ಭಾರತದ ಟಾಪ್‌ ಟೆಕ್‌ ಬಿಲಿಯನಿಯರ್‌ಗಳು

By Suneel

  ಟೆಕ್ನಾಲಜಿ ಇಂದು ರೋಮಾಂಚನಕಾರಿಯಾಗಿ ಬೆಳೆಯುತ್ತಿರುವ ಕ್ಷೇತ್ರ. ದಿನದಿಂದ ದಿನಕ್ಕೆ ಪ್ರಪಂಚದ ಜನತೆಗೆ ಹೊಸತನವನ್ನು ಪರಿಚಯಿಸುತ್ತಾ, ಯಾವುದಾದರೊಂದು ಕ್ಷೇತ್ರದ ಕಷ್ಟದ ಕೆಲಸಗಳನ್ನು ಸುಲಭ ರೀತಿಯಲ್ಲಿ ನಿರ್ವಹಿಸಬಹುದಾದ ತಂತ್ರವನ್ನು ಟೆಕ್ನಾಲಜಿಯ ಮೂಲಕ ಹೊರತರುತ್ತಾ ಇರುತ್ತದೆ.

  ಟೆಕ್‌ ಕ್ಷೇತ್ರದಲ್ಲಿ ದುಡಿದು ಸಾಧನೆ ಮಾಡಿ ಇಂದು ಹಲವರು ಕೋಟ್ಯಾಧೀಶರು ಆಗಿದ್ದಾರೆ. ಕೇವಲ ಟೆಕ್‌ ಬಗ್ಗೆ ತಿಳಿದುಕೊಳ್ಳುವ ನಾವು ಟೆಕ್‌ ದಿಗ್ಗಜರನ್ನು ತಿಳಿದುಕೊಳ್ಳುವುದು ಒಂದು ರೀತಿಯ ಟೆಕ್‌ ಮಾಹಿತಿಯ ಹಸಿವು ಅಲ್ಲವೇ. ಅದಕ್ಕಾಗಿ ಇಂದು ಗಿಜ್‌ಬಾಟ್‌ ಭಾರತದ ಟೆಕ್‌ ದಿಗ್ಗಜರು ಹಾಗೂ ಟಾಪ್‌ 10 ಭಾರತದ ಟೆಕ್‌ ಕೋಟ್ಯಾಧೀಶರನ್ನು ಇಂದಿನ ಲೇಖನದಲ್ಲಿ ಪರಿಚಯಿಸುತ್ತಿದೆ. ಇವರು ಟಾಪ್‌ 1 ರಿಂದ 10 ರವರೆಗೆ ಅನುಕ್ರಮವಾಗಿ ಭಾರತದ ಬಿಲಿಯನಿಯರ್‌ಗಳಾಗಿದ್ದಾರೆ.

  ಓದಿರಿ: ಉಪ್ಪುನೀರಿನ ಲ್ಯಾಂಪ್‌ನಿಂದ 8 ಗಂಟೆ ಬೆಳಕು

  ಫೋರ್ಬ್ಸ್ ಇತ್ತೀಚೆಗೆ 2015 ನೇ ಇಸವಿಯ ಭಾರತೀಯ ಟಾಪ್‌ 10 ಟೆಕ್‌ ಕೋಟ್ಯಾಧೀಶರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಅನೇಕ ಪರಿಚಿತ ಮುಖಗಳು ಹಾಗೂ ಹೊಸ ಹೆಸರುಗಳು ಸಹ ಇವೇ. ಅವರು ಯಾರು, ಅವರ ಶ್ರೀಮಂತಿಕೆಯ ಮೌಲ್ಯ ಎಷ್ಟು, ಈಗಿನ ಮೌಲ್ಯ ಹಾಗೂ 2014 ರ ಮೌಲ್ಯ ಎಷ್ಟಿತ್ತು ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಅಜೀಂ ಪ್ರೇಂಜಿ

  ವಿಪ್ರೊ ಅಧ್ಯಕ್ಷರು
  ಬ್ಯುಸಿನೆಸ್- ಸಾಫ್ಟ್‌ವೇರ್‌ ಸೇವೆ
  2015-$15.9 ಬಿಲಿಯನ್
  2014-$16.4 ಬಿಲಿಯನ್

  ಶಿವ ನಾಡರ್

  ಎಚ್‌ಸಿಎಲ್- ಸಂಸ್ಥಾಪಕ ಅಧ್ಯಕ್ಷರು
  ಬ್ಯುಸಿನೆಸ್- ಸಾಫ್ಟ್‌ವೇರ್‌ ಸೇವೆ
  2015-$12.9 ಬಿಲಿಯನ್
  2014-$12.5 ಬಿಲಿಯನ್

  ಸುನಿಲ್ ಮಿತ್ತಲ್

  ಸಂಸ್ಥಾಪಕ ಮತ್ತು ಸಮೂಹದ CEO, ಭಾರತಿ ಎಂಟರ್ಪ್ರೈಸಸ್
  ಬ್ಯುಸಿನೆಸ್- ಟೆಲಿಕಾಮ್‌
  2015-$6.2 ಬಿಲಿಯನ್
  2014-$7.8 ಬಿಲಿಯನ್

  ಎನ್ಆರ್ ನಾರಾಯಣಮೂರ್ತಿ

  ಸಹ ಸಂಸ್ಥಾಪಕ ಮತ್ತು ಗೌರವ ಅಧ್ಯಕ್ಷ -ಇನ್ಫೋಸಿಸ್
  ಬ್ಯುಸಿನೆಸ್- ಸಾಫ್ಟ್‌ವೇರ್‌ ಸೇವೆ
  2015-$1.9 ಬಿಲಿಯನ್
  2014-$1.84 ಬಿಲಿಯನ್

  ವೇಣುಗೋಪಾಲ್ ಧೂತ್

  ಅಧ್ಯಕ್ಷ ಮತ್ತು ನಿರ್ವಾಹಕ ನಿರ್ದೇಶಕ- ವೀಡಿಯೋಕಾನ್
  ಬ್ಯುಸಿನೆಸ್‌-ಇಲೆಕ್ಟ್ರಾನಿಕ್ಸ್, ಡಿಟಿಎಚ್, ಟೆಲಿಕಾಮ್‌
  2015-$1.8 ಬಿಲಿಯನ್
  2014-$2.07 ಬಿಲಿಯನ್

  ಎಸ್ ಗೋಪಾಲಕೃಷ್ಣನ್

  ಸಹ ಸಂಸ್ಥಾಪಕ ಮತ್ತು ಕಾರ್ಯಕಾರಿ ಅಧ್ಯಕ್ಷ-ಇನ್ಫೋಸಿಸ್
  ಬ್ಯುಸಿನೆಸ್- ಸಾಫ್ಟ್‌ವೇರ್‌ ಸೇವೆ
  2015-$1.7 ಬಿಲಿಯನ್
  2014-$1.51 ಬಿಲಿಯನ್

  ನಂದನ್ ನೀಲೇಕಣಿ

  ಸಹ ಸಂಸ್ಥಾಪಕ- ಇನ್ಫೋಸಿಸ್
  ಬ್ಯುಸಿನೆಸ್- ಸಾಫ್ಟ್‌ವೇರ್‌ ಸೇವೆ
  2015-$1.6 ಬಿಲಿಯನ್
  2014-$1.49 ಬಿಲಿಯನ್

  ಬಿನ್ನಿ ಬನ್ಸಾಲ್

  ಸಿಒಒ- ಫ್ಲಿಪ್ಕಾರ್ಟ್
  ಬ್ಯುಸಿನೆಸ್- ಇ-ಕಾಮರ್ಸ್‌
  2015-$1.3 ಬಿಲಿಯನ್
  2014-ಹೊಸ ಪ್ರವೇಶ

  ಸಚಿನ್‌ ಬನ್ಸಾಲ್

  ಸಿಇಒ- ಫ್ಲಿಪ್ಕಾರ್ಟ್
  ಬ್ಯುಸಿನೆಸ್- ಇ-ಕಾಮರ್ಸ್‌
  2015-$1.3 ಬಿಲಿಯನ್
  2014-ಹೊಸ ಪ್ರವೇಶ

  ಕೆ ದಿನೇಶ್

  ಸಹ ಸಂಸ್ಥಾಪಕ- ಇನ್ಫೋಸಿಸ್
  ಬ್ಯುಸಿನೆಸ್- ಸಾಫ್ಟ್‌ವೇರ್‌ ಸೇವೆ
  2015-$1.2 ಬಿಲಿಯನ್
  2014-$1.1 ಬಿಲಿಯನ್

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Forbes recently released its 2015 list of richest Indians, which had many familiar faces and a few new names.We sift through the list to zero in upon the 10 Indian tech billionaires and how much their fortunes have increased or decreased compared to the last year.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more