ವಿಶ್ವದಲ್ಲಿಯೇ ಅತೀ ಹೆಚ್ಚು ಬಳಸುವ ಟಾಪ್ 5 ವೆಬ್‌ಸೈಟ್‌ಗಳು!

|

ಪ್ರಸ್ತುತ ಬಹುತೇಕ ಎಲ್ಲ ಕೆಲಸಗಳು ಇಂಟರ್ನೆಟ್ ಆಧಾರಿತವಾಗಿವೆ. ಆನ್‌ಲೈನ್‌ನ ಪ್ರತಿಯೊಂದು ಸೇವೆಗಳಿಗೂ ಪ್ರತ್ಯೇಕ ವೆಬ್‌ಸೈಟ್‌ಗಳಿವೆ ಹಾಗೂ ಏನೇ ಮಾಹಿತಿ ಬೇಕಿದ್ದರೂ ಮೊದಲು ನೆನಪಾಗುವುದೇ ಗೂಗಲ್. ಹೀಗಾಗಿ ಇಂಟರ್ನೆಟ್ ಬಳಕೆ ಇಲ್ಲದೇ ಇರುವುದು ಕಷ್ಟ ಅನಿಸುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ತಮ್ಮ ಸೇವೆಗಳನ್ನು ಪಡೆಯಲು ಬಳಕೆದಾರರು ಕೆಲವೊಂದು ವೆಬ್‌ಸೈಟ್‌ಗಳಿಗೆ ಪದೇ ಪದೇ ಭೇಟಿ ನೀಡುವ ಅಗತ್ಯ ಇರುತ್ತದೆ.

ಇಂಟರ್ನೆಟ್ ಬಳಕೆದಾರರು

ಹೌದು, ಇಂಟರ್ನೆಟ್ ಬಳಕೆದಾರರು ಬುಕ್ಕಿಂಗ್, ಆರ್ಡರ್, ಸರ್ಕಾರಿ, ಖಾಸಗಿ, ಆಸಕ್ತಿ ವಿಷಯ ಹೀಗೆ ಯಾವುದೇ ಅಗತ್ಯ ಸೇವೆಗಳನ್ನು ಪಡೆಯಲು ಅದಕ್ಕೆ ಸಂಬಂಧಿಸಿದ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಾರೆ. ಆದರೆ ಈ ಎಲ್ಲ ವೆಬ್‌ಸೈಟ್‌ಗಳಿಗೆ ಅಧಿಕವಾಗಿ ಭೇಟಿ ನೀಡುವ ಸಾಧ್ಯತೆಗಳು ವಿರಳ. ಆದರೆ ಗೂಗಲ್ ಸೇರಿದಂತೆ ಇನ್ನು ಕೆಲವು ವೆಬ್‌ಸೈಟ್‌ಗಳಿವೆ ಅವುಗಳಿಗೆ ಖಂಡಿತಾ ಹೆಚ್ಚು ಬಾರಿ ಭೇಟಿ ನೀಡುತ್ತಲೆ ಇರುತ್ತಾರೆ. 2019ರಲ್ಲಿ ಬಳಕೆದಾರರು ಹೆಚ್ಚಾಗಿ ಭೇಟಿ ನೀಡಿದ ಪ್ರಮುಖ ವೆಬ್‌ಸೈಟ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಗೂಗಲ್

ಗೂಗಲ್

ವಿಶ್ವ ಸರ್ಚ್ ದೈತ್ಯ ಎಂದೇ ಗುರುತಿಸಿಕೊಂಡಿರುವ ಗೂಗಲ್ ಹೆಚ್ಚು ವೀಕ್ಷಣೆ ಪಡೆದ ವೆಬ್‌ಸೈಟ್‌ಗಳ ಪೈಕಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಬಳಕೆದಾರರಿಗೆ ಯಾವುದೇ ವಿಷಯಕ್ಕೆ ಮಾಹಿತಿ ಬೇಕಿದ್ದರೂ ಮೊದಲು ಭೇಟಿ ನೀಡುವ ತಾಣವೇ ಗೂಗಲ್.

ಯೂಟ್ಯೂಬ್

ಯೂಟ್ಯೂಬ್

ಯೂಟ್ಯೂಬ್ ವೆಬ್‌ಸೈಟ್ ಸಹ ಗೂಗಲ್ ಒಡೆತನದ್ದೆ ಆಗಿದೆ. ಯೂಟ್ಯೂಬ್ ವಿಡಿಯೊ ಮತ್ತು ಆಡಿಯೊ ರೂಪದ ಮಾಹಿತಿ ಕಣಜ ಆಗಿದೆ. ಇಲ್ಲಿ ಎಲ್ಲ ಬಗೆಯ ವಿಡಿಯೊ ಕಂಟೆಂಟ್ ಬಳಕೆದಾರರಿಗೆ ಲಭ್ಯವಾಗುತ್ತದೆ. ಹೆಚ್ಚು ಭೇಟಿ ಪಡೆದ ವೆಬ್‌ಸೈಟ್‌ಗಳ ಪೈಕಿ ಯೂಟ್ಯೂಬ್ ಎರಡನೇ ಸ್ಥಾನದಲ್ಲಿ ಇದೆ.

ಫೇಸ್‌ಬುಕ್

ಫೇಸ್‌ಬುಕ್

ವಿಶ್ವದ ಅತೀ ಜನಪ್ರಿಯ ಸಾಮಾಜಿಕ ಜಾಲತಾಣ ಆಗಿರುವ ಫೇಸ್‌ಬುಕ್, ಹೆಚ್ಚು ಭೇಟಿ ಪಡೆದ ವೆಬ್‌ಸೈಟ್‌ಗಳ ಪೈಕಿ ಮೂರನೇ ಸ್ಥಾನದಲ್ಲಿ ಇದೆ. ಫೇಸ್‌ಬುಕ್ ತಾಣವು ಟೆಕ್ಸ್ಟ್, ಫೋಟೊ, ವಿಡಿಯೊ, ಕಂಟೆಂಟ್ ನಂತಹ ಅತ್ಯುತ್ತಮ ಮಲ್ಟಿಮೀಡಿಯಾ ಪ್ಲಾಟ್‌ಫಾರ್ಮ್ ಆಗಿದೆ.

ಬೈದು- Baidu

ಬೈದು- Baidu

ಬೈದು ಚೀನಾ ಮೂಲದ ವೆಬ್‌ಸೈಟ್ ಆಗಿದ್ದು, ಇಂಟರ್ನೆಟ್ ಸಂಬಂಧಿತ ಸೇವೆಗಳನ್ನು ಪೂರೈಸುತ್ತದೆ. ಹೆಚ್ಚು ಭೇಟಿ ಪಡೆದ ವೆಬ್‌ಸೈಟ್‌ಗಳ ಪೈಕಿ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಕೃತಕ ಬುದ್ಧಿಮತ್ತೆ ಸಾಮರ್ಥ್ಯವನ್ನು ಒಳಗೊಂಡಿದೆ.

ವಿಕಿಪಿಡಿಯಾ

ವಿಕಿಪಿಡಿಯಾ

ವಿಕಿಪಿಡಿಯಾ ವೆಬ್‌ಸೈಟ್ ಸಹ ಎಲ್ಲ ಮಾಹಿತಿಯ ಒಳಗೊಂಡ ಒಂದು ವಿಶ್ವಕೋಶ ಆಗಿದೆ. ಬಳಕೆದಾರರು ಈ ಪ್ಲಾಟ್‌ಫಾರ್ಮ್‌ನಿಂದ ಮಾಹಿತಿ ಪಡೆಯಲುಬಹುದು ಮತ್ತು ಗೊತ್ತಿರುವ ಹೆಚ್ಚುವರಿ ಮಾಹಿತಿ ಸೇರಿಸಲು ಬಳಕೆದಾರರಿಗೆ ಅವಕಾಶ ನೀಡಿದೆ.

Best Mobiles in India

English summary
These are most-visited websites across the world in 2019.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X