ಏರ್ ಟೆಲ್ ನಲ್ಲಿ 5 ಹೊಸ ಸ್ಮಾರ್ಟ್ ರೀಚಾರ್ಜ್ ಪ್ಲಾನ್ ಗಳು

|

ದೇಶದ ಎರಡನೇ ಅತೀ ದೊಡ್ಡ ಟೆಲಿಕಾಂ ಪ್ರೊವೈಡರ್ ಆಗಿರುವ ಏರ್ ಟೆಲ್ 5 ಹೊಸ ಪ್ರೀಪೇಯ್ಡ್ ಪ್ಲಾನ್ ಗಳನ್ನು ಪರಿಚಯಿಸುತ್ತಿದ್ದು ಸ್ಮಾರ್ಟ್ ರೀಚಾರ್ಜ್ ಕೆಟಗರಿಯಲ್ಲಿ ಅದನ್ನು ಬಿಡುಗಡೆಗೊಳಿಸುತ್ತಿದೆ. ಇದರಲ್ಲಿ ರೀಚಾರ್ಜ್ ಪ್ಲಾನ್ ಗಳಾದ Rs 34, Rs 64, Rs 94, Rs 144 ಮತ್ತು Rs 244 ಗಳು ಒಳಗೊಂಡಿದೆ. ಇದು ಅತ್ಯಂತ ಹೆಚ್ಚು ಅಂದರೆ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಏರ್ ಟೆಲ್ ನಲ್ಲಿ 5 ಹೊಸ ಸ್ಮಾರ್ಟ್ ರೀಚಾರ್ಜ್ ಪ್ಲಾನ್ ಗಳು

ಸ್ಮಾರ್ಟ್ ರೀಚಾರ್ಜ್ ಪ್ಲಾನ್ ಗಳನ್ನು ಮೊದಲ ಬಾರಿಗೆ ಕಳೆದ ಸೆಪ್ಟೆಂಬರ್ ನಲ್ಲಿ ಪರಿಚಯಿಸಲಾಯಿತು ಮತ್ತು ಅತೀ ಹೆಚ್ಚು ಅಂದರೆ 84 ದಿನಗಳ ವ್ಯಾಲಿಡಿಟಿಯನ್ನು ಆಫರ್ ಮಾಡಲಾಯಿತು. ಇಲ್ಲಿ ನಾವು ಹೊಸದಾಗಿ ಸೇರಿಕೊಂಡಿರುವ ಎಲ್ಲಾ ಪ್ಲಾನ್ ಗಳ ವಿವರ ಮತ್ತು ಅದರ ಬೆನಿಫಿಟ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ.

ಏರ್ ಟೆಲ್ ಸ್ಮಾರ್ಟ್ ರೀಚಾರ್ಜ್ ರುಪಾಯಿ 34

ಏರ್ ಟೆಲ್ ಸ್ಮಾರ್ಟ್ ರೀಚಾರ್ಜ್ ರುಪಾಯಿ 34

ಎಲ್ಲಾ 5 ಪ್ಲಾನ್ ಗಳಲ್ಲಿ ಅತ್ಯಂತ ಕಡಿಮೆಯದ್ದೇ ಇದಾಗಿದ್ದು, ಈ ಪ್ಲಾನ್ ನ ಅಡಿಯಲ್ಲಿ ಬಳಕೆದಾರರು 100ಎಂಬಿ ಡಾಟಾ ಮತ್ತು 25.66 ಟಾಕ್ ಟೈಮ್ ನ್ನು ಪಡೆಯಲಿದ್ದಾರೆ. ಇದು 25 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಮತ್ತು ಹೋಮ್ ನೆಟ್ ವರ್ಕ್ ನಿಂದ ಔಟ್ ಗೋಯಿಂಗ್ ಕರೆಗಳಿಗೆ 2.5 ಪೈಸೆ ಪ್ರತಿ ಸೆಕೆಂಡ್ ಗೆ ಚಾರ್ಜ್ ಮಾಡಲಾಗುತ್ತದೆ.

ಏರ್ ಟೆಲ್ ಸ್ಮಾರ್ಟ್ ರೀಚಾರ್ಜ್ ರೂಪಾಯಿ 64

ಏರ್ ಟೆಲ್ ಸ್ಮಾರ್ಟ್ ರೀಚಾರ್ಜ್ ರೂಪಾಯಿ 64

ಯಾವ ಬಳೆಕೆದಾರರು ಏರ್ ಟೆಲ್ ಸ್ಮಾರ್ಟ್ ರೀಚಾರ್ಜ್ ರೂಪಾಯಿ 64 ಪ್ಲಾನ್ ಹಾಕಿಸಿಕೊಳ್ಳುತ್ತಾರೋ ಅವರು 200 ಎಂಬಿ ಡಾಟಾ ಪಡೆಯುತ್ತಾರೆ ಮತ್ತು ಹೋಮ್ ನೆಟ್ ವರ್ಕ್ ನಲ್ಲಿನ ಔಟ್ ಗೋಯಿಂಗ್ ಕರೆಗಳಿಗೆ ಪ್ರತಿ ಸೆಕೆಂಡ್ ಗೆ 1 ಪೈಸೆ ಚಾರ್ಜ್ ಬೀಳಲಿದೆ. 54 ರುಪಾಯಿ ಟಾಕ್ ಟೈಮ್ ಮತ್ತು 28 ದಿನಗಳ ವ್ಯಾಲಿಡಿಟಿ ಇದರ ಅಡಿಯಲ್ಲಿ ಗ್ರಾಹಕರು ಪಡೆದುಕೊಳ್ಳಲಿದ್ದಾರೆ.

ಏರ್ ಟೆಲ್ ಸ್ಮಾರ್ಟ್ ರೀಚಾರ್ಜ್ ರೂಪಾಯಿ 94

ಏರ್ ಟೆಲ್ ಸ್ಮಾರ್ಟ್ ರೀಚಾರ್ಜ್ ರೂಪಾಯಿ 94

ಈ ಪ್ಲಾನ್ 500ಎಂಬಿ ಡಾಟಾ ಮತ್ತು 94 ರುಪಾಯಿ ಟಾಕ್ ಟೈಮ್ ನ್ನು ನೀಡಲಿದೆ. 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರಲಿದೆ.ಹೋಮ್ ನೆಟ್ ವರ್ಕ್ ನ ಔಟ್ ಗೋಯಿಂಗ್ ಕರೆಗಳಿಗೆ 30 ಪೈಸೆ ಪ್ರತಿ ನಿಮಿಷಕ್ಕೆ ಚಾರ್ಜ್ ಮಾಡಲಾಗುತ್ತದೆ.

ಏರ್ ಟೆಲ್ ಸ್ಮಾರ್ಟ್ ರೀಚಾರ್ಜ್ ರೂಪಾಯಿ 144

ಏರ್ ಟೆಲ್ ಸ್ಮಾರ್ಟ್ ರೀಚಾರ್ಜ್ ರೂಪಾಯಿ 144

ರುಪಾಯಿ 144 ಸ್ಮಾರ್ಟ್ ರೀಚಾರ್ಜ್ ಪ್ಲಾನ್ 42 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಬಳಕೆದಾರರು ಇದರಲ್ಲಿ 144 ರುಪಾಯಿಯ ಟಾಕ್ ಟೈಮ್ ಪಡೆಯಲಿದ್ದಾರೆ ಮತ್ತು 1ಜಿಬಿ ಡಾಟಾ ಪಡೆಯುತ್ತಾರೆ. ಔಟ್ ಗೋಯಿಂಗ್ ಕರೆಗಳಿಗೆ 30 ಪೈಸೆ ಪ್ರತಿ ನಿಮಿಷಕ್ಕೆ ಚಾರ್ಜ್ ಮಾಡಲಾಗುತ್ತದೆ.

ಏರ್ ಟೆಲ್ ಸ್ಮಾರ್ಟ್ ರೀಚಾರ್ಜ್ ರೂಪಾಯಿ 244

ಏರ್ ಟೆಲ್ ಸ್ಮಾರ್ಟ್ ರೀಚಾರ್ಜ್ ರೂಪಾಯಿ 244

ಈ ಪ್ಲಾನ್ ನ ಅಡಿಯಲ್ಲಿ 2ಜಿಬಿ ಡಾಟಾ ಬಳಕೆದಾರರಿಗೆ ಲಭ್ಯವಾಗುತ್ತದೆ ಮತ್ತು 30 ಪೈಸೆ ಪ್ರತಿ ನಿಮಿಷಕ್ಕೆ ಚಾರ್ಜ್ ಮಾಡಲಾಗುತ್ತದೆ.84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ ಮತ್ತು 244 ರುಪಾಯಿಯ ಟಾಕ್ ಟೈಮ್ ನ್ನು ಗ್ರಾಹಕರು ಪಡೆಯುತ್ತಾರೆ.

Best Mobiles in India

Read more about:
English summary
5 new Airtel Smart Recharge plans introduced, starts as low as Rs 34

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X