ಲ್ಯಾಪ್‌ಟಾಪ್ ಖರೀದಿಸಿದ ನಂತರ ಹೀಗೆ ಮಾಡಿ ಹಣವನ್ನು ಉಳಿಸಿ!

|

ಹೊಸದಾಗಿ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಖರೀದಿಸಿದ ನಂತರ ಅದರಲ್ಲಿ ಬೇಕಾದ ತಂತ್ರಾಂಶಗಳನ್ನು ಸೇರಿಸಿಕೊಳ್ಳಲು ದುಬಾರಿ ಹಣವನ್ನು ವೆಚ್ಚ ಮಾಡುತ್ತಿದ್ದರೆ ಖಂಡಿತಾ ಅದನ್ನು ಬಿಟ್ಟುಬಿಡಿ, ಏಕೆಂದರೆ, ಯಾವತ್ತೋ ಒಂದು ದಿನ ಬಳಕೆಗಾಗಿ ನಿಮಗೆ ನಿರ್ದಿಷ್ಟ ತಂತ್ರಾಂಶ ಬೇಕಾಗುತ್ತದೆಯೆಂದಾದರೆ, ಅದಕ್ಕೆ ಹಣ ಖರ್ಚು ಮಾಡಬೇಕಾಗಿಲ್ಲ ಎಂಬುದನ್ನು ತಿಳಿದುಕೊಳ್ಳಿ.

ಬೇಕಾದ ತಂತ್ರಾಂಶಗಳನ್ನು ಕಂಪ್ಯೂಟರ್ನಲ್ಲಿ ಸೇರಿಸಿಕೊಳ್ಳಲು ಆನ್‌ಲೈನ್‌ನಲ್ಲಿ ಅಂದರೆ ಅಂತರಜಾಲದಲ್ಲಿ ಸಾಕಷ್ಟು ಉಚಿತ ಸೇವೆಗಳು ಲಭ್ಯ ಇವೆ. ವೆಬ್ ಬ್ರೌಸರ್‌ನಲ್ಲಿ ಮೂಲಭೂತ ಕಾರ್ಯಗಳೆಲ್ಲವನ್ನೂ ಮಾಡುವ ಆಯ್ಕೆ ಅವುಗಳಿಂದ ನಿಮಗೆ ಸಿಗಲಿವೆ. ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಮುಂತಾದವುಗಳಿಗೆ ಸಮರ್ಥ ಪರ್ಯಾಯ ತಾಣಗಳು ಸಹ ಇವೆ.

ಲ್ಯಾಪ್‌ಟಾಪ್ ಖರೀದಿಸಿದ ನಂತರ ಹೀಗೆ ಮಾಡಿ ಹಣವನ್ನು ಉಳಿಸಿ!

ಹೀಗಿರುವಾಗ ತಂತ್ರಾಂಶಗಳನ್ನು ಸೇರಿಸಿಕೊಳ್ಳಲು ದುಬಾರಿ ಹಣವನ್ನು ವೆಚ್ಚ ಮಾಡುವುದು ನಷ್ಟವಲ್ಲದೇ ಮತ್ತಿನ್ನೇನು? ಹಾಗಾಗಿ, ಇಂದಿನ ಲೇಖನದಲ್ಲಿ ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಿರುವ ಜನಪ್ರಿಯ ತಂತ್ರಾಂಶಗಳಿಗೆ ಪರ್ಯಾಯ ಮಾರ್ಗಗಳು ಯಾವುವು ಮತ್ತು ಅವುಗಳ ಉಪಯೋಗ ಹೇಗಿರಲಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಗೂಗಲ್ ಡಾಕ್ಸ್!

ಗೂಗಲ್ ಡಾಕ್ಸ್!

ಮೈಕ್ರೋಸಾಫ್ಟ್‌ನ ಆಫೀಸ್ ತಂತ್ರಾಂಶಕ್ಕೆ ಪರ್ಯಾಯವಾಗಿ ಗೂಗಲ್ ಡಾಕ್ ಎಂಬ ಉಚಿತ ತಂತ್ರಾಂಶ ಆನ್‌ಲೈನ್‌ನಲ್ಲಿದೆ. ಇದು ಡಾಕ್ಯುಮೆಂಟ್ ಎಡಿಟಿಂಗ್‌ಗೆ ಜನಪ್ರಿಯವಾಗಿರುವ ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಮುಂತಾದವುಗಳಿಗೆ ಸಮರ್ಥ ಪರ್ಯಾಯ ತಾಣ. ಇಲ್ಲಿಯೇ ನೀವು ಸುಲಭವಾಗಿ ಬಯೋಡೇಟಾ, ಕೆಲಸದ ಪಟ್ಟಿಗಳು, ಮಾಸಿಕ ಬಜೆಟ್, ಪ್ರೆಸೆಂಟೇಶನ್ ಮುಂತಾದವುಗಳನ್ನು ರಚಿಸಬಹುದು. https://docs.google.com

ZOHO ಡಾಕ್ಸ್

ZOHO ಡಾಕ್ಸ್

ಆನ್‌ಲೈನ್‌ನಲ್ಲಿ ಎಡಿಟ್ ಮಾಡಲು ಅನುಕೂಲ ಮಾಡಿಕೊಡುತವ ಈ ಝೋಹೋ ಆಫೀಸ್ ತಂತ್ರಾಂಶದಲ್ಲಿ ಡಾಕ್ಯುಮೆಂಟ್, ಎಕ್ಸೆಲ್ ಸ್ಪ್ರೆಡ್‌ಶೀಟ್ (ಶೀಟ್), ಪ್ರೆಸೆಂಟೇಶನ್ (ಶೋ) ತಂತ್ರಾಂಶಗಳಿವೆ. ಡ್ರಾಪ್‌ಬಾಕ್ಸ್ ಹಾಗೂ ಗೂಗಲ್‌ಡ್ರೈವ್ ಇಂಟಿಗ್ರೇಶನ್ ವ್ಯವಸ್ಥೆಯೊಂದಿಗೆ 5 ಜಿಬಿ ಕ್ಲೌಡ್ ಸ್ಟೋರೇಜನ್ನು ಇದು ಉಚಿತವಾಗಿ ನೀಡುತ್ತದೆ.ಇದರಲ್ಲಿ ಸಹೋದ್ಯೋಗಿಗಳೊಂದಿಗೆ ಫೈಲ್ ಹಂಚಿಕೊಳ್ಳಬಹುದು ದೂರದಲ್ಲೇ ಕುಳಿತುಕೊಂಡೇ ಪರಸ್ಪರ ಚರ್ಚಿಸಿ ಒಂದು ಫೈಲನ್ನು ತಿದ್ದಬಹುದು. https://docs.zoho.com

ವೀಡಿಯೋ ಎಡಿಟಿಂಗ್

ವೀಡಿಯೋ ಎಡಿಟಿಂಗ್

ವೀಡಿಯೋ ಎಡಿಟಿಂಗ್ ಕಾರ್ಯಕ್ಕೆ ಯೂಟ್ಯೂಬ್‌ನಲ್ಲೇ ಒಂದು ಎಡಿಟರ್ ಇಂಟರ್ಫೇಸ್ ಇದೆ. youtube.com/editor ಲಾಗಿನ್ ಆಗಿ, ವೀಡಿಯೋ ಅಪ್‌ಲೋಡ್ ಮಾಡಿದರಾಯಿತು. ಹಲವು ವೀಡಿಯೋಗಳನ್ನು ಜೋಡಿಸಬಹುದು, ವೀಡಿಯೋವನ್ನು ಸಣ್ಣ ತುಣುಕಿಗೆ ಕತ್ತರಿಸಬಹುದು, ಎಫೆಕ್ಟ್‌ಗಳನ್ನು ಸೇರಿಸಬಹುದು. ಅಲ್ಲದೆ ವೀಡಿಯೋದ ಹಿನ್ನೆಲೆ ಸಂಗೀತವನ್ನೂ ಬದಲಾಯಿಸಬಹುದು. ನಿಮ್ಮ ವೀಡಿಯೋ ಕ್ಲಿಪ್ ಎಷ್ಟು ವೇಗವಾಗಿ ಪ್ಲೇ ಆಗಬೇಕೆಂದು ಹೊಂದಿಸುವ ವ್ಯವಸ್ಥೆಯೂ ಇಲ್ಲಿದೆ.

ಫೋಟೋ ಎಡಿಟಿಂಗ್

ಫೋಟೋ ಎಡಿಟಿಂಗ್

ಫೋಟೋ ಎಡಿಟಿಂಗ್ ಅಂದರೆ ಕ್ರಾಪ್, ಗಾತ್ರ ಬದಲಿಸುವುದು, ಬಣ್ಣ ನಿವಾರಣೆ ಮುಂತಾದವು ಮಾಡಬೇಕಿದ್ದರೆ ಅಡೋಬಿ ಫೋಟೋಶಾಪ್ ಎಕ್ಸ್‌ಪ್ರೆಸ್ (photoshop.com/tools) ಎಂಬ ಆನ್‌ಲೈನ್ ಟೂಲ್ ಬಳಸಬಹುದು. ಇದು ಉಚಿತ. ಮೂಲಭೂತ ಫೋಟೋ ತಿದ್ದುವಿಕೆಯಷ್ಟೇ ಅಲ್ಲದೆ, ಚಿತ್ರದ ಎಫೆಕ್ಟ್ ಬದಲಾವಣೆಗೂಬಳಸಬಹುದು. ಸದ್ಯಕ್ಕೆ ಜೆಪಿಇಜಿ ಫೈಲ್‌ಗಳು ಮಾತ್ರ ಕೆಲಸ ಮಾಡುತ್ತವೆ.

ಆಫೀಸ್ ಆನ್‌ಲೈನ್

ಆಫೀಸ್ ಆನ್‌ಲೈನ್

ಮೈಕ್ರೋಸಾಫ್ಟ್ ಆಫೀಸ್ ತಂತ್ರಾಂಶ ಬಳಸುತ್ತಿರುವವರಿಗೆ ಆನ್‌ಲೈನ್‌ನಲ್ಲಿ ಉಚಿತ ಆಫೀಸ್ ಸ್ಯೂಟ್ ಒದಗಿಸುವ ಟೂಲ್ ಇದಾಗಿದೆ. ಕಂಪ್ಯೂಟರಲ್ಲಿ ಮಾಡಬಹುದಾದ ಎಲ್ಲ ಕೆಲಸಗಳನ್ನು ಆನ್‌ಲೈನ್‌ನಲ್ಲಿ ಬ್ರೌಸರ್ ಮೂಲಕ ನಿಭಾಯಿಸಬಹುದು. ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್, ಒನ್‌ನೋಟ್ ಮುಂತಾದವನ್ನು ಬ್ರೌಸರಿನಲ್ಲಿಯೇ ಬಳಸಬಹುದು. ಇದಕ್ಕೆಲ್ಲ ನೀವು ನಿಮ್ಮ ಮೈಕ್ರೋಸಾಫ್ಟ್ ಖಾತೆಗೆ ಲಾಗಿನ್ ಆಗಿರಬೇಕಾಗುತ್ತದೆ. https://office.com

Pixlr ಎಡಿಟರ್

Pixlr ಎಡಿಟರ್

ಅತ್ಯಾಧುನಿಕ ಎಡಿಟಿಂಗ್ ಟೂಲ್‌ಗಳೊಂದಿಗೆ, ಫೋಟೋಗೆ ಹಲವು ಲೇಯರ್‌ಗಳ ಮೂಲಕ, ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡಬಹುದಾದ ಸಾಕಷ್ಟು ಫಿಲ್ಟರ್ ಎಫೆಕ್ಟ್‌ಗಳು ಸೇರಿದಂತೆ ವಿಭಿನ್ನ ಹೊಂದಾಣಿಕೆಗಳ ಆಯ್ಕೆ ಹೊಮದಿರುವ ಆನ್‌ಲೈನ್ ಟೂಲ್ Pixlr ಎಡಿಟರ್. ಕಂಪ್ಯೂಟರಿನಿಂದಲೇ ಅಥವಾ ಯಾವುದೇ ಯುಆರ್‌ಎಲ್ ಮೂಲಕ ಚಿತ್ರ ಅಪ್‌ಲೋಡ್ ಮಾಡಿಕೊಂಡು ಚಿತ್ರವನ್ನು ಅತ್ಯುತ್ತಮವಾಗಿ ಎಡಿಟ್ ಮಾಡಬಹುದು. https://pixlr.com/editor/

Best Mobiles in India

English summary
1 Free Online Alternatives to Popular Desktop Software ... faxZERO: A free fax tool you can use on your computer (covered more fully in Five Ways to Send a Free Fax Online). to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X