ಫೇಸ್‌ಬುಕ್‌ನಲ್ಲಿ ಫೋಟೋ ಲೈಕ್‌ ಮಾಡುವ ಮುನ್ನ ಎಚ್ಚರ!!

By Suneel
|

ಫೇಸ್‌ಬುಕ್‌ನಲ್ಲಿ ಎಲ್ಲರೂ ತಮ್ಮ ಕ್ರೇಜಿ ಫೋಟೋಗಳನ್ನ ದಿನನಿತ್ಯ ಅಪ್‌ಲೋಡ್‌ ಮಾಡೋದೇ ಮಾಡೋದು. ತಗಳಪ್ಪಾ ಅಯ್ಯೋ ನಂದ್‌ ಒಂದೇ ಒಂದು ಫೋಟೋಗೆ ಎಷ್ಟೊಂದು ಲೈಕ್‌ ಬಂದದೇ. ಹೂಂಂಂ ಶೇರ್‌ ಎಷ್ಟೊಂದು ಆಗದೇ ನನ್‌ ಫೋಟೋ ಅಂತ ಕೆಲವೊಬ್ಬರು ತುಂಬಾ ಖುಷಿಯಾಗಿ ಇನ್ನೊಬ್ಬರ ಮುಂದೆ ಹೇಳ್ತಿರ್ತಾರೆ. ಆದರೆ ಅದೆಷ್ಟು ದಿನ ಹಾಗೆ ಖುಷಿಯಾಗಿರ್ತಾರೆ ಎಂಬುದು ಮಾತ್ರ ಬಹುಶಃ ಅವರಿಗೂ ತಿಳಿದಿರಲ್ಲ. ಯಾಕ್‌ ಹೀಗೆ ಹೇಳ್ತಿದ್ದೀನಿ ಅಂತಿರಾ. ಫೇಸ್‌ಬುಕ್‌ನಲ್ಲಿ ಲೈಕ್‌ ಮಾಡುವ ಹವ್ಯಾಸ ಕುರಿತು ಅಘಾತಕಾರಿ ಮಾಹಿತಿಯೊಂದು ಮನಶಾಸ್ತ್ರಜ್ಞರಿಂದ ಹೊರಬಿದ್ದಿದೆ.

ಓದಿರಿ :ಶೀಘ್ರದಲ್ಲಿ ನಿಮ್ಮ ವಾಟ್ಸಾಪ್‌ ಡೇಟಾ ಫೇಸ್‌ಬುಕ್‌ನಲ್ಲಿ ಶೇರ್‌

ಫೇಸ್‌ಬುಕ್‌ನಲ್ಲಿ ಲೈಕ್‌ಗಳು ಮತ್ತು ಕಾಮೆಂಟ್ಸ್‌ಗಳು ಅನಗತ್ಯ ಸಮಸ್ಯೆಗಳಿಗೆ ಅವಕಾಶ ಮಾಡಿಕೊಡುವುದಲ್ಲದೇ ಸ್ಥಿರ ಸಂಬಂಧಗಳನ್ನು ಮುರಿದು ಹಾಕುವ ಸಮಸ್ಯೆ ಮಾಡುತ್ತವಂತೆ. ಇದು ಹೇಗೆ ಸಾಧ್ಯ ಎಂಬುದನ್ನು ಸವಿವರವಾಗಿ ಓದಲು ಲೇಖನದ ಸ್ಲೈಡರ್‌ಗಳನ್ನು ಓದಿ.

ಸಂಬಂಧಗಳಿಗೆ ಸಮಸ್ಯೆ

ಸಂಬಂಧಗಳಿಗೆ ಸಮಸ್ಯೆ

ಮನಶಾಸ್ತ್ರಜ್ಞರ ಪ್ರಕಾರ, ಹೆಚ್ಚು ಸಮಯ ಸಾಮಾಜಿಕ ಜಾಲತಾಣದಲ್ಲಿ ತೊಡಗುವುದು ಸ್ಥಿರ ಸಂಬಂಧಗಳಿಗೆ ಸಮಸ್ಯೆಯನ್ನು ಉಂಟುಮಾಡುತ್ತದೆ ಎನ್ನಲಾಗಿದೆ. ಈ ರೀತಿಯ ಚಟುವಟಿಕೆಗಳು ನಡೆಯುತ್ತಿರುವುದು ಇತ್ತೀಚೆಗೆ ಕಂಡುಬಂದಿದೆ.

ಬ್ರೇಕಪ್‌

ಬ್ರೇಕಪ್‌

"ಸಾಮಾಜಿಕ ಜಾಲತಾಣವು ಸಂಬಂಧಗಳನ್ನು ಕಸಿಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಕಾರಣ ಇದು ವಯಕ್ತಿಕ ವಿಷಯಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ನಿರಂತರವಾಗಿ ಸಾಮಾಜಿಕ ಜಾಲತಾಣ ಬಳಸುವವರಿಗೆ ದೀಘ್ರಕಾಲ ಅವಕಾಶ ಸೋಶಿಯಲ್‌ ಸೈಟ್‌ಗಳಲ್ಲಿ ಇಲ್ಲ", ಎಂದು ಮಕ್ಕಳು ಮತ್ತು ವಯಸ್ಕರ ಪ್ರಾಯೋಗಿಕ ಮನಶಾಸ್ತ್ರಜ್ಞರಾದ ಡಾ|| ಅಶಿಮ ಶ್ರೀವತ್ಸವ ಐಎಎನ್‌ಎಸ್‌ಗೆ ಹೇಳಿದ್ದಾರೆ.

ಆದ್ಯತೆಗಳು ಬದಲಾವಣೆ

ಆದ್ಯತೆಗಳು ಬದಲಾವಣೆ

"ಸಾಮಾಜಿಕ ಜಾಲತಾಣದ ಅಡೆತಡೆಗಳಿಂದ ಆದ್ಯತೆಗಳು ಬದಲಾಗಿ ಸಂಬಂಧಗಳ ಮೇಲೆ ದುಷ್ಪರಿಣಾಮ ಬೀರುತ್ತವೆ", ಎಂದು ಫೋರ್ಟಿಸ್‌ ಹೆಲ್ತ್‌ಕೇರ್‌ನ ಡಾ|| ಸಮಿರ್ ಪರಿಖ್‌ ಹೇಳಿದ್ದಾರೆ.

 ಸಮಸ್ಯೆಗಳು ಹೇಗೆ ?

ಸಮಸ್ಯೆಗಳು ಹೇಗೆ ?

ಫೇಸ್‌ಬುಕ್‌ನಲ್ಲಿ ಎಲ್ಲರೂ ಸಹ ವಾಸ್ತವವಲ್ಲದ ಕೆಲವು ಪ್ರದರ್ಶನಗಳ ಫೋಟೋಗಳನ್ನು ಅಪ್‌ಲೋಡ್‌ ಮಾಡುವುದು ಎಲ್ಲರಿಗೂ ತಿಳಿದೇ ಇದೆ. ಈ ನಿಟ್ಟಿನಲ್ಲಿ ಹಲವರಿಗೆ ತಮ್ಮ ಸಂಗಾತಿ ಫೇಸ್‌ಬುಕ್‌ನಲ್ಲಿ ನೋಡಿದ ಪ್ರದರ್ಶನಗಳನ್ನು ವಾಸ್ತವ ಎಂದು ತಿಳಿದು ಸ್ಫೂರ್ತಿಗೊಂಡಿರುತ್ತಾರೆ. ಅಂತಹವರು ವಾಸ್ತವತೆ ಬೇರೆಯೇ ಎಂದು ತಿಳಿದ ಮೇಲೆ ಆ ರೀತಿ ಜೀವನ ಲೀಡ್‌ ಮಾಡುವ ಬಗ್ಗೆ ಒತ್ತಾಯ ಹಾಕುತ್ತಾರೆ. ಇದರಿಂದ ಸಂಬಂಧಗಳು ವೈಪಲ್ಯಕ್ಕೆ ಒಳಗಾಗುತ್ತವೆ ಎಂದು ಐಎಎನ್‌ಎಸ್‌ಗೆ ಮನಶಾಸ್ತ್ರಜ್ಞರಾದ ಡಾ|| ರಿಪನ್‌ ಸಿಪ್ಪಿ ಹೇಳಿದ್ದಾರೆ.

ರಿಲೇಶನ್‌ಶಿಪ್‌ ಕಿಲ್ಲರ್‌

ರಿಲೇಶನ್‌ಶಿಪ್‌ ಕಿಲ್ಲರ್‌

ಸಂಬಂಧಗಳ ಮೂಲಭೂತ ಅಂಶ ನಂಬಿಕೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವಯಕ್ತಿಕ ಅಭಿಪ್ರಾಯಗಳು ಮತ್ತು ಮಾಹಿತಿ ಹಂಚಿಕೆ ಹೆಚ್ಚು ದುರ್ಬಲವಾಗಿರುತ್ತದೆ. ಈ ಕಾರಣದಿಂದ " ಯಾರಾದರೂ ಇತರರ ಫೋಟೋವನ್ನು ಲೈಕ್‌ ಮಾಡಿದ ನಂತರ, ಅವರು ಏನು, ಎಲ್ಲಿಂದ, ಯಾರೂ ಎಂಬಿತ್ಯಾದಿ ವಯಕ್ತಿಕ ಚಾಟ್‌ ನಡೆಯುತ್ತದೆ. ಇವುಗಳೆ ಸಂಬಂಧಗಳಿಗೆ ಸಮಸ್ಯೆತಂದೊಡ್ಡುವ ಮೂಲಭೂತ ಅಂಶಗಳು" ಎಂದು ಶ್ರೀವತ್ಸರವರು ಹೇಳಿದ್ದಾರೆ.

ಫೇಸ್‌ಬುಕ್‌

ಫೇಸ್‌ಬುಕ್‌

"ಲೈಕ್‌" ಮತ್ತು ಕಾಮೆಂಟ್ಸ್‌"ಗಳು ಮಾಹಿತಿ ಶೇರ್‌ ಮಾಡಲು ಬಲವರ್ಧನೆಯನ್ನು ಧನಾತ್ಮಕವಾಗಿ ಸಹಾಯ ನೀಡುತ್ತವೆ. ಇದರಿಂದ ಸೈಟ್‌ ಹಲವು ಭಾರಿ ಅದನ್ನೇ ಮರುಕಳಿಸುತ್ತದೆ. ಇದರಿಂದ ಹಿಂದಿನ ಸಂಗಾತಿಗೆ ಭಾವನಾತ್ಮಕವಾಗಿ ಮೋಸ ಮಾಡಿದಂತಾಗುತ್ತದೆ ಎನ್ನಲಾಗಿದೆ.

ಸಮಸ್ಯೆಗಳು

ಸಮಸ್ಯೆಗಳು

"ಸಾಮಾಜಿಕ ಜಾಲತಾಣಗಳನ್ನು ಬಳಸುವುದು ಪ್ರಮುಖವಾಗಿ ಬೇಸರವನ್ನು ಹೋಗಿಸಲು ಮತ್ತು ಸ್ವಲ್ಪ ಪ್ರಮಾಣದಲ್ಲಿ ಉದ್ಯೋಗ ನಿರೀಕ್ಷೆಯ ಮಾಹಿತಿಗಾಗಿ" ಎಂದು ಡಾ || ಶ್ರೀವತ್ಸ ಹೇಳಿದ್ದಾರೆ. ಹಲವರು ಸಾಮಾಜಿಕ ಜಾಲತಾಣವನ್ನು ತಮ್ಮ ಸಂಗಾತಿಗಳನ್ನು ಇತರರೊಂದಿಗೆ ಸಾಮಾಜಿಕವಾಗಿ ಹೋಲಿಸಲು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಸಂಬಂಧಗಳ ಹೆಚ್ಚು ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಸ್ವಭಾವ ಬದಲಾವಣೆಗೆ ಕಾರಣ

ಸ್ವಭಾವ ಬದಲಾವಣೆಗೆ ಕಾರಣ

ಅತಿಯಾದ ಸಾಮಾಜಿಕ ಜಾಲತಾಣವು ಸಹ ಸ್ವಭಾವವನ್ನು ಬದಲಿಸುವಲ್ಲಿ ಪಾತ್ರವಹಿಸುತ್ತದೆ. ಪ್ರೇಮಿಗಳು ಸಹ ಸಂಬಂಧಗಳನ್ನು ಕಡಿತಗೊಳಿಸುವಲ್ಲಿ ಕೆಲವೊಮ್ಮೆ ಅತಿಯಾದ ಸಾಮಾಜಿಕ ಜಾಲತಾಣ ಬಳಕೆಯು ಕಾರಣವಾಗಬಹುದು. ಆದ್ದರಿಂದ ಸೋಶಿಯಲ್‌ ಮಿಡಿಯಾ ಬಳಕೆಯಿಂದ ತಮ್ಮನ್ನು ತಾವು ಸ್ವಭಾವದಲ್ಲಿ ಹೇಗೆ ನಿಯಂತ್ರಿಸಿಕೊಳ್ಳಭೇಕು ಎಂದು ಎಚ್ಚರವಹಿಸಬೇಕಾಗಿದೆ ಎಂದು ಮನಶಾಸ್ತ್ರಜ್ಞರಾದ ಸಿಪ್ಪಿ ಹೇಳಿದ್ದಾರೆ.

Most Read Articles
Best Mobiles in India

English summary
Beware before you ‘like’ a photo on social media. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more