ಕೈತುಂಬಾ ಸಂಬಳ ಗಳಿಸಬೇಕೇ ಹಾಗಾದರೆ ಇಲ್ಲೊಮ್ಮೆ ಪ್ರಯತ್ನಿಸಿ!

By Shwetha

  ತಮ್ಮ ವಿದ್ಯಾಭ್ಯಾಸವನ್ನು ಉನ್ನತ ಮಟ್ಟದಲ್ಲಿ ಮುಗಿಸಿ ಕೈತುಂಬಾ ಸಂಪಾದಿಸುವ ವೃತ್ತಿಯನ್ನು ಹಿಡಿಯುವುದು ಎಲ್ಲರ ಬಯಕೆಯಾಗಿದೆ. ಪ್ರತಿಯೊಂದು ರಂಗದಲ್ಲೂ ಕೈ ತುಂಬಾ ಸಂಪಾದಿಸುವ ಉದ್ಯೋಗವನ್ನು ತಮ್ಮದಾಗಿಸಿಕೊಳ್ಳುವುದು ಮಹತ್ವಾಕಾಂಕ್ಷೆಯಾಗಿರುತ್ತದೆ. ಇನ್ನು ಟೆಕ್ ಕ್ಷೇತ್ರದಲ್ಲೂ ಈ ಬಯಕೆ ಹೆಚ್ಚು ಉನ್ನತ ಮಟ್ಟದಲ್ಲಿರುತ್ತದೆ.

  ಇದನ್ನೂ ಓದಿ: ವಿಶ್ವದ ಜನಪ್ರಿಯ ಟಾಪ್‌ 10 ಟೆಕ್‌ ಕಂಪೆನಿಗಳು

  ವಿದ್ಯಾರ್ಥಿಯ ಆಸೆಗೆ ಅನುಸಾರವಾಗಿಯೇ ಟೆಕ್ ಕಂಪೆನಿಗಳು ಉತ್ತಮ ಉದ್ಯೋಗ ಭದ್ರತೆ ಮತ್ತು ಅತ್ಯುತ್ತಮ ಸಂಬಳವನ್ನು ನೀಡುತ್ತಿದೆ. ಹಾಗಿದ್ದರೆ ಇಂದಿನ ಲೇಖದನಲ್ಲಿ ಆ ಕಂಪೆನಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗೂಗಲ್

  ಕೈತುಂಬಾ ಸಂಬಳ, ಉದ್ಯೋಗ ಭದ್ರತೆ ಮತ್ತು ಅತ್ಯುತ್ತಮ ಕಚೇರಿ ಸ್ಥಳವನ್ನು ಈ ಟೆಕ್ ದೈತ್ಯ ಉದ್ಯೋಗಿಗಳಿಗೆ ಒದಗಿಸುತ್ತಿದೆ.

  ವಾಲ್ಟ್ ಡಿಸ್ನಿ ಕಂಪೆನಿ

  ಡಿಸ್ನಿ ಎಂದೇ ಪ್ರಸಿದ್ಧಿ ಪಡೆದಿರುವ ಈ ಕಂಪೆನಿ ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ ಮತ್ತು ಯುನೈಟೆಡ್ ನೇಶನ್‌ಗಳಲ್ಲಿ ಸಂಸ್ಥೆಗಳನ್ನು ಹೊಂದಿದೆ.

  ಆಪಲ್ ಇಂಕ್

  ಅಮೇರಿಕಾದ ಬಹುರಾಷ್ಟ್ರೀಯ ಕಂಪೆನಿ ಆಪಲ್‌ ಮುಖ್ಯ ಕಚೇರಿ ಕ್ಯುಪರ್ಟಿನೋದಲ್ಲಿದೆ. ಕಂಪ್ಯೂಟರ್ ಸಾಫ್ಟ್‌ವೇರ್, ಆನ್‌ಲೈನ್‌ ಸೇವೆಗಳು ಮತ್ತು ಖಾಸಗಿ ಕಂಪ್ಯೂಟರ್‌ಗಳ ಮಾರಾಟವನ್ನು ಈ ಕಂಪೆನಿ ಮಾಡುತ್ತಿದೆ.

  ಅಮೆಜಾನ್ ಕಂಪೆನಿ

  ಅಮೇರಿಕಾದ ಇಲೆಕ್ಟ್ರಾನಿಕ್ ಕಾಮರ್ಸ್ ಕಂಪೆನಿಯಾದ ಅಮೆಜಾನ್.ಕಾಮ್ ಮುಖ್ಯ ಕಚೇರಿ ವಾಶಿಂಗ್ಟನ್‌ನಲ್ಲಿದೆ. ಇಂಟರ್ನೆಟ್ ಆಧಾರಿತ ರೀಟೈಲರ್ ಸಂಸ್ಥೆ ಇದಾಗಿದೆ.

  ಮೈಕ್ರೋಸಾಫ್ಟ್ ಕಾರ್ಪೊರೇಶನ್

  ಅಮೇರಿಕಾದ ಬಹುರಾಷ್ಟ್ರೀಯ ಕಂಪೆನಿಯಾಗಿರುವ ಮೈಕ್ರೋಸಾಫ್ಟ್ ಮುಖ್ಯ ಕಚೇರಿ ರೆಡ್‌ಮಂಡ್ ವಾಶಿಂಗ್ಟನ್‌ನಲ್ಲಿದೆ. ಇದು ಕಂಪ್ಯೂಟರ್ ಮಾರಾಟ ಮತ್ತು ಸೇವೆಯನ್ನೊದಗಿಸುತ್ತದೆ.

  KPMG

  ಪ್ರಪಂಚದಲ್ಲೇ ಅತಿ ದೊಡ್ಡದಾದ ವೃತ್ತಿಪರ ಸೇವಾ ಕಂಪೆನಿಯಾಗಿರುವ ಕೆಪಿಎಮ್‌ಜಿ ಮುಖ್ಯ ಕಚೇರಿ ನೆದರ್‌ಲ್ಯಾಂಡ್‌ನಲ್ಲಿದೆ.

  ಫೇಸ್‌ಬುಕ್

  ಆನ್‌ಲೈನ್ ಸಾಮಾಜಿಕ ತಾಣವಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಫೇಸ್‌ಬುಕ್ ಮುಖ್ಯ ಕಚೇರಿ ಕ್ಯಾಲಿಫೋರ್ನಿಯಾದಲ್ಲಿದೆ. ಮಾರ್ಕ್ ಜುಕರ್‌ಬರ್ಗ್ ಇದರ ಸ್ಥಾಪಕರಾಗಿದ್ದು ಫೆಬ್ರವರಿ 4, 2004 ರಂದು ಈ ಸಂಸ್ಥೆ ಹುಟ್ಟಿಕೊಂಡಿತು.

  ಸೋನಿ

  ಮೊಬೈಲ್ ಕಮ್ಯುನಿಕೇಶನ್ ಸಂಸ್ಥೆಯಾಗಿರುವ ಸೋನಿ ಅಕ್ಟೋಬರ್ 1, 2001 ರಂದು ಜನ್ಮತಾಳಿತು.

  ಫ್ಲಿಪ್‌ಕಾರ್ಟ್

  ಇ - ಕಾಮರ್ಸ್ ಕಂಪೆನಿಯಾಗಿರುವ ಫ್ಲಿಪ್‌ಕಾರ್ಟ್ ಸಪ್ಟೆಂಬರ್ 5 , 2007 ರಲ್ಲಿ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಇದರ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ.

  ಒರೇಕಲ್

  ಒರೇಕಲ್ ಕಾರ್ಪೋರೇಶನ್ ಅಮೇರಿಕನ್ ಮಲ್ಟಿನ್ಯಾಶನಲ್ ಕಂಪ್ಯೂಟರ್ ಟೆಕ್ನಾಲಜಿ ಸಂಸ್ಥೆಯಾಗಿದ್ದು ಕ್ಯಾಲಿಫೋರ್ನಿಯಾದಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  In technology having good and wealthy job is bit difficult. But fortunately in India there were lot of companies offering good jobs with high salary. check out the company and have a settled life with this tech giants.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more