ದಶಕದ ಸಂಭ್ರಮದಲ್ಲಿ ಗೂಗಲ್‌ ಕ್ರೋಮ್‌..! ಬದಲಾಗುತ್ತಲೇ ಜನರ ಮನ ಗೆದ್ದ ಬ್ರೌಸರ್..!

By Avinash
|

ಮೊದಲೆಲ್ಲಾ ಇಂಟರ್‌ನೆಟ್‌ ಬ್ರೌಸ್‌ ಮಾಡಬೇಕು ಎಂದರೆ ಮೈಕ್ರೊಸಾಫ್ಟ್‌ನ ಇಂಟರ್‌ನೆಟ್‌ ಎಕ್ಸ್‌ಪ್ಲೋರ್ ಅಥವಾ ಮೊಜಿಲ್ಲಾ ಫೈರ್‌ಫಾಕ್ಸ್‌ ಬಳಸುವ ಅವಕಾಶ ಮಾತ್ರವಿತ್ತು. ಅದರಲ್ಲೂ ಇಂಟರ್‌ನೆಟ್‌ ಬ್ರೌಸರ್‌ನ ದೈತ್ಯವೆಂದು ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ನ್ನು ಕರೆಯುತ್ತಿದ್ದರು. ಇದರ ಜತೆ ಆಪಲ್ ಸಫಾರಿ ಇದ್ದರೂ, ಅಷ್ಟೊಂದು ಪರಿಣಾಮಕಾರಿಯಾದ ಅನುಭವವನ್ನು ಜನಗಳಿಗೆ ನೀಡುತ್ತಿದ್ದಿಲ್ಲ. ಇವೇಲ್ಲದರ ಮಧ್ಯೆ ದಶಕದ ಹಿಂದೆ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬ್ರೌಸರ್‌ ಪರಿಚಯ ಮಾಡಿ ಅನೇಕ ಬಳಕೆದಾರ ಸ್ನೇಹಿ ಫೀಚರ್‌ಗಳನ್ನು ನೀಡುತ್ತಾ ವಿಶ್ವದಲ್ಲಿಯೇ ಜನಪ್ರಿಯ ಬ್ರೌಸರ್‌ನ್ನಾಗಿ ಮಾಡಿತು.

ಹೌದು, 10 ವರ್ಷಗಳ ಹಿಂದೆ ಅಂದರೆ ಸರಿಯಾಗಿ 2008 ಸೆಪ್ಟೆಂಬರ್, 01ರಂದು ಗೂಗಲ್‌ ತನ್ನ ಬ್ಲಾಗ್‌ನಲ್ಲಿ "A fresh take on the browser" ಎಂಬ ಹೆಡ್‌ಲೈನ್‌ನೊಂದಿಗೆ ಪೋಸ್ಟ್‌ ಪ್ರಕಟಿಸಿತ್ತು. ಈ ಪೋಸ್ಟ್‌ನ್ನು ಅಂದಿನ ಉತ್ಪನ್ನ ನಿರ್ವಹಣೆಯ ಉಪಾಧ್ಯಕ್ಷ ಅಂದರೆ ಸದ್ಯದ ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಇಂಜಿನಿಯರಿಂಗ್ ಡೈರೆಕ್ಟರ್ ಲೀನಸ್‌ ಅಪ್ಸಾನ್‌ ಪ್ರಕಟಿಸಿದ್ದರು. ಈ ಪೋಸ್ಟ್‌ ಮೂಲಕ ಜನಪ್ರಿಯ ಗೂಗಲ್‌ ಕ್ರೋಮ್‌ ಬ್ರೌಸರ್‌ನ್ನು ಗೂಗಲ್ ಪರಿಚಯಿಸಿತ್ತು.

ದಶಕದ ಸಂಭ್ರಮದಲ್ಲಿ ಗೂಗಲ್‌ ಕ್ರೋಮ್‌..! ಬದಲಾಗುತ್ತಲೇ ಜನರ ಮನ ಗೆದ್ದ ಬ್ರೌಸರ್..!

ಕಳೆದ ಒಂದು ದಶಕದಲ್ಲಿ ಗೂಗಲ್ ಕ್ರೋಮ್‌ ನೆಟ್ಟಿಗರ ಮನಸ್ಸಿನಲ್ಲಿ ಉಳಿಯಲು ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ, ಬಳಕೆದಾರರಿಗೆ ಉತ್ತಮ ಬ್ರೌಸಿಂಗ್ ಅನುಭವ ನೀಡಿದ್ದೇ ಪ್ರಮುಖವಾಗಿದೆ. ನಾವಷ್ಟೇ ಎಂದು ಸಾರ್ವಭೌಮತ್ವ ಸಾಧಿಸಿದ್ದ ಬೇರೆ ಬ್ರೌಸರ್‌ಗಳಿಗೆ ಹೊಸ ಹೊಸ ಫೀಚರ್‌ಗಳಿಂದಲೇ ಸ್ಪರ್ಧೆ ನೀಡಿ ಬೆಳವಣಿಗೆ ಕಂಡ ಗೂಗಲ್ ಕ್ರೋಮ್‌ನ ಕಳೆದ ದಶಕದ ಪಯಣ ಹೇಗಿತ್ತು ನೋಡಿ.

ಸ್ವಚ್ಛ ಮತ್ತು ಬಳಕೆದಾರ ಸ್ನೇಹಿ

ಸ್ವಚ್ಛ ಮತ್ತು ಬಳಕೆದಾರ ಸ್ನೇಹಿ

ಕ್ರೋಮ್‌ ಬ್ರೌಸರ್ ಪರಿಚಯವಾದಾಗ ಅತಿ ಸರಳ ಹಾಗೂ ಸ್ವಚ್ಛವಾದ ಬ್ರೌಸರ್ ಆಗಿತ್ತು. ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ಗೆ ಹೋಲಿಸಿದರೆ ಇದು ಸ್ವಾಗತಾರ್ಹ ಬದಲಾವಣೆಯಾಗಿತ್ತು. ಪಿಚೈ ಮತ್ತು ಅಪ್ಸಾನ್ ತಮ್ಮ ದಶಕದ ಹಿಂದಿನ ಪೋಸ್ಟ್‌ನಲ್ಲಿ "ಕ್ಲಾಸಿಕ್‌ ಗೂಗಲ್‌ ಹೋಮ್‌ಪೇಜ್‌ನಂತೆ ಗೂಗಲ್‌ ಕ್ರೋಮ್‌ ಸಹ ಸ್ವಚ್ಛ ಹಾಗೂ ವೇಗವಾಗಿದೆ. ನಿಮ್ಮ ದಾರಿಯಲ್ಲಿಯೇ ನಿಮ್ಮನ್ನು ಎಲ್ಲಿಗಾದರೂ ಕರೆದುಕೊಂಡು ಹೋಗುತ್ತದೆ'. ಎಂದು ಬರೆದಿದ್ದರು. ಈ ಮಾತುಗಳು ಇಂದಿಗೂ ನಿಜವಾಗಿದೆ.

How to check PF balance in Mobile (KANNADA)
ವೇಗದ ಬ್ರೌಸಿಂಗ್‌

ವೇಗದ ಬ್ರೌಸಿಂಗ್‌

ಬೇರೆ ಬ್ರೌಸರ್‌ಗಳಿಗಿಂತ ಕ್ರೋಮ್‌ ವೇಗವಾದ ಬ್ರೌಸಿಂಗ್‌ ಅನುಭವವನ್ನು ನೀಡುತ್ತದೆ. ಜಾವಾ ಸ್ಕ್ರೀಪ್ಟ್‌ ಮತ್ತು ಕ್ರೋಮ್‌ನಿಂದ ಈ ಬ್ರೌಸರ್ ಕಾರ್ಯನಿರ್ವಹಿಸುತ್ತದೆ. ಗಿಜ್‌ಮಾಡೋ ವರದಿ ಪ್ರಕಾರ ಆಪಲ್‌ ಸಫಾರಿ ಹಾಗೂ ಮೋಜಿಲ್ಲಾ ಫೈರ್‌ಫ್ಯಾಕ್ಸ್‌ಗಳಿಗಿಂತ 10 ಪಟ್ಟು ಹೆಚ್ಚಿನ ವೇಗದ ಬ್ರೌಸಿಂಗ್‌ ಅನುಭವವನ್ನು ಗೂಗಲ್‌ ಕ್ರೋಮ್‌ ನೀಡುತ್ತದೆ. ಬ್ರೌಸರ್‌ನಲ್ಲಿ ಮಾರುಕಟ್ಟೆ ಲೀಡರ್‌ ಆಗಿರುವ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್‌ಗಿಂತ 56 ಪಟ್ಟು ವೇಗವಾಗಿ ಗೂಗಲ್ ಕ್ರೋಮ್‌ ಕಾರ್ಯನಿರ್ವಹಿಸುತ್ತದೆ. ಕ್ರೋಮ್‌ನ ಹೊಡೆತದಿಂದ ಇಂಟರ್‌ನೆಟ್‌ ಎಕ್ಸ್‌ಪ್ಲೋರರ್ ಇನ್ನು ಚೇತರಿಸಿಕೊಳ್ಳುತ್ತಿಲ್ಲ.

ಆಯ್ಕೆ, ಫೀಚರ್ ಮತ್ತು ಹೆಚ್ಚಿನ ಆಯ್ಕೆಗಳು

ಆಯ್ಕೆ, ಫೀಚರ್ ಮತ್ತು ಹೆಚ್ಚಿನ ಆಯ್ಕೆಗಳು

ಗೂಗಲ್‌ ಕ್ರೋಮ್‌ ಹೊಸ ಫೀಚರ್‌ಗಳನ್ನು ಪರಿಚಯಿಸಿ ಬಳಕೆದಾರರಿಗೆ ಬಹಳಷ್ಟು ಆಯ್ಕೆಗಳನ್ನು ನೀಡಿತು. ಅದರಲ್ಲಿ ಇನ್‌ಕಾಗ್ನಿಟೋ ಮೋಡ್‌ಗಳಂತಹ ಹಲವು ಆಯ್ಕೆಗಳನ್ನು ಬಳಕೆದಾರರಿಗೆ ನೀಡಿ ಅವರಿಂದ ಭೇಷ್ ಎನಿಸಿಕೊಂಡಿದೆ. ಜನಪ್ರಿಯ ಫೀಚರ್ ಆಡ್‌ ಬ್ಲಾಕರ್‌ನ್ನು ಪರಿಚಯಿಸಿ ಜನರಿಗೆ ಕ್ರೋಮ್ ಮತ್ತಷ್ಟು ಹತ್ತಿರವಾಯಿತು.

ವಿಶಾಲ ವ್ಯಾಪ್ತಿ

ವಿಶಾಲ ವ್ಯಾಪ್ತಿ

ಗೂಗಲ್ ಕ್ರೋಮ್ ಆಗಸ್ಟ್‌ 2018ರ ಹೊತ್ತಿಗೆ ವಿಶ್ವದ ಶೇ.60ರಷ್ಟು ಕಂಪ್ಯೂಟರ್‌ನಲ್ಲಿ ಸ್ಥಾನ ಪಡೆದಿದೆ. ನಂತರ ಮೈಕ್ರೋಸಾಫ್ಟ್‌ ಶೇ.12ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಇಷ್ಟೆಲ್ಲಾ ವಿಶಾಲ ವ್ಯಾಪ್ತಿಯನ್ನು ಕ್ರೋಮ್‌ ತಲುಪಲು ಗೂಗಲ್‌ನ ಎಕೋಸಿಸ್ಟಮ್‌ ಬಹಳಷ್ಟು ಸಹಕಾರಿಯಾಗಿದೆ. ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ನ ಯಾವುದೇ ಸೇವೆಗಳನ್ನು ಒಂದೇ ಕ್ಲಿಕ್‌ನಲ್ಲಿ ಪಡೆಯುವ ಸೌಲಭ್ಯವನ್ನು ಕ್ರೋಮ್‌ನಲ್ಲಿ ನೀಡಿರುವುದು ಸಹ ಕಾರಣವಾಗಿದೆ.

ಮುಂದೇನು..?

ಮುಂದೇನು..?

ಗೂಗಲ್ ತನ್ನ ಗೂಗಲ್‌ ಕ್ರೋಮ್‌ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಟ್ವೀಟ್‌ ಮಾಡಿದ್ದು, ಬಳಕೆದಾರ ಸ್ನೇಹಿ ಒಂದಿಷ್ಟು ಆಶ್ಚರ್ಯಕರ ಫೀಚರ್‌ಗಳನ್ನು ಪರಿಚಯಿಸುತ್ತೇವೆ ಎಂದು ಬರೆದುಕೊಂಡಿದೆ. ನಾಳೆ ಇದರ ಬಗ್ಗೆ ಅಧಿಕೃತ ಘೋಷಣೆಗಳಾಗುವ ಸಾಧ್ಯತೆಯಿದೆ. ಕ್ರೋಮ್‌ ಮತ್ತೊಂದು ಸಲ ಮರುವಿನ್ಯಾಸಗೊಳ್ಳುವ ಸಾಧ್ಯತೆಯಿದೆ. ಅದಲ್ಲದೇ ಈ ವರ್ಷ ಅನೇಕ ಬದಲಾವಣೆಗಳನ್ನು ಕ್ರೋಮ್‌ನಲ್ಲಿ ತರಲು ಗೂಗಲ್ ಉತ್ಸುಕವಾಗಿದೆ.

Best Mobiles in India

English summary
10 years of Google Chrome: 4 ways it changed web browsing. To know more this visit kannada,gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X