Subscribe to Gizbot

ಯೂ ಟ್ಯೂಬ್‌ನಿಂದ ವೀಡಿಯೋ ಡೌನ್‌ಲೋಡ್‌ ಮಾಡುವುದು ಹೇಗೆ?

Posted By:

ಇಂದು ಇಂಟರ್‌ನೆಟ್‌ ಕ್ರಾಂತಿಯಿಂದಾಗಿ ನಾವು ಯಾವುದೋ ದೇಶದ ಯಾವುದೋ ವೀಡಿಯೋವನ್ನು ಕ್ಷಣಮಾತ್ರದಲ್ಲಿ ನೋಡುತ್ತೇವೆ. ನಮ್ಮ ನೆಚ್ಚಿನ ನಾಯಕ, ನಾಯಕಿಯರ ಚಿತ್ರಗಳನ್ನು ಯೂಟ್ಯೂಬ್‌ನಲ್ಲಿ ನೋಡುತ್ತೇವೆ. ಹಾಗಾಗಿ ಇಂದು ನಮಗೆ ವೀಡಿಯೋ ನೋಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ನಮಗೆ ಈ ವೀಡಿಯೋಗಳನ್ನು ಡೌನ್‌ಲೋಡ್‌ ಮಾಡುವುದು ದೊಡ್ಡ ಸಮಸ್ಯೆ. ಅದಕ್ಕಾಗಿ ಇಲ್ಲಿ ಯೂ ಟ್ಯೂಬ್‌ ಮತ್ತು ಇತರ ಸೈಟ್‌ಗಳಲ್ಲಿರುವ ವೀಡಿಯೋಗಳನ್ನು ಡೌನ್‌ಲೋಡ್‌ ಮಾಡುವ ಸುಲಭ ವಿಧಾನವನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿ ಓದಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ವೀಡಿಯೋವನ್ನು ಈ ಜಾಲತಾಣಗಳನ್ನು ಮುಖಾಂತರ ಡೌನ್‌ಲೋಡ್‌ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೀಪ್‌ವಿದ್‌

ಕೀಪ್‌ವಿದ್‌

ಇಂಟರ್‌ನೆಟ್‌ನಿಂದ ಅತಿ ಹೆಚ್ಚು ಜನರು ವೀಡಿಯೋ ಡೌನ್‌ಲೋಡ್‌ ಮಾಡಲು ಕೀಪ್‌ವಿದ್‌ ಸೈಟ್‌ನ್ನು ಬಳಸುತ್ತಾರೆ. ಬೇಕಾದ ಯೂ ಟ್ಯೂಟಬ್‌ ವೀಡಿಯೋದ ಲಿಂಕ್‌ನ್ನು ಕಾಪಿ ಮಾಡಿ ಕೀಪ್‌ವಿದ್‌ನಲ್ಲಿ ಪೇಸ್ಟ್‌ ಮಾಡಿ ವೀಡಿಯೋ ಡೌನ್‌ಲೋಡ್‌ ಮಾಡಬಹುದು.

ಸೇವ್‌ವಿದ್‌

ಸೇವ್‌ವಿದ್‌

ಕೀಪ್‌ವಿದ್‌ನಲ್ಲಿ ನೀವು ಹೇಗೆ ಡೌನ್‌ಲೋಡ್‌ ಮಾಡುತ್ತಿರೋ ಅದೇ ರೀತಿಯಲ್ಲಿ ಸೇವ್‌ವಿದ್‌ನಲ್ಲಿ ವೀಡಿಯೋವನ್ನು ಡೌನ್‌ಲೋಡ್‌ ಮಾಡಬಹುದು. ಅಷ್ಟೇ ಅಲ್ಲದೇ ಇಲ್ಲಿ ಮ್ಯೂಸಿಕ್‌,ಸೆಲಬ್ರಿಟಿ ವೀಡಿಯೋ, ಚಲನಚಿತ್ರ, ಟ್ರಾವೆಲ್‌,ಗೇಮಿಂಗ್‌, ವಿಜ್ಞಾನ, ಸಂಬಂಧಿಸಿದಂತೆ ವಿವಿಧ ಕೆಟಗೆರಿಗಳಿದ್ದು ನಿಮ್ಮ ಆಸಕ್ತಿಯ ವೀಡಿಯೋಗಳನ್ನು ಡೌನ್‌ಲೋಡ್‌ ಮಾಡಬಹುದು.

ವೈಟಿಡಿ ವೀಡಿಯೋ ಡೌನ್‌ಲೋಡ್‌

ವೈಟಿಡಿ ವೀಡಿಯೋ ಡೌನ್‌ಲೋಡ್‌

ಯಾವುದಾದ್ರೂ ಸಾಫ್ಟ್‌ವೇರ್ ಡೌನ್‌ಲೋಡ್‌ ಮಾಡಬೇಕಾದ್ರೆ ವೈಟಿಡಿ ವೀಡಿಯೋ ಡೌನ್‌ಲೋಡಿನಲ್ಲಿ ಡೌನ್‌ಲೋಡ್‌ ಮಾಡಬಹುದು. ಇದರಲ್ಲಿ ನೀವು ಎಚ್‌ಡಿ ಮತ್ತು ಹೈ ಕ್ವಾಲಿಟಿಯ ವೀಡಿಯೋಗಳನ್ನು ಡೌನ್‌ಲೋಡ್‌ ಮಾಡುವುದರ ಜೊತೆಗೆ ನಿಮಗೆ ಬೇಕಾದ ಫಾರ್ಮೆಟ್‌ನಲ್ಲಿ ವೀಡಿಯೊಗಳನ್ನು ಕನ್‌ವರ್ಟ್‌ ಮಾಡಬಹುದು.

 ವೀಡಿಯೋಗ್ರಬ್ಬರ್‌

ವೀಡಿಯೋಗ್ರಬ್ಬರ್‌

ವಿಡಿಯೋಗ್ರಬ್ಬರ್‌ನಲ್ಲಿಯೂಟ್ಯೂಬ್‌,ಡೈಲಿಮೋಷನ್‌, ಮೈಸ್ಪೆಸ್‌ಟಿವಿ, ನ್ಯಾಷನಲ್‌ ಜಿಯಾಗ್ರಾಫಿಕ್‌ ಟಿವಿ, ಬ್ಲಿಪ್‌ ಟಿವಿ ವೀಡಿಯೋಗಳನ್ನು ಸೇರಿದಂತೆ ಸಾವಿರಾರು ಸೈಟ್‌ಗಳ ವೀಡಿಯೋಗಳನ್ನು ಡೌನ್‌ಲೋಡ್ ಮಾಡಬಹುದು.

 ಫೈರ್‌ಫಾಕ್ಸ್‌ ವೀಡಿಯೋಡೌನ್‌ಲೋಡರ್‌:

ಫೈರ್‌ಫಾಕ್ಸ್‌ ವೀಡಿಯೋಡೌನ್‌ಲೋಡರ್‌:

ನೀವು ಫೈರ್‌ಫಾಕ್ಸ್‌ ಬ್ರೌಸರ್‌ನ್ನು ಉಪಯೋಗಿಸುತ್ತಿದ್ದರೆ ನೀವು ವೀಡಿಯೋ ಡೌನ್‌ಲೋಡರ್‌ ಮೂಲಕ ಯೂ ಟ್ಯೂಬ್‌ ವೀಡಿಯೋವನ್ನು ಡೌನ್‌ಲೋಡ್‌ ಮಾಡಬಹುದು. ಫೈರ್‌ಫಾಕ್ಸ್‌ನಿಂದ ವೀಡಿಯೋ ಡೌನ್‌ಲೋಡರ್‌ನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಿದ್ರೆ ಅದು ಟೂಲ್‌ ಬಾರಿನಲ್ಲಿ ಕಾಣುತ್ತಿರುತ್ತದೆ. ಯೂಟ್ಯೂಬ್‌ನಲ್ಲಿ ನಿಮಗೆ ಬೇಕಾದ ವೀಡಿಯೋವನ್ನು ಹುಡುಕಿ ಟೂಲ್‌ಬಾರಿನಲ್ಲಿರುವ ವೀಡಿಯೋ ಡೌನ್‌ಲೋಡರ್‌ನ್ನು ಕ್ಲಿಕ್‌ ಮಾಡಿಕೊಂಡು ನಿಮಗೆ ಬೇಕಾದ ಫಾರ್ಮೆಟ್‌ನಲ್ಲಿ ಡೌನ್‌ಲೋಡ್‌ ಮಾಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot