ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್‌ ಖರೀದಿಗೆ ಮುನ್ನ ತಿಳಿಯಲೇಬೇಕಾದ 5 ಅಂಶಗಳು!

By Suneel
|

ದಿಪಾವಳಿ ಆಫರ್ ಮುಗಿಯುತ್ತಾ ಇದ್ದಾಹಾಗೆ, ಈಗ ನವೆಂಬರ್‌ನಲ್ಲಿ 'ಕನ್ನಡ ರಾಜ್ಯೋತ್ಸವ' ಆಫರ್ 'ಗ್ಯಾಜೆಟ್‌, ಸ್ಮಾರ್ಟ್‌ಫೋನ್‌' ಖರೀದಿದಾರರಿಗೆ ಆನ್‌ಲೈನ್‌ ಮತ್ತು ರೀಟೇಲ್‌ ತಾಣಗಳಲ್ಲಿ ಸಿಗಬಹುದು. ಅಂದಹಾಗೆ ನವೆಂಬರ್‌ನಲ್ಲೂ ಸಹ ಆನ್‌ಲೈನ್ ತಾಣಗಳಲ್ಲಿ ಖರೀದಿಯಲ್ಲಿ ಟ್ರಾಫಿಕ್‌ ಉಂಟಾಗುವಲ್ಲಿ ಸಂಶಯವಿಲ್ಲ.

ಆನ್‌ಲೈನ್‌ ಖರೀದಿದಾರರು ಆಫರ್‌ ಮತ್ತು ಡಿಸ್ಕೌಂಟ್ ಎಂದ ತಕ್ಷಣ ಹಲವು ಗ್ಯಾಜೆಟ್ ಮತ್ತು ಸ್ಮಾರ್ಟ್‌ಫೋನ್‌(Smartphone) ಖರೀದಿಸಲು ಆನ್‌ಲೈನ್‌ ಮೊರೆ ಹೋಗುವದೇ ಹೆಚ್ಚು. ಆದ್ರೆ ಬಹುಸಂಖ್ಯಾತರು ಒಮ್ಮೆಯೂ ಸಹ ಎದುರಾಗುವ ಸಮಸ್ಯೆಗಳನ್ನು ಪರಿಗಣಿಸದೇ, ಚೆಕ್‌ ಮಾಡದೇ ಆನ್‌ಲೈನ್‌ ಬುಕ್‌ ಮಾಡುತ್ತಾರೆ.

ದಿಪಾವಳಿ ವಿಶೇಷತೆ: 'ಗ್ಯಾಲಕ್ಸಿ ನೋಟ್ 7'ನೊಂದಿಗೆ ರಾಕಿಂಗ್ ಸ್ಟೈಲ್‌ನಲ್ಲಿ ಹಬ್ಬ ಆಚರಣೆ!

ಆನ್‌ಲೈನ್‌ ಖರೀದಿಯು ಹೆಚ್ಚು ಸಮಸ್ಯೆಯು ಮತ್ತು ಹಲವು ವೇಳೆ ದೋ‍ಷಪೂರಿತ ಡಿವೈಸ್‌ಗಳನ್ನು ಪಡೆಯುವ ಸಂಭವವು ಹೆಚ್ಚು. ಆದ್ದರಿಂದ ಇಂದಿನ ಲೇಖನದಲ್ಲಿ ಆನ್‌ಲೈನ್‌ ಖರೀದಿಯಲ್ಲಿ ಎದುರಾಗಬಹುದಾದ ಸಮಸ್ಯೆಗಳಿಂದ ಪಾರಾಗಲು, ಮತ್ತು ಖರೀದಿಗೆ ಮುನ್ನ ಎಚ್ಚರವಹಿಸಬೇಕಾದ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ. ಆನ್‌ಲೈನ್ ಖರೀದಿಗೆ ಮುನ್ನ ಎಚ್ಚರವಹಿಸಲೇಬೇಕಾದ ಆ ಅಂಶಗಳು ಯಾವುವು ಎಂದು ಇಂದಿನ ಲೇಖನ ಓದಿ ತಿಳಿಯಿರಿ.

 ವಾರಂಟಿ ಬಗ್ಗೆ ಚೆಕ್‌ ಮಾಡಿ

ವಾರಂಟಿ ಬಗ್ಗೆ ಚೆಕ್‌ ಮಾಡಿ

ಆನ್‌ಲೈನ್ ಖರೀದಿದಾರರು ಮೊದಲಿಗೆ ಹೆಚ್ಚು ಹಣ ವೆಚ್ಚ ಮಾಡಿ ಸ್ಮಾರ್ಟ್‌ಫೋನ್‌ ಅಥವಾ ಇತರೆ ಗ್ಯಾಜೆಟ್‌ ಖರೀದಿ ಮಾಡುತ್ತಿದ್ದಲ್ಲಿ, ಮೊದಲಿಗೆ ವಾರಂಟಿ ಬಗ್ಗೆ ಚೆಕ್ ಮಾಡಿ. ವಾರಂಟಿ ಇಲ್ಲದ ಡಿವೈಸ್‌ ಖರೀದಿ ಬ್ಯಾಡ್‌ ಆಪ್ಶನ್‌ ಎಂದೇ ಹೇಳಬಹುದು.

 ರಿಟರ್ನ್‌ ಪಾಲಿಸಿ

ರಿಟರ್ನ್‌ ಪಾಲಿಸಿ

ನಿರ್ದಿಷ್ಟ ದಿನಗಳ ರಿಟರ್ನ್‌ ಪಾಲಿಸ ಇಲ್ಲದೇ ಸ್ಮಾರ್ಟ್‌ಫೋನ್‌ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಲು 'ನೋ' ಎನ್ನಿ. ಗ್ಯಾಜೆಟ್‌ಗಳನ್ನು ರಿಟರ್ನ್‌ ಪಾಲಿಸಿ ಇಲ್ಲದೇ ಖರೀದಿಸುವುದು ಸಮಸ್ಯೆ. ಡಿವೈಸ್ ಡ್ಯಾಮೇಜ್ ಆಗಿದ್ದಲ್ಲಿ, ನಂತರದಲ್ಲಿ ನೀವು ರಿಟರ್ನ್‌ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶೇ.100 ಖರೀದಿ ಸುರಕ್ಷೆ

ಶೇ.100 ಖರೀದಿ ಸುರಕ್ಷೆ

ಶೇ.100 ಖರೀದಿ ಸುರಕ್ಷೆ ಇರುವ ಬಗ್ಗೆ ಖಚಿತಪಡಿಸಿಕೊಳ್ಳಿ. ಸ್ಮಾರ್ಟ್‌ಫೋನ್‌ ಖರೀದಿದಾರರು ಈ ಅಂಶದ ಬಗ್ಗೆ ಖಚಿತಪಡಿಸಿಕೊಳ್ಳಿ. ಡ್ಯಾಮೇಜ್‌ ಮತ್ತು ಇತರೆ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯವಾದ ಅಂಶ.

Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ "ನೋಕಿಯಾ 6"!!
ಆಫರ್‌ ಅಥವಾ ಡಿಸ್ಕೌಂಟ್ ಚೆಕ್‌ ಮಾಡಿ

ಆಫರ್‌ ಅಥವಾ ಡಿಸ್ಕೌಂಟ್ ಚೆಕ್‌ ಮಾಡಿ

ಒಂದೇ ಸ್ಮಾರ್ಟ್‌ಫೋನ್‌ಗೆ ಇರುವ ಎಲ್ಲಾ ಆಫರ್ ಮತ್ತು ಡಿಸ್ಕೌಂಟ್‌ಗಾಗಿ ಇತರೆ ವೆಬ್‌ಸೈಟ್‌ಗಳನ್ನು ಚೆಕ್‌ ಮಾಡಿ. ಯಾವುದಾದರೂ ಒಂದು ಆನ್‌ಲೈನ್‌ ರೀಟೇಲರ್ ಅತ್ಯಧಿಕ ಆಫರ್ ಮತ್ತು ಡಿಸ್ಕೌಂಟ್‌ ಅನ್ನು ನೀಡುತ್ತದೆ.

ಆನ್‌ಲೈನ್‌ ಖರೀದಿಯಲ್ಲಿ ವಿಶೇಷ ಆಫರ್‌ ಸೆಕ್ಷನ್ ಚೆಕ್‌ ಮಾಡಿ

ಆನ್‌ಲೈನ್‌ ಖರೀದಿಯಲ್ಲಿ ವಿಶೇಷ ಆಫರ್‌ ಸೆಕ್ಷನ್ ಚೆಕ್‌ ಮಾಡಿ

ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವಾಗ, ಆನ್‌ಲೈನ್‌ನಲ್ಲಿ ವಿಶೇಷ ಆಫರ್‌ ಸೆಕ್ಷನ್‌ ಅನ್ನು ತಪ್ಪದೇ ಚೆಕ್‌ ಮಾಡಿ. ಈ ಆಫರ್‌ ಇತರೆ ಹೆಚ್ಚುವರಿ ಬೆನಿಫಿಟ್‌ಗಳನ್ನು ಹೊಂದಿರುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
5 Things To Keep in Mind Before an Online Smartphone Purchase This Diwali. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X