ಕಾರನ್ನೇ ಸುಟ್ಟ ಎರಡು ಸ್ಯಾಮ್ ಸಂಗ್ ಸ್ಮಾರ್ಟ್ ಪೋನ್ ಗಳು..!

|

ಫೋನಿನಿಂದ ಅಪಾಯಕಾರಿ ಘಟನೆಗಳಾಗಿರುವುದು ಇದೇ ಮೊದಲೇನಲ್ಲ. ಈಗಾಗಲೇ ಹಲವು ಘಟನೆಗಳನ್ನು ನಾವು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಅದಕ್ಕೆ ಈ ಘಟನೆ ಮತ್ತೊಂದು ಸೇರ್ಪಡೆ ಅಷ್ಟೇ... ಇದು ಸ್ಯಾಮ್ ಸಂಗ್ ಫೋನ್ ಒಂದು ಕಾರನ್ನೇ ಸುಟ್ಟು ಹಾಕಿದ ಕಥೆ.. ಈ ಘಟನೆ ನಡೆದಿರುವುದು ಅಮೇರಿಕಾದಲ್ಲಿ...

2016 ರಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಫೋನ್ ವಿಶ್ವದಾದ್ಯಂತ ಹೆಡ್ ಲೈನ್ ಸ್ಟೋರಿ ಆಗಿತ್ತು. ಅಲ್ಲಲ್ಲಿ ಈ ಫೋನಿನ ಬಳಕೆದಾರರಿಗೆ ಕೆಟ್ಟ ಅನುಭವ ನೀಡಿತ್ತು ಅರ್ಥಾತ್ ಫೋನಿನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ವರದಿಗಳಿದ್ದವು. ಇದರಿಂದಾಗಿ ಸೌತ್ ಕೋರಿಯಾದ ಈ ಟೆಕ್ ಟೀಮ್ ಕ್ಷಮೆಯಾಚಿಸಿತ್ತು ಮತ್ತು ಯಾವುದು ತಪ್ಪಾಗಿದೆ ಎಂದು ಎಲ್ಲರೂ ತಿಳಿಯಬೇಕು ಎಂಬ ಉದ್ದೇಶದಿಂದಾಗಿ ಪಾರದರ್ಶಕತೆಯನ್ನು ಕಾಪಾಡಿಕೊಂಡಿತ್ತು.

ಕಾರನ್ನೇ ಸುಟ್ಟ ಎರಡು ಸ್ಯಾಮ್ ಸಂಗ್ ಸ್ಮಾರ್ಟ್ ಪೋನ್ ಗಳು..!

ಮತ್ತು ತಾವು ಹೇಗೆ ಈ ಫೋನಿನ ತಯಾರಿಕೆ ಮಾಡಿದ್ದೆವು ಮತ್ತು ಅದರ ಬ್ಯಾಟರಿಯನ್ನು ಇನ್ಸ್ಟಾಲ್ ಮಾಡಿರುವುದರ ಬಗ್ಗೆ ಮಾಹಿತಿ ನೀಡಿತ್ತು. ಈಗ ಮತ್ತೆ ಪುನಃ ಇಂತಹದ್ದೇ ಘಟನೆ ನಡೆದಿರುವುದು ಬೆಳಕಿಗೆ ಬಂದಿರುವ ಬಗ್ಗೆ ಎಬಿಸಿ ನ್ಯೂಸ್ ತನ್ನ ವೆಬ್ ಸೈಟ್ ನಲ್ಲಿ ವರದಿ ಮಾಡಿದೆ.

ಕಾರಿನಲ್ಲಿ ಸಂಚರಿಸುತ್ತಿದ್ದ ಮಹಿಳೆಯ ಕಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಗಳ ಕಾರಣದಿಂದಾಗಿ ಬೆಂಕಿಗೆ ಆಹುತಿಯಾಗಿದೆ. ವಿಡಿಯೋ ಇಂಟರ್ ವ್ಯೂ ಒಂದರಲ್ಲಿ ಮಹಿಳೆಯರು ತಾನು 2017 ಫ್ಲ್ಯಾಗ್ ಶಿಪ್ ಇರುವ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 8 ಮತ್ತು 2013 ರಲ್ಲಿ ಕಂಬ್ಯಾಕ್ ವರ್ಷನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 4 ಮೊಬೈಲ್ ಗಳಲ್ಲಿ ಆಕೆ ಡ್ರೈವಿಂಗ್ ಮಾಡುತ್ತಿರುವಾಗ ಬೆಂಕಿ ಕಾಣಿಸಿಕೊಂಡಿತು.

ಶಿಯೋಮಿ ಸ್ಮಾರ್ಟ್ ಫೋನ್ ಖರೀದಿಸುವ ಮುನ್ನ ಈ 10 ವಿಚಾರ ತಿಳಿದಿರಲೇಬೇಕು...!ಶಿಯೋಮಿ ಸ್ಮಾರ್ಟ್ ಫೋನ್ ಖರೀದಿಸುವ ಮುನ್ನ ಈ 10 ವಿಚಾರ ತಿಳಿದಿರಲೇಬೇಕು...!

ಅದೃಷ್ಟವಶಾತ್ ನಾನು ಕಾರನ್ನು ನಿಲ್ಲಿಸಿ ಹೊರಬರಲು ಸಾಧ್ಯವಾಯಿತು ಮತ್ತು ಅನಾಹುತದಿಂದ ತಪ್ಪಿಸಿಕೊಂಡೆ ಎಂದು ಹೇಳಿಕೆ ನೀಡಿದ್ದಾಳೆ. ಆ ವೀಡಿಯೋದಲ್ಲಿ ಆಕೆಯ ಸುಟ್ಟು ಹೋದ ಕಾರನ್ನು ಕೂಡ ತೋರಿಸಲಾಗಿದ್ದು, ಅದಕ್ಕೆ ಕಾರಣ ಆಕೆಯ ಸ್ಮಾರ್ಟ್ ಫೋನ್ ಗಳು ಎಂದು ತಿಳಿದು ಬಂದಿದೆ. ಈ ಘಟನೆ ನಡೆದಿರುವುದು ಯು,ಎಸ್ ನಲ್ಲಿ ಎಂಬುದು ತಿಳಿದುಬಂದಿದೆ.

ಕಾರನ್ನೇ ಸುಟ್ಟ ಎರಡು ಸ್ಯಾಮ್ ಸಂಗ್ ಸ್ಮಾರ್ಟ್ ಪೋನ್ ಗಳು..!

" ಇದು ತ್ವರಿತವಾಗಿ ಸಂಭವಿಸಿ ಬಿಟ್ಟಿತು. ನನ್ನ ಕಾರು ಜ್ವಾಲೆಗಳಾಗಿ ಉರಿದು ಹೋಯಿತು. ಅಲ್ಲಿದ್ದ ಜನರು ನನ್ನನ್ನು ಕಾರಿನಿಂದ ದೂರವಿರಲು ಸಲಹೆ ನೀಡುತ್ತಿದ್ದರು. ನಾನು ಒಂದು ವೇಳೆ ಹೆದ್ದಾರಿಯಲ್ಲಿದ್ದರೆ ಟ್ರಾಫಿಕ್ ನಲ್ಲಿ ಸಿಲುಕಿ ಬಿಡುತ್ತಿದ್ದೆ ಮತ್ತು ಹೊರಬರಲೂ ಕೂಡ ಸಾಧ್ಯವಾಗುತ್ತಿರಲಿಲ್ಲ?" ಎಂದು ಘಟನೆಗೆ ಒಳಪಟ್ಟ ವ್ಯಕ್ತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

How to Send a WhatsApp Message Without Saving the Contact in Your Phone - GIZBOT KANNADA

ಸ್ಯಾಮ್ ಸಂಗ್ ಸಂಸ್ಥೆ ಇದನ್ನು ಪರೀಕ್ಷಿಸಲು ತಂಡವೊಂದನ್ನು ಕಳುಹಿಸಿದೆ ಎಂದು ಹೇಳಲಾಗುತ್ತಿದೆ."ನಾವು ಯು.ಎಸ್.ನಲ್ಲಿ ಲಕ್ಷಾಂತರ ಸ್ಯಾಮ್ಸಂಗ್ ಫೋನ್ಗಳ ಗುಣಮಟ್ಟದ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದೇವೆ. ಈ ವಿಷಯದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ನಾವು ಉತ್ಸುಕರಾಗಿದ್ದೇವೆ ಮತ್ತು ಎಲ್ಲಾ ಪುರಾವೆಗಳನ್ನು ಪರಿಶೀಲಿಸಲು ಸಾಧ್ಯವಾಗುವವರೆಗೂ, ಯಾವುದೇ ಘಟನೆಯ ನಿಜವಾದ ಕಾರಣವನ್ನು ಕಂಡುಹಿಡಿಯುವುದು ಅಸಾಧ್ಯ" ಎಂದು ಸ್ಯಾಮ್ ಸಂಗ್ ನ ವಕ್ತಾರ ತಿಳಿಸಿದ್ದಾರೆ.

ಕಾರನ್ನೇ ಸುಟ್ಟ ಎರಡು ಸ್ಯಾಮ್ ಸಂಗ್ ಸ್ಮಾರ್ಟ್ ಪೋನ್ ಗಳು..!

ಇನ್ನೊಂದರೆ, ಅಗ್ನಿ ಶಾಮಕ ದಳದ ಅಧಿಕಾರಿಗಳು ಎರಡು ಸ್ಯಾಮ್ ಸಂಗ್ ಫೋನ್ ಗಳೇ ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ತಿಳಿಸಿದ್ದಾರೆ. ಈ ಘಟನೆ ಗಮನಿಸಿದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 4 ಮತ್ತು ಗ್ಯಾಲಕ್ಸಿ ಎಸ್ 8 ಫೋನುಗಳನ್ನು ವಿಮಾನದಲ್ಲಿ ಸಂಚರಿಸಲು ಅಯೋಗ್ಯ ಎಂದು ಪರಿಗಣಿಸುವುದು ಸೂಕ್ತವೆನಿಸುತ್ತದೆ. ಇದುವರೆಗೂ ಸ್ಯಾಮ್ ಸಂಗ್ ವಿರುದ್ಧ ಯಾವುದೇ ಕೇಸು ದಾಖಲಾಗಿಲ್ಲ ಆದರೆ ನಿಜಕ್ಕೂ ಇದು ಆಶ್ಚರ್ಯ ಮತ್ತು ಭಯ ಹುಟ್ಟಿಸುವ ಘಟನೆ ಅಲ್ವಾ? ನೀವೇನಂತೀರಿ?

Best Mobiles in India

English summary
2 Samsung smartphones burn a car in the US: Report. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X