ಈ 11 ವೆಬ್ ಸೈಟ್ ಗಳಲ್ಲಿ ನೀವು ಏನನ್ನು ಬೇಕಿದ್ದರೂ ಉಚಿತವಾಗಿ ಕಲಿಯಬಹುದು!

By Gizbot Bureau
|

ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಅಂತರ್ಜಾಲವು ಒಂದು ಅತ್ಯದ್ಭುತವಾಗಿರುವ ಜಾಗವಾಗಿದೆ. ಈ ವರ್ಷದಲ್ಲಿ ಜ್ಞಾನ ಹೆಚ್ಚಿಸಿಕೊಳ್ಳುವುದು ನಿಮ್ಮ ಉದ್ದೇಶವಾಗಿದ್ದರೆ ನಾವು ನಿಮಗೆ ಅಂತರ್ಜಾಲದಲ್ಲಿರುವ ಎಲ್ಲಾ ಆಯ್ಕೆಗಳನ್ನು ತಿಳಿಸುತ್ತೇವೆ ಮತ್ತು ಅದಕ್ಕಾಗಿ ನೀವು ಒಂದು ರುಪಾಯಿಯನ್ನೂ ಪಾವತಿಸುವ ಅಗತ್ಯವಿಲ್ಲ.

ಈ 11 ವೆಬ್ ಸೈಟ್ ಗಳಲ್ಲಿ ನೀವು ಏನನ್ನು ಬೇಕಿದ್ದರೂ ಉಚಿತವಾಗಿ ಕಲಿಯಬಹುದು!

ನಾವಿಲ್ಲಿ ಕೆಲವು ವೆಬ್ ಸೈಟ್ ಗಳನ್ನು ನಮೂದಿಸಿದ್ದೇವೆ ಮತ್ತು ಇದರಲ್ಲಿ ಉಚಿತವಾಗಿ ನೀವು ವಿದ್ಯಾಭ್ಯಾಸವನ್ನು ಪಡೆಯಬಹುದು ಮತ್ತು ಹೊಸ ವಿಚಾರಗಳನ್ನು ಅಧ್ಯಯನ ಮಾಡುವುದಕ್ಕೆ ಅವಕಾಶವಿದೆ. ಅಂದರೆ ನೀವೇನು ಇಚ್ಛೆ ಪಡುತ್ತೀರೋ ಅದನ್ನು ಕಲಿಯುವುದಕ್ಕೆ ಇಲ್ಲಿ ಸಾಧ್ಯವಾಗುತ್ತದೆ. ಹಾಗಾದ್ರೆ ಯಾವುದು ಆ ವೆಬ್ ಸೈಟ್ ಗಳು ಎಂಬುದನ್ನು ತಿಳಿಯಲು ಮುಂದೆ ಓದಿ.

ಯುಡೆಮೈ(Udemy)

ಯುಡೆಮೈ(Udemy)

ಇದು ಎಲ್ಲರೂ ತಿಳಿದಿರುವ ಫ್ಲ್ಯಾಟ್ ಫಾರ್ಮ್ ಆಗಿದ್ದು 35 ಕ್ಕೂ ಅಧಿಕ ಕೋರ್ಸ್ ಗಳು ಇದರಲ್ಲಿ ಲಭ್ಯವಿದ್ದು ನಿಮ್ಮದೇ ಜಾಗದಲ್ಲಿ ಸುಲಭದಲ್ಲಿ ಓದುವುದಕ್ಕೆ ಇದು ನೆರವು ನೀಡುತ್ತದೆ. ಅಷ್ಟೇ ಅಲ್ಲ ಯಾವುದೇ ಡಿವೈಸ್ ಲನ್ಲಿ ಬೇಕಿದ್ದರೂ ಫ್ಲ್ಯಾಟ್ ಫಾರ್ಮ್ ನ್ನು ತೆರೆಯಬಹುದು ಮತ್ತು ಓದಬಹುದು.

edX

edX

ವಿಶ್ವದ ಪ್ರಮುಖ ಯುನಿವರ್ಸಿಟಿಗಳು ಉದಾಹರಣೆಗೆ ಎಂಐಟಿ, ಹಾರ್ವರ್ಡ್, ಬರ್ಕೆಲೆ ಮತ್ತು ಇತ್ಯಾದಿಗಳು ಆಫರ್ ಮಾಡುವ ಹಲವು ಆನ್ ಲೈನ್ ಕೋರ್ಸ್ ಗಳು ಇದರಲ್ಲಿ ಲಭ್ಯವಿದ್ದು ನೀವು ಆನ್ ಲೈನ್ ನಲ್ಲೇ ಕಲಿಯುವುದಕ್ಕೆ ಅನುವು ಮಾಡುವ ಪೋರ್ಟಲ್ ಇದಾಗಿದೆ.

ಬ್ಲೂಪ್ರಿಂಟ್(Bluprint)

ಬ್ಲೂಪ್ರಿಂಟ್(Bluprint)

1000 ಕ್ಕೂ ಅಧಿಕ ಕ್ಲಾಸ್ ಗಳಿಗಿರುವ ಬೆಸ್ಟ್ ಆನ್ ಲೈನ್ ಪೋರ್ಟಲ್ ಇದಾಗಿದೆ. ಇಲ್ಲಿ ಅಡುಗೆ, ಪೈಯಿಟಿಂಗ್, ಕ್ರಾಫ್ಟ್ ವರ್ಕ್ ಸೇರಿದಂತೆ ಹಲವು ವಿಭಿನ್ನ ಅಧ್ಯಯನವನ್ನು ಉಚಿತವಾಗಿ ಮಾಡುವುದಕ್ಕೆ ಅವಕಾಶವಿದೆ.

ಇನ್ಸ್ಟ್ರಕ್ಟೇಬಲ್(Instructable)

ಇನ್ಸ್ಟ್ರಕ್ಟೇಬಲ್(Instructable)

ಇನ್ಸ್ಟ್ರಕ್ಟೇಬಲ್ ಒಂದು ಬೆಸ್ಟ್ ಪೋರ್ಟಲ್ ಆಗಿದ್ದು ಇದರಲ್ಲಿ ಅಂತರ್ಜಾಲದ ಸಹಾಯದಿಂದ "ನೀವೇ ಸ್ವತಃ ಮಾಡಿ" ಎಂಬುದರ ರಾಜನಂತಿರುವ ಪೋರ್ಟಲ್ ಆಗಿದೆ. ಯಾವುದೇ ರೀತಿಯ ವಿಚಾರವನ್ನು ಸ್ವತಃ ನೀವೇ ಮಾಡುವುದಕ್ಕೆ ಇದು ಸಹಕರಿಸುತ್ತದೆ.

ಕುಕ್ಸ್ ಮಾರ್ಟ್ಸ್ (Cooksmarts)

ಕುಕ್ಸ್ ಮಾರ್ಟ್ಸ್ (Cooksmarts)

ಒಂದು ವೇಳೆ ನೀವು ಅಡುಗೆಯಲ್ಲಿ ಆಸಕ್ತಿ ಇರುವವರಾಗಿದ್ದರೆ ಕುಕ್ಸ್ ಮಾರ್ಟ್ಸ್ ಖಂಡಿತ ಬೆಸ್ಟ್ ಆಯ್ಕೆಯಾಗಿರುತ್ತದೆ. ಎಲ್ಲಾ ಸಾಮಾನ್ಯ ಅಡುಗೆ ಕಲೆಯ ಟ್ರಿಕ್ಸ್ ಗಳ ಮತ್ತು ಸ್ಕಿಲ್ ಗಳನ್ನು ಇದರಲ್ಲಿ ಹೇಳಲಾಗುತ್ತದೆ.

ಟೆಡ್ ಇಡಿ(TedEd)

ಟೆಡ್ ಇಡಿ(TedEd)

ಎಲ್ಲಾ ರೀತಿಯ ಕಟೆಂಟ್ ಗಳನ್ನು ಮತ್ತು ಕಲಿಕೆಯನ್ನು ನೀವಿಲ್ಲಿ ಮಾಡುವುದಕ್ಕೆ ಅವಕಾಶವಿದೆ. TED-Ed ನಿಂದ ನೈಜ ಮಾಹಿತಿಗಳನ್ನು ಇದರಲ್ಲಿ ಕಲೆಹಾಕಿಡಲಾಗಿರುತ್ತದೆ. ಇದರ ಯುಟ್ಯೂಬ್ ವೀಡಿಯೋಗಳ ಸಹಾಯದಿಂದ ಕಲಿಯಬಹುದು.

ಖಾನ್ ಅಕಾಡಮಿ

ಖಾನ್ ಅಕಾಡಮಿ

ಖಾನ್ ಅಕಾಡಮಿ ಎಲ್ಲರೂ ತಿಳಿದಿರುವ ಮತ್ತು ನಿಮ್ಮದೇ ಸ್ಥಳದಲ್ಲಿ ಏನನ್ನು ಬೇಕಿದ್ದರೂ ಅಧ್ಯಯನ ಕೈಗೊಳ್ಳಲು ಅನುವು ಮಾಡಿಕೊಡುವ ಬೆಸ್ಟ್ ಆನ್ ಲೈನ್ ಪೋರ್ಟಲ್ ಆಗಿದೆ ಜೊತೆಗೆ ಇಂಟರ್ಯಾಕ್ಟೀವ್ ಎಕ್ಸಸೈಜ್ ಗಳು ಕೂಡ ಇದರಲ್ಲಿ ಲಭ್ಯವಿರುತ್ತದೆ. ಯಾವಾಗ ಬೇಕಿದ್ದರೂ ಉಚಿತವಾಗಿ ಲಭ್ಯವಿರುವ ಆನ್ ಲೈನ್ ವೆಬ್ ಇದಾಗಿದೆ.

ಸ್ಕಿಲ್ ಶೇರ್:

ಸ್ಕಿಲ್ ಶೇರ್:

ಕಲಿಕೆದಾರರಿಗೆ ಇದೊಂದು ಅಧ್ಬುತ ಪೋರ್ಟಲ್ ಆಗಿದೆ. ಇದರಲ್ಲಿ ಶಾರ್ಟ್ ಲೆಸನ್ ಗಳಿರುತ್ತದೆ ಮತ್ತು ಹೊಸ ವಿಚಾರಗಳ ಅಧ್ಯಯನಕ್ಕೆ ಇದು ಸಹಕಾರಿಯಾಗಿದೆ. ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಮತ್ತು ತಿಳುವಳಿಕೆಯನ್ನು ಪರಿಪೂರ್ಣಗೊಳಿಸಿಕೊಳ್ಳಲು ಇದು ನೆರವಾಗುತ್ತದೆ.

ಓಪನ್ ಲರ್ನ್:

ಓಪನ್ ಲರ್ನ್:

ಓಪನ್ ಲರ್ನ್ ಫ್ಲ್ಯಾಟ್ ಫಾರ್ಮ್ ಓಪನ್ ಎಜುಕೇಷನ್ ನ ಮನೆಯಾಗಿದೆ. ಇಲ್ಲಿ ಉಚಿತವಾಗಿ ಯಾವುದೇ ಕೋರ್ಸ್ ಗಳನ್ನು ತೆಗೆದುಕೊಳ್ಳಬಹುದು. ಇದೊಂದು ಓಪನ್ ಯುನಿವರ್ಸಿಟಿಯಾಗಿದೆ.

ಫ್ಯೂಚರ್ ಲರ್ನ್:

ಫ್ಯೂಚರ್ ಲರ್ನ್:

ಉಚಿತ ಕೋರ್ಸ್ ಗಳನ್ನು ತೆಗೆದುಕೊಳ್ಳುವುದಕ್ಕಾಗಿ ಸುಮಾರು 3 ಮಿಲಿಯನ್ ಮಂದಿ ಫ್ಯೂಚರ್ ಲರ್ನ್ ಫ್ಲ್ಯಾಟ್ ಫಾರ್ಮ್ ಗೆ ತೆರಳುತ್ತಾರೆ. ಪ್ರಸಿದ್ಧ ಯುನಿವರ್ಸಿಟಿಗಳು ಮತ್ತು ತಜ್ಞರು ಇದರಲ್ಲಿ ಮಾಹಿತಿ ನೀಡುತ್ತಾರೆ.

ಡಿಗ್ರೀಡ್ :

ಡಿಗ್ರೀಡ್ :

ಡಿಗ್ರೀಡ್ ಒಂದು ಅತ್ಯದ್ಭುತವಾಗಿರುವ ಮತ್ತು ಕಲಿಕೆಗೆ ಹೆಚ್ಚು ಮಹತ್ವ ನೀಡುವ ಫ್ಲಾಟ್ ಫಾರ್ಮ್ ಆಗಿದ್ದು ಹೊಸ ವಿಚಾರ ಮತ್ತು ಬೆಸ್ಟ್ ಮೆಟಿರಿಯಲ್ ಗಳು ಇಲ್ಲಿ ಲಭ್ಯವಾಗುತ್ತದೆ. ನಿಮ್ಮ ಅಗತ್ಯತೆಗೆ ಅನುಗುಣವಾಗಿ ನೀವು ಇಲ್ಲಿ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ಮೇಲಿನ ವೆಬ್ ಸೈಟ್ ಗಳ ಬಗ್ಗೆ ನೀವೇನು ಹೇಳುತ್ತೀರಿ. ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕಮೆಂಟ್ ಮಾಡಿ ತಿಳಿಸುವುದನ್ನು ಮರೆಯಬೇಡಿ.

Best Mobiles in India

Read more about:
English summary
11 Websites Where You Can Learn Anything For Free

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X