Subscribe to Gizbot

ಪಾತಾಳಕ್ಕೆ ಬಿದ್ದ ಜಿಯೋ!..ಸಿಮ್ ಖರೀದಿ ಶೇ 50 ಕ್ಕಿಂತ ಕಡಿಮೆ!! ಕಾರಣಗಳೇನು?

Written By: Bhaskar N J

ಜಿಯೋ ಸಿಮ್ ಖರೀದಿಮಾಡುವವರ ಸಂಖ್ಯೆಯಲ್ಲಿ ಶೇಕಡ 50% ಕ್ಕಿಂತ ಕಡಿಮೆಯಾಗಿದೆ!! ಹೌದು, ಇತ್ತೀಚಿಗಷ್ಟೆ ಬಿಡುಗಡೆಯಾದ ವರದಿಯೊಂದರ ಪ್ರಕಾರ ಈ ಮಾಹಿತಿ ಹೊರಬಿದ್ದಿದೆ.

ಉಚಿತ ಕರೆ ಮತ್ತು ಡಾಟಾ ನೀಡಿ ಇಡೀ ದೇಶದ ಜನರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದದೆ ಎಂದು ಭಾವಿಸಿದ ಜಿಯೋ, ಖರೀದಿಯಲ್ಲಿ ಹೀಗೆ ಏಕಾಏಕಿ ಪಾತಾಳಕ್ಕೆ ಬಿದ್ದಿರುವುದು ಟೆಲಿಕಾಂ ಮಾರುಕಟ್ಟೆಯಲ್ಲಿ ಕುತೋಹಲ ಮೂಡಿಸಿದೆ.ಹಾಗಾದರೆ ಮುಖೆಶ್ ಅಂಬಾನಿಯವರ ಕನಸಿನ ಕೂಸು ಜಿಯೋ ಬಿದ್ದುಹೊಗುತ್ತದೆಯೆ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಮುಂದೆ ಓದಿ

ಜಿಯೋ ಯಕ್ಷಪ್ರಶ್ನೆಗೆ ಉತ್ತರ!..ಇದು ವೆಲ್‌ಕಮ್‌ ಆಫರ್ ಅಲ್ಲ ವೆಲ್‌ಕಮ್‌ ಆಫರ್ 2!!

ಉಚಿತ ಕರೆ ಮತ್ತು ಡಾಟಾ ನೀಡಿದರೂ ಸಹ ಜಿಯೊ ಖರೀದಿ ಮಾಡುವಲ್ಲಿ ಗ್ರಾಹಕರು ನಿರಾಸಕ್ತಿ ಯಾಕೆ ತೋರಿದ್ದಾರೆ? ಎಂದು ನೋಡಿದರೆ. ಜಿಯೋ ಸಿಮ್ ಖರೀದಿಮಾಡುವವರ ಸಂಖ್ಯೆ ಕಡಿಮೆಯಾಗಲು ಹಲವು ಕಾರಣಗಳು ನಮಗೆ ಸಿಗುತ್ತವೆ. ಅವುಗಳು ಯಾವುವು ಎಂದು ಕೆಳಗಿನ ಸ್ಲೈಡರ್‌ ಮೂಲಕ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಟು ರದ್ದು ಮೊದಲ ಕಾರಣ!!

ನೋಟು ರದ್ದು ಮೊದಲ ಕಾರಣ!!

ನಿವು ಇದನ್ನು ನಂಬಲೇಬೇಕು. 1000 ಮತ್ತು 500 ರೂಪಾಯಿ ನೋಟುಗಳು ರದ್ದಾದ ನಂತರ ಭಾರತದಲ್ಲಿ ಖರೀದಿಯ ಬರಾಟೆ ಕಡಿಮೆಯಾಯಿತು. ಹಣದ ಅಭಾವ ಎಲ್ಲಿ ಎದುರಿಬೇಕಾಗುತ್ತದೆ ಎಂದು ಸಾಮಾನ್ಯ ಜನರು ಏನನ್ನು ಸಹ ಕೊಳ್ಳುವ ಗೋಜಿಗೆ ಹೋಗಲಿಲ್ಲ. ಹಾಗಾಗಿ ಇದರ ಬಿಸಿ ಜಿಯೊಗೂ ಕೂಡ ತಟ್ಟಿತು ಎನ್ನಬಹುದು.

ಜಿಯೋ ಕ್ಯೂ ಬ್ಯಾಂಕ್‌ ಕಡೆ.

ಜಿಯೋ ಕ್ಯೂ ಬ್ಯಾಂಕ್‌ ಕಡೆ.

1000 ಮತ್ತು 500 ರೂಪಾಯಿ ನೋಟು ಬ್ಯಾನ್ ಆಗುವುದಕ್ಕಿಂತ ಮೊಛೆ ಜಿಯೋ ಸಿಮ್‌ತೆಗೆದುಕೊಳ್ಳಲು ಜನರು ಜಿಯೋ ಸ್ಟೋರ್‌ಗಳ ಮುಂದೆ ಸಾಲುಗಟ್ಟಿ ನಿಂತಿದ್ದರು!!. ನಂತರ ಹಳೆಯನೋಟುಗಳನ್ನು ಬದಲಾಯಿಸಿಕೊಳ್ಳುವ ಚಿಂತೆಯಲ್ಲಿ ಜಿಯೋ ಆಸೆ ಕೈಬಿಟ್ಟರು!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೆಲ್‌ಕಮ್‌ 2 ಆಫರ್!!

ವೆಲ್‌ಕಮ್‌ 2 ಆಫರ್!!

ಜಿಯೋ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ತನ್ನ ಫ್ರೀ ಆಫರ್ ಮುಂದುವರೆಸುವ ಸೂಚನೆಗಳನ್ನು ನೀಡಿತು. ಮೊದಲ ವೆಲ್‌ಕಮ್‌ ಆಫರ್ ಪಡೆದವರಿಗೆ ಹೊಸದಾಗಿ ನೀಡುತ್ತಿರುವ ವೆಲ್‌ಕಮ್‌ ಆಫರ್ ಇಲ್ಲ ಎಂದು ತಿಳಿದಿದ್ದರಿಂದ ಜನರು ಎರಡನೇ ವೆಲ್‌ಕಮ್‌ ಆಫರ್ ಬರುವುದನ್ನು ಕಾಯುತ್ತಿರಬಹುದು.

ಜಿಯೋ ಸಿಮ್ ಉಪಯೋಗದ ಸಮಸ್ಯೆ.

ಜಿಯೋ ಸಿಮ್ ಉಪಯೋಗದ ಸಮಸ್ಯೆ.

ಜಿಯೋ ಸಿಮ್ ತೆಗೆದುಕೊಂಡರೂ ಅದರಿಂದ ನಮಗೆ ಸಮರ್ಪಕ ಉಪಯೋಗವಿಲ್ಲ . ಇತರ ಟೆಲಿಕಾಂಗಳಿಗೆ ಹನ ಪಾವತಿಸಿದರೂ ಕೂಡ ಕೇವಲ ಫ್ರೀ ಡಾಟಾ ಪಡೆಯಲು ನೆಟ್‌ವರ್ಕ್, ಕಾಲ್‌ಡ್ರಾಪ್ ತೊಂದರೆಯ ಸಕಿರಿಕಿರಿ ಸಹಿಸಲು ಸಾಧ್ಯವಿಲ್ಲಾ ಎಂದು ಗ್ರಾಹಕರು ಜಿಯೋ ಬಿಟ್ಟು ದೂರ ನಿಂತಿದ್ದಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here are some of the reasons that are responsible for the drop in the Reliance Jio subscription rate by around 50 percent. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot