ಗೂಗಲ್‌, ಆಪಲ್‌ನಲ್ಲಿ ಕೇಳಲಾದ ಕಠಿಣ ಸಂದರ್ಶನ ಪ್ರಶ್ನೆಗಳು ಯಾವುವು ಗೊತ್ತೇ?

By Suneel
|

ಯಾವುದೇ ಪರೀಕ್ಷೆಗಳನ್ನು ಬರೆಯೋಕೆ ಹೊರಟರು ಬಹುಶಃ ಪರೀಕ್ಷೆಗಳಲ್ಲಿ ಇಂತಹ ಪ್ರಶ್ನೆಗಳನ್ನು ಕೇಳಬಹುದು ಎಂದು ಭಾಗಶಃ ಊಹಿಸಬಹುದು. ಆದ್ರೆ ಒಂದು ಕೆಲಸಕ್ಕೆ ಸೇರಲು ಎಂದು ಕಂಪನಿಗಳಿಗೆ ಹೋದಾಗ ಸಂದರ್ಶನಕಾರರು ಇಂದದ್ದೇ ಪ್ರಶ್ನೆ ಕೇಳಬಹುದು ಎಂದು ಊಹಿಸಲು ಸಹ ಸಾಧ್ಯವಿರುವುದಿಲ್ಲ. ಇದು ಬಳಸಷ್ಟು ಜನರಿಗೆ ಅನುಭವವಾಗಿರಬಹುದು. ಅಲ್ಲದೇ ಇನ್ನು ಟೆಕ್ನಾಲಜಿ ಕ್ಷೇತ್ರದಲ್ಲಿ ಉದ್ಯೋಗ ಬಯಸುವವರಿಗಂತೂ ಇಂತಹ ಅನುಭವಗಳು ಹೆಚ್ಚು. ಹಾಗಾದ್ರೆ ಅದೆಂತಹ ಪ್ರಶ್ನೆಗಳನ್ನು ಟೆಕ್‌ ಕಂಪನಿಗಳಲ್ಲಿ ಕೇಳುತ್ತಾರೆ ಎಂಬುದು ಹಲವರ ಕುತೂಹಲವಾಗಿರುತ್ತದೆ. ಅಂತಹವರು ಟೆಕ್‌ ಕಂಪನಿಗಳಿಗೆ ಹೋಗಿ ಅನುಭವ ಪಡೆಯುವುದು ಕಷ್ಟವಾಗಬಹುದು. ಟೆಕ್‌ ಕಂಪನಿಗಳಲ್ಲಿ ಉದ್ಯೋಗ ಬಯಸುವವರು ಸಹ ಸಂದರ್ಶನಕ್ಕೆ ಹೋಗುವ ಮೊದಲೇ ಅಲ್ಲಿನ ಸಂದರ್ಶನಕಾರರ ಅತಿ ಕಷ್ಟದ ಪ್ರಶ್ನೆಗಳು ಹೇಗಿರುತ್ತವೆ ಎಂದು ತಿಳಿಯಲು ಬಯಸಬಹುದು. ಅಂತಹ ಆಕಾಂಕ್ಷಿಗಳೆಲ್ಲರೂ ಇಂದಿನ ಲೇಖನದಲ್ಲಿ ಪ್ರಖ್ಯಾತ ಟೆಕ್‌ ಕಂಪನಿಗಳಾದ ಆಪಲ್‌, ಟ್ವಿಟರ್‌, ಗೂಗಲ್‌, ಗೋಲ್ಡ್ಮನ್ ಸ್ಯಾಚ್ಸ್, JP ಮೋರ್ಗಾನ್'ಗಳಲ್ಲಿ ಸಂದರ್ಶನದಲ್ಲಿ ಕೇಳಲಾದ ಕಠಿಣ ಪ್ರಶ್ನೆಗಳು ಯಾವುವು ಎಂದು ತಿಳಿಯಿರಿ. ಲೇಖನದಲ್ಲಿ ತಿಳಿಸುತ್ತಿರುವ ಪ್ರಶ್ನೆಗಳ ಕೃಪೆಯು ಆಯಾ ಕಂಪನಿಗಳಿಗೆ ಸಲ್ಲುತ್ತದೆ.

ಉದ್ಯೋಗ: ಗೂಗಲ್ ಆಡಳಿತ ಸಹಾಯಕ

ಪ್ರಶ್ನೆ: ಒಂದು ವೇಳೆ ನಾವು ಒಂದು ಬಾಕ್ಸ್‌ ಪೆನ್ಸಿಲ್‌ ಕೊಟ್ಟರೆ ಅವುಗಳನ್ನು 10 ರೀತಿಯಲ್ಲಿ ಬಳಸಿಕೊಳ್ಳಬೇಕು. ಆದರೆ ಸಾಂಪ್ರದಾಯಿಕ ಬಳಕೆಗೆ ಬಳಸಬಾರದು. ಹೇಗೆ ಬಳಸುತ್ತೀರಾ?

ಉದ್ಯೋಗ:ಅಮೆಜಾನ್ ಹಿರಿಯ ನೇಮಕಾತಿ ವ್ಯವಸ್ಥಾಪಕ

ಪ್ರಶ್ನೆ: ನೀವು ಮಂಗಳ ಗ್ರಹದಿಂದ ಬಂದವರೇ ಆಗಿದ್ದಲ್ಲಿ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತೀರಿ?

ಉದ್ಯೋಗ: ಆಪಲ್‌ ಇಂಟರ್ನ್‌

ಪ್ರಶ್ನೆ: ಒಂದು ಗಡಿಯಾರ ಮುರಿಯಲು ಅತ್ಯಂತ ಸೃಜನಶೀಲ ಮಾರ್ಗ ಯಾವುದು?

ಉದ್ಯೋಗ: ಮೈಕ್ರೋಸಾಫ್ಟ್‌ನಲ್ಲಿ ಸಾಫ್ಟ್‌ವೇರ್‌ ಅಭಿವೃದ್ದಿ ಇಂಜಿನಿಯರ್‌

ಪ್ರಶ್ನೆ: ಒಂದು ಡಿಸ್ಕ್‌ ಆಧಾರತಂತಿಯ ಮೇಲೆ ತಿರುಗುತ್ತಿದೆ. ಆದರೆ ನಿಮಗೆ ಅದು ಯಾವ ಮಾರ್ಗದಲ್ಲಿ ಎಂದು ಗೊತ್ತಿಲ್ಲಾ. ನಿಮಗೆ ಒಂದು ಸೆಟ್‌ ಪಿನ್‌ಗಳನ್ನು ನೀಡಲಾಗುತ್ತದೆ. ಡಿಸ್ಕ್‌ ಯಾವ ಮಾರ್ಗದಲ್ಲಿ ತಿರುಗುತ್ತಿದೆ ಎಂದು ತಿಳಿಯಲು ಅವುಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎಂದು ವಿವರಿಸಿ?

ಉದ್ಯೋಗ: ಫೇಸ್‌ಬುಕ್‌ನಲ್ಲಿ ವ್ಯವಹಾರ ನಿರ್ವಹಣೆ ಇಂಟರ್ನ್‌

ಪ್ರಶ್ನೆ: ಒಂದು ಬ್ಯಾಗ್‌ನಲ್ಲಿ ಏಣಿಕೆ ಮಾಡದ ತಂತಿಗಳು ಇವೆ. ಅವುಗಳಲ್ಲಿ ಮನಬಂದಂತೆ ತಂತಿಗಳನ್ನು ಹೊರ ತೆಗೆಯುತ್ತೀರಿ. ನಂತರ ಬ್ಯಾಗ್‌ನಲ್ಲಿನ ಇತರ ತಂತಿಗಳನ್ನು ಸಹ ಹೊರ ಎಳೆಯುತ್ತೀರಿ. ಅವುಗಳನ್ನು ಒಟ್ಟಿಗೆ ಸೇರಿಸಿ ಕಟ್ಟುತ್ತೀರಿ. ಇದೇ ರೀತಿ ಬ್ಯಾಗ್‌ನಲ್ಲಿನ ತಂತಿಗಳು ಖಾಲಿಯಾಗುವವರೆಗೆ ಕಾರ್ಯನಿರ್ವಹಿಸುತ್ತೀರಿ. ನಿರೀಕ್ಷಿತ ಕುಣಿಕೆಗಳ ಸಂಖ್ಯೆ ಎಷ್ಟು?

ಉದ್ಯೋಗ: ಗೂಗಲ್‌ ಪ್ರಾಡಕ್ಟ್‌ ವ್ಯವಸ್ಥಾಪಕ

ಪ್ರಶ್ನೆ: ನೀವು ಕಿವುಡರಿಗಾಗಿ ಫೋನ್‌ ವಿನ್ಯಾಸ ಮಾಡಲು ಬಯಸುತ್ತೀರಿ ಎಂದಾದಲ್ಲಿ.. ಅದನ್ನು ಹೇಗೆ ಮಾಡುತ್ತೀರಿ?

ಉದ್ಯೋಗ: ಟ್ವಿಟರ್‌ನಲ್ಲಿ ನೇಮಕಾತಿ ಮಾಡುವವರು

ಪ್ರಶ್ನೆ: ನಿಮ್ಮನ್ನು ನಾವು ಏಕೆ ನೇಮಕಾತಿ ಮಾಡಿಕೊಳ್ಳಬಾರದು?

ಉದ್ಯೋಗ: ಮೈಕ್ರೋಸಾಫ್ಟ್‌ ಇಂಟರ್ನ್‌

ಪ್ರಶ್ನೆ: ಲಿಫ್ಟ್‌ ಅನ್ನು ಹೇಗೆ ವಿನ್ಯಾಸ(Disign) ಮಾಡುತ್ತೀರಾ?

ಉದ್ಯೋಗ: ಮೈಕ್ರೋಸಾಫ್ಟ್ ಸಹಾಯಕ ಸಲಹೆಗಾರ

ಪ್ರಶ್ನೆ: "ಹಲವು ಮೈಕ್ರೋಸಾಫ್ಟ್‌ ಪ್ರಾಡಕ್ಟ್‌ಗಳು" ಎಂದು ಹೆಸರು ನೀಡಬಹುದಾ?

ಉದ್ಯೋಗ: ಟ್ವಿಟರ್‌ನಲ್ಲಿ ಹಿರಿಯ ಸಾಫ್ಟ್‌ವೇರ್‌ ಇಂಜಿನಿಯರ್‌

ಪ್ರಶ್ನೆ: ಅವಳಿ ಮರ ಅದಕ್ಕೆ ಒಂದು ಕನ್ನಡಿ ಇದ್ದ ಹಾಗೆಯೇ ? ( Is this binary tree a mirror of itself?)

ಉದ್ಯೋಗ: ತೆಸ್ಲಾ ಮೋಟಾರ್‌'ನ ಇಂಜಿನಿಯರಿಂಗ್ ತಂತ್ರಜ್ಞ

ಪ್ರಶ್ನೆ: 8 ವರ್ಷದ ಮಗುವಿಗೆ ಡೈನಾಮೊಮೀಟರ್ ಬಗ್ಗೆ ಹೇಗೆ ವಿವರಿಸುತ್ತಿರಿ?

ಉದ್ಯೋಗ: ಎಲೆಕ್ಟ್ರಾನಿಕ್ ಆರ್ಟ್ಸ್'ನಲ್ಲಿ ಹಿರಿಯ ಸಾಫ್ಟ್‌ವೇರ್‌ ಇಂಜಿನಿಯರ್

ಪ್ರಶ್ನೆ: ಎರಡು ಚಲಿಸುವ ಗೋಳಗಳ ಘರ್ಷಣೆ ಬಗ್ಗೆ ಹೇಗೆ ಲೆಕ್ಕಾಚಾರ ಮಾಡುತ್ತೀರಿ? ಇದರ ಪರಿಹಾರಾತ್ಮಕ ಗಣಿತ ಸಮೀಕರಣ ಮತ್ತು ಕ್ರಮಾವಳಿಯ ಅನುಷ್ಠಾನವನ್ನು ನೀಡಿರಿ.

ಗಿಜ್‌ಬಾಟ್‌

ಫೇಸ್‌ಬುಕ್‌ ಬಳಕೆದಾರರಿಗೆ ಬಂಪರ್‌ ಕೊಡುಗೆ: ಅಚ್ಚರಿ ಹೊಸ ಟೂಲ್‌ಗಳು

ಇನ್ಮುಂದೆ ಫೇಸ್‌ಬುಕ್‌ ಮೆಸೇಂಜರ್‌ನಲ್ಲೂ ಹಣ ವರ್ಗಾಯಿಸಿ!!

ಸಂಶೋಧಕರಿಂದ ನರಕ ಗ್ರಹ ಪತ್ತೆ: Cancri 55 e !!

ವಿಸ್ಮಯವಾದ ಆಸ್ಟ್ರೇಲಿಯ ರಹಸ್ಯ ತಾಣ: ಸಾಮಾಜಿಕ ತಾಣದಲ್ಲಿ ವೈರಲ್

ಗಿಜ್‌ಬಾಟ್‌

ಕನ್ನಡ ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌

ಕನ್ನಡ.ಗಿಜ್‌ಬಾಟ್.ಕಾಂ

Most Read Articles
Best Mobiles in India

English summary
13 tough interview questions heard at Apple, Google, Microsoft and others. Read more about this in kannada.gizbot.com

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more