ಯೂಟ್ಯೂಬ್ ಮ್ಯೂಸಿಕ್ನಲ್ಲಿ ಈಗ ಬಂದಿದೆ ಆಫ್ಲೈನ್ ಸೇವ್ ಆಯ್ಕೆ!

By Tejaswini P G
|

ಗೂಗಲ್ ನ ಯೂಟ್ಯೂಬ್ ಮ್ಯೂಸಿಕ್ನಲ್ಲಿ ಇದುವರೆಗೆ ಹಾಡುಗಳನ್ನು ಆನ್ಲೈನ್ ಕೇಳಿ ಆನಂದಿಸಬಹುದಿತ್ತು. ಯೂಟ್ಯೂಬ್ ಮ್ಯೂಸಿಕ್ ನ ಹೊಸ ಅಪ್ಗ್ರೇಡ್ ನೊಂದಿಗೆ ಗೂಗಲ್ ತನ್ನ ಬಳಕೆದಾರರಿಗೆ ನೀಡಿದೆ ಸಿಹಿ ಸುದ್ದಿ. ಹಾಡು, ಆಲ್ಬಮ್ ಮತ್ತು ಪ್ಲೇಲಿಸ್ಟ್ ಗಳನ್ನು ಯೂಟ್ಯೂಬ್ ಮ್ಯೂಸಿಕ್ ನಲ್ಲಿ ಈಗ ಆಫ್ಲೈನ್ ಸೇವ್ ಮಾಡಿ ನಂತರ ನಿಮಗೆ ಬೇಕೆಂದಾಗ ಕೇಳಬಹುದಾಗಿದೆ!

ಯೂಟ್ಯೂಬ್ ಮ್ಯೂಸಿಕ್ನಲ್ಲಿ ಈಗ ಬಂದಿದೆ ಆಫ್ಲೈನ್ ಸೇವ್ ಆಯ್ಕೆ!

ಯೂಟ್ಯೂಬ್ ತನ್ನ ಸೈಟ್ ನಿಂದ ಡೇಟಾವನ್ನು ಆಫ್ಲೈನ್ ಬಳಕೆಗೆ ಸೇವ್ ಮಾಡಲು ಅವಕಾಶ ಮಾಡಿಕೊಡುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ ಆಂಡ್ರಾಯ್ಡ್ ಹಾಗೂ iOS ಗಳಲ್ಲಿ ಯೂಟ್ಯೂಬ್ ಬಳಕೆದಾರರು ತಮ್ಮ ಫೇವರೆಟ್ ವೀಡಿಯೋಗಳನ್ನು ಆಫ್ಲೈನ್ ವೀಕ್ಷಿಸಲು ಡೌನ್ಲೋಡ್ ಮಾಡಬಹುದಾಗಿದೆ.

ಯೂಟ್ಯೂಬ್ ಮ್ಯೂಸಿಕ್ ನಲ್ಲೂ ಆಫ್ಲೈನ್ ಮಿಕ್ಸ್ಟೇಪ್ ಫೀಚರ್ ಬಳಸಿ ಮ್ಯೂಸಿಕ್ ಡೌನ್ಲೋಡ್ ಮಾಡಬಹುದಿತ್ತು, ಆದರೆ ಇದ್ಯಾವುದೂ ಬಳಕೆದಾರರಿಗೆ ಅವರು ಡೌನ್ಲೋಡ್ ಮಾಡುವ ಕಂಟೆಂಟ್ ಮೇಲೆ ಯಾವುದೇ ರೀತಿಯ ಹಿಡಿತವನ್ನು ನೀಡುತ್ತಿರಲಿಲ್ಲ.

ಜಿಯೋ ಫೋನ್ ಆಗಸ್ಟ್ 24 ರಿಂದ ಬುಕಿಂಗ್ ಶುರು: ಆನ್‌ಲೈನ್‌-ಆಫ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?

ಯೂಟ್ಯೂಬ್ ಮ್ಯೂಸಿಕ್ ನಿಂದ ಮ್ಯೂಸಿಕ್ ಡೌನ್ಲೋಡ್ ಮಾಡುವುದು ಈಗ ಬಹಳ ಸುಲಭ.ಹಾಡಿನ ಪಕ್ಕ ಇರುವ ಮೆನು ಐಕಾನ್ ಮೇಲೆ ಕ್ಲಿಕ್ ಮಾಡಿ "ಸೇವ್ ಆಫ್ಲೈನ್" ಅನ್ನು ಆಯ್ಕೆ ಮಾಡಿ. ಆಗ ಆಪ್ ನಿಮಗೆ ಮ್ಯೂಸಿಕ್ ಅಥವಾ ವೀಡಿಯೋ ಡೌನ್ಲೋಡ್ ಮಾಡಬೇಕೇ ಎಂಬ ಆಯ್ಕೆ ನೀಡುತ್ತದೆ. ನೀವು ವೀಡಿಯೋ ಸೇವ್ ಮಾಡಬಯಸಿದರೆ, ಡೌನ್ಲೋಡ್ ಮಾಡುವ ವೀಡಿಯೋದ ಗುಣಮಟ್ಟವನ್ನು ಕೂಡ ಆಯ್ಕೆ ಮಾಡಬಹುದು.

ಯೂಟ್ಯೂಬ್ ಇತ್ತೀಚೆಗೆ ಯೂಟ್ಯೂಬ್ ಮ್ಯೂಸಿಕ್ ಮತ್ತು ಗೂಗಲ್ ಪ್ಲೇ ಮ್ಯೂಸಿಕ್ ಒಂದಾಗಲಿದೆ ಎಂಬ ಮಾಹಿತಿ ನೀಡಿತ್ತು.ಯೂಟ್ಯೂಬ್ ಮ್ಯೂಸಿಕ್ ಗೂಗಲ್ ಪ್ಲೇ ಮ್ಯೂಸಿಕ್ ಅನ್ನು ಸೇರಲಿದೆಯೇ ಅಥವಾ ಗೂಗಲ್ ಪ್ಲೇ ಮ್ಯೂಸಿಕ್ ಯೂಟ್ಯೂಬ್ ಮ್ಯೂಸಿಕ್ ಅನ್ನು ಸೇರಲಿದೆಯೇ ಎಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ.ಗೂಗಲ್ ಇವೆರಡನ್ನು ಜೊತೆಯಾಗಿಸಿ ಹೊಸದೊಂದು ಸೇವೆಯನ್ನು ನೀಡುವ ಸಾಧ್ಯತೆಯೂ ಇದೆ.

ಈ ಎರಡೂ ಒಂದೇ ರೀತಿಯ ಸೇವೆಗಳಾಗಿರುವುದರಿಂದ ಎರಡು ವಿಭಿನ್ನ ಸೇವೆಗಳನ್ನು ಹೊಂದುವುದರಿಂದ ಯಾವ ಉಪಯೋಗವೂ ಇಲ್ಲ.ಹೀಗಾಗಿ ಈ ವಿಲೀನವನ್ನು ತಜ್ಞರು ಸ್ವಾಗತಿಸಿದ್ದಾರೆ.ಗೂಗಲ್ ಒಂದೇ ರೀತಿಯ ಸೇವೆಗೆ ಎರಡು ಆಪ್ಗಳನ್ನು ಹೊಂದಿದ್ದ ಕಾರಣ, ಬಳಕೆದಾರರು ಕೂಡ ಹಂಚಿಹೋಗಿದ್ದರು. ಇದು ಗೂಗಲ್ಗೂ ಆರೋಗ್ಯಕರ ಬೆಳವಣಿಗೆಯಾಗಿರಲಿಲ್ಲ.ಎರಡು ವಿಭಿನ್ನ ಆಪ್ಗಳನ್ನು ವಿಲೀನಗೊಳಿಸಿ ಉತ್ತಮ ಫೀಚರ್ಗಳು ಇರುವ ಒಂದೇ ಆಪನ್ನು ನೀಡುವುದರಿಂದ ಕಂಪೆನಿಗೂ ಒಳಿತು,ಬಳಕೆದಾರರೂ ಹೆಚ್ಚುತ್ತಾರೆ.

ಸಧ್ಯಕ್ಕೆ ಯೂಟ್ಯೂಬ್ ಮ್ಯೂಸಿಕ್ ಭಾರತದಲ್ಲಿ ಲಭ್ಯವಿಲ್ಲವಾದರೂ,ನೀವು ಕೆಲವು ಸರಳ ಹ್ಯಾಕ್ ಬಳಸಿ ಯೂಟ್ಯೂಬ್ ಮ್ಯೂಸಿಕ್ ಆಪ್ ಅನ್ನು ನಿಮ್ಮ ಸ್ಮಾರ್ಟ್ಫೋನ್ ಗಳಲ್ಲಿ ಪಡೆಯಬಹುದು.

Most Read Articles
Best Mobiles in India

Read more about:
English summary
YouTube Music's latest upgrade allows users to download songs, album, and playlists offline with the option to save only music or the video as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X