ಗೂಗಲ್‌ ಮ್ಯಾಪ್‌ನಲ್ಲಿವೆ ಅತ್ಯಾಕರ್ಷಕ ಫೀಚರ್ಸ್‌; ಇವುಗಳ ಬಳಕೆ ಬಗ್ಗೆ ತಿಳಿದಿದೆಯೇ?

|

ಗೂಗಲ್‌ ತನ್ನ ಇತರೆ ಸೇವೆಗಳ ಜೊತೆಗೆ ಗೂಗಲ್‌ ಮ್ಯಾಪ್‌ ಆಪ್‌ ಮೂಲಕ ಪ್ರಯಾಣಿಕರು ಹಾಗೂ ಪ್ರವಾಸಿಗರಿಗೆ ಅಗತ್ಯವಾದ ಸೇವೆಗಳನ್ನು ನೀಡುತ್ತಾ ಬರುತ್ತಿದೆ. ಗೂಗಲ್‌ ಆಪ್‌ ಮೂಲಕ ಯಾರ ಸಹಾಯವೂ ಇಲ್ಲದೆ ಎಲ್ಲಿಗಾದರೂ ಸಂಚಾರ ಮಾಡಬಹುದಾಗಿದೆ. ಹಾಗೆಯೇ ಈ ಆಪ್‌ನಲ್ಲಿ ಗೂಗಲ್ ಕೆಲವು ನವೀಕರಣ ಮಾಡುತ್ತಲೇ ಬರುತ್ತಿದೆ. ಈ ನವೀಕರಣಗಳು ಕೆಲವು ಬಳಕೆದಾರರಿಗೆ ತಿಳಿಯದೇ ಇರಬಹುದು.

ಆಪ್‌

ಹೌದು, ಗೂಗಲ್‌ ತನ್ನ ಎಲ್ಲಾ ಆಪ್‌ಗಳಲ್ಲೂ ನಿರಂತರ ಅಪ್‌ಗ್ರೇಡ್‌ ಪ್ರಕ್ರಿಯೆಗಳನ್ನು ನಡೆಸುತ್ತಾ ಬರುತ್ತಿದೆ. ಇದರಲ್ಲಿ ಗೂಗಲ್‌ ಆಪ್‌ ಸಹ ಹಲವು ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಕೇವಲ ನಕ್ಷೆಯನ್ನು ಮಾತ್ರ ತೋರಿಸದೆ ಎಲ್ಲಿ ಹೋಟೆಲ್‌ ಇದೆ, ಎಲ್ಲಿ ಪಾರ್ಕಿಂಗ್‌ ಜಾಗ ಇದೆ ಎಂಬಿತ್ಯಾದಿ ಮಾಹಿತಿಗಳು ಈ ಆಪ್‌ನಿಂದ ತಿಳಿಯಲಿದೆ. ಹಾಗಿದ್ರೆ ಆಪ್‌ನಲ್ಲಿ ಇರುವ ಪ್ರಮುಖ ಫೀಚರ್ಸ್‌ ಪಟ್ಟಿ ಇಲ್ಲಿದೆ ನೋಡಿ.

ನಿಮ್ಮ ಮಾರ್ಗದಲ್ಲಿನ ಬಹು ನಿಲ್ದಾಣಗಳನ್ನು ಗುರುತಿಸಿ

ನಿಮ್ಮ ಮಾರ್ಗದಲ್ಲಿನ ಬಹು ನಿಲ್ದಾಣಗಳನ್ನು ಗುರುತಿಸಿ

ಸಾಮಾನ್ಯವಾಗಿ ಪ್ರಯಾಣಿಕರು A ಬಿಂದುವಿನಿಂದ B ಬಿಂದುವಿನ ಕಡೆ ಪ್ರಯಾಣ ಮಾಡಲು ಮುಂದಾದರೆ ಮ್ಯಾಪ್‌ನಲ್ಲಿ ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಸಾಮಾನ್ಯ. ಇದರಲ್ಲಿ ಹೆಚ್ಚಿನ ಜನರಿಗೆ ತಿಳಿದಿರದ ಸಂಗತಿಯೆಂದರೆ, ಬಳಕೆದಾರರ ನಡುವೆ ಬಹು ನಿಲುಗಡೆಗಳನ್ನು ಆಡ್‌ ಮಾಡಲು ಹಾಗೂ ಉತ್ತಮ ಮಾರ್ಗವನ್ನು ಸೂಚಿಸಲು ಈ ಫೀಚರ್ಸ್‌ ಅನುವು ಮಾಡಿಕೊಡುತ್ತದೆ.

ಟೋಲ್ ದರ ಪರಿಶೀಲಿಸಿ

ಟೋಲ್ ದರ ಪರಿಶೀಲಿಸಿ

ನೀವು ಯಾವುದಾದರೂ ಹೆದ್ದಾರಿಯಲ್ಲಿ ಪ್ರಯಾಣಿಸಲು ಮುಂದಾದರೆ ಗೂಗಲ್‌ ಮ್ಯಾಪ್‌ ಯಾವ ಮಾರ್ಗದಲ್ಲಿ ಎಷ್ಟು ಟೋಲ್ ಪಾವತಿಸಬೇಕು ಎಂಬ ಮಾಹಿತಿಯನ್ನೂ ಸಹ ನೀಡುತ್ತದೆ. ಈ ಮಾಹಿತಿ ಪಡೆಯಲು ನೀವು ಸೆಟ್ಟಿಂಗ್ ಗೆ ಹೋಗಿ 'ಶೋ ಟೋಲ್ ರೇಟ್‌' ಆಯ್ಕೆಯನ್ನು ಸಕ್ರಿಯಗೊಳಿಸಬೇಕಿದೆ. ನಂತರ ಸ್ಥಳವನ್ನು ಹುಡುಕಿದಾಗ ಟೋಲ್ ಮಾಹಿತಿ ಲಭ್ಯವಾಗುತ್ತದೆ.

ಪ್ಲಸ್ ಕೋಡ್ ರಚನೆ

ಪ್ಲಸ್ ಕೋಡ್ ರಚನೆ

ಗೂಗಲ್‌ ಮ್ಯಾಪ್‌ ನಲ್ಲಿರುವ ಪ್ಲಸ್ ಕೋಡ್ ನಿಮ್ಮ ಸ್ಥಳವನ್ನು ಬೇರೆಯವರ ಜೊತೆ ಶೇರ್‌ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಪ್ಲಸ್ ಕೋಡ್ ಬಳಕೆದಾರರಿಗೆ ವಿಭಿನ್ನ ಗೇಟ್‌ಗಳು, ಪ್ರವೇಶ ಬಿಂದುಗಳು ಮತ್ತು ಇನ್ನಿತರೆ ಮಾಹಿತಿಯನ್ನು ನಿರ್ದಿಷ್ಟಪಡಿಸಲು ಅನುಮತಿಸುತ್ತದೆ.

ಸ್ಥಳಗಳ ನಡುವಿನ ಅಂತರ ಅಳೆಯಿರಿ

ಸ್ಥಳಗಳ ನಡುವಿನ ಅಂತರ ಅಳೆಯಿರಿ

ಈ ಫೀಚರ್ಸ್‌ ಪ್ರಯಾಣಿಕರಿಗೆ ಬಹಳಷ್ಟು ಪ್ರಯೋಜಕಾರಿ. ಈ ಫೀಚರ್ಸ್‌ ಬಳಸಿಕೊಂಡು ಬಳಕೆದಾರರು ಯಾವುದೇ ಎರಡು ಅಥವಾ ಹೆಚ್ಚಿನ ಬಿಂದುಗಳ ನಡುವಿನ ಅಂತರವನ್ನು ಕಂಡುಕೊಳ್ಳಬಹುದು. ಇದರಲ್ಲಿ ಯಾವ ವಾಹನದಲ್ಲಿ ಪ್ರಯಾಣಿಸಿದರೆ ಎಷ್ಟು ಸಮಯ ಆಗುತ್ತದೆ ಎಂಬ ಮಾಹಿತಿ ಸಹ ಲಭ್ಯವಾಗುತ್ತದೆ.

ಬಸ್, ಮೆಟ್ರೋ ಮಾರ್ಗ ಪತ್ತೆ ಮಾಡಿ

ಬಸ್, ಮೆಟ್ರೋ ಮಾರ್ಗ ಪತ್ತೆ ಮಾಡಿ

ಗೂಗಲ್ ಮ್ಯಾಪ್‌ನಲ್ಲಿ ಸಾಮಾನ್ಯವಾಗಿ ಕಾರುಗಳು, ಬೈಕುಗಳು ಮತ್ತು ನಡಿಗೆಗೆ ಸಂಬಂಧಿಸಿದ ಮಾರ್ಗವನ್ನು ತೋರಿಸುತ್ತದೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ಮಾಹಿತಿ. ಇದರ ಹೊರತಾಗಿ ಈ ಮ್ಯಾಪ್‌ ಮೂಲಕ ಮೆಟ್ರೋ ಹಾಗೂ ಸುರಂಗ ಮಾರ್ಗದ ಬಗ್ಗೆ ಸಹ ಮಾಹಿತಿ ಪಡೆಯಬಹುದು.

ನಿಮ್ಮ ವಾಹನ ಪಾರ್ಕಿಂಗ್ ಸ್ಥಳ ನೆನಪಿಡಿ

ನಿಮ್ಮ ವಾಹನ ಪಾರ್ಕಿಂಗ್ ಸ್ಥಳ ನೆನಪಿಡಿ

ದೊಡ್ಡ ನಗರದಲ್ಲಿ ಸಾಮಾನ್ಯವಾಗಿ ವಾಹನ ಪಾರ್ಕಿಂಗ್ ಮಾಡಿದ ನಂತರ ಎಲ್ಲಿ ಪಾರ್ಕಿಂಗ್‌ ಮಾಡಿದ್ದೇವೆ ಎಂಬುದನ್ನೇ ಕೆಲವರು ಮರೆಯುತ್ತಾರೆ. ಇದಕ್ಕೂ ಫೀಚರ್ಸ್ ನೀಡಿರುವ ಗೂಗಲ್‌ ಮ್ಯಾಪ್‌, ನಿಮ್ಮ ಪಾರ್ಕಿಂಗ್ ಅನ್ನು ತೋರಿಸುವ ನೀಲಿ ಐಕಾನ್ ಮೇಲೆ ಟ್ಯಾಪ್ ಮಾಡಿ ಮತ್ತು ಪಾಪ್ಅಪ್ ಮೆನುವಿನಿಂದ 'ಸೇವ್ ಪಾರ್ಕಿಂಗ್' ಆಯ್ಕೆ ಮೇಲೆ ಟ್ಯಾಪ್ ಮಾಡಿದರೆ ನಿಮ್ಮ ಪಾರ್ಕಿಂಗ್‌ ಸ್ಥಳ ನಿಮ್ಮ ಮೊಬೈಲ್‌ನಲ್ಲಿ ಉಳಿದುಕೊಳ್ಳುತ್ತದೆ.

ಪಾರ್ಕಿಂಗ್ ಸ್ಥಿತಿಯನ್ನು ಪರಿಶೀಲಿಸಿ

ಪಾರ್ಕಿಂಗ್ ಸ್ಥಿತಿಯನ್ನು ಪರಿಶೀಲಿಸಿ

ನೀವು ಎಲ್ಲಿಗಾದರೂ ಹೋಗಲು ನಿರ್ಧಾರ ಮಾಡಿದಾಗ ಯೋಜಿಸಿರುವ ಸ್ಥಳದ ಪಾರ್ಕಿಂಗ್ ಸ್ಥಿತಿಯನ್ನು ಗೂಗಲ್‌ ಮ್ಯಾಪ್ ಮೂಲಕವೇ ತಿಳಿದುಕೊಳ್ಳಬಹುದು. ಇದಕ್ಕಾಗಿ ನೀವು ಯಾವ ಸ್ಥಳಕ್ಕೆ ಹೋಗಬೇಕು ಎಂಬುದನ್ನು ಸರ್ಚ್‌ ಮಾಡಿ ನಂತರ 'P' ಐಕಾನ್‌ ಮೇಲೆ ಟ್ಯಾಪ್‌ ಮಾಡಿ ವಿವರ ಪಡೆದುಕೊಳ್ಳಿ.

ಸಂಚಾರ ವಿವರಗಳನ್ನು ಸಮಯವಾರು ಪರಿಶೀಲಿಸಿ

ಸಂಚಾರ ವಿವರಗಳನ್ನು ಸಮಯವಾರು ಪರಿಶೀಲಿಸಿ

ಸಾಮಾನ್ಯವಾಗಿ ಬೆಳಗ್ಗೆ ಹಾಗೂ ಸಂಜೆ ಹೆಚ್ಚು ಸಂಚಾರ ದಟ್ಟಣೆ ಇರುತ್ತದೆ. ಇದು ಎಲ್ಲರಿಗೂ ತಿಳಿದಿರುವ ಮಾಹಿತಿ. ಇದರ ಹೊರತಾಗಿ ಯಾವ ಸಮಯದಲ್ಲಿ ಎಷ್ಟು ಸಂಚಾರ ದಟ್ಟಣೆ ಇದೆ ಎಂಬುದನ್ನು ಪೂರ್ವದಲ್ಲಿಯೇ ನೋಡಿಕೊಂಡು ನಿಮ್ಮ ಪ್ರಯಾಣ ಆರಂಭಿಸಬಹುದಾಗಿದೆ.

ಅಜ್ಞಾತವಾಗಿ ಸಂಚರಿಸಿ

ಅಜ್ಞಾತವಾಗಿ ಸಂಚರಿಸಿ

ನೀವು ನಿಮ್ಮ ಸ್ಮರ್ಟ್‌ಫೋನ್‌ನಲ್ಲಿ ಮ್ಯಾಪ್‌ ಜಿಪಿಎಸ್‌ ಓಪನ್‌ ಮಾಡಿದರೆ ಆಟೋಮ್ಯಾಟಿಕ್‌ ಆಗಿ ಗೂಗಲ್ ಹಾಗೂ ಇನ್ನಿತರೆ ಆಪ್‌ಗಳು ನೀವು ಎಲ್ಲೆಲ್ಲಿಗೆ ಸಂಚರಿಸಿದ್ದೀರಿ ಎಂಬುದನ್ನು ಟ್ರ್ಯಾಕ್‌ ಮಾಡುತ್ತವೆ. ಇದನ್ನು ತಪ್ಪಿಸಲು ಸಹ ಫೀಚರ್ಸ್‌ ನೀಡಲಾಗಿದೆ. ಇದಕ್ಕಾಗಿ ನೀವು ಅಜ್ಞಾತ ಮೋಡ್( Incognito) ಸಕ್ರಿಯಗೊಳಿಸಿದರೆ ಸಾಕು.

ಆಪಲ್‌ ಮ್ಯೂಸಿಕ್, ಸ್ಪಾಟಿಫೈ  ಸ್ಟ್ರೀಮಿಂಗ್ ಸೇವೆ ಪಡೆಯಿರಿ

ಆಪಲ್‌ ಮ್ಯೂಸಿಕ್, ಸ್ಪಾಟಿಫೈ ಸ್ಟ್ರೀಮಿಂಗ್ ಸೇವೆ ಪಡೆಯಿರಿ

ನೀವು ಪ್ರಯಾಣಿಸುವಾಗಲೇ ಗೂಗಲ್‌ ಮ್ಯಾಪ್‌ ಮೂಲಕವೇ ಸಂಗೀತ ಸ್ಟ್ರೀಮಿಂಗ್ ಸೇವೆಗಳನ್ನು ಬಳಕೆ ಮಾಡಬಹುದಾಗಿದೆ. ಇದನ್ನು ಸಕ್ರಿಯಗೊಳಿಸಬೇಕು ಎಂದರೆ ಸೆಟ್ಟಿಂಗ್ ಅಯ್ಕೆಗೆ ಹೋಗಿ ಅಲ್ಲಿ ನ್ಯಾವಿಗೇಷನ್ ಸೆಟ್ಟಿಂಗ್ ಮೇಲೆ ಟ್ಯಾಪ್‌ ಮಾಡಿ ನಂತರ 'ಅಸಿಸ್ಟಂಟ್ ಡೀಫಾಲ್ಟ್ ಮೀಡಿಯಾ ಪ್ರೊವೈಡರ್' ಆಯ್ಕೆ ಕಡೆ ಕಣ್ಣಾಡಿಸಿ. ಇದಾದ ಬಳಿಕ ನಿಮಗೆ ಬೇಕಾದ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಯನ್ನು ಆಯ್ಕೆಮಾಡಿ ನಂತರ ಖಾತೆಗೆ ಲಾಗಿನ್ ಆಗಿ

Best Mobiles in India

English summary
Google along with its other services is providing the service through the Google Maps app. Accordingly, the features of Google Maps are explained here.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X