Subscribe to Gizbot

ನಿಮ್ಮ ಫೇಸ್‌ಬುಕ್ ಫೋಟೋಗೆ ಹೆಚ್ಚು ಲೈಕ್ಸ್ ಬರಬೇಕೆ???

Posted By:

ಸಾಮಾಜಿಕ ಜಾಲತಾಣಗಳು ಈಗೀಗ ಪ್ರಬಲವಾಗಿ ಬೆಳೆಯುತ್ತಿರುವ ಮಾಧ್ಯಮಗಳು. ಫೇಸ್‌ಬುಕ್, ಟ್ವಿಟ್ಟರ್, ಗೂಗಲ್ ಪ್ಲಸ್ ಹೀಗೆ ಪ್ರತಿಯೊಂದು ಸೋಶಿಯಲ್ ನೆಟ್‌ವರ್ಕ್‌ಗಳೂ ಕೂಡ ನಮಗೆ ಅಗತ್ಯವಾಗಿವೆ. ವ್ಯಾಪಾರ, ವ್ಯವಹಾರ, ಮನರಂಜನೆಯನ್ನು ಪ್ರಚಾರ ಪಡಿಸಲು ಜಾಲತಾಣಗಳು ಬೇಕು.

ಉದಾಹರಣೆಗೆ ನೀವು ಫೇಸ್‌ಬುಕ್ ಸದಸ್ಯರಾಗಿದ್ದು ನಿಮ್ಮ ಒಂದು ಫೋಟೋ ಹೇಗೆ ಹಿಟ್‌ಗಳನ್ನು.ಲೈಕ್‌ಗಳನ್ನು ಪಡೆಯುತ್ತದೆ ಎಂಬುದನ್ನು ನೋಡಿ. ವಿವರಣೆ ನೀಡದೆಯೇ ಬರಿಯ ನಿಮ್ಮ ಫೋಟೋ ಪಡೆದಿರುವ ಲೈಕ್‌ಗಳು, ಶೇರ್‌ಗಳನ್ನು ನೀವು ಗಮನಿಸಿದಾಗ ಬಳಕೆದಾರರು ಈ ಸಾಮಾಜಿಕ ತಾಣಗಳನ್ನು ಹೇಗೆ ಬಳಸುತ್ತಿದ್ದಾರೆ ಎಂಬ ಅರಿವು ನಿಮಗುಂಟಾಗುತ್ತದೆ.

ಇತ್ತೀಚೆಗೆ ಫೇಸ್‌ಬುಕ್ ಮತ್ತು ಟ್ವಿಟ್ಟರ್ ತನ್ನ ಬಳಕೆದಾರರಿಗಾಗಿ ತನ್ನ ಫೀಚರ್‌ಗಳಲ್ಲಿ ವೈವಿಧ್ಯತೆಯನ್ನು ತಂದಿದ್ದು ಇವುಗಳ ಮೂಲಕ ನೀವು ಫೋಟೋಗಳನ್ನು, ಲಿಂಕ್‌ಗಳನ್ನು ಹಂಚಿಕೊಳ್ಳುವಾಗ ಅದು ಪಡೆಯುವ ಹಿಟ್ ಲೈಕ್‌ಗಳನ್ನು ನೋಡಿ ನಿಮಗೆ ಆಶ್ಚರ್ಯವಾಗಬಹುದು. ಅಷ್ಟೊಂದು ವೈವಿಧ್ಯವಾಗಿ ನೀವು ಹಂಚಿಕೊಂಡ ಮಾಹಿತಿಗಳು ಜನರನ್ನು ತಲುಪಿರುತ್ತದೆ.

ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ನೀವು ಕೆಲವೊಂದು ಅಂಶಗಳತ್ತ ಗಮನಹರಿಸಬೇಕಾಗುತ್ತದೆ. ಉದಾಹರಣೆಗೆ ನೀವು ಫೋಟೋಗಳನ್ನು ಹಾಕುತ್ತೀರಿ ಎಂದಾದಲ್ಲಿ ಅದರ ಗುಣಮಟ್ಟ, ಹಿನ್ನಲೆ, ಫೋಟೋ ತೆಗೆದ ರೀತಿಗೆ ನೀವು ಗಮನ ನೀಡಬೇಕಾಗುತ್ತದೆ.
ಇಂದಿನ ಲೇಖನವು ಈ ತಾಣಗಳಲ್ಲಿ ನಿಮ್ಮನ್ನು ಅಭಿವ್ಯಕ್ತಿಸುವುದು ಹೇಗೆ ಎಂಬುದನ್ನು ತಿಳಿಸುತ್ತದೆ. ಇಲ್ಲಿ ನಾವು ನೀಡಿರುವ ಕೆಲವೊಂದು ವಿಧಾನಗಳನ್ನು ಅನುಸರಿಸಿ ಜಾಲತಾಣಗಳಲ್ಲಿ ಪ್ರಸಿದ್ಧರಾಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರೊಡಕ್ಟ್ ಶಾಟ್

#1

ಪ್ರತಿಯೊಂದು ಉತ್ಪನ್ನ, ಉದ್ಯಮಕ್ಕೆ ಪ್ರೊಡಕ್ಟ್ ಡಿಸ್‌ಪ್ಲೇ ಅತ್ಯಗತ್ಯ. ನೀವು ಏನನ್ನಾದರೂ ಪ್ರಮೋಶನ್ ಮಾಡುತ್ತೀರಿ ಎಂದಾದಲ್ಲಿ ಉದಾಹರಣೆಗೆ ಐಸ್‌ಕ್ರಿಂ, ಫೂಟ್‌ವೇರ್ ಮಾರಾಟ ವ್ಯಾಪಾರಕ್ಕೆ ನೀವು ಮುಂದಾಗಿದ್ದಲ್ಲಿ ಅದನ್ನು ಜಾಲತಾಣಗಳಲ್ಲಿ ಹಾಕಲು ಆದಷ್ಟು ಫೋಟೋಗಳನ್ನು ಬಳಸಿ. ಇದರಿಂದ ಗ್ರಾಹಕ ಹೆಚ್ಚು ಆಕರ್ಷಿತನಾಗುತ್ತಾನೆ.

ಟೀಮ್ ಪಿಕ್ಚರ್ಸ್

#2

ನಿಮ್ಮ ತಂಡದೊಂದಿಗಿರುವ ಚಿತ್ರಗಳನ್ನು ಹೆಚ್ಚು ಹಾಕಿ. ಇದಕ್ಕಾಗಿ ವಿಶೇಷ ಸಂದರ್ಭ ಉಂಟಾಗಲಿ ಎಂದು ಕಾಯದಿರಿ. ನಿಮ್ಮಲ್ಲಿರುವ ಯಾವುದೇ ಹಳೆಯ ಫೋಟೋಗಳನ್ನು ಕೂಡಲೇ ಹಾಕಿ. ನಿಮ್ಮ ಬ್ರಾಂಡ್ ಅನ್ನು ಹೆಚ್ಚು ಪ್ರಚಾರಪಪಡಿಸಲು ಇದು ಸಹಕಾರಿಯಾಗಿರುತ್ತದೆ.

ನಿಮ್ಮ ಅಭಿಮಾನಿಗಳನ್ನು ಆಕರ್ಷಿಸಿ

#3

ಪ್ರತಿಯೊಬ್ಬರೂ ತಾವು ವಿಶೇಷವಾಗಿ ಕಾಣಬೇಕೆಂದು ಬಯಸುತ್ತಾರೆ. ಅದೇ ರೀತಿ ನಿಮ್ಮ ಫ್ಯಾನ್ಸ್‌ಗಳು, ಫಾಲೋವರ್‌ಗಳನ್ನು ಹೆಚ್ಚು ಬೆಳಕಿಗೆ ಬರುವಂತೆ ಮಾಡಿ. ನಿಮ್ಮ ಸಾಮಾಜಿಕ ಚಾನಲ್‌ಗಳಲ್ಲಿ ಅವರ ಫೋಟೋಗಳನ್ನು ತುಸು ದೊಡ್ಡದಾಗಿರುವಂತೆ ಪೊಸ್ಟ್ ಮಾಡಿ. ಅದನ್ನು ಟ್ಯಾಗ್ ಮಾಡಿ, ರಿಟ್ವೀಟ್ ಮಾಡಿ. ಹೆಚ್ಚು ಅವರೇ ಕಾಣಿಸುವಂತೆ ಮಾಡಿ. ಬರಿಯ ೧೫ ನಿಮಿಷಗಳನ್ನು ಅವರಿಗೆ ನೀಡಿ ನಿಮಗೆ ಅವರು ನೀಡುವ ಗೌರವ ನಿಮ್ಮ ಊಹೆಗೂ ನಿಲುಕದ್ದಾಗಿರುತ್ತದೆ.

ಅದ್ಭುತ ಚಿತ್ರಗಳು

#4

ಯಾರಿಗೂ ದೊರಕದೇ ಇರುವಂತಹ ಚಿತ್ರಗಳನ್ನು ಹೆಚ್ಚು ಹುಡುಕಿ ಮತ್ತು ಅಂತವುಗಳನ್ನೇ ಅಪ್‌ಲೋಡ್ ಮಾಡಿ. ನಿಮ್ಮ ಫೋಟೋ ಕಲೆಕ್ಷನ್ ನೋಡಿ ಹೆಚ್ಚಿನವರು ನಿಮ್ಮ ಫ್ಯಾನ್‌ಗಳಾಗುತ್ತಾರೆ. ನಂತರ ಅವರನ್ನು ನಿಮ್ಮ ಸಮುದಾಯಕ್ಕೆ ಆಹ್ವಾನಿಸಿ.

ಏಕ್ಷನ್ ಶಾಟ್

#5

ನಿಮ್ಮ ಗೆಳೆಯರು ಮಾಡುವಂತಹ ಕೆಲಸವನ್ನೇ ನಿಮ್ಮ ಪೋಟೋದ ಮುಖ್ಯ ಕೇಂದ್ರವಾಗಿರಿಸಿಕೊಳ್ಳಿ. ಅವರು ಏನಾದರೂ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಂದರೆ ಬಾಸ್ಕೆಟ್ ಬಾಲ್ ಆಡುತ್ತಿರುವಾಗ, ಕಾದಂಬರಿ ಬರೆಯುತ್ತಿರುವಾಗ ಫೋಟೋ ತೆಗೆಯಿರಿ. ಇಲ್ಲಿ ಅವರು ಆ ಕೆಲಸವನ್ನು ನಿಜವಾಗಿ ಮಾಡದಿದ್ದರೂ ಅಭಿನಯಿಸುತ್ತಿರುವಂತೆ ಫೊಟೋ ತೆಗೆಯಿರಿ.

ಗ್ರಾಫಿಕ್ ಬಳಕೆ

#6

ನಿಮ್ಮಷ್ಟಕ್ಕೇ ಕೆಲವೊಂದು ಎಡಿಟಿಂಗ್‌ಗಳನ್ನು ನಿರ್ವಹಿಸುವುದು ಗ್ರಾಫಿಕ್ ಬಳಸುವುದು ಇವೇ ಮೊದಲಾದ ತಾಂತ್ರಿಕ ವಿಧಾನಗಳನ್ನು ಫೋಟೋದಲ್ಲಿ ಅನುಸರಿಸಿ. ಡೇಟಾ, ಪದಗಳು ಹಾಗೂ ಚಿತ್ರಗಳ ಸಮ್ಮಿಲನ ನಿಮ್ಮ ಸಂಪರ್ಕಕ್ಕೆ ಮತ್ತು ಸಾಮಾಜಿಕ ಮಾಧ್ಯಮವನ್ನು ತಲುಪಲು ಸಹಾಯ ಮಾಡುತ್ತದೆ.

ವಿಶಿಷ್ಟ ಶಾಟ್‌ಗಳು

#7

ಸಾಮಜಿಕ ತಾಣಗಳಲ್ಲಿ ನೀವು ಪ್ರಸಿದ್ಧರಾಗಲು ಕೆಲವೊಂದು ವಿಭಿನ್ನ ನೀತಿಗಳನ್ನು ನೀವು ಅನುಸರಿಸಬೇಕಾಗುತ್ತದೆ. ಡಿಫರೆಂಟ್ ಆಗಿರುವ ಫೋಟೋ ನಿಮ್ಮ ಅಭಿಮಾನಿಗಳಲ್ಲಿ ನಿಮ್ಮನ್ನು ಕುರಿತ ಕುತೂಹಲಗಳನ್ನು ಹೆಚ್ಚಿಸುತ್ತದೆ. ನಿಮ್ಮ ಸಕ್ರಿಯತೆ ಅವರಿಗೆ ಇಷ್ಟವಾಗುತ್ತದೆ.

#8

ನೀವು ಫೋಟೋಗಳೊಂದಿಗೆ ವೀಡಿಯೋಗಳನ್ನು ಸೇರಿಸುವುದೂ ಕೂಡ ಸಾಮಾಜಿಕ ತಾಣಗಳಲ್ಲಿ ಕ್ಲಿಕ್ ಆಗಲು ಸಹಾಯಕ. ನಿಮ್ಮ ಒಂದು ವೀಡಿಯೋವನ್ನು ಜನರು ಹೇಗೆ ನೋಡುತ್ತಾರೆ. ಅದನ್ನು ಎಷ್ಟು ಜನ ಹಂಚಿಕೊಂಡಿದ್ದಾರೆ ಮೊದಲಾದ ಅಂಶಗಳನ್ನು ನೀವು ಗಮನಿಸಬೇಕು.

ಕ್ರಿಯಾತ್ಮಕತೆ

#9

ಸಾಮಾಜಿಕ ತಾಣಗಳಲ್ಲಿ ಕ್ರಿಯಾತ್ಮಕವಾಗಿರುವುದು ಅತ್ಯವಶ್ಯಕ. ಟ್ವಿಟ್ಟರ್‌ನ ಹೊಸ ಮೊಬೈಲ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಫೋಟೋಗಳನ್ನು ಸಿಂಗಲ್ ಟ್ವೀಟ್‌ಗಳಲ್ಲಿ ರವಾನಿಸಿ. ನಿಮ್ಮ ಫೋಟೋ ಎಡಿಟಿಂಗ್ ಮಾಡುವ ಹಲವಾರು ತಂತ್ರಜ್ಞಾನಗಳು ಲಭ್ಯವಿದ್ದು ಅವುಗಳ ಬಳಕೆಯನ್ನು ಮಾಡಿ.

 ಸೆಲ್ಫಿ ಫೋಟೋ

#10

ಸೆಲ್ಫೀ ಫೋಟೋ ತೆಗೆಯುವ ಅವಕಾಶವನ್ನು ಹೆಚ್ಚಿನ ಮೊಬೈಲ್ ಫೋನ್‌ಗಳು ಹೊಂದಿದ್ದು ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಿ. ಇದರ ಮೂಲಕ ನಿಮ್ಮ ಫೋಟೋವನ್ನು ನೀವೇ ತೆಗೆಯಬಹುದು. ನಿಮಗೆ ಬೇಕಾದ ರೀತಿಯಲ್ಲಿ ಪ್ರಕಾರದಲ್ಲಿ ಈ ಸೆಲ್ಫೀಯ ಪ್ರಯೋಜನವನ್ನು ನಿಮಗೆ ಪಡೆದುಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot