'ಗೂಗಲ್‌' ಕಂಪೆನಿಯ ಬಗ್ಗೆ ಜೀರ್ಣಿಸಿಕೊಳ್ಳಲಾಗದ 12 ವಿಷಯಗಳಿವು!

|

ಇಂತಹದೊಂದು ಸರ್ಚ್ ಎಂಜಿನ್ ಬಗ್ಗೆ ತಿಳಿಯದ ಯಾವೊಬ್ಬ ಇಂಟರ್‌ನೆಟ್ ಬಳಕೆದಾರನು ಇಲ್ಲ ಎನ್ನಬಹುದಾದ 'ಗೂಗಲ್' ಎಂಬ ಹೆಸರೇ ಅಗಾದ ಎನಿಸುತ್ತದೆ. ವಿಶ್ವದ ಬಹುತೇಕ ಎಲ್ಲಾ ಮಾಹಿತಿಯನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಈ 'ಗೂಗಲ್' ಸಂಸ್ಥೆ ಈಗ ಆಂಡ್ರಾಯ್ಡ್, ಯೂಟ್ಯೂಬ್, ವೇಜ್(waze), ಪಿಕಾಸ(Picasa)ಗಳ ಜೊತೆಸೇರಿ ಒಂದು ಅಸಾಧಾರಣ ಸಂಸ್ಥೆಯಾಗಿ ಹೊರಹೊಮ್ಮಿರುವುದು ನಿಮಗೆಲ್ಲಾ ಬಹುತೇಕ ತಿಳಿದಿದೆ ಎನ್ನಬಹುದು.

ಆದರೆ, ಈಗ ನೀವು ತಿಳಿಯದಂತಹ ಹಲವು ಮಂತ್ರಮುಗ್ದಗೊಳಿಸುವ ವಿಷಯಗಳನ್ನು ಸಹ ಗೂಗಲ್ ಹೊಂದಿದೆ ಎಂದರೆ ನೀವು ಆಶ್ಚರ್ಯಪಡಬಹುದು. ಒಂದು ಕಾಲದಲ್ಲಿ ಕೇವಲ 1 ಮಿಲಿಯನ್ ಡಾಲರಿಗೆ ಮಾರಾಟ ಆಗಿಬಿಡಲಿದ್ದ ಗೂಗಲ್ ಇಂದು 780 ಬಿಲಿಯನ್ ಡಾಲರ್ ಬೆಲೆಬಾಳುವ ಕಂಪನಿಯಾಗಿ ರೂಪುಗೊಂಡಿರುವುದರಿಂದ ಹಿಡಿದು, ಒಂದು ವರ್ಷಕ್ಕೆ 20 ಲಕ್ಷಕ್ಕೂ ಹೆಚ್ಚಿನ ಮಂದಿ ಇಲ್ಲಿ ಕೆಲಸಮಾಡಲು ಅರ್ಜಿ ಹಾಕುವಂತಹ ಸ್ಥಿತಿಗೆ ತಲುಪಿದೆ ಎಂದರೆ ಅದರ ವಿಶೇಷತೆಗಳು ಊಹಿಸಲು ಸಾಧ್ಯವಿಲ್ಲ.

 'ಗೂಗಲ್‌' ಕಂಪೆನಿಯ ಬಗ್ಗೆ ಜೀರ್ಣಿಸಿಕೊಳ್ಳಲಾಗದ 12 ವಿಷಯಗಳಿವು!

ಹಾಗಾಗಿ, ಇಂದಿನ ಲೇಖನದಲ್ಲಿ ನಿಮ್ಮನ್ನು ಬೆಚ್ಚಿಬೆರಗಾಗಿಸುವ ಗೂಗಲ್‌ ಕಂಪೆನಿಯ ವಿಶೇಷ ಮಾಹಿತಿಗಳನ್ನು ನಾವು ಹೊತ್ತು ತಂದಿದ್ದೇವೆ. ಗೂಗಲ್‌ ಕಂಪೆನಿಯ ಹುಟ್ಟಿನಿಂದ ಹಿಡಿದು ಕಂಪೆನಿ ಬೆಳೆದುಬಂದಿರುವ ದಾರಿ, ಗೂಗಲ್ ಕಂಪೆನಿಯೊಳಗೆ ಮಾತ್ರ ಕಾಣಬಹುದಾದ ವಿಶೇಷತೆಗಳು, ಗೂಗಲ್‌ ಕಂಪೆನಿ ಹೊಂದಿರುವ ತಂತ್ರಜ್ಞಾನಗಳನ್ನೆಲ್ಲಾ ನಿಮಗೆ ಪರಿಚಯಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಅವುಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಗೂಗಲ್ ಹುಟ್ಟಿದ್ದು ಹೇಗೆ?

ಗೂಗಲ್ ಹುಟ್ಟಿದ್ದು ಹೇಗೆ?

ಅಮೆರಿಕದ ಪ್ರತಿಷ್ಠಿತ ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್‌ ಹಾಗೂ ಸೆರ್ಗಿ ಬ್ರಿನ್‌ ಅವರು ಗೂಗಲ್ ಎಂಬ ಮಾಯೆಯನ್ನು ಸೆಪ್ಟೆಂಬರ್ 4 1998 ರಂದು ಹುಟ್ಟುಹಾಕಿದರು. ಇಂಟರ್ನೆಟ್ ಜಾಲದಲ್ಲಿನ ಮಾಹಿತಿಯನ್ನು ಸುಲಭವಾಗಿ ವರ್ಗೀಕರಿಸಿಕೊಳ್ಳುವ ಸೌಲಭ್ಯ ನಿರ್ಮಿಸುವ ಹಂಬಲದೊಂದಿಗೆ ಗೂಗಲ್ ಜನ್ಮತಾಳಿತ್ತು. "ಗೂಗಲ್‌' ಎಂದು ಪ್ರಖ್ಯಾತವಾಗುವ ಮುನ್ನ 'ಬ್ಯಾಕ್‌ ರಬ್' ಎಂಬ ವ್ಯವಸ್ಥೆ ಗೂಗಲ್‌ನ ಮೂಲಾಧಾರವಾಗಿತ್ತು.

ಗೂಗಲ್ ಎಂಬ ಹೆಸರೇಕೆ ಬಂತು?

ಗೂಗಲ್ ಎಂಬ ಹೆಸರೇಕೆ ಬಂತು?

ನಿಮಗೆ ಅಕ್ಷಯಪಾತ್ರಯಲ್ಲಿ ಎಂದಿಗೂ ಮುಗಿಯದೇ ಇರುವ ಇಂಕನ್ನು ಕೊಟ್ಟು, ಅಪರಿಮಿತ ಶಕ್ತಿ, ಆಯುಷ್ಯಗಳೆಲ್ಲವನ್ನು ವರವನ್ನು ನೀಡಿ ಸಾಮಾನ್ಯ ಸಂಖ್ಯೆ 1ರ ಮುಂದೆ ಎಷ್ಟು ಸೊನ್ನೆಯಗಳನ್ನು ಬರೆಯುತ್ತಿದ್ದರೆ, ಅಂದರೆ ನಮ್ಮ ಬ್ರಹ್ಮಾಂಡ ಹುಟ್ಟಿ ಸಾಯುವವರೆಗೂ ಬರೆದರೂ ಅದಕ್ಕಿಂತಲೂ ಹೆಚ್ಚು ಪಟ್ಟನ್ನು ಗೂಗಲ್ ಎನ್ನುತ್ತಾರೆ. ಸಿಂಪಲ್ ಆಗಿ `1' ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಯಾವ ಸಂಖ್ಯೆ ಸಿಗುತ್ತದೆ? ಇಷ್ಟು ದೊಡ್ಡ ಸಂಖ್ಯೆಗೆ ಹೆಸರಿದೆಯೆ ಎನ್ನುತ್ತೀರಾ? ಇದೆ. ಅದೇ `ಗೂಗಲ್'!

ಭವಿಷ್ಯಗಳ ಜನಕ ಗೂಗಲ್!

ಭವಿಷ್ಯಗಳ ಜನಕ ಗೂಗಲ್!

ಮಾನವನಿಗೆ ಭವಿಷ್ಯದಲ್ಲಿ ಏನು ಬೇಕು ಎಂದು ಯಾವಾಗಲೂ ಹುಡುಕುವ ಯತ್ನದಲ್ಲಿಯೇ ಗೂಗಲ್ ಗಮನಹರಿಸುತ್ತಿದೆ. ಗೂಗಲ್‌ ಮ್ಯಾಪ್ಸ್, ಗೂಗಲ್ ಕ್ಲೌಡ್, ಗೂಗಲ್ ಡಾಕ್ಟ್, ಜಿಮೇಲ್, ಗೂಗಲ್ ತೇಜ್, ಗೂಗಲ್ ಹೋಸ್ಟ್, ಗೂಗಲ್, ಗೂಗಲ್ ಪ್ಲೇ, ಯೂಟ್ಯೂಬ್, ಗೂಗಲ್ ಡ್ರೈವ್...ಹೀಗೆ ಹತ್ತಾರು ಭವಿಷ್ಯದ ಸೇವೆಗಳನ್ನು ಗೂಗಲ್ ಒದಗಿತ್ತಿದೆ. ಪ್ರಯಾಣಿಸುವ ಸಮಯದಲ್ಲಿ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಇದೆ ಎಂದು ಹೇಳುವಷ್ಟು ಗೂಗಲ್ ಬೆಳೆದುನಿಂತಿದೆ. ನಿಮಗೆ ಬೇಕಾದ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಒದಗಿಸುತ್ತಿದೆ.

ಗೂಗಲ್ ಶಕ್ತಿಯೇ ಅದರ ಬುದ್ದಿವಂತಿಕೆ.!

ಗೂಗಲ್ ಶಕ್ತಿಯೇ ಅದರ ಬುದ್ದಿವಂತಿಕೆ.!

ಇಂದು ನಾವೆಲ್ಲಾ ಕೇಳುತ್ತಿರುವ ಕೃತಕಬುದ್ದಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಪ್ರಪಂಚಕ್ಕೆ ಗೂಗಲ್ ಹತ್ತಾರು ವರ್ಷಗಳ ಹಿಂದೆಯೇ ಕಾಲಿಟ್ಟಿದೆ. ಹುಡುಕಾಟಕ್ಕೆಂದೇ ನಿರ್ಮಿತವಾದ ವಿಶೇಷ ಆಲ್ಗಾರಿದಮ್ ಅನ್ನು ಗೂಗಲ್ ಹೊಂದಿದೆ. ಈ ವಿಶೇಷ ಆಲ್ಗಾರಿದಮ್ ಗೂಗಲ್‌ನ ಮೆದುಳಾಗಿದ್ದು, ಈ ಮಾಹಿತಿಯನ್ನು ಗೂಗಲ್ ಯಾವುದೇ ಕಾರಣಕ್ಕೂ ಇತರರಿಗೆ ಬಿಟ್ಟುಕೊಡುವುದಿಲ್ಲ. ಇದು ಯಕ್ಷಗುಟ್ಟಾಗಿದ್ದು, ಇದೇ ಇದರ ಶಕ್ತಿ. ಇಂತಹ ಕೃತಕ ಬುದ್ಧಿಮತ್ತೆ ಪ್ರೋಗ್ರಾಮ್‌ಗಳೇ ಜನರ ಬೇಡಿಕೆಯನ್ನು ಸರಾಗವಾಗಿ ಪೂರೈಸುತ್ತಿವೆ.

ಇಂದು ವಿಶ್ವ ದಿಗ್ಗಜ ಗೂಗಲ್!

ಇಂದು ವಿಶ್ವ ದಿಗ್ಗಜ ಗೂಗಲ್!

ಬ್ರ್ಯಾಂಡ್ ಫೈನಾನ್ಸ್ ಎಂಬ ಫೈನಾನ್ಸ್ ಕನ್ಸಲ್ಟೆನ್ಸಿ ನೀಡಿರುವ ವರದಿ ಪ್ರಕಾರ ಇಂದು ಗೂಗಲ್ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಬೆಲೆಯನ್ನು ಹೊಂದಿರುವ ಮೂರನೇ ಅತಿದೊಡ್ಡ ಕಂಪೆನಿಯಾಗಿದೆ. ಅಂದಾಜೂ $ 120.9 ಬಿಲಿಯನ್‌ಗಿಂತಲೂ ಹೆಚ್ಚು ಒಟ್ಟು ಮೌಲ್ಯವನ್ನು ಗೂಗಲ್ ಒಡೆತನದ ಆಲ್ಫಾಬೀಟ್ ಸಂಸ್ಥೆ ಹೊಂದಿದೆ. ಕೇವಲ 20 ವರ್ಷಗಳಲ್ಲಿಯೇ ವಿಶ್ವದ ಇತರೆ ಕಂಪೆನಿಗಳನ್ನು ಮೀರಿ ಬೆಳೆದ ಗೂಗಲ್ ಭವಿಷ್ಯದಲ್ಲಿ ನಂ.1 ಟೆಕ್ ಕಂಪೆನಿಯಾಗುವುದರಲ್ಲಿ ಎರಡು ಮಾತಿಲ್ಲ.

ಆಗಲೇ ಮಾರಾಟಕ್ಕಿತ್ತು ಗೂಗಲ್!

ಆಗಲೇ ಮಾರಾಟಕ್ಕಿತ್ತು ಗೂಗಲ್!

ಗೂಗಲ್ ಹುಟ್ಟಿ ಸ್ವಲ್ಪ ಮುನ್ನೆಲೆಗೆ ಬರುತ್ತಿರುವ ಸಮಯದಲ್ಲಿಯೇ ಗೂಗಲ್ ಅನ್ನು ಮಾರಾಟಕ್ಕೆ ಇಡಲಾಗಿತ್ತು. ಆದರೆ, ಗೂಗಲ್ ಬೆಲೆಯನ್ನು ಯಾಹೂ ತಿಳಿಯಲಿಲ್ಲ. 2002ರಲ್ಲಿ ಗೂಗಲ್ ಅನ್ನು ಯಾಹೂ ಖರೀದಿಸಲು ಪ್ರಯತ್ನಿಸಿದಾಗ, ಯಾಹೂ 20ಸಾವಿರ ಕೋಟಿ ರೂಪಾಯಿಗಳ ಪ್ರಸ್ತಾಪನೆ ಇಟ್ಟಿತ್ತು. ಆದರೆ ಗೂಗಲ್ ಕೇವಲ 33ಸಾವಿರ ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿತ್ತು. ನಿಮಗೆ ತಿಳಿದಿರಲಿ. ಒಂದು ಕಾಲದ ದಿಗ್ಗಜ ಯಾಹೂ 2018ರಲ್ಲಿ ಮಾರಾಟವಾಗಿದ್ದು, ಕೇವಲ 20ಸಾವಿರ ಕೋಟಿಗೆ.!

ಗೂಗಲ್‌ ದಿಗ್ಗಜನಾಗಲು ಕಾರಣವೇನು?

ಗೂಗಲ್‌ ದಿಗ್ಗಜನಾಗಲು ಕಾರಣವೇನು?

ಆಗ ಇದ್ದ ಸರ್ಚ್ ಎಂಜಿನ್‌ಗಳು ಕೇವಲ ಪಠ್ಯ ಪುಟಗಳನ್ನಷ್ಟೇ ನೀಡುತ್ತಿದ್ದ ಸಂದರ್ಭದಲ್ಲಿ, ಗೂಗಲ್‌ ಹೆಚ್ಚಿನದನ್ನು ನೀಡಿತು, ನಕಾಶೆಗಳು, ಸುದ್ದಿ ಲೇಖನಗಳು, ಪುಸ್ತಕಗಳಲ್ಲಿನ ಉಲ್ಲೇಖಗಳು, ವಿಡಿಯೋಗಳು, ಪ್ರಬಂಧಗಳು, ಬ್ಲಾಗ್‌ ಬರಹಗಳು, ಆಂಡ್ರಾಯ್ಡ್ ಹೀಗೆ ಹತ್ತಾರು ಸೇವೆಗಳನ್ನು ನೀಡಿತು. ಆಂಡ್ರಾಯ್ಡ್ ಮೂಲಕ ಮಾರುಕಟ್ಟೆ ತಂತ್ರವನ್ನು ಹೆಣೆದು ಪ್ರತಿಯೋರ್ವರ ಕೈಯಲ್ಲೂ ಸೇರಿಕೊಂಡಿತು. ಜಿಮೇಲ್, ಮ್ಯಾಪ್ಸ್, ಯೂಟ್ಯೂಬ್ ಮೂಲಕ ಜನರ ಅವಿಭಾಜ್ಯ ಅಂಗವಾಗಿ, ಅಂತರ್ಜಾಲ ಜಗತ್ತಿನ ದಿಗ್ಗಜನಾಗಿ ಬೆಳೆದುನಿಂತಿತು.

ಹಣ ಗಳಿಕೆಯಲ್ಲೂ ಮುಂದು ಗೂಗಲ್!

ಹಣ ಗಳಿಕೆಯಲ್ಲೂ ಮುಂದು ಗೂಗಲ್!

ಬಹುತೇಕ ತನ್ನೆಲ್ಲಾ ಸೇವೆ, ಸೌಲಭ್ಯಗಳನ್ನು ಉಚಿತವಾಗಿ ನೀಡುವ ಗೂಗಲ್‌ ಹಣವನ್ನು ಹೇಗೆ ಗಳಿಸುತ್ತದೆ ಎಂದು ಈವರೆಗೂ ಹಲವರಿಗೆ ತಿಳಿದಿಲ್ಲ. ತನ್ನ ಸೇವೆಗಳಲ್ಲಿ ಪ್ರೀಮಿಯಂ ಸೇವೆಗಳನ್ನು ಬಳಕೆ ಮಾಡಲು ಗೂಗಲ್ ಶುಲ್ಕ ವಿಧಿಸುತ್ತದೆ. ಇದು ಸಾಮಾನ್ಯರಿಗೆ ಹೊರೆಯಾಗುವುದಿಲ್ಲ. ಆದರೆ, ಸಾಮಾನ್ಯರಿಗೆ ಜಾಹಿರಾತುಗಳನ್ನು ತೋರಿಸುವ ಮೂಲಕ ಗೂಗಲ್ ಹಣಗಳಿಸುತ್ತದೆ. ಅದು ಕೂಡ ಸಾಮಾನ್ಯರಿಗೆ ಏನು ಬೇಕಾಗಿದೆಯೋ ಅದೇ ಜಾಹಿರಾತನ್ನು ಗೂಗಲ್ ಅವರಿಗೆ ತೋರಿಸುತ್ತದೆ. ಇವೆಲ್ಲವೂ ಸಾಮಾನ್ಯ ವಿಷಯಗಳಲ್ಲ.

ಇಲ್ಲಿ ಕೆಲಸಮಾಡಲು ಡಿಗ್ರಿ ಬೇಕಾಗಿಲ್ಲ!

ಇಲ್ಲಿ ಕೆಲಸಮಾಡಲು ಡಿಗ್ರಿ ಬೇಕಾಗಿಲ್ಲ!

ಗೂಗಲ್‍ನಲ್ಲಿ ಕೆಲಸ ಗಿಟ್ಟಿಸಲು 90%, 100% ಅಂಕಗಳನ್ನು ತೆಗೆಯಬೇಕೆಂದಿಲ್ಲ. ಅಂಕಗಳು ಹಾಗೂ ಸರ್ಟಿಫಿಕೇಟುಗಳ ಮೇಲೆ ಗೂಗಲ್ಲಿಗೆ ಅಷ್ಟಾಗಿ ನಂಬಿಕೆಯಿಲ್ಲ. ಇಲ್ಲಿರುವ ಕೆಲಸಗಾರರಲ್ಲಿ ಸುಮಾರು 14% ಮಂದಿ ಡಿಗ್ರಿಯನ್ನು ಕೂಡ ಓದಿಲ್ಲ. ಹುಟ್ಟುಜಾಣ್ಮೆಯಿರುವ, ಚೂಟಿಯಿಂದ ಕೆಲಸಮಾಡುವ, ಹೊಸ ಹೊಸ ಹೊಳಹುಗಳನ್ನು ಹುಟ್ಟುಹಾಕುವ, ಕಲಿಯುವ ತುಡಿತವಿರುವ ಎಲ್ಲರಿಗೂ ಗೂಗಲ್ಲಿನ ಬಾಗಿಲು ಯಾವಾಗಲೂ ತೆರೆದಿರುತ್ತದೆ.

ಗೂಗಲ್‌ನಲ್ಲಿ ಕೆಲಸ ಸಿಗಲು ಪುಣ್ಯ ಬೇಕು!

ಗೂಗಲ್‌ನಲ್ಲಿ ಕೆಲಸ ಸಿಗಲು ಪುಣ್ಯ ಬೇಕು!

ಹೌದು, ಕೋಟ್ಯಾಂತರ ಸಂಬಳವನ್ನು ಪಡೆಯಬಹುದಾದ ಗೂಗಲ್‌ನಲ್ಲಿ ಕೆಲಸ ಸಿಗಲು ಪುಣ್ಯ ಬೇಕೇಬೇಕು. ಕೆಲಸಗಾರರಿಗೆ ಹೊಟ್ಟೆತುಂಬಾ ಊಟ ಕೊಡುವುದರಲ್ಲಿ ಗೂಗಲ್ ಮುಂದು. ಒಬ್ಬೊಬ್ಬ ಕೆಲಸಗಾರ ಕುಳಿತುಕೊಳ್ಳುವ ಜಾಗದಿಂದ 150 ಅಡಿಯ ಒಳಗೆ ಏನಾದರೊಂದು ತಿನ್ನಲು ಸಿಗುತ್ತದೆ.ಅಲ್ಲಿ ಕೆಲಸಕ್ಕೆ ತಮ್ಮ ಮುದ್ದಿನ ಸಾಕುನಾಯಿಯನ್ನೂ ಕರೆದುಕೊಂಡು ಹೋಗಬಹುದು.! ಕೆಲಸಗಾರರ ಸಾಕುಪ್ರಾಣಿಗಳಿಗೆ ಗೂಗಲ್ ಒಳಗೆ ಸಾಕಶ್ಟು ಸವಲತ್ತುಗಳಿವೆ.ಅಮೇರಿಕಾದ ಗೂಗಲ್ ಕೆಲಸಗಾರರು ತೀರಿಕೊಂಡರೆ ಅವರ ಹೆಂಡತಿ ಇಲ್ಲವೇ ಗಂಡನಿಗೆ ಅವರ ಅರ್ಧದಷ್ಟು ಸಂಬಳವನ್ನು ಮುಂದಿನ ಹತ್ತು ವರ್ಷಗಳ ಕಾಲ ನೀಡುತ್ತದೆ.

ಗೂಗಲ್ ಮೇಲೆ ಅಪನಂಬಿಕೆ ಸಹ ಇದೆ.!

ಗೂಗಲ್ ಮೇಲೆ ಅಪನಂಬಿಕೆ ಸಹ ಇದೆ.!

ಗೂಗಲ್ ತನ್ನ ಸರ್ಚ್ ಎಂಜಿನ್ ಸೇವೆ ಬಳಸಿದವರ ಅನುಭವವನ್ನು ನೆನಪಿಟ್ಟುಕೊಂಡು ಎಲ್ಲಾ ಮಾಹಿತಿಯನ್ನು ಶೇಖರಿಸಿಟ್ಟುಕೊಂಡಿರುತ್ತದೆ. ಅದರ ಆಧಾರದ ಮೇಲೆ ಪ್ರತೀ ಬಾರಿ ಸುಧಾರಿತ ಫ‌ಲಿತಾಂಶವನ್ನು ಗೂಗಲ್‌ಗೆ ನೀಡಲು ಸಾಧ್ಯವಾಗುತ್ತದೆ ಎನ್ನಲಾಗುತ್ತದೆ. ಆದರೆ, ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಗೂಗಲ್ ಅವರ ಒಪ್ಪಿಗೆ ಇಲ್ಲದಿದ್ದರೂ ಪಡೆದುಕೊಳ್ಳುತ್ತದೆ ಮತ್ತು ಗೂಗಲ್ ಜಾಹಿರಾತುಗಳನ್ನು ತೋರಿಸುವಾಗ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ ಎನ್ನುವ ಮಾತುಗಳಿವೆ. ಇವು ಸಾಬೀತಾಗಿವೆ ಕೂಡ.

ಭಾರತದಲ್ಲಿ ಗೂಗಲ್!

ಭಾರತದಲ್ಲಿ ಗೂಗಲ್!

ಭಾರತವು ಅಂತರಾಷ್ಟ್ರೀಯ ಪ್ರಪಂಚಕ್ಕೆ ತೆರೆದುಕೊಂಡ ನಂತರ ಗೂಗಲ್ ಸೇವೆಯನ್ನು ಹೆಚ್ಚಾಗಿಯೇ ಬಳಸಿಕೊಂಡಿದೆ. ಇದಕ್ಕೆ ಪ್ರತಿಫಲವಾಗಿ ಗೂಗಲ್ ಕೂಡ ಸಾವಿರಾರು ಕೊಟಿಗಳಷ್ಟು ಹಣವನ್ನು ದುಡಿದುಕೊಂಡಿದೆ. ಭಾರತದಲ್ಲಿ 2004ರಿಂದ ಕಾರ್ಯನಿರ್ವಹಿಸುತ್ತಿರುವ ಗೂಗಲ್ ಭಾರತ ಸರ್ಕಾರದೊಂದಿಗೆ ಸಾಮರಸ್ಯ ಕಾಪಾಡಿಕೊಂಡು ಬಂದಿದೆ. ಭಾರತದಲ್ಲಿ ಸ್ಥಳೀಯತೆಯನ್ನು ಮುಖ್ಯವಾಹಿನಿಗೆ ತರುವ ಮೂಲಕ ಗೂಗಲ್ ನಮ್ಮವನೇನೋ ಎಂಬಷ್ಟು ನಮಗೆ ಹತ್ತಿರವಾಗಿದೆ. ಇದಕ್ಕೆ ಪ್ರತಿಫಲವಾಗಿ ಗೂಗಲ್ ಕೂಡ ಸಾವಿರಾರು ಕೊಟಿಗಳಷ್ಟು ಹಣವನ್ನು ದುಡಿದುಕೊಂಡಿದೆ.

Best Mobiles in India

English summary
Whether you realize it or not, you use Google. Chrome, Android, YouTube. But we betyou didn't know the original name. Or who first offered to.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X