ನನಗೆ ಮದುವೆ ಬೇಡ: ಯೂ ಟ್ಯೂಬ್‌ವೈರಲ್‌ ಆಗಿದ್ದಾಳೆ ಯಮನ್‌ ಬಾಲಕಿ

Posted By:

ತಾಲಿಬಾನ್ ಆಡಳಿತವನ್ನು ವಿರೋಧಿಸಿ,ಬಾಲಕಿಯರ ಶಿಕ್ಷಣದ ಬಗ್ಗೆ ಮಾತನಾಡಿ ವಿಶ್ವಮಟ್ಟದಲ್ಲಿ ಗಮನ ಸೆಳೆದ ಮಲಾಲಳಂತೆ, ಯಮನ್‌ನಲ್ಲಿ ಮತ್ತೊಬ್ಬ ಬಾಲಕಿ ಬಾಲ್ಯ ವಿವಾಹ ಪದ್ದತಿಯನ್ನು ವಿರೋಧಿಸಿ ಈಗ ವಿಶ್ವದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಾಳೆ.ಬಾಲ್ಯ ವಿವಾಹ ಪದ್ದತಿಯನ್ನು ವಿರೋಧಿಸಿ ಬಾಲಕಿಯ ಮಾತುಗಳಿರುವ ವೀಡಿಯೋ ಈಗ ಯೂ ಟ್ಯೂಬ್‌ನಲ್ಲಿ ವೈರಲ್‌ ಆಗಿದೆ. ಒಂದು ವಾರದ ಹಿಂದೆ ಈ ವೀಡಿಯೋ ಅಪ್‌ಲೋಡ್‌ ಆಗಿದ್ದು, ಸುಮಾರು ಕಳೆದ ಎರಡೇ ದಿನದಲ್ಲಿ 60 ಲಕ್ಷಕ್ಕೂ ಹೆಚ್ಚು ಮಂದಿ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ.

ಯಮನ್‌ ದೇಶದ 11 ವರ್ಷದ ಬಾಲಕಿ ನಾಡ ಅಲ್ ಹದಲ್‌ನ್ನು (Nada al-Ahdal) ಅವಳಗಿಂತ ಹಿರಿಯ ವ್ಯಕ್ತಿಗೆ ಮದುವೆ ಮಾಡಿಸಲು ಅವಳ ಪೋಷಕರು ನಿರ್ಧ‌ರಿಸಿದ್ದರು. ಪೋಷಕರ ನಿರ್ಧಾರದಿಂದ ಬೇಸತ್ತ ನಾಡ ವಿರೋಧಿಸಿ ಕಾರ್‌ನಲ್ಲಿ ಬಾಲ್ಯವಿವಾಹದ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾಳೆ.

ಈ ಬಾಲ್ಯವಿವಾಹದಿಂದಾಗಿ ತಾನು ಜೀವನ ಮತ್ತು ಶಿಕ್ಷಣದಿಂದ ವಂಚಿತಳಾಗುತ್ತೇನೆ ಎಂದು ವೀಡಿಯೋದಲ್ಲಿ ನಾಡ ಅವಲತ್ತು ಕೊಂಡಿದ್ದಾಳೆ.

ಇದನ್ನೂ ಓದಿ: ವೈರಲ್‌ ವೀಡಿಯೋ- ಎರಡೇ ಸೆಕೆಂಡ್‌ನಲ್ಲಿ ಶರ್ಟ್‌ ಮಡಚುತ್ತಾನೆ!

<center><center><center><iframe width="640" height="360" src="http://www.youtube.com/embed/-J7_TKgw1To?feature=player_embedded" frameborder="0" allowfullscreen></iframe></center></center></center>

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot