Subscribe to Gizbot

ಆಟದ ಉತ್ಸಾಹವನ್ನು ಹೆಚ್ಚಿಸುವ ಹೆಚ್ಚು ಜನಪ್ರಿಯ ಫೇಸ್‌ಬುಕ್ ಗೇಮ್‌ಗಳು

Written By:

ಸಾಮಾಜಿಕ ಜಾಲತಾಣವಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಫೇಸ್‌ಬುಕ್ ಗೇಮಿಂಗ್ ಕ್ಷೇತ್ರದಲ್ಲೂ ಮುಂದಿದೆ. ಫೇಸ್‌ಬುಕ್‌ನಲ್ಲಿ ಆಟಗಳನ್ನು ಆಡಬಹುದು ಎಂಬುದು ಹೆಚ್ಚಿನ ಬಳಕೆದಾರರಿಗೆ ತಿಳಿದಿಲ್ಲ. ಆದ್ದರಿಂದಾಗಿಯೇ ಇಂದಿನ ಲೇಖನದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಫೇಸ್‌ಬುಕ್ ಗೇಮ್‌ಗಳ ಬಗ್ಗೆ ನಿಮಗೆ ತಿಳಿಸಲಿದ್ದೇವೆ.

ಇದನ್ನೂ ಓದಿ: ಯುವ ಟೆಕ್ ಪ್ರವೀಣರ ನಿಬ್ಬೆರಗಾಗಿಸುವ ಸಾಧನೆಗಳು

ಈ ಫೇಸ್‌ಬುಕ್ ಗೇಮ್‌ಗಳು ಆಡಲು ಸರಳವಾಗಿದ್ದು ನಿಮ್ಮಲ್ಲಿ ಆಟದ ಹುಚ್ಚನ್ನು ಹೆಚ್ಚಿಸುವುದು ಖಂಡಿತ. ಹಾಗಿದ್ದರೆ ಆ ಗೇಮ್‌ಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಂಡಿ ಕ್ರಷ್ ಸಾಗಾ

ಆಟದ ಉತ್ಸಾಹವನ್ನು ಹೆಚ್ಚಿಸುವ ಹೆಚ್ಚು ಜನಪ್ರಿಯ ಫೇಸ್‌ಬುಕ್ ಗೇಮ್‌ಗಳು

ಇದು ಜನಪ್ರಿಯ ಗೇಮ್ ಆಗಿದ್ದು, ಜನವರಿ 2013 ರಿಂದ ಫೇಸ್‌ಬುಕ್‌ನಲ್ಲಿ ಚಾಲ್ತಿಯಲ್ಲಿದೆ. ಇದು ತಿಂಗಳಿಗೆ 148 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ಫಾರ್ಮ್ ಹೀರೋಸ್ ಸಾಗಾ

ಆಟದ ಉತ್ಸಾಹವನ್ನು ಹೆಚ್ಚಿಸುವ ಹೆಚ್ಚು ಜನಪ್ರಿಯ ಫೇಸ್‌ಬುಕ್ ಗೇಮ್‌ಗಳು

ಇದು 40 ಮಿಲಿಯನ್ ಬಳಕೆದಾರರನ್ನು ತಿಂಗಳಲ್ಲಿ ಹೊಂದಿದೆ. ಇದು ತನ್ನದೇ ಆಟದ ಶೈಲಿಯನ್ನು ಹೊಂದಿ ಆಟಗಾರರಲ್ಲಿ ಹೊಸ ಉತ್ಸಾಹವನ್ನು ತುಂಬುತ್ತದೆ.

ಪೆಟ್ ರೆಸ್ಕ್ಯೂ ಸಾಗಾ

ಆಟದ ಉತ್ಸಾಹವನ್ನು ಹೆಚ್ಚಿಸುವ ಹೆಚ್ಚು ಜನಪ್ರಿಯ ಫೇಸ್‌ಬುಕ್ ಗೇಮ್‌ಗಳು

ಇದು 36 ಮಿಲಿಯನ್ ತಿಂಗಳ ಬಳಕೆದಾರರನ್ನು ಹೊಂದಿದೆ. ಬಣ್ಣದ ಬ್ಲಾಕ್‌ಗಳನ್ನು ಕ್ಲಿಯರ್ ಮಾಡುವುದು ಮತ್ತು ಸಾಕುಪ್ರಾಣಿಯನ್ನು ಬಂಧನದಿಂದ ಬಿಡಿಸುವುದು ಆಟದ ಕರಾಮತ್ತಾಗಿದೆ.

ಫಾರ್ಮ್‌ವಿಲ್ಲೆ 2

ಆಟದ ಉತ್ಸಾಹವನ್ನು ಹೆಚ್ಚಿಸುವ ಹೆಚ್ಚು ಜನಪ್ರಿಯ ಫೇಸ್‌ಬುಕ್ ಗೇಮ್‌ಗಳು

ಜಿಂಗಾ ಅಭಿವೃದ್ಧಿಪಡಿಸಿದ ಫೇಸ್‌ಬುಕ್ ಗೇಮ್ ಇದಾಗಿದ್ದು, 2009 ರಿಂದಲೇ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಡ್ರಾಗನ್ ಸಿಟಿ

ಆಟದ ಉತ್ಸಾಹವನ್ನು ಹೆಚ್ಚಿಸುವ ಹೆಚ್ಚು ಜನಪ್ರಿಯ ಫೇಸ್‌ಬುಕ್ ಗೇಮ್‌ಗಳು

ಇದು ಒಂದು ತಿಂಗಳಿಗೆ 26 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

ಕ್ರಿಮಿನಲ್ ಕೇಸ್

ಆಟದ ಉತ್ಸಾಹವನ್ನು ಹೆಚ್ಚಿಸುವ ಹೆಚ್ಚು ಜನಪ್ರಿಯ ಫೇಸ್‌ಬುಕ್ ಗೇಮ್‌ಗಳು

ಇದು ಕೂಡ ಫೇಸ್‌ಬುಕ್‌ನಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಗೇಮ್ ಆಗಿದ್ದು ಇದರ ತಿಂಗಳ ಬಳಕೆದಾರರು 25 ಮಿಲಿಯನ್ ಆಗಿದೆ.

ಟ್ರಿವಿಯಾ ಕ್ರ್ಯಾಕ್

ಆಟದ ಉತ್ಸಾಹವನ್ನು ಹೆಚ್ಚಿಸುವ ಹೆಚ್ಚು ಜನಪ್ರಿಯ ಫೇಸ್‌ಬುಕ್ ಗೇಮ್‌ಗಳು

ಇದೊಂದು ಕ್ವಿಜ್ ಗೇಮ್ ಆಗಿದ್ದು 23 ಮಿಲಿಯನ್ ಬಳಕೆದಾರರನ್ನು ಒಂದು ತಿಂಗಳಲ್ಲಿ ಹೊಂದಿದೆ.

ಬಬ್ಬಲ್ ವಿಚ್ 2 ಸಾಗಾ

ಆಟದ ಉತ್ಸಾಹವನ್ನು ಹೆಚ್ಚಿಸುವ ಹೆಚ್ಚು ಜನಪ್ರಿಯ ಫೇಸ್‌ಬುಕ್ ಗೇಮ್‌ಗಳು

ಕಿಂಗ್‌ನ ಪ್ರಥಮ ಮೊಬೈಲ್ ಗೇಮ್ ಇದಾಗಿದ್ದು, ಫೇಸ್‌ಬುಕ್‌ನ ಹೆಚ್ಚು ಜನಪ್ರಿಯ ಗೇಮ್‌ಗಳಲ್ಲಿ 8ನೇ ಸ್ಥಾನವನ್ನು ಪಡೆದುಕೊಂಡಿದೆ.

ಟೆಕ್ಸಾಸ್ ಹೋಲ್ಡಮ್ ಪೋಕರ್

ಆಟದ ಉತ್ಸಾಹವನ್ನು ಹೆಚ್ಚಿಸುವ ಹೆಚ್ಚು ಜನಪ್ರಿಯ ಫೇಸ್‌ಬುಕ್ ಗೇಮ್‌ಗಳು

ಜಿಂಗಾ ಅಭಿವೃದ್ಧಿಪಡಿಸಿದ ಗೇಮ್ ಇದಾಗಿದ್ದು, ತಿಂಗಳಿಗೆ 21 ಮಿಲಿಯನ್ ಬಳಕೆದಾರರನ್ನು ಪಡೆದುಕೊಂಡಿದೆ.

8 ಬಾಲ್ ಪೋಲ್

ಆಟದ ಉತ್ಸಾಹವನ್ನು ಹೆಚ್ಚಿಸುವ ಹೆಚ್ಚು ಜನಪ್ರಿಯ ಫೇಸ್‌ಬುಕ್ ಗೇಮ್‌ಗಳು

ಮಿನಿಕ್ಲಿಪ್ ಅಭಿವೃದ್ಧಿಪಡಿಸಿದ ಗೇಮ್ ಇದಾಗಿದ್ದು, 19 ಮಿಲಿಯನ್ ತಿಂಗಳ ಬಳಕೆದಾರರನ್ನು ಇದು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Facebook might be a social networking site, but it has also become a huge platform for gaming developers and addicts alike since its inception a decade ago. There are few dedicated Facebook users who have never played a single game on this site - for the others, here are the best-performing games this year.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot