ಜನವರಿ-ನವೆಂಬರ್ 2018 ರ ವರೆಗೆ ಹ್ಯಾಕ್ ಆಗಿರುವ ಭಾರತೀಯ ವೆಬ್ ಸೈಟ್ ಗಳ ಸಂಖ್ಯೆ 15,779

|

ಹ್ಯಾಕರ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅವರಿಗೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಪ್ರಯತ್ನಿಸುತ್ತಲೇ ಇದೆ. ಹೆಚ್ಚು ಕಡಿಮೆ 15,700 ಭಾರತೀಯ ವೆಬ್ ಸೈಟ್ ಗಳು ಜನವರಿಯಿಂದ ನವೆಂಬರ್ 2018 ರ ವರೆಗೆ ಹ್ಯಾಕ್ ಆಗಿವೆ ಎಂಬುದಾಗಿ ಸರ್ಕಾರ ತಿಳಿಸಿದೆ.

ಜನವರಿ-ನವೆಂಬರ್ 2018 ರ ವರೆಗೆ ಹ್ಯಾಕ್ ಆಗಿರುವ ಭಾರತೀಯ ವೆಬ್ ಸೈಟ್

ಈಗಾಗಲೇ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್ ಟಿ-ಇನ್) ಗೆ ಬಂದಿರುವ ಮಾಹಿತಿಯ 33,147 ,30,067 ,ಮತ್ತು 15,779 ಭಾರತೀಯ ವೆಬ್ ಸೈಟ್ ಗಳು 2016,2017,2018 ನೇ ಸಾಲಿನಲ್ಲಿ ಕ್ರಮವಾಗಿ ನವೆಂಬರ್ ವರೆಗೆ ಹ್ಯಾಕ್ ಆಗಿರುವ ಬಗ್ಗೆ ತಿಳಿದುಬಂದಿದೆ ಎಂಬುದನ್ನು ಲೋಕಸಭೆಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಮಿನಿಸ್ಟರ್ ಆಗಿರುವ ರವಿಶಂಕರ್ ಪ್ರಸಾದ್ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ.

ಸೈಬರ್ ಸೆಕ್ಯುರಿಟಿ ಮತ್ತು ಸೈಬರ್ ಅಟ್ಯಾಕ್

ಸೈಬರ್ ಸೆಕ್ಯುರಿಟಿ ಮತ್ತು ಸೈಬರ್ ಅಟ್ಯಾಕ್

ಅಷ್ಟೇ ಅಲ್ಲ ಸೈಬರ್ ಸೆಕ್ಯುರಿಟಿ ಮತ್ತು ಸೈಬರ್ ಅಟ್ಯಾಕ್ ನ್ನು ದೇಶದಲ್ಲಿ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆಯೂ ಕೂಡ ಅವರು ತಿಳಿಸಿದ್ದಾರೆ.

ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ನೂತನ ಸೈಬರ್ ತೊಂದರೆಗಳ ಬಗ್ಗೆ ಯಾವಾಗಲೂ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಲೇ ಇರುತ್ತದೆ. ಸೈಬರ್ ಸಂಬಂಧಿತ ಭದ್ರತಾ ವಿಚಾರವಾಗಿ ಪೋಸ್ಟರ್ ಗಳನ್ನು ಕೂಡ ಹಾಕಲಾಗುತ್ತದೆ.

ಸೈಬರ್ ದಾಳಿ

ಸೈಬರ್ ದಾಳಿ

ಸೈಬರ್ ದಾಳಿಗಳು ಮತ್ತು ಸೈಬರ್ ಭಯೋತ್ಪಾದನೆಯನ್ನು ಕೇಂದ್ರ ಸರಕಾರ, ರಾಜ್ಯ ಸರ್ಕಾರಗಳು ಮತ್ತು ಅವರ ಸಂಘಟನೆಗಳು ಮತ್ತು ನಿರ್ಣಾಯಕ ವಲಯಗಳ ಎಲ್ಲಾ ಸಚಿವಾಲಯಗಳು / ಇಲಾಖೆಗಳಿಂದ ಅನುಷ್ಠಾನಗೊಳಿಸಲು ಕ್ರೈಸಿಸ್ ಮ್ಯಾನೇಜ್ಮೆಂಟ್ ಪ್ಲಾನ್ ನ್ನು ಸಹ ಸರ್ಕಾರ ರಚಿಸಿದೆ.

ನ್ಯಾಷನಲ್ ಕ್ರೈಮ್ ರೆಕಾರ್ಡ್

ನ್ಯಾಷನಲ್ ಕ್ರೈಮ್ ರೆಕಾರ್ಡ್

ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯುರೋ ದ ದಾಖಲಾತಿಗಳ ಪ್ರಕಾರ 2014,2015,2016 ರಲ್ಲಿ ಕ್ರಮವಾಗಿ 9622,11592,12,317 ಸೈಬರ್ ಕ್ರೈಮ್ ಕೇಸ್ ಗಳು ರಿಜಿಸ್ಟರ್ ಆಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವರಾಗಿರುವ ಎಸ್ಎಸ್ ಅಹ್ಲುವಾಲಿಯಾ ತಿಳಿಸಿದ್ದಾರೆ.

ಇದರಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆ 2000 ಮತ್ತು ಭಾರತೀಯ ದಂಡ ಸಂಹಿತೆ ಸಂಬಂಧಿತ ವಿಭಾಗಗಳು ಮತ್ತು ವಿಶೇಷ&ಸ್ಥಳೀಯ ಕಾನೂನುಗಳ ಅಡಿಯಲ್ಲಿ ದಾಖಲಾಗಿರುವ ಕೇಸ್ ಗಳು ಕೂಡ ಸೇರಿವೆ ಎಂದು ತಿಳಿಸಿದ್ದಾರೆ.

ಸಿಇಆರ್ ಟಿ ದಾಖಲಾತಿಗಳ ಪ್ರಕಾರ 2016,2017,2018 ರ ಅವಧಿಯಲ್ಲಿ ಎಟಿಎಂ, ಕಾರ್ಡ್ಸ್, ಪಾಯಿಂಟ್ ಆಫ್ ಸೇಲ್(ಪಿಓಎಫ್) ಸಿಸ್ಟಮ್ ಮತ್ತು ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್(ಯುಪಿಐ) ಅನ್ನು ಬಾಧಿಸುವ ಒಟ್ಟು 3,14,6 ಆರ್ಥಿಕ ವಂಚನೆಗಳು ವರದಿಯಾಗಿವೆ ಎಂದು ಅಹುಲುವಾಲಿಯಾ ತಿಳಿಸಿದ್ದಾರೆ.

ಇನ್ನು ಆರ್ ಬಿಐ ಒಟ್ಟು 1,191, 1,372, 2,059 ಮತ್ತು 921 ಕೇಸ್ ಗಳು ಎಟಿಎಂ/ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಇಂಟರ್ನೆಟ್ ಬ್ಯಾಕಿಂಗ್ ವಂಚನೆ ಪ್ರಕರಣಗಳು (1ಲಕ್ಷಕ್ಕೂ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ವರದಿಗಳು) 2015-16,2016-17,2017-18,2018-19 (ಸೆಪ್ಟೆಂಬರ್ 30,2018ರ ವರೆಗೆ) ಕ್ರಮವಾಗಿ ದಾಖಲಾಗಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

ಅಂತರ್ಜಾಲದಲ್ಲಿ ವಂಚನೆ ಮಾಡುವ ಪ್ರಕರಣ ಅಧಿಕವಾಗುತ್ತಿದೆ. ಒಂದು ವೇಳೆ ನೀವೇನಾದರೂ ಅಂತಹ ವಂಚನೆಗೆ ಒಳಗಾಗಿದ್ದಲ್ಲಿ ಕೂಡಲೇ ಪೋಲೀಸ್ ಕಂಪ್ಲೈಟ್ ದಾಖಲಿಸಬೇಕೆಂದು ಕೇಳಲಾಗಿದೆ.

Best Mobiles in India

English summary
15,779 Indian websites hacked during Jan-Nov 2018: Ravi Shankar Prasad

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X