್ಲಿ ಸರಿಯಾಗಿ ಕೂರುವಂತೆ ಮಾಡಿ ಹೊರಗಿನ ಗದ್ದಲವನ್ನು ತಡೆಗಟ್ಟಿ, ಉತ್ತಮ ಗುಣ ಮಟ್ಟದ ಶಬ್ದವನ್ನು ನೀಡುತ್ತದೆ.ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿರುವ ಈ ಹೆಡ್ ಫೋನ್ ಅನ್ನು ಮಳೆ , ಅಥವಾ ಬಿಸಿಲು ಯಾವುದೆ ಕಾಲದ ವ್ಯತ್ಯಾಸವಿಲ್ಲದೆ ಸಂಗೀತ ಕೇಳಲು ಬಳಸಬಹುದಾಗಿದೆ.

ಈ ವಾಟರ್ ಫ್ರೂಫ್ ಹೆಡ್ ಫೋನ್ ಕೊಳ್ಳಬಯಸುವರು ಕಂಪನಿಯ ವೆಬ್ ಸೈಟ್ Amazon.com ಮುಖಾಂತರ ಸುಮಾರು ರು. 4000-5000 ಕೊಟ್ಟು ಕೊಂಡುಕೊಳ್ಳಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X