Subscribe to Gizbot

ಜುಲೈ 21 ರಂದು ಜಿಯೋ 500 ರೂ. 4G ಫೋನ್ ಲಾಂಚ್ ಮಾತ್ರವಲ್ಲ, ಇನ್ನೊಂದು ಭರ್ಜರಿ ಆಫರ್ ಕಾದಿದೆ...!!!

Written By:

ಸದ್ಯ ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಸಕತ್ ಸದ್ದು ಮಾಡುತ್ತಿರುವ ಜಿಯೋ ರೂ.500 ಫೋನ್ ಇದೇ ಜುಲೈ 21 ರಂದು ಮಾರುಕಟ್ಟೆಗೆ ಪರಿಚಯವನ್ನು ಮಾಡಲಾಗುತ್ತಿದೆ. ಇಷ್ಟು ದಿನ ಮುಚ್ಚಿಟ್ಟಿದ್ದ ಈ 500 ರೂ. 4G VoLTE ಫೀಚರ್‌ ಫೋನನ್ನು ಅಂದೇ ಬಿಡುಗಡೆ ಮಾಡಲೇನು ಕಾರಣ. ಇನ್ನು ಹಲವು ವಿಷಯಗಳು ಇಂದು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಜುಲೈ 21 ರಂದು ಜಿಯೋ 500 ರೂ. 4G VoLTE ಫೀಚರ್ ಫೋನ್ ಲಾಂಚ್ ಮಾತ್ರವಲ್ಲ,

ಓದಿರಿ: ಧನ್ ಧನಾ ಧನ್ ಮುಗಿಯುವ ವೇಳೆಗೆ ಮತ್ತೊಂದು ಜಿಯೋ ಆಫರ್ ..!!

ಮೂಲಗಳ ಪ್ರಕಾರ ಅಂದು ಜಿಯೋ ಮಾಲೀಕ ಅಂಬಾನಿ ಭರ್ಜರಿ ಗಿಫ್ಟ್ ವೊಂದನ್ನು ಗ್ರಾಹಕರಿಗೆ ನೀಡಲಿದ್ದಾರೆ. ಈ 500 ರೂ. 4G VoLTE ಫೀಚರ್‌ ಫೋನಿನೊಂದಿಗೆ ಪ್ರೈಮ್ ಸದಸ್ಯರಿಗಾಗಿ ಮತ್ತೊಂದು ಆಚ್ಚರಿಯ ಆಫರ್ ನೀಡಲಿದ್ದಾರೆ. ಇದರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುವ ಪ್ರಯತ್ನ ಇದಾಗಿದೆ.

ಓದಿರಿ: ನಿಮ್ಮ ಕ್ರೆಡಿಡ್, ಡೆಬಿಟ್ ನಲ್ಲಿ ಮೈಕ್ರೋ ಚಿಪ್ ಇಲ್ಲವೇ..? ಆನ್ ಲೈನ್ ಶಾಪಿಂಗ್ ಮಾಡುವಾಗ ಎಚ್ಚರ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ. 500ಕ್ಕೆ LYF Easy 4G VoLTE ಫೀಚರ್ ಫೋನ್:

ರೂ. 500ಕ್ಕೆ LYF Easy 4G VoLTE ಫೀಚರ್ ಫೋನ್:

ರಿಲಯನ್ಸ್ ತನ್ನ ಮಾಲೀಕತ್ವ LYF ಬ್ರಾಂಡಿನಡಿಯಲ್ಲಿ 4G VoLTE ಫೀಚರ್ ಫೋನ್ ಲಾಂಚ್ ಮಾಡಲಿದ್ದು, ಇದಕ್ಕೆ LYF Easy ಎಂದು ನಾಮಕರಣವನ್ನು ಮಾಡಿದೆ. ಇದನ್ನು ಜುಲೈ 21 ರಂದು ಬಿಡುಗಡೆ ಮಾಡಲಿದೆ.

ಜುಲೈ 21ರಂದು ನಡೆಯುದೇನು..?

ಜುಲೈ 21ರಂದು ನಡೆಯುದೇನು..?

ಇದೇ ಜುಲೈ 21ರಂದು ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪೆನಿಯ ವಾರ್ಷಿಕ ಮಹಾಸಭೆ ನಡೆಯಲಿದ್ದು ಅಂದೇ ಈ 500 ರೂ. 4G VoLTE ಫೀಚರ್‌ ಫೋನನ್ನು ಬಿಡುಗಡೆ ಮಾಡಲಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಮತ್ತೊಂದು ಆಫರ್ ಏನು..?

ಮತ್ತೊಂದು ಆಫರ್ ಏನು..?

ಈ ವರ್ಷ ಎಪ್ರಿಲ್‌ 11ರಿಂದ ಪ್ರಕಟಿಸಲಾಗಿದ್ದ ರಿಲಯನ್ಸ್‌ ಜಿಯೋ ದ 84 ದಿನಗಳ ಧನ್‌ ಧನಾ ಧನ್‌ ಆಫ‌ರ್‌ ಈ ತಿಂಗಳಲ್ಲಿ ಮುಗಿಯಲಿರುವುದರಿಂದ ಅಂದೇ ಹೊಸ ಟ್ಯಾರಿಫ್ ಪ್ಲಾನನ್ನು ಕೂಡ ಪ್ರಕಟಿಸುವ ಸಾಧ್ಯತೆ ಇದೆ ಮೂಲಗಳು ತಿಳಿಸಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Industries Limited chairman Mukesh Ambani may launch the new Rs 500-feature phone with 4G VoLTE during its annual meeting on July 21, the report said. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot