ಆಂಡ್ರಾಯ್ಡ್ ಓಕೆ, ಆಪಲ್ ನಾಟ್ ಓಕೆ!!! ಏಕೆ?

By Shwetha
|

ನೀವು ಆಂಡ್ರಾಯ್ಡ್ ಫೋನ್ ಅನ್ನೇ ಹೆಚ್ಚು ಬಳಸುತ್ತಿದ್ದೀರಿ ಎಂದಾದಲ್ಲಿ ಆಂಡ್ರಾಯ್ಡ್‌ನ ಕಟ್ಟಾ ಅಭಿಮಾನಿಗಳು ನೀವಾಗಿದ್ದೀರಿ ಎಂಬುದರಲ್ಲಿ ಎರಡು ಮಾತಿಲ್ಲ. ಆಪಲ್‌ಗಿಂತಲೂ ಆಂಡ್ರಾಯ್ಡ್ ಬೆಸ್ಟ್ ಎಂಬ ಮಾತೇ ನಿಮ್ಮಲ್ಲಿ ಬರುವುದು ಖಂಡಿತ. ನೀವು ಅಷ್ಟೊಂದು ಹೆಚ್ಚು ಆಂಡ್ರಾಯ್ಡ್ ಅನ್ನು ಏಕೆ ಇಷ್ಟಪಡುತ್ತಿದ್ದೀರಿ ಎಂಬುದು ನಿಮಗೆ ಗೊತ್ತಿದೆಯೇ? ಹಾಗಿದ್ದರೆ ಅದಕ್ಕೆ ಕೆಲವೊಂದು ಕಾರಣಗಳಿದ್ದು ಆಪಲ್‌ಗಿಂತಲೂ ಆಂಡ್ರಾಯ್ಡ್ ವಾಸಿ ಎಂಬುದನ್ನು ಸಾಧಿಸುವ ಹಲವಾರು ಕಾರಣಗಳಿದ್ದು ಅವುಗಳನ್ನೇ ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ.

ಬಜೆಟ್ ಬೆಲೆ

ಬಜೆಟ್ ಬೆಲೆ

ಆಂಡ್ರಾಯ್ಡ್‌ನಲ್ಲಿ ಹಲವಾರು ಸೆಟ್‌ಗಳು ಬಿಡುಗಡೆಗೊಂಡರೂ ಅದು ನಿಮ್ಮ ಬಯಕೆಗಳಿಗೆ ಅನುಗುಣವಾಗಿ ಇರುವಂಥದ್ದು. ನಿಮ್ಮ ಬಜೆಟ್‌ಗೆ ಹೊಂದುವ ನಿಮ್ಮ ಆಯ್ಕೆಯ ಫೋನ್‌ಗಳನ್ನು ಆಂಡ್ರಾಯ್ಡ್ ನಿಮಗೆ ಒದಗಿಸಿಕೊಡುತ್ತದೆ. ಇನ್ನು ಪ್ರತಿಷ್ಟೆಗೆ ನೀವು ಹೆಚ್ಚು ಪ್ರಾಮುಖ್ಯತೆ ಕೊಡುತ್ತೀರಿ ಎಂದಾದಲ್ಲಿ ಆಪಲ್ ಫೋನ್‌ಗಳೇ ನಿಮಗೆ ಸೂಕ್ತ ಆದರೆ ನಿಮ್ಮ ಆಯ್ಕೆ ಇಲ್ಲಿ ಕಾರ್ಯನಿರ್ವಹಿಸುವುದು ಸುಳ್ಳು.

ಕಸ್ಟಮೈಸೇಶನ್

ಕಸ್ಟಮೈಸೇಶನ್

ಆಂಡ್ರಾಯ್ಡ್ ಭಾಗಕ್ಕಿರುವ ಒಂದು ಬಲವಾದ ಅಂಶವೆಂದರೆ ಕಸ್ಟಮೈಸೇಶನ್ ಆಗಿದೆ. ನಿಮ್ಮದೇ ಆಯ್ಕೆಯ ಕಸ್ಟಮೈಸೇಶನ್ ಅನ್ನು ಆಂಡ್ರಾಯ್ಡ್ ಅನುಮತಿಸುತ್ತದೆ. ವಾಲ್‌ಪೇಪರ್, ಪರ್ಯಾಯ ಕೀಬೋರ್ಡ್ಸ್, ಕಸ್ಟಮ್ ROM ಇತರೆ.

ಡಿವೈಸ್‌ಗಳ ರಾಶಿ

ಡಿವೈಸ್‌ಗಳ ರಾಶಿ

ಆಂಡ್ರಾಯ್ಡ್‌ನಲ್ಲಿ ವೈವಿಧ್ಯಮಯ ಫೋನ್‌ಗಳ ಸಂಗ್ರಹಣೆಯನ್ನು ನಿಮಗೆ ನೋಡಬಹುದಾಗಿದ್ದು ನಿಮ್ಮ ಆಯ್ಕೆಯ ಬ್ರ್ಯಾಂಡ್ ಅನ್ನು ಖರೀದಿಸಬಹುದಾಗಿದೆ. ಸ್ಯಾಮ್‌ಸಂಗ್, ಎಚ್‌ಟಿಸಿ, ಸೋನಿ, ಮೋಟೋರೋಲಾ, ಎಲ್‌ಜಿ, ಹುವಾವೆ ಹೀಗೆ ಅಸಂಖ್ಯ ಫೋನ್ ಬ್ರ್ಯಾಂಡ್‌ಗಳನ್ನು ನಿಮಗೆ ಕೊಳ್ಳಬಹುದಾಗಿದೆ.

ವಿಜೆಟ್ಸ್

ವಿಜೆಟ್ಸ್

ಆಂಡ್ರಾಯ್ಡ್ ವಿಜೆಟ್‌ಗಳು ಎಂದಿಗೂ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡು ಬಂದಿವೆ. ಐಓಎಸ್‌ನಲ್ಲಿ ಇಂತಹ ಹೆಚ್ಚು ಸಂಗ್ರಹವುಳ್ಳ ವಿಜೆಟ್‌ಗಳನ್ನು ಕಾಣಲು ನಿಮಗೆ ಸಾಧ್ಯವಾಗದೇ ಇರಬಹುದು. ಐಓಎಸ್‌ನ ಮೇಲೆ ಆಂಡ್ರಾಯ್ಡ್‌ನ ವಿಜಯಕ್ಕೆ ಈ ವಿಜೆಟ್‌ಗಳೇ ಕಾರಣ.

ಮಲ್ಟಿ ಟಾಸ್ಕಿಂಗ್

ಮಲ್ಟಿ ಟಾಸ್ಕಿಂಗ್

ಐಓಎಸ್‌ನಂತೆಯೇ ಕೆಲವೊಂದು ಆಂಡ್ರಾಯ್ಡ್ ಫೋನ್‌ಗಳೂ ಮಲ್ಟಿ ಟಾಸ್ಕಿಂಗ್ ಅನ್ನು ಒದಗಿಸುತ್ತವೆ. ಉದಾಹರಣೆಗೆ ಸ್ಯಾಮ್‌ಸಂಗ್ ಮಲ್ಟಿ ವಿಂಡೊವನ್ನು ಬಹಳಷ್ಟು ವರ್ಷಗಳ ಹಿಂದೆಯೇ ಸಾದರಪಡಿಸಿತ್ತು ಇದನ್ನು ಬಳಸಿ ಬಹು ಅಪ್ಲಿಕೇಶನ್‌ಗಳನ್ನು ನಿಮಗೆ ಒಮ್ಮೆಲೇ ವೀಕ್ಷಿಸಬಹುದಾಗಿದೆ.

ಲಾಂಚರ್‌ಗಳು

ಲಾಂಚರ್‌ಗಳು

ಗೂಗಲ್‌ ಪ್ಲೇನಿಂದ ವೈವಿಧ್ಯಮಯ ಕಸ್ಟಮ್ ಲಾಂಚರ್ ಅಪ್ಲಿಕೇಶನ್‌ಗಳನ್ನು ನಿಮಗೆ ಆರಿಸಬಹುದಾಗಿದೆ ಮತ್ತು ಅದನ್ನು ನಿಮ್ಮ ಹೋಮ್ ಸ್ಕ್ರೀನ್‌ನಲ್ಲಿ ಇರಿಸಿಕೊಳ್ಳಬಹುದಾಗಿದೆ.

ಕಸ್ಟಮ್ ROMS

ಕಸ್ಟಮ್ ROMS

ನಿಮಗೆ ಬೇಕಾದಲ್ಲಿ ನಿಮ್ಮ ಡಿವೈಸ್‌ನೊಂದಿಗೆ ಬಂದಿರುವ ಸಾಫ್ಟ್‌ವೇರ್ ಅನ್ನು ಸ್ಥಳಾಂತರಿಸಬಹುದಾಗಿದೆ.

ಗೂಗಲ್ ಇಂಟಿಗ್ರೇಶನ್

ಗೂಗಲ್ ಇಂಟಿಗ್ರೇಶನ್

ಗೂಗಲ್‌ನ ಸಾಕಷ್ಟು ಸೇವೆಗಳೊಂದಿಗೆ ಆಂಡ್ರಾಯ್ಡ್ ಡಿವೈಸ್‌ಗಳು ಇಂಟಿಗ್ರೇಟ್ ಆಗುತ್ತವೆ. ಗೂಗಲ್ ಡಾಕ್ಸ್, ಜಿಮೇಲ್, ಗೂಗಲ್ ಡ್ರೈವ್, ಗೂಗಲ್ ಮ್ಯಾಪ್ಸ್, ಗೂಗಲ್ ಮ್ಯೂಸಿಕ್ ಹೀಗೆ ಗೂಗಲ್ ಸೇವೆಗಳ ಪಟ್ಟಿಯೇ ಇದೆ.

ಗೂಗಲ್ ನೌ

ಗೂಗಲ್ ನೌ

ಆಂಡ್ರಾಯ್ಡ್‌ನಲ್ಲಿ ನೀವು ಹೆಚ್ಚು ಆನಂದಿಸಬಹುದಾದ ಅಂಶವಾಗಿದೆ ಗೂಗಲ್ ನೌ. ನೀವು ಹುಡುಕಾಡುವ ಬದಲಿಗೆ ನಿಮ್ಮ ಧ್ವನಿಯನ್ನು ಬಳಸಿ ನಿಮ್ಮ ಆಯ್ಕೆಯ ನಿರ್ದಿಷ್ಟವಾದುದನ್ನು ಇಲ್ಲಿ ಅನ್ವೇಷಿಸಬಹುದಾಗಿದೆ.

ಹೆಚ್ಚಿನ ಅಪ್ಲಿಕೇಶನ್‌ಗಳು ಮತ್ತು ಗೇಮ್ಸ್

ಹೆಚ್ಚಿನ ಅಪ್ಲಿಕೇಶನ್‌ಗಳು ಮತ್ತು ಗೇಮ್ಸ್

ಆಂಡ್ರಾಯ್ಡ್‌ನಲ್ಲಿ ಐಓಎಸ್‌ಗಿಂತಲೂ ಹೆಚ್ಚಿನ ಅಪ್ಲಿಕೇಶನ್‌ಗಳಿದ್ದು ಯಾವುದೇ ನಿರ್ಬಂಧನೆಗಳಿಲ್ಲದೆ ಈ ಅಪ್ಲಿಕೇಶನ್‌ಗಳನ್ನು ನಿಮಗೆ ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಭಾರತೀಯರು ಮೊಬೈಲ್‌ ಖರೀದಿಸುತ್ತಿಲ್ಲ : ಏಕೆ ಗೊತ್ತೇ ?</a> <br /><a href=ಎಲ್ಇ 1 ಎಸ್: 20 ಸೆಕೆಂಡ್‌ಗಳಲ್ಲಿ 95000 ಆರ್ಡರ್‌ ಕಂಡ ಬಜೆಟ್ ಫೋನ್
ಫೇಸ್‌ಬುಕ್‌ ಡಿಲೀಟ್‌ಮಾಡಿ : ಫೋನ್‌ ಬಾಳಿಕೆ ಹೆಚ್ಚಿಸಿ
ವಿಜ್ಞಾನ ಲೋಕದಲ್ಲೇ ಹೊಸ ಪ್ರಯೋಗ: ಮೇಣದ ಬತ್ತಿಯಿಂದ ಫೋನ್ ಚಾರ್ಜ್" title="ಭಾರತೀಯರು ಮೊಬೈಲ್‌ ಖರೀದಿಸುತ್ತಿಲ್ಲ : ಏಕೆ ಗೊತ್ತೇ ?
ಎಲ್ಇ 1 ಎಸ್: 20 ಸೆಕೆಂಡ್‌ಗಳಲ್ಲಿ 95000 ಆರ್ಡರ್‌ ಕಂಡ ಬಜೆಟ್ ಫೋನ್
ಫೇಸ್‌ಬುಕ್‌ ಡಿಲೀಟ್‌ಮಾಡಿ : ಫೋನ್‌ ಬಾಳಿಕೆ ಹೆಚ್ಚಿಸಿ
ವಿಜ್ಞಾನ ಲೋಕದಲ್ಲೇ ಹೊಸ ಪ್ರಯೋಗ: ಮೇಣದ ಬತ್ತಿಯಿಂದ ಫೋನ್ ಚಾರ್ಜ್" />ಭಾರತೀಯರು ಮೊಬೈಲ್‌ ಖರೀದಿಸುತ್ತಿಲ್ಲ : ಏಕೆ ಗೊತ್ತೇ ?
ಎಲ್ಇ 1 ಎಸ್: 20 ಸೆಕೆಂಡ್‌ಗಳಲ್ಲಿ 95000 ಆರ್ಡರ್‌ ಕಂಡ ಬಜೆಟ್ ಫೋನ್
ಫೇಸ್‌ಬುಕ್‌ ಡಿಲೀಟ್‌ಮಾಡಿ : ಫೋನ್‌ ಬಾಳಿಕೆ ಹೆಚ್ಚಿಸಿ
ವಿಜ್ಞಾನ ಲೋಕದಲ್ಲೇ ಹೊಸ ಪ್ರಯೋಗ: ಮೇಣದ ಬತ್ತಿಯಿಂದ ಫೋನ್ ಚಾರ್ಜ್

Best Mobiles in India

English summary
So in 2016, what are the ten top reasons we feel that Android champions over iOS.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X