ಆನೆಗೂ ಇಷ್ಟ ಈ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್

Posted By: Staff
ಆನೆಗೂ ಇಷ್ಟ ಈ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್

ಪ್ರಾಣಿಗಳು ಮಾಡುವ ಕುಚೇಷ್ಟೆಗಳ ವೀಡಿಯೋಗಳನ್ನ ಯೂಟ್ಯೂಬ್ ನಲ್ಲಿ ನೋಡಿರುತ್ತೀರಿ. ಆದರೆ ಮೊಬೈಲ್ ಹಾಗು ಟ್ಯಾಬ್ಲೆಟ್ ಗಳ ಜೊತೆ ಅವುಗಳು ವರ್ತಿಸುವ ರೀತಿ ನೀವು ಬಹುಷಃ ನೋಡಿರುವುದು ಅಪರೂಪ.

ಸ್ಯಾಮ್ಸಂಗ್ ನ ಗ್ಯಾಲಕ್ಸಿ ನೋಟ್, ಮೊಬೈಲ್ ಫೋನ್ ಹಾಗು ಟ್ಯಾಬ್ಲೆಟ್ ಎರಡರ ಸಮ್ಮಿಲನದಂತಿರುವ ಸಾಧನವಾಗಿರುವುದರಿಂದ ಅದನ್ನು ಫಾಬ್ಲೆಟ್ ಎನ್ನಬಹುದು.

ಈಗ ಪೀಟರ್ ಹೆಸರಿನ ಏಷಿಯಾದ ಆನೆಯೊಂದು ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ ಜೊತೆ ಆಟವಾಡುವುದು, ಅದರ ದೊಡ್ಡ ಟಚ್ ಸ್ಕ್ರೀನ್ ನಲ್ಲಿ ಪೇಯಿಂಟ್ ಮಾಡುವುದು, ಮ್ಯೂಸಿಕ್ ಆಪ್ ಗಳನ್ನು ಹುಡುಕುವುದು, ಫೋಟೋ ತೆಗೆಯುವುದು ಕೂಡ ಮಾಡುವ ವೀಡಿಯೋ ಅಂತರ್ಜಾಲದಲ್ಲಿ ತುಂಬಾ ಫೇಮಸ್ ಆಗಿದೆ. ಆನೆಯ ತುಂಟತನ ಹಾಗು ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ ನ ಈ ಗುಣಮಟ್ಟ ಸಾರುವ ವೀಡಿಯೋ ನೋಡಿ ಆನಂದಿಸಿ.


ನಮ್ಮ ಗಿಜ್ಬಾಟ್ ಓದುಗರು ರಿಲಾಕ್ಸ್ ಆಗಲು ಈ ಒಂದು ಸಣ್ಣ ವೀಡಿಯೋ ಎಮ್ಬೆಡ್ ಮಾಡಿದ್ದೇವೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot