2015 ರ ಹೊಸ ಫೋನ್‌ಗಳ ನೋಟ ಇದೋ ನಿಮಗಾಗಿ!

By Shwetha

ಹಳೆ ವರುಷದ ಅಲೆ ಕೊಚ್ಚಿ ಹೋಗಿ ಹೊಸ ವರುಷ ಸಮೀಪಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲೂ ಹೊಸ ವರುಷ ಪ್ರಧಾನ ಪಾತ್ರವನ್ನು ವಹಿಸುತ್ತಿದೆ. ಇನ್ನು ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಹಳೆಯ ಮಾದರಿಗಳಿಗೆ ಗುಡ್‌ಬೈ ಹೇಳಿ ಹೊಸದನ್ನು ಸ್ವೀಕರಿಸುವ ಸಮಯ ಸನ್ನಿಹಿತವಾಗಿದೆ.

ಇದನ್ನೂ ಓದಿ: ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು

ಹೊಸ ವರ್ಷಕ್ಕಾಗಿ ಕೆಲವೊಂದು ಪ್ರಸಿದ್ಧ ಫೋನ್ ಕಂಪೆನಿಗಳು ಫ್ಲ್ಯಾಗ್‌ಶಿಪ್ ಡಿವೈಸ್‌ಗಳೊಂದಿಗೆ ಬಂದಿದ್ದು ಅವುಗಳ ಕಾನ್ಸೆಪ್ಟ್ ಚಿತ್ರಗಳನ್ನು ಇಂದಿನ ಲೇಖನದಲ್ಲಿ ನಾವು ಅದನ್ನು ನಿಮ್ಮ ಮುಂದಿರಿಸುತ್ತಿದ್ದೇವೆ. ಈ ಕಂಪೆನಿಗಳು ಯಾವ ಮಾದರಿಯಲ್ಲಿ ತಮ್ಮ ಹೊಚ್ಚ ಹೊಸ ಫೋನ್‌ಗಳನ್ನು ಲಾಂಚ್ ಮಾಡಲಿವೆ ಎಂಬುದನ್ನು ಕೆಳಗಿನ ಲೇಖನದಿಂದ ತಿಳಿದುಕೊಳ್ಳಿ.

ಐಫೋನ್ 7

ಐಫೋನ್ 7

ಅಲ್ಯುಮಿನಿಯಮ್ ಕೇಸ್, ಸ್ಟೈನ್‌ಲೆಸ್ ಸ್ಟೀಲ್, ಗ್ಲಾಸ್, ಸ್ಲಿಮ್ ನೋಟದೊಂದಿಗೆ ಬಂದಿರುವ ಐಫೋನ್ 7 ವಿನ್ಯಾಸದಲ್ಲಂತೂ ಐಫೋನ್ ಪ್ರೇಮಿಗಳ ಮನಕದಿಯುವಂತಿದೆ.

ಬ್ಲ್ಯಾಕ್‌ಬೆರ್ರಿ ಒಡಿಸ್ಸಿ

ಬ್ಲ್ಯಾಕ್‌ಬೆರ್ರಿ ಒಡಿಸ್ಸಿ

ಸ್ಲಿಮ್ ನೋಟ, ಮೆಟಲ್ ಗ್ರಿಲ್ಸ್, ಕಾರ್ಬನ್ ವೇವಿಂಗ್ ಜೊತೆಗೆ ಬಂದಿರುವ ಬ್ಲ್ಯಾಕ್‌ಬೆರ್ರಿ ಒಡಿಸ್ಸಿ ನಿಜಕ್ಕೂ ಅದ್ಭುತ ಫೋನ್ ಆಗಿದೆ.

ಎಚ್‌ಟಿಸಿ ಒನ್ (ಎಮ್9)

ಎಚ್‌ಟಿಸಿ ಒನ್ (ಎಮ್9)

ತೈವಾನೀ ವಿನ್ಯಾಸದ ಈ ಸ್ಮಾರ್ಟ್‌ಫೋನ್ ಎಚ್‌ಟಿಸಿ 2015 ಕ್ಕೆ ಹೊಸ ಕಳೆಯನ್ನು ಉಂಟುಮಾಡಲಿದೆ. ಕ್ಯುಎಚ್‌ಡಿ ಸ್ಕ್ರೀನ್ ಮತ್ತು ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್‌ನೊಂದಿಗೆ ಈ ಡಿವೈಸ್ ಬಂದಿದೆ.

ಎಲ್‌ಜಿ ಜಿ4

ಎಲ್‌ಜಿ ಜಿ4

ಈ ಫೋನ್‌ನ ಡಿಸ್‌ಪ್ಲೇ ಮನವನ್ನು ಆಕರ್ಷಿಸುವಂತಿದ್ದು, 5.7 ಇಂಚಿನ 4 ಕೆ ಡಿಸ್‌ಪ್ಲೇಯನ್ನು ಫೋನ್ ಹೊಂದಿದೆ.

ಮೈಕ್ರೋಸಾಫ್ಟ್ ಲೂಮಿಯಾ
 

ಮೈಕ್ರೋಸಾಫ್ಟ್ ಲೂಮಿಯಾ

"ಸ್ಪಿನ್ನರ್ ಫೋನ್" ಎಂಬ ಶೀರ್ಷಿಕೆಯೊಂದಿಗೆ ಬರುತ್ತಿರುವ ಮೈಕ್ರೋಸಾಫ್ಟ್‌ ಲೂಮಿಯಾ ಮೆಟಾಲಿಕ್ ಶೆಲ್‌ನೊಂದಿಗೆ ಬಂದಿದ್ದು ನಮ್ಮ ಮನವನ್ನು ಆಕರ್ಷಿಸುವಂತಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6

ಸ್ಲಿಮ್, ಪ್ರೀಮಿಯಮ್ ವಿನ್ಯಾಸದೊಂದಿಗೆ ಬಂದಿರುವ ಗ್ಯಾಲಕ್ಸಿ ಎಸ್6, 5.2 ಇಂಚಿನ ಸೂಪರ್ ಅಮೋಲೆಡ್ ಸ್ಕ್ರೀನ್ ಜೊತೆಗೆ ಕ್ಯುಎಚ್‌ಡಿ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ.

 ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಲಿಮ್ ನೋಟ, ಕ್ಲೀನ್ ಲೈನ್ಸ್ ಮತ್ತು ಅತ್ಯದ್ಭುತ ನೋಟವನ್ನು ಈ ಡಿವೈಸ್ ಹೊಂದಿದೆ. ಸ್ನ್ಯಾಪ್‌ಡ್ರಾಗನ್ 810 ಸಿಪಿಯು, 6 ಇಂಚಿನ ಸೂಪರ್ ಅಮೋಲೆಡ್ 4 ಕೆ ಡಿಸ್‌ಪ್ಲೇ, 4 ಜಿಬಿ RAM ಡಿವೈಸ್‌ನಲ್ಲಿದೆ.

ಸೋನಿ ಎಕ್ಸ್‌ಪೀರಿಯಾ ಜೆಡ್4, ಜೆಡ್4 ಕಾಂಪಾಕ್ಟ್ ಮತ್ತು ಜೆಡ್4 ಅಲ್ಟ್ರಾ

ಸೋನಿ ಎಕ್ಸ್‌ಪೀರಿಯಾ ಜೆಡ್4, ಜೆಡ್4 ಕಾಂಪಾಕ್ಟ್ ಮತ್ತು ಜೆಡ್4 ಅಲ್ಟ್ರಾ

2015 ರಲ್ಲಿ ಸೋನಿ ಎಕ್ಸ್‌ಪೀರಿಯಾ ಜೆಡ್ 4 ಅನ್ನು ನಿಮಗೆ ನೋಡಬಹುದಾಗಿದ್ದು ಎರಡನೇ ಅವಧಿಯಲ್ಲಿ ಎಕ್ಸ್‌ಪೀರಿಯಾ ಜೆಡ್ 5 ಸೋನಿ ಕುಟುಂಬವನ್ನು ಪ್ರವೇಶಿಸಲಿದೆ.

Most Read Articles
 
English summary
As we're crossing 2014's last days off our calendars, it's time to start looking forward to next year's flagship smartphones. But at this point it's a little early for leaks, which means we'll have to entertain our imagination with hopes, dreams, and concept images generated by enthusiastic designers.
Please Wait while comments are loading...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more