ಗೂಗಲ್‌ ಡಾಕ್ಸ್‌ಗೆ ಪರ್ಯಾಯವಾಗಿ ಲಭ್ಯವಾಗುವ 5 ಡಾಕ್ಯುಮೆಂಟ್‌ ಆಪ್‌ಗಳು!

|

ಪ್ರಸ್ತುತ ಜಮಾನದಲ್ಲಿ ಎಲ್ಲವೂ ಡಿಜಿಟಲ್‌ ಆಗಿದೆ. ಇಲ್ಲಿ ಎಲ್ಲ ಕೆಲಸವೂ ಆನ್‌ಲೈನ್ ಆಧಾರಿತವಾಗಿದೆ. ಅದರಲ್ಲು ಇವತ್ತಿನ ಸರ್ಕಾರಿ ಕಚೇರಿಗಳಿಂದ ಹಿಡಿದು, ಖಾಸಗಿ ಸಂಸ್ಥೆಗಳಲ್ಲೂ ಸಹ ಫೈಲ್‌ಗಳ ಜಾಗ ಹೋಗಿ ಗೂಗಲ್‌ಫೈಲ್‌ಗಳು ಲಗ್ಗೆ ಹಾಕಿವೆ. ಅದರಲ್ಲೂ ಬಹುತೇಕ ಎಲ್ಲಾ ಕಛೇರಿಗಳು ಇಂದು ಕಂಪ್ಯೂಟರ್‌ ಮಯವಾಗಿ ಹೋಗಿದ್ದು, ಎಲ್ಲಾ ಕಡೆ ಗೂಗಲ್‌ ಡಾಕ್ಸ್‌ ಅನ್ನೇ ಬಳಸುತ್ತಾರೆ. ಇನ್ನು ಈ ವೇಗದ ಜಗತ್ತಿನಲ್ಲಿ ಪ್ರಯಾಣದ ಸಂದರ್ಭದಲ್ಲಿಯೂ ಕಛೇರಿಯ ಕೆಲಸವನ್ನ ನಿರ್ವಹಿಸುವಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆದು ನಿಂತಿದೆ.

ಹೌದು

ಹೌದು, ಯಾವಾಗ ಗೂಗಲ್‌ ಡಾಕ್ಸ್‌ ಕಛೇರಿ ಕೆಲಸಗಳಲ್ಲಿ ಬಳಕೆಗೆ ಬಂತೂ ಅಂದಿನಿಂದಲೇ ಕೆಲಸ ಮಾಡುವ ಸ್ಥಳಗಳಿಗೆ ಎಲ್ಲೆ ಇಲ್ಲದಂತೆ ಆಗಿ ಹೋಗಿದೆ. ನೀವು ಕಚೇರಿಯಲ್ಲಿರಲಿ, ಪ್ರಯಾಣದ ಹಾದಿಯಲ್ಲಿರಲ್ಲಿ , ಪ್ರವಾಸ ಹೊರಟಿರಲಿ ಕಛೇರಿಯ ಕೆಲಸ ಮಾಡಬೇಕಾದಾಗ ಗೂಗಲ್‌ ಡಾಕ್ಸ್‌ ನಿಮಗೆ ಸಹಾಯ ಮಾಡಲಿದೆ. ಹಾಗಂತ ಕೇವಲ ಗೂಗಲ್‌ ಡಾಕ್ಸ್‌ ಮಾತ್ರ ಈ ಕೆಲಸ ನಿರ್ವಹಿಸಬಲ್ಲದು ಅನ್ನುವಾಗಿಲ್ಲ. ಯಾಕೆಂದರೆ ಗೂಗಲ್‌ ಡಾಕ್ಸ್‌ನಂತೆಯೆ ಕಾರ್ಯನಿರ್ವಹಿಸಬಲ್ಲ ಇತರೆ ಆಪ್ಲಿಕೇಶನ್ಗಳು ಕೂಡ ಇಂದು ಲಬ್ಯವಿವೆ. ಅವುಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿ.

ಮೈಕ್ರೋಸಾಫ್ಟ್ ಆಫೀಸ್ ಆನ್‌ಲೈನ್

ಮೈಕ್ರೋಸಾಫ್ಟ್ ಆಫೀಸ್ ಆನ್‌ಲೈನ್

ಇದು ಗೂಗಲ್ ಡಾಕ್ಸ್‌ಗೆ ಪರ್ಯಾಯವಾಗಿ ಉಪಯೋಗಿಸಬಹುದಾದ ಅತ್ಯುತ್ತಮ ಅಪ್ಲಿಕೇಶನ್‌ ಆಗಿದೆ. ಇದು ಗೂಗಲ್ ಡಾಕ್ಸ್‌ನ ಅಪ್ಲಿಕೇಶನ್‌ನಲ್ಲಿ ಲಬ್ಯವಿರುವ ಫಿಚರ್ಸ್‌ಗಳನ್ನ ಹೊಂದಿದೆ. ಗೂಗಲ್ ತನ್ನ ಆಫೀಸ್ ಸೂಟ್‌ನಲ್ಲಿ ಡ್ರಾಯಿಂಗ್ ಟೂಲ್ ಅನ್ನು ಹೊಂದಿದ್ದರೆ, ಮೈಕ್ರೋಸಾಫ್ಟ್‌ ಆಫೀಸ್ ಆನ್‌ಲೈನ್ ನಲ್ಲಿ ಒನ್‌ನೋಟ್ ಅನ್ನು ಕಂಪ್ಲಿಟ್‌ ನೋಟ್‌ ಮಾಡಿಕೊಡುವ ಅಪ್ಲಿಕೇಶನ್‌ ಜೊತೆಗೆ ನೀಡಿದೆ. ಇನ್ನು ಈ ಅಪ್ಲಿಕೇಶನ್‌ ನಲ್ಲಿ ಸಂಗ್ರಹಿಸಲಾಗುವ ಎಲ್ಲಾ ಡಾಕ್ಯುಮೆಂಟ್‌ಗಳು ಮೈಕ್ರೋಸಾಫ್ಟ್ ಒನ್‌ಡ್ರೈವ್‌ನಲ್ಲಿ ಶೇಖರಣೆ ಆಗಲಿದೆ.

ಗ್ರ್ಯಾಫೈಟ್ ಡಾಕ್ಸ್

ಗ್ರ್ಯಾಫೈಟ್ ಡಾಕ್ಸ್

ಇನ್ನು ಗ್ರ್ಯಾಫೈಟ್ ಡಾಕ್ಸ್ ಅಪ್ಲಿಕೇಶನ್ ಬ್ಲಾಕ್‌ಚೈನ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಇದನ್ನು ಬಳಸುವುದು ತುಂಬಾ ಸುಲಭವಾಗಿದ್ದು, ಇದು ಡಯರೆಕ್ಟ್‌ ಕಂಟ್ರೋಲ್‌ ಮತ್ತು ಕಮ್ಯೂನಿಕೇಶನ್‌ ಡಿಸೈನ್‌ ಜೊತೆಗೆ ಇಂಟರ್ಫೇಸ್ ಅನ್ನು ಹೊಂದಿದೆ. ಇನ್ನು ಈ ಅಪ್ಲಿಕೇಶನ್ ಉಚಿತ ಆವೃತ್ತಿಯಲ್ಲಿ ಮೂರು ಅಥವಾ ನಾಲ್ಕು ಫಾಂಟ್‌ಗಳನ್ನು ಮಾತ್ರ ನೀಡುತ್ತದೆ. ಸೈನ್ ಇನ್ ಮಾಡಲು ಗ್ರ್ಯಾಫೈಟ್ ಡಾಕ್ಸ್ ಬ್ಲಾಕ್‌ಸ್ಟ್ಯಾಕ್ ಅನ್ನು ಬಳಸುತ್ತದೆ ಮತ್ತು ಫೈಲ್ ವಾಲ್ಟ್ ಅನ್ನು ನೀಡುತ್ತದೆ, ಅಂದರೆ ಬ್ಲಾಕ್‌ಚೈನ್-ಬೆಂಬಲಿತ ಸ್ಟೋರೇಜ್‌ ಡ್ರೈವ್, ಅಲ್ಲಿ ನೀವು ಎನ್‌ಕ್ರಿಪ್ಟ್ ಮಾಡಿದ ದಾಖಲೆಗಳನ್ನು ಸಂಗ್ರಹಿಸಬಹುದು.

ಕ್ವಿಪ್

ಕ್ವಿಪ್

ಇದು ಒಂದು ಫ್ರಿ ಆಗಿ ಲಬ್ಯವಾಗುವ ಅಪ್ಲಿಕೇಶನ್‌ ಆಗಿದೆ. ಇದು ಪಿಸಿ, ಟ್ಯಾಬ್ಲೆಟ್‌ಗಳು ಮತ್ತು ಮೊಬೈಲ್ ಫೋನ್‌ಗಳು ಸೇರಿದಂತೆ ನಿಮ್ಮ ಎಲ್ಲಾ ಡಿವೈಸ್‌ಗಳಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಅಲ್ಲದೆ ಇದರಲ್ಲಿ ಬಳಕೆದಾರರ ಇಂಟರ್ಫೇಸ್‌ಗೆ ಸಂಬಂಧಿಸಿದಂತೆ, ಅಪ್ಲಿಕೇಶನ್ ಮಿನಿಂಗ್‌ ಫೂಲ್‌ ಕಾರ್ಯವನ್ನು ಮಾಡಲಿದೆ. ಜೊತೆಗೆ ಇದರಲ್ಲಿ ಎಲ್ಲಾ ರೀತಿಯ ದಾಖಲೆಗಳು ಚಾಟ್ ವಿಭಾಗದಲ್ಲಿ ಬರಲಿದೆ. ಡಾಕ್ಯುಮೆಂಟ್‌ ಕ್ರಿಯೆಟ್‌ ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಕೂಡ ಮಾಡಬಹುದು, ಆದರೆ ಚಾಟ್‌ ಮಾಡುವ ಮತ್ತು ಡಿಬೆಟ್ ಮಾಡಬೇಕಾದರೆ ಇಂಟರ್‌ನೆಟ್‌ ಕನೆಕ್ಟಿವಿಟಿ ಇರಲೇಬೇಕಾಗಿರುತ್ತದೆ. ಇನ್ನು ಈ ಅಪ್ಲಿಕೇಶನ್‌ನ ದೊಡ್ಡ ಉಪಯೋಗವೆಂದರೆ ಡಿವೈಸ್‌ಗಳಲ್ಲಿ ಸಿಂಕ್ ಮಾಡುವ ಸಾಮರ್ಥ್ಯ ಮತ್ತು ನಿರ್ದಿಷ್ಟ ವ್ಯಕ್ತಿಯೊಂದಿಗೆ ಇತರ ವ್ಯಕ್ತಿಯೊಂದಿಗೆ ಚಾಟ್ ಮಾಡುವ ಸೌಲಭ್ಯ ಅತ್ಯುತ್ತಮ ವಾಗಿದೆ.

ಪೇಪರ್‌ ಬೈ ಡ್ರಾಪ್‌ಬಾಕ್ಸ್‌

ಪೇಪರ್‌ ಬೈ ಡ್ರಾಪ್‌ಬಾಕ್ಸ್‌

ಗೂಗಲ್‌ ಡಾಕ್ಸ್‌ಗೆ ಪರ್ಯಾಯವಾಗಿ ಬಳಸಬಲ್ಲ ಅತ್ಯುತ್ತಮ ಅಪ್ಲಿಕೇಶನ್‌ಗಳಲ್ಲಿ ಇದು ಕೂಡ ಒಂದಾಗಿದೆ. ಇದು ಡಾಕ್ಯುಮೆಂಟ್‌ ಕ್ರಿಯೆಟ್‌ ಮಾಡುವುದರ ಜೊತೆಗೆ ಸ್ಪ್ರೆಡ್‌ಶೀಟ್‌ಗಳು, ಇಮೇಜ್‌ಗಳು ಮತ್ತು ಡ್ರಾಪ್‌ಬಾಕ್ಸ್ ಫೈಲ್‌ಗಳಿಗೆ ಲಿಂಕ್‌ಗಳನ್ನು ಸೇರಿಸಲು ಈ ಅಪ್ಲಿಕೇಶನ್ ಬಳಕೆದಾರರಿಗೆ ಅವಕಾಶ ಕಲ್ಪಿಸುತ್ತದೆ. ಇದಲ್ಲದೆ, ಇತರೆ ಡ್ರಾಪ್‌ಬಾಕ್ಸ್ ಬಳಕೆದಾರರನ್ನು ನಿವು ನೇರವಾಗಿ ಟ್ಯಾಗ್ ಮಾಡಬಹುದಾಗಿದೆ. ಇನ್ನು ಇದರಲ್ಲಿ ನಿವು ಕ್ರಿಯೆಟ್‌ ಮಾಡಬೇಕದಾ ಪೈಲ್‌ಗಲ ಪಟ್ಟಿಗಳು, ಕ್ಯಾಲೆಂಡರ್ ಟೈಮ್‌ಲೈನ್‌ಗಳು ಸೇರಿಸ ಬಹುದಾಗಿದೆ. ಅಲ್ಲದೆ ಇದರಲ್ಲಿ ನಿಮ್ಮ ಕಾಮೆಂಟ್‌ಗಲನ್ನು ಸಹ ಸೇರಿಸಬಹುದಾಗಿದೆ.

ಕ್ರಿಪ್ಟ್‌ಪ್ಯಾಡ್

ಕ್ರಿಪ್ಟ್‌ಪ್ಯಾಡ್

ಕ್ರಿಪ್ಟ್‌ಪ್ಯಾಡ್ ಎನ್ನುವುದು ಪಠ್ಯಟೆಕ್ಸ್ಟ್ ಡಾಕ್ಯುಮೆಂಟ್‌ ಮತ್ತು ಪ್ರಸ್ತುತ ವಿಚಾರಗಳನ್ನ ಒಳಗೊಂಡ ಅಪ್ಲಿಕೇಶನ್ ಆಗಿದೆ. ಇದು ನೀವು ಸುಲಭವಾಗಿ ಬಳಸಬಹುದಾದ ಆನ್‌ಲೈನ್ ಅಪ್ಲಿಕೇಶನ್‌ಗಳ ಒದು ಯೂನಿಟ್‌ ಆಗಿದೆ. ಗುಂಪಾಗಿದೆ. ಇದನ್ನು ಬಳಸುವವರು ಆನ್‌ಲೈನ್ ಡಾಕ್ಯುಮೆಂಟ್ ರಚಿಸಲು ಸೈನ್ ಅಪ್ ಮಾಡಬೇಕಾಗಿಲ್ಲ. ಅಲ್ಲದೆ ಇದರಲ್ಲಿರುವ ಎಡಿಟಿಂಗ್ ಟೂಲ್ಸ್‌ ಗೂಗಲ್ ಡಾಕ್ಸ್‌ನಲ್ಲಿರುವಂತೆಯೇ ಇರುತ್ತವೆ. ಆದರೆ ಗೂಗಲ್ ಡಾಕ್ಸ್‌ನಲ್ಲಿ ಲಭ್ಯವಿಲ್ಲದ ಫೀಚರ್ಸ್‌ ಒಂದು ಇದರಲ್ಲಿ ಲಭ್ಯವಿದೆ. ಅದೆಂದರೆ ಒಂದು ಡಾಕ್ಯುಮೆಂಟ್ ಅನ್ನು ಮತ್ತೊಂದು ಡಾಕ್ಯುಮೆಂಟ್ ಅಥವಾ ಬ್ಲಾಗ್‌ನಲ್ಲಿ ಲಿಂಕ್ ಮಾಡುವ ಅಥವಾ ಎಂಬೆಡ್ ಮಾಡುವ ಆಯ್ಕೆಯಾಗಿದೆ. ಹೆಸರೇ ಸೂಚಿಸುವಂತೆ, ಕ್ರಿಪ್ಟ್‌ಪ್ಯಾಡ್‌ನಲ್ಲಿನ ಡಾಕ್ಯುಮೆಂಟ್‌ಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ ಮತ್ತು ಎನ್‌ಕ್ರಿಪ್ಶನ್ ಕೀಲಿಗಳನ್ನು ಬಳಸಿ ಮಾತ್ರ ಪ್ರವೇಶಿಸಬಹುದು.

Best Mobiles in India

English summary
Bored of Google Docs? Try these text editors for on-the-go editing, writing and collaborating.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X