ಸೋಶಿಯಲ್ ಮೀಡಿಯಾದಲ್ಲಿ ಕಲ್ಲಾದ ಮನಸ್ಸುಗಳು: ಲೈವ್ ಸಾವಿಗೆ ಬೆಲೆಯಿಲ್ಲ..!

|

ಬಹುತೇಕ ಸೋಶಿಯಲ್ ಮೀಡಿಯಾ ಬಳಕೆದಾರರರು ಕಲ್ಲು ಹೃದಯ ಎನ್ನುವ ಮಾತೊಂದು ಆಗ್ಗಾಗ್ಗೆ ಕೇಳಿರುತ್ತಿದೆ. ಜನರು ಹೆಚ್ಚಾಗಿ ಸೋಶಿಯಲ್ ಆಗುವ ಭರದಲ್ಲಿ ಮಾನವೀಯತೆಗೆ ಮಣೆ ಹಾಕುವುದನ್ನು ಮರೆಯುತ್ತಿದ್ದಾರೆ. ಇದಕ್ಕಾಗಿ ಸಾಕ್ಷಿಯಾಗುವ ಘಟನೆಯೊಂದು ಗುರುಗ್ರಾಮದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಫೇಸ್‌ಬುಕ್ ಲೈವ್ ಮಾಡಿದ್ದಾನೆ, ಲೈವ್‌ನಲ್ಲಿಯೇ ಜೀವ ಬಿಟ್ಟಿದ್ದಾನೆ. ಆದರೆ ಅವರ ಸಾವನ್ನು ಲೈವ್‌ನಲ್ಲಿ ನೋಡುತ್ತಿದ್ದ 2000 ಮಂದಿಯಲ್ಲಿ ಯಾರೋಬ್ಬರು ಅದನ್ನು ತಡೆಯುವ ಪ್ರಯತ್ನವನ್ನು ಮಾಡಿಲ್ಲ ಎನ್ನಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಕಲ್ಲಾದ ಮನಸ್ಸುಗಳು: ಲೈವ್ ಸಾವಿಗೆ ಬೆಲೆಯಿಲ್ಲ..!

ಪಟುಡಿ ಗ್ರಾಮದ 27 ವರ್ಷದ ಅಮೀತ್ ಚೌಹ್ನಾನ್ ಎನ್ನುವ ವ್ಯಕ್ತಿಯೋಬ್ಬ ಮನೆಯಲ್ಲಿದ್ದ ಹೆಂಡತಿ ಹೊರ ಸಂದರ್ಭದಲ್ಲಿ ಫೇಸ್‌ಬುಕ್ ಲೈವ್ ಮಾಡಿ, ಆತ್ಮ ಹತ್ಯೆಯನ್ನು ಮಾಡಿಕೊಂಡಿದ್ದಾನೆ, ಅಲ್ಲದೇ ಲೈವ್ ಸಂದರ್ಭದಲ್ಲಿ ಪ್ರಾಣವನ್ನು ಬಿಟ್ಟಿದ್ದಾನೆ. ಈ ವಿಡಿಯೋವನ್ನು ಹೆಚ್ಚಿನ ಮಂದಿಗೆ ಶೇರ್ ಮಾಡುಕೊಳ್ಳುವಂತೆ ವಿಡಿಯೋದಲ್ಲಿ ಬೇಡಿಕೊಂಡಿದ್ದು, ಸುಮಾರು 2000 ಮಂದಿ ಲೈವ್ ಆತ್ಮಹತ್ಯೆಯನ್ನು ವಿಕ್ಷೀಸಿದ್ದಾರೆ ಎನ್ನಲಾಗಿದೆ. ಆದರೆ ಯಾರೊಬ್ಬರು ಆತನ ಮನವೊಲಿಸಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಲು ಪ್ರಯತ್ನಿಸಿಲ್ಲ ಎನ್ನಲಾಗಿದೆ.

ಇದಲ್ಲದೇ ಸುಮಾರು 2000 ಮಂದಿಯಲ್ಲಿ ಯಾರೊಬ್ಬರು ಪೊಲೀಸರಿಗೆ ತಿಳಿಸುವ ಪ್ರಯತ್ನವನ್ನು ಮಾಡಿಲ್ಲ ಎನ್ನಲಾಗಿದ್ದು, ಈ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯ ನಂತರದಲ್ಲಿ ಹಲವು ಮಂದಿ ಈ ಘಟನೆ ಸಾಕ್ಷಿಯಾದವರ ಮಾನವೀಯತೆ ಸತ್ತು ಹೋಗಿದೆಯೇ ಎಂದು ಪ್ರಶ್ನೇ ಮಾಡುತ್ತಿದ್ದಾರೆ. ಅಲ್ಲದೇ ಸಾವನ್ನು ನೋಡಿಯೂ ಸುಮ್ಮನಿರುವುದನ್ನು ನೋಡಿ, ಅವರ ಸಾಮಾಜಿಕ ಬದ್ದತೆಯನ್ನು ಪ್ರಶ್ನಿಸುತ್ತಿದ್ದಾರೆ.

ದೇಶದಲ್ಲಿ ಆತ್ಮಹತ್ಯೆಯನ್ನು ಫೇಸ್‌ಬುಕ್‌ನಲ್ಲಿ ಲೈವ್ ಮಾಡುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ಹಲವು ಮಂದಿ ಈ ರೀತಿಯಲ್ಲಿ ಮಾಡುತ್ತಿದ್ದಾರೆ. ಒಂದೆರಡು ಪ್ರಕರಣಗಳಲ್ಲಿ ವ್ಯಕ್ತಿಗಳನ್ನು ಬದುಕಿಸಲಾಗಿದೆ. ಇನ್ನು ಹಲವು ಪ್ರಕರಣಗಳಲ್ಲಿ ಜೀವವು ಹೋಗಿದೆ. ಇದೊಂದು ಮಾನಸಿಕ ಕಾಯಿಲೆಯಾಗುತ್ತಿದೆ. ಅಲ್ಲದೇ ಮಾನಸಿಕ ಖಿನ್ನತೆ ವ್ಯಕ್ತಿಗಳನ್ನು ರೀತಿಯಲ್ಲಿ ಪ್ರೆರೇಪಿಸುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.

ನೀವು ಮುಂದೆ ಎಲ್ಲಾದರೂ ಈ ಮಾದರಿಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕಂಡರೆ ತಕ್ಷಣವೇ ಪೊಲೀಸರಿಗೆ ತಿಳಿಸುವ ಪ್ರಯತ್ನವನ್ನು ಮಾಡಿ. ಇದರಿಂದಾಗಿ ಒಂದು ಜೀವ ಉಳಿಸಿದ ಹಾಗೆ ಆಗಲಿದೆ. ಅಲ್ಲದೇ ಸೋಶಿಯಲ್ ಮೀಡಿಯಾ ಬಳಕೆ ಮಾಡಿದ್ದು ಸಾರ್ಥಕವಾಗಲಿದೆ.

Best Mobiles in India

English summary
2000 people watch as Gurugram man live streams suicide after wife walks out. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X