ಉಪ್ಪುನೀರಿನ ಲ್ಯಾಂಪ್‌ನಿಂದ 8 ಗಂಟೆ ಬೆಳಕು

By Suneel
|

ಪ್ರಪಂಚ ಇಂದು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ವಿದ್ಯುತ್‌ ಸಮಸ್ಯೆಯು ಒಂದು. ವಿದ್ಯುತ್‌ ಇಂದು ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿ ತೀರ ಪ್ರದೇಶಗಳು ಹಾಗೂ ಕಡಿಮೆ ಸವಲತ್ತಿನ ಪ್ರದೇಶಗಳಿಗೂ ಸಹ ವಿದ್ಯುತ್‌ ಮೂಲಭೂತ ವಸ್ತುವಾಗಿಬಿಡುತ್ತದೆ. ಇಂದು ಟೆಕ್‌ ಬೆಳವಣಿಗೆ ಎಲ್ಲರನ್ನೂ ಸ್ಮಾರ್ಟ್‌ ಆಗಿಸುತ್ತಿದೆ. ಈ ಸ್ಮಾರ್ಟ್‌ನೆಸ್‌ಗೆ ಸ್ಮಾರ್ಟ್‌ಫೋನ್‌ಗಳು ಸಹ ಕಾರಣ. ಈ ಎಲ್ಲಾ ಚಟುವಟಿಕೆಗಳು ನೆಡೆಯಬೇಕೆಂದರೆ ವಿದ್ಯುತ್‌ ಮತ್ತು ಅದರಿಂದ ನಾವು ಪಡೆಯುವ ಬೆಳಕು ಅತಿಮುಖ್ಯವಾಗಿದೆ.

ಏನಪ್ಪಾ ಇದು ಇಂದಿನ ಲೇಖನದಲ್ಲಿ ವಿದ್ಯುತ್‌ ಬಗ್ಗೆ ಒತ್ತಿ ಒತ್ತಿ ಹೇಳ್ತಿದ್ದಾರೆ, ಏನ್‌ ವಿಶೇಷ ಅಂತೀರಾ. ಹೌದು, ಇಂದಿನ ಲೇಖನದಲ್ಲಿ ಎಲ್ಲರಿಗೂ ಖುಷಿ ಆಗುವಂತೆ ವಿದ್ಯುತ್‌ ಸಂಬಂಧಿಸಿದಂತೆ ವಿಶೇಷ ಮಾಹಿತಿ ಒಂದನ್ನು ಹೇಳುತ್ತಿದ್ದೇವೆ.

ಓದಿರಿ: ಅತೀ ಶೀಘ್ರದಲ್ಲಿ 5G ನಿಮ್ಮೆಡೆಗೆ

ಗಿಜ್‌ಬಾಟ್‌ ಇಷ್ಟುದಿನ ನಿಮಗೆಲ್ಲಾ ಗಾಳಿ, ನೀರು, ಸೋಲಾರ್ ನಿಂದ ಮಾತ್ರ ವಿದ್ಯುತ್‌ ಉತ್ಪಾದನೆ ಬಗ್ಗೆ ಹೇಳಿತ್ತು. ಇಂದಿನ ಲೇಖನದಲ್ಲಿ ಉಪ್ಪು ಮತ್ತು ನೀರಿನ ಮಿಶ್ರಣದಿಂದ ತಯಾರಿಸಿದ ಲ್ಯಾಂಪ್‌ ಒಂದು 8 ಗಂಟೆಗಳ ಕಾಲ ಬೆಳಕು ನೀಡುವ ಬಗ್ಗೆ ಹೇಳುತ್ತಿದೆ. ಹಾಗಾದರೆ ಈ ವಿಶೇಷ ಲ್ಯಾಂಪ್‌ ಬಗ್ಗೆ ಕೆಳಗಿನ ಸ್ಲೈಡರ್‌ಗಳನ್ನು ಓದಿ.

Saltlight ಏನಿದು?

Saltlight ಏನಿದು?

Saltlight ಇದು ತೋಜೋದೀಪ ಲ್ಯಾಂಪ್‌ ಆಗಿದ್ದು ಇದು ಕೇವಲ ನೀರು ಮತ್ತು ಉಪ್ಪಿನ ಮಿಶ್ರಣದಿಂದ ಬೆಳಕು ನೀಡುತ್ತದೆ.

Joeffrey Firas

Joeffrey Firas

Saltlight ಲ್ಯಾಂಪ್‌ ಅನ್ನು ಕಂಡುಹಿಡಿದವರು ಇಂಜಿನಿಯರ್‌ಗಳಾದ ರಾಲ್ಫ್‌ ಮಿಜೆನೊ ಮತ್ತು ಜೆಫರಿ ಫಿರಾಸ್. ಇವರು ಈ ಲ್ಯಾಂಪ್‌ಅನ್ನು ವಿದ್ಯುತ್‌ ಸಮಸ್ಯೆಯನ್ನು ಅರಿತು Saltlight ಅನ್ನು ಕಂಡುಹಿಡಿದಿದ್ದಾರೆ

Saltlight

Saltlight

ಈ ಲ್ಯಾಂಪ್‌ ತುರ್ತು ಮತ್ತು ಪೋರ್ಟೆಬಲ್‌ ಲೈಟಿಂಗ್‌ ಉದ್ಯಮ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ.

8 ಗಂಟೆಗಳ ಕಾಲ ಬೆಳಕು

8 ಗಂಟೆಗಳ ಕಾಲ ಬೆಳಕು

ಯಾವುದೇ ಇತರ ಪದಾರ್ಥಗಳನ್ನು ಬಳಸದೇ ಉಪ್ಪು ಮತ್ತು ನೀರಿನಿಂದ ತಯಾರಿಸಿರುವ ಈ ಲ್ಯಾಂಪ್‌ 8 ಗಂಟೆಗಳ ಕಾಲ ಬೆಳಕು ನೀಡಲಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ.

ಹೇಗೆ ಕಾರ್ಯನಿರ್ವಹಿಸುತ್ತದೆ.

ಒಂದು ಲೋಟ ನೀರು ಮತ್ತು 2 ಟೇಬಲ್‌ಚಮಚ ಉಪ್ಪಿನ ಮಿಶ್ರಣದಿಂದ ಈ ಬೆಳಕನ್ನು ತಯಾರಿಸಬಹುದು. ಇದು 8 ಗಂಟೆಗಳ ಕಾಲ ಬೆಳಕನ್ನು ನೀಡುತ್ತದೆ. ಹಾಗೆಯೇ ಸ್ವಲ್ಪ ಸಮುದ್ರ ನೀರನ್ನು ಬಳಸಬಹುದಾಗಿದೆ.

ಅವಶ್ಯಕತೆ

ಅವಶ್ಯಕತೆ

ಹೆಚ್ಚು ದೂರದ ಪ್ರದೇಶಗಳು ಹಾಗೂ ಯಾವುದೇ ಇಂಧನದ ಪೂರೈಕೆ ಇಲ್ಲದ ಪ್ರದೇಶಗಳು ಈ ಲ್ಯಾಂಪ್‌ ಉಪಯೋಗ ಪಡೆಯ ಬಹುದಾಗಿದೆ.

 ಕಡಿಮೆ ವೆಚ್ಚ

ಕಡಿಮೆ ವೆಚ್ಚ

ಕೋಟ್ಯಾಂತರ ಜನರು ಬ್ಯಾಟರಿ ಆಪರೇಟೆಡ್‌ ಟ್ಯೂಬ್‌ ಲೈಟ್‌, ಲ್ಯಾಂಪ್‌ ಹಾಗೂ ಇತರೆ ಬೆಳಕಿನ ಗ್ಯಾಜೆಟ್ಸ್‌ಗಳಿಗಾಗಿ ಹೆಚ್ಚು ಹಣ ವೆಚ್ಚ ಮಾಡುತ್ತಾರೆ. ಆದರೆ ಇದು ವೆಚ್ಚವೇ ಇಲ್ಲದೇ ತುರ್ತು ಸಂದರ್ಭಗಳಿಗಾಗಿ ಬಳಸಬಹುದಾದ ಲ್ಯಾಂಪ್‌ ಆಗಿದೆ.

ಸರಳ ಟೆಕ್ನಾಲಜಿ

ಸರಳ ಟೆಕ್ನಾಲಜಿ

ಈ ಸೂಪರ್‌ ಟೆಕ್ನಾಲಜಿ ವಯಕ್ತಿಕವಾಗಿ ಯಾರಾದರೂ ಯಾವುದೇ ತೊಂದರೆ ಇಲ್ಲದೇ ಬಳಸಬಹುದಾಗಿದ್ದು, ಇದನ್ನು ಫಿಲಿಪೈನ್ಸ್‌ನ ಸ್ಥಳೀಯರು ಕೆರೋಸಿನ್‌ ಆಧಾರಿತ ಲ್ಯಾಂಪ್‌ ಬಳಸುತ್ತಾರೆ.

 ಯಾವುದೇ ಉರಿಯುವ ವಸ್ತುಗಳನ್ನು ಇದಕ್ಕೆ ಬಳಸಿಕೊಂಡಿಲ್ಲ.

ಯಾವುದೇ ಉರಿಯುವ ವಸ್ತುಗಳನ್ನು ಇದಕ್ಕೆ ಬಳಸಿಕೊಂಡಿಲ್ಲ.

ಯಾವುದೇ ಉರಿಯುವ ವಸ್ತುಗಳನ್ನು ಇದಕ್ಕೆ ಬಳಸಿಕೊಂಡಿಲ್ಲ.

Best Mobiles in India

English summary
This renewable energy lamp called Saltlight can bring revolutionary changes in the emergency and portable lighting industry since it needs no power and ingredients are extremely basic.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X