'5G ನೆಟವರ್ಕ್' ಎಂದರೇನು?..ವೇಗ ಹೇಗಿರಲಿದೆ ಗೊತ್ತಾ?

|

ಪ್ರಸ್ತುತ ನೆಟವರ್ಕ ವಲಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೆವೆ. ಆರಂಭದ ಲ್ಯಾಂಡ್‌ಲೈನ್‌ ಕನೆಕ್ಷನ್‌ನಿಂದ ಹಿಡಿದು ಇಂದಿನ 4G ನೆಟವರ್ಕ್‌ವರೆಗೂ ಹಲವು ಅನುಕೂಲಕರ ಬೆಳವಣಿಗೆಗಳು ನಡೆದಿವೆ. ಅವುಗಳಲ್ಲಿ 3G ಮತ್ತು 4G ನೆಟವರ್ಕ್ ಬಂದಾಗ ಅಂತರ್ಜಾಲದ ವೇಗದಲ್ಲಿ ಕಾಣಲಾಯಿತು. ಆದರೆ ಇದೀಗ 4G ವೇಗ ಕಡಿಮೆ ಎನಿಸಿದ್ದು, ಇಡೀ ಟೆಕ್‌ ಲೋಕ ಎದುರು ನೋಡುತ್ತಿರುವುದು ಮುಂದುವರಿದ 5G ನೆಟವರ್ಕ್‌.

ಭಾರತದಲ್ಲೇ ಮೊದಲ ಬಾರಿ 5G ಪರೀಕ್ಷಾರ್ಥ ಬಳಕೆಗೆ ಏರ್‌ಟೆಲ್ ಸಜ್ಜು!!ಭಾರತದಲ್ಲೇ ಮೊದಲ ಬಾರಿ 5G ಪರೀಕ್ಷಾರ್ಥ ಬಳಕೆಗೆ ಏರ್‌ಟೆಲ್ ಸಜ್ಜು!!

ಹೌದು, ಟೆಲಿಕಾಂ ವಲಯದಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಮುಂದಿನ ತಲೆಮಾರಿನ 5G ನೆಟವರ್ಕ್‌ ಬಳಕೆಗೆ ಎಲ್ಲರೂ ಖಾತರರಾಗಿದ್ದಾರೆ. ಆದರೆ ನಿಮಗೆ ಗೊತ್ತಾ 5G ನೆಟವರ್ಕ್‌ ಎಂದರೇ ಕೇವಲ ಅತೀ ವೇಗದ ಇಂಟರ್ನೆಟ್‌ ಸೇವೆ ಅಷ್ಟೇ ಅಲ್ಲ ಎಂಬುದು. 5G ನೆಟವರ್ಕ್‌ ಸಮಾಜದ ಹಲವು ನೆಟವರ್ಕ್‌ ಅಗತ್ಯದ ವಲಯಗಳಿಗೆ ಮುಂದುವರಿದ ತಂತ್ರಜ್ಞಾನವನ್ನು ಪರಿಚಯಿಸಲಿದೆ. ಟೆಲಿಕಾಂ ವಲಯದಲ್ಲಿ ಹೊಸ ಕ್ರಾಂತಿ ಮಾಡಲಿದೆ.

'5G ನೆಟವರ್ಕ್' ಎಂದರೇನು?..ವೇಗ ಹೇಗಿರಲಿದೆ ಗೊತ್ತಾ?

ಬರಲಿರುವ 5G ನೆಟವರ್ಕ್‌ನ ಬದಲಾವಣೆ ಹೇಗಿರಲಿದೆ ಎಂದರೇ 'ಹಳೆಯ ಟೈಪ್‌ರೈಟರ್‌ನಿಂದ ಒಮ್ಮೆಲೇ ಕಂಪ್ಯೂಟರ್‌ಗೆ' ಬದಲಾದಂತೆ ನೆಟವರ್ಕ್‌ ವಲಯದಲ್ಲಿ ಭಾರಿ ಬದಲಾವಣೆ ಕಾಣಲಿದೆ ಎಂದು MIT ರೀವ್ಯೂ ವರದಿ 5G ನೆಟವರ್ಕ್‌ ಕುರಿತು ತಿಳಿಸಿದೆ. 5G ನೆಟವರ್ಕ್‌ ದುಪ್ಪಟ್ಟು ವೇಗವನ್ನು ಹೊಂದಿರಲಿದ್ದು, ವಿಡಿಯೊ ಅಥವಾ ಸಿನಿಮಾ ಡೌನ್‌ಲೋಡ್‌ ಅತೀ ಸ್ಪೀಡ್‌ ಆಗಿ ಮತ್ತು ಸಂಪೂರ್ಣ ಎಚ್‌ಡಿ ಕ್ವಾಲಿಟಿಯಲ್ಲಿರುತ್ತವೆ.

<strong>5G ನೆಟ್‌ವರ್ಕ್‌ ವೇಗ ಹೇಗಿರಲಿದೆ ಗೊತ್ತಾ?..ನೀವು ಊಹಿಸಲು ಸಾಧ್ಯವಿಲ್ಲ!! </strong>5G ನೆಟ್‌ವರ್ಕ್‌ ವೇಗ ಹೇಗಿರಲಿದೆ ಗೊತ್ತಾ?..ನೀವು ಊಹಿಸಲು ಸಾಧ್ಯವಿಲ್ಲ!!

ಆಟೋಮೊಬೈಲ್, ಹೆಲ್ತ್‌ಕೇರ್‌, ಇಂಟರ್ನೆಟ್‌ ಆಪ್‌ ಥೀಂಗ್‌(IoT), AI-ಕೃತಕ ಬುದ್ಧಿಮತ್ತೆ, VR-ವರ್ಚುಯಲ್‌ ರಿಯಾಲಿಟಿ ಸೇರಿದಂತೆ ಇತರೆ ಹಲವು ಕ್ಷೇತ್ರಗಳಿಗೂ ವೇಗದ 5G ನೆಟರ್ವಕ್‌ ಭಾರಿ ಅನುಕೂಲಗಳನ್ನು ಒದಗಿಸಲಿದ್ದು, ಆ ವಲಯಗಳ ಕೆಲಸಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ಹಾಗಾದರೇ 5G ನೆಟವರ್ಕ್‌ ಹೇಗಿರಲಿದೆ? ಏನೆಲ್ಲಾ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಇಂಟರ್ನೆಟ್‌ ಬಳಕೆಯಲ್ಲಿ 5G ಹೇಗಿರಲಿದೆ

ಇಂಟರ್ನೆಟ್‌ ಬಳಕೆಯಲ್ಲಿ 5G ಹೇಗಿರಲಿದೆ

ದೈನಂದಿನ ದಿನಚರಿಯಲ್ಲಿ ಬಳಸುವ ಹಲವು ಅಂತರ್ಜಾಲ ಆಧಾರಿತ ಡಿವೈಸ್‌ಗಳನ್ನು ಇಂಟರ್ನೆಟ್‌ ಆಫ್‌ ಥೀಂಗ್ಸ್‌ ಎನ್ನಲಾಗುತ್ತದೆ. ಅಂತರ್ಜಾಲವನ್ನು ಒಂದೇ ವೇಳೆಗೆ ದಿನನಿತ್ಯ ಹಲವು ಡಿವೈಸ್‌ಗಳಲ್ಲಿ ಬಳಸುತ್ತಿರುತ್ತೆವೆ. ಆಗ ಇಂಟರ್ನೆಟ್‌ ಸ್ಲೋ ಆಗುತ್ತದೆ ಅದರೊಂದಿಗೆ ಡಿವೈಸ್‌ಗಳ ಬ್ಯಾಟರಿ ಬಾಳಿಕೆಯು ಸಹ ಖಾಲಿ ಆಗುತ್ತಾ ಹೋಗುತ್ತದೆ. ಆದರೆ 5G ನೆಟರ್ವಕ್‌ ಇಂಟರ್ನೆಟ್‌ ನಲ್ಲಿ ಏಕಕಾಲಕ್ಕೆ ಹಲವು ಡಿವೈಸ್‌ಗಳನ್ನು ಕನೆಕ್ಟ್‌ ಮಾಡಿದರೂ ಸ್ಪೀಡ್‌ ಹೆಚ್ಚಾಗಿಯೇ ಇರಲಿದ್ದು, ನೆಟವರ್ಕ್‌ ಎನರ್ಜಿಯನ್ನು ಶೇ.90% ಕಡಿತ ಮಾಡಲಿದೆ.

ಓದಿರಿ : ಆರಂಭವಾಗಲಿದೆ ಪೇಟಿಎಮ್‌ 'ಫುಡ್‌ ಡೆಲಿವರಿ' ಸೇವೆ!..ವಿಶೇಷತೆ ಏನು?ಓದಿರಿ : ಆರಂಭವಾಗಲಿದೆ ಪೇಟಿಎಮ್‌ 'ಫುಡ್‌ ಡೆಲಿವರಿ' ಸೇವೆ!..ವಿಶೇಷತೆ ಏನು?

5G ನೆಟವರ್ಕ್‌ ವೇಗವಾಗಿ ಡೇಟಾ ಟ್ರಾನ್‌ಫರ್‌ ಮಾಡುವ ಜೊತೆಗೆ ಏಕಕಾಲಕ್ಕೆ ಹಲವು ಡಿವೈಸ್‌ಗಳೊಂದಿಗೆ ಕನೆಕ್ಟ್‌ ಆಗುವ ಸಾಮರ್ಥ್ಯಹೊಂದಿರಲಿದೆ. IDC'S ಡೇಟಾ ವರದಿ ಪ್ರಕಾರ 2025ರಲ್ಲಿ loT ಡಿವೈಸ್‌ಗಳು 90ZB ಡೇಟಾ ಕ್ರಿಯೆಟ್‌ ಮಾಡಲಿವೆ ಎಂದು ಬಿ. ಎಸ್‌. ಟೆಕ್‌ ಉಪ ಮುಖ್ಯಸ್ಥ ಸೀಗೇಟ್ ಅವರು ಗಿಜಬೊಟ್‌ಗೆ ತಿಳಿಸಿದ್ದಾರೆ. 4G ನೆಟವರ್ಕ್‌ನಲ್ಲಿ ಡಾಟಾ ಟ್ರಾನ್ಸ್‌ಫರ್ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ 5G ನೆಟವರ್ಕ್‌ ಇರಲಿದೆ.

ಓದಿರಿ : ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳ ಚಂದಾದಾರರ ಸಂಖ್ಯೆ ಹೆಚ್ಚಳ!.ಜಿಯೋ ಹೊಸ ಎಂಟ್ರಿ!ಓದಿರಿ : ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳ ಚಂದಾದಾರರ ಸಂಖ್ಯೆ ಹೆಚ್ಚಳ!.ಜಿಯೋ ಹೊಸ ಎಂಟ್ರಿ!

ಕಣ್ಣು ಮಿಟಕಿಸುವ ಸಮಯದೊಳಗೆ ಡೇಟಾಗಳನ್ನು ಸಾವಿರಾರು ಕಿಲೋ ಮೀಟರ್‌ ವರೆಗೂ ಟ್ರಾನ್ಸ್‌ಫರ್‌ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಈ ಹೊಸ ವ್ಯವಸ್ಥೆಯು ಸ್ಮಾರ್ಟ್‌ಸಿಟಿಗಳ ನೀರಿನ ವ್ಯವಸ್ಥೆ, ಕಸ ವಿಲೇವಾರಿ, ಟ್ರಾಫಿಕ್‌ ಮ್ಯಾನೇಜಮೆಂಟ್‌ ಮತ್ತು ಆರೋಗ್ಯ ಕಾಳಜಿ ಸೌಲಭ್ಯಗಳಲ್ಲಿ 5G ನೆಟವರ್ಕ್‌ ಬಹಳಷ್ಟು ಅನುಕೂಲತೆಗಳನ್ನು ಒದಗಿಸಲಿದೆ. 5G ಸೆನ್ಸಾರ್‌ಗಳು ನಗರದ ಮೂಲ ಸೌಕರ್ಯ ಅಭಿವೃದ್ದಿಗೆ ಪೂರಕವಾಗಿ ಕೆಲಸಮಾಡಲಿದ್ದು, ರಿಮೋಟ್‌ ಸ್ಥಳಗಳನ್ನು ಸಹ ತನ್ನ ವ್ಯಾಪ್ತಿಗೆ ತಂದುಕೊಳ್ಳಲಿದೆ. ಹಾಗೆಯೇ ಟನಲ್‌ ಮತ್ತು ಆಳದ ಪ್ರದೇಶಗಳನ್ನು ತಲುವಲಿದೆ.

ಓದಿರಿ : ಚೀನಾ ಕಂಪನಿಗಳಿಗೆ ಬ್ಯಾಡ್‌ ನ್ಯೂಸ್‌!..ಸ್ವಂತ ಫೋನ್‌ ತಯಾರಿಸಲಿದೆ 'ಟಿಕ್‌ಟಾಕ್'!ಓದಿರಿ : ಚೀನಾ ಕಂಪನಿಗಳಿಗೆ ಬ್ಯಾಡ್‌ ನ್ಯೂಸ್‌!..ಸ್ವಂತ ಫೋನ್‌ ತಯಾರಿಸಲಿದೆ 'ಟಿಕ್‌ಟಾಕ್'!

ರೀಟೈಲ್‌ ಉದ್ಯಮದ ವಲಯಕ್ಕೆ 5G ನೆಟವರ್ಕ್‌ ಭಾರಿ ಪ್ರಯೋಜನಗಳನ್ನು ಒದಗಿಸಲಿದ್ದು, ಡಿಜಿಟಲ್‌ ಸಿಗ್ನಲ್‌ಗಳು ಬಳಕೆದಾರರಿಗೆ ರೀಟೈಲ್‌ ಉದ್ಯಮದಾರಿಗೆ ಸಂವಹನ ನಡೆಸಲು ನೆರವಾಗಲಿದೆ. ಹಾಗೆಯೇ ಸಂಪರ್ಕವು ವೇಗವಾಗಿ ಕನೆಕ್ಟ್ ಮಾಡುವ ಸೌಲಭ್ಯಗಳು ಲಭ್ಯವಾಗಲಿವೆ. ಈ ನಿಟ್ಟಿನಲ್ಲಿ ಉದ್ಯಮಗಳು ಡೇಟಾ ಸುರಕ್ಷತೆಗೆ ಕ್ಲೌಡ್‌ ಸ್ಟೋರೇಜ್‌ ಸಂಗ್ರಹಗಳನ್ನು ಉಪಯುಕ್ತ ಮಾಡಬೇಕು.

ಆರೋಗ್ಯ ಕ್ಷೇತ್ರಕ್ಕೆ 5G ಬೇಕು

ಆರೋಗ್ಯ ಕ್ಷೇತ್ರಕ್ಕೆ 5G ಬೇಕು

ಆರೋಗ್ಯ ಕ್ಷೇತ್ರಕ್ಕೂ 5G ನೆಟವರ್ಕ್‌ ಬಹಳಷ್ಟು ಉಪಯುಕ್ತವಾಗಲಿದ್ದು, ಕೆಲವೊಂದು ಕಠಿಣ ಶಸ್ತ್ರಚಿಕಿತ್ಸೆಯಗೆ ಈ ತಂತ್ರಜ್ಞಾನ ನೆರವಾಗಲಿದೆ. ಈ ನೆಟವರ್ಕ್‌ ಹೆಚ್ಚಿನ ಸಾಮರ್ಥ್ಯದೊಂದಿಗೆ, ರೋಗಿಗಳಿಗೆ ದೂರದ ಮೇಲ್ವಿಚಾರಣೆಯನ್ನು ನೀಡುತ್ತದೆ. ವಾಸ್ತವವಾಗಿ, ಉತ್ತಮ ಚಿಕಿತ್ಸೆಯನ್ನು ಒದಗಿಸಲು ವೈದ್ಯರು ನೈಜ ಸಮಯದಲ್ಲಿ ಡೇಟಾವನ್ನು ಸ್ವೀಕರಿಸಬಹುದು. 2026ನೇ ವರ್ಷಕದೊಳಗೆ 76 ಬಿಲಿಯನ್‌ ಲಾಭದ ಅವಕಾಶಗಳು ಈ ಕ್ಷೇತ್ರದಲ್ಲಿ ಲಭ್ಯವಾಗಲಿವೆ ಎನ್ನಲಾಗಿದೆ.

ಓದಿರಿ : ದೇಶದಲ್ಲಿರುವ ಟೆಲಿಕಾಂ ಟವರ್‌ ಸಂಖ್ಯೆ ಎಷ್ಟು?.ಕರ್ನಾಟಕದ ಅಂಕಿ ಅಂಶ ಏನು?ಓದಿರಿ : ದೇಶದಲ್ಲಿರುವ ಟೆಲಿಕಾಂ ಟವರ್‌ ಸಂಖ್ಯೆ ಎಷ್ಟು?.ಕರ್ನಾಟಕದ ಅಂಕಿ ಅಂಶ ಏನು?

'ನಾವು ಇನ್ನೂ ಪ್ರತಿ 1000 ಜನರಿಗೆ ಕೇವಲ 1 ವೈದ್ಯರನ್ನು ಹೊಂದಿದ್ದೇವೆ, ಈ ತಂತ್ರಜ್ಞಾನ ಪರ್ಯಾಯ ಔಷಧಿಯಿಂದ ವೈದ್ಯರನ್ನು ಒಳಗೊಳ್ಳುತ್ತದೆ. ಮೊದಲಿಗೆ ಇದು ಟೆಲಿಮೆಡಿಸಿನ್ನಲ್ಲಿ ಸಹಾಯ ಮಾಡುತ್ತದೆ ಮತ್ತು ಅಂತಿಮವಾಗಿ ದೂರಸ್ಥ ಸ್ವಾಯತ್ತ ರೋಗ ನಿರ್ಣಯಕ್ಕೆ ದಾರಿ ಮಾಡುತ್ತದೆ.' ಎಂದು ಟೆಕ್ಆರ್ಕ್ ಸಂಸ್ಥಾಪಕ, ಕನ್ಸಲ್ಟೆನ್ಸಿ ಫರ್ಮ್ ಸಂಸ್ಥಾಪಕ ಫೈಸಲ್ ಕವಾಸಾ ಹೇಳಿದ್ದಾರೆ. ಹಾಗೆಯೇ ಕೇಲವು ವೇರೆಬಲ್‌ ಡಿವೈಸ್‌ಗಳು ರೋಗಿಗಳ ಆರೋಗ್ಯ ಸ್ಥಿತಿಯನ್ನು ತಿಳಿಸುವಂತಾಗುತ್ತದೆ.

ರೋಗಿಗಳು ಹಲವಾರು ಪರೀಕ್ಷೆಗಳಿಗೆ ಒಳಪಡಿಸಬೇಕಿರುತ್ತದೆ. ಪ್ರತಿ ಆರೋಗ್ಯ ಪರೀಕ್ಷೆಯ ರೀಪೋರ್ಟ್‌ಗಳನ್ನು ಆನ್‌ಲೈನ್‌ ಮೂಲಕವೇ ವೀಕ್ಷಿಸಬಹುದಾಗಿದೆ. ಇದರಿಂದ ರೋಗಿಗಳಿಗೆ ವೇಗದ ಸೇವೆ ದೊರೆಯಲಿದ್ದು, ಸಮಯ ಸಹ ಉಳಿಸುತ್ತದೆ. 5G ತಂತ್ರಜ್ಞಾನ ನೆರವಿನಿಂದ MRI ಸ್ಕ್ಯಾನ್‌ಗಳಂತ ದೊಡ್ಡ ವೈದ್ಯಕೀಯ ಪರೀಕ್ಷೆಗಳನ್ನು ಬಹಳ ಕ್ವಿಕ್‌ ಆಗಿ ಮಾಡಬಹುದಾಗಿದ್ದು, ಇದು ವೈದ್ಯರಿಗೂ ಮತ್ತು ರೋಗಿಗಳಿಗು ಉಪಯುಕ್ತ ಎನಿಸಲಿದೆ.

ಓದಿರಿ : ಶಿಯೋಮಿಯ 'ಮಿ 4' ಸ್ಮಾರ್ಟ್‌ಬ್ಯಾಂಡ್‌ ಬಿಡುಗಡೆಗೆ ಸಜ್ಜು!..ವಿಶೇಷತೆ ಏನು ಗೊತ್ತಾ?ಓದಿರಿ : ಶಿಯೋಮಿಯ 'ಮಿ 4' ಸ್ಮಾರ್ಟ್‌ಬ್ಯಾಂಡ್‌ ಬಿಡುಗಡೆಗೆ ಸಜ್ಜು!..ವಿಶೇಷತೆ ಏನು ಗೊತ್ತಾ?

ಆರೋಗ್ಯ ಸುಧಾರಣೆಗೆ ಸಂಬಂಧಿಸಿದ ಮೊದಲ ಪ್ರಯೋಜನವೆಂದರೆ, ಎಲ್ಲ ಮೇಡಿಕಲ್ ವರದಿಗಳು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಅಸ್ತಿತ್ವದಲ್ಲಿರುವ ಮೊಬೈಲ್ ಸಂಪರ್ಕತೆಗೆ ತಲುಪುತ್ತದೆ.ಅತ್ಯುತ್ತಮ ವೇಗವು ದೂರಸ್ಥ ನಿಜಾವಧಿಯ ಸಮಾಲೋಚನೆಗಳಿಗೆ ವೀಡಿಯೊ ಟೆಲಿಫೋನಿಗಳನ್ನು ಬಳಸಲು ಸುಲಭವಾಗಿಸುತ್ತದೆ. ವೈದ್ಯರನ್ನು ಸಂಪರ್ಕಿಸಲು ಮತ್ತು ಆರೋಗ್ಯ ಮಾಹಿತಿಯನ್ನು ಹಂಚಿಕೊಳ್ಳಲು ನೆರವಾಗಲಿದೆ ಎಂದು ಓಪನ್ಸಿಗ್ನಾಲ್ CEO ಬ್ರೆಂಡನ್ ಗಿಲ್ ಹೇಳಿದರು.

ರೊಬೋಟಿಕ್‌ ಚಿಕಿತ್ಸೆ ಸೇವೆಯು ಆರಂಭವಾಗಲು ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಳವಡಿಕೆಗೆ 5G ನೆಟವರ್ಕ್‌ ಬುನಾದಿ ಒದಗಿಸಲಿದ್ದು, ಹೀಗಾಗಿ ತಂತ್ರಜ್ಞಾನದ ನೆರವಿನಿಂದ ರೊಬೋಟ್‌ಗಳು ರೋಗಿಗಳ ಚಿಕಿತ್ಸೆ ಸಹ ಮಾಡಲಿವೆ. ಹಾಗೆಯೇ ECG, CT ಸ್ಕ್ಯಾನ್‌ ಮತ್ತು ಇತರೆ ವೈದ್ಯಕೀಯ ವಿಭಾಗಗಳಲ್ಲಿ ಕೆಲಸಗಳು ವೇಗವಾಗಿ ನಡೆಯುತ್ತವೆ.

'ಫ್ಲಿಪ್​ಕಾರ್ಟ್' ಡೆಲಿವರಿ ಬಾಯ್​ಗೆ ಯಾಮಾರಿಸಿದ ಪ್ರಳಯಾಂತಕರು!'ಫ್ಲಿಪ್​ಕಾರ್ಟ್' ಡೆಲಿವರಿ ಬಾಯ್​ಗೆ ಯಾಮಾರಿಸಿದ ಪ್ರಳಯಾಂತಕರು!

ಸ್ವಯಂ ಚಾಲಿತ ವಾಹನಗಳಿಗೆ 5G ಪೂರಕ

ಸ್ವಯಂ ಚಾಲಿತ ವಾಹನಗಳಿಗೆ 5G ಪೂರಕ

5G ನೆಟವರ್ಕ್‌ ಆಟೋಮೊಬೈಲ್ ವಲಯಕ್ಕೂ ತನ್ನ ಸೇವೆಯನ್ನು ವಿಸ್ತರಿಸಲಿದ್ದು, ಮುಂಬರುವ ದಿನಗಳಲ್ಲಿ ಸ್ವಯಂ ಚಾಲಿತ ವಾಹನಗಳು ಮಾರುಕಟ್ಟೆಗೆ ಪ್ರವೇಶಿಸಲಿವೆ. ಈ ಕುರಿತು ಈಗಾಗಲೇ ಹಲವು ಕಂಪನಿಗಳು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿದ್ದು, 5G ತಂತ್ರಜ್ಞಾನ ಬಂದ ಮೇಲೆ ಈ ಪ್ರಯತ್ನಗಳು ಯಶಸ್ವಿ ಆಗಲಿದೆ ಎನ್ನಲಾಗುತ್ತಿದೆ. ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆಯದೇ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಇರಲಿದೆ.

ಓದಿರಿ : ಆಂಡ್ರಾಯ್ಡ್‌ ಬಳಕೆದಾರರೆ ಈ ವರ್ಷ ನಿಮ್ಮ ಸ್ಮಾರ್ಟ್‌ಫೋನ್‌ ಬದಲಾಗಲಿದೆ!!ಓದಿರಿ : ಆಂಡ್ರಾಯ್ಡ್‌ ಬಳಕೆದಾರರೆ ಈ ವರ್ಷ ನಿಮ್ಮ ಸ್ಮಾರ್ಟ್‌ಫೋನ್‌ ಬದಲಾಗಲಿದೆ!!

ಈ ವ್ಯವಸ್ಥೆಯಲ್ಲಿ 5G ಯು ಆವರ್ತನದ OFDM ಎನ್ಕೋಡಿಂಗ್ ಅನ್ನು ಕಾರ್ಯಗತಗೊಳಿಸುತ್ತದೆ ಮತ್ತು 6 GHz ಗಿಂತ ಕಡಿಮೆ ಅಥವಾ ಕೆಳಗಿನ ಆವರ್ತನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ತಂತ್ರಜ್ಞಾನ ವಾಹನ ಚಾಲಕ ಮತ್ತು ತಯಾರಕರಿಬ್ಬರಿಗೂ ಉಪಯುಕ್ತವೆನಿಸಲಿದೆ. ಹಾಗೆಯೇ ರೀಮೋಟ್‌ ಮೂಲಕ ವಾಹನ ಚೆಕ್ಕಿಂಗ್‌ ಮಾಡುವ ಸೌಲಭ್ಯಗಳು ಸೇರಲಿದ್ದು, ಇದರೊಂದಿಗೆ ರೀಮೋಟ್‌ ಮೂಲಕ ವಾಹನ ನಿಯಂತ್ರಿಸುವ ಸೌಲಭ್ಯಗಳು ನಿರೀಕ್ಷಿಸಬಹುದಾಗಿದೆ.

ರಸ್ತೆ ಸುರಕ್ಷತೆಯ ಬಗ್ಗೆ ಮತ್ತು ನಿಯಮಗಳ ಬಗ್ಗೆ ಚಾಲಕರಿಗೆ ಮಾಹಿತಿ ಒದಗಿಸುತ್ತದೆ ಮತ್ತು ರಸ್ತೆಯಲ್ಲಿ ಮುಂದೆಬರುವ ಟ್ರಾಫಿಕ್‌ ಸಿಗ್ನಲ್‌ಗಳ ಕುರಿತು ಮೊದಲೆ ಚಾಲಕರಿಗೆ ಸಂದೇಶ ನೀಡುತ್ತದೆ. ಅ‍ಷ್ಟೇ ಅಲ್ಲದೇ ಸುರಕ್ಷಿತವಾಗಿ ರಸ್ತೆಯಲ್ಲಿ ಎಷ್ಟು ವೇಗದಲ್ಲಿ ವಾಹನ ಚಲಿಸಬೇಕು ಎನ್ನುವ ಮಾಹಿತಿಗಳನ್ನು ನೀಡಲಿದೆ. ಚಾಲಕ ಅಸಿಸ್ಟಂಟ್‌ ಫೀಚರ್‌ ಸೇರಿಕೊಳ್ಳಲಿದ್ದು, ಈ ಆಯ್ಕೆ ಚಾಲಕರಿಗೆ ಅಗತ್ಯ ಸೇವೆ ಒದಗಿಸಲಿದೆ.

5G ವರ್ಚುವಲ್‌ ರಿಯಾಲಿಟಿ(AR ಮತ್ತು VR)

5G ವರ್ಚುವಲ್‌ ರಿಯಾಲಿಟಿ(AR ಮತ್ತು VR)

ವರ್ಚುವಲ್‌ ರಿಯಾಲಿಟಿಯು ವೀಕ್ಷಣೆಗೆ ಸಂಬಂಧಿಸಿದ್ದಾಗಿದ್ದು, 5G ತಂತ್ರಜ್ಞಾನ ವರ್ಚುವಲ್‌ ರಿಯಾಲಿಟಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಸೃಷ್ಠಿಸಲಿದೆ. 360 ಡಿಗ್ರಿ ವಿಡಿಯೊ ವೀಕ್ಷಣೆಯು ಸರಳವಾಗಲಿದ್ದು, ಇದರೊಂದಿಗೆ ವಿಡಿಯೊಗಳ ಗುಣಮಟ್ಟವು 8K ಮತ್ತು ಅದಕ್ಕಿಂದಲೂ ಹೆಚ್ಚಿನ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿರುತ್ತವೆ. ಎಚ್‌ಆರ್‌ಡಿ ಆಯ್ಕೆಯಲ್ಲಿಯೂ ಅತ್ಯುತ್ತಮ ಗುಣಮಟ್ಟ ಮೂಡಿಬರಲಿದ್ದು, ಫ್ರೇಮ್‌ಗಳ ರೇಟ್‌ 90fps ನಲ್ಲಿರಲಿದೆ.

ಬಳಕೆದಾರರು ಇಲ್ಲಿವರೆಗೂ ನೋಡಿದ ನೆಟವರ್ಕ್‌ ವೇಗಕ್ಕಿಂತ ಸುಮಾರು ಹತ್ತು ಪಟ್ಟು ಹೆಚ್ಚಿನ ವೇಹಮನ್ನು 5G ನೆಟವರ್ಕ್‌ ಹೊಂದಿರಲಿದೆ. ವಿಡಿಯೊ ವೀಕ್ಷಣೆಯಲ್ಲಿ ಯಾವುದೇ ಅಡೆತಡೆ, ಬಫರಿಂಗ್‌ ನಂತಹ ಅಡಚಣೆಗಳು ಕಾಣಿಸಿಕೊಳ್ಳುವುದಿಲ್ಲ. ABI ಸಂಶೋಧನೆಯ ಪ್ರಕಾರ 2021ರಲ್ಲಿ ಎಆರ್‌ ಆಧಾರಿತ ಸ್ಮಾರ್ಟ್‌ಗ್ಲಾಸ್‌ಗಳು 48ಮಿಲಿಯನ್ ಬಳಕೆದಾರರನ್ನು ಹೊಂದಲಿವೆ ಎಂದಿದೆ.

ಎಆರ್‌ ಆಧಾರಿತ ಹೊಸ ಮಾದರಿಯ ಸ್ಮಾರ್ಟ್‌ ಡಿವೈಸ್‌ಗಳು ಇಂಟರ್ನೆಟ್‌ ಸೇವೆಗೆ ಪೂರಕವಾಗಿರಲಿದ್ದು, ಯಾವಾಗಲೂ ಇಂಟರ್ನೆಟ್‌ ಆನ್‌ ಆಗಿಯೇ ಇರುತ್ತದೆ. ಬಳಕೆದಾರರ ನಿರೀಕ್ಷೆಗಳನ್ನು ಪೂರ್ಣವಾಗಿ ತುಂಬಲಿವೆ ಎನ್ನಲಾಗಿದೆ.

ಭಾರತಕ್ಕೆ ಯಾವಾಗ 5G ಬರಲಿದೆ

ಭಾರತಕ್ಕೆ ಯಾವಾಗ 5G ಬರಲಿದೆ

ಮಿಂಚಿನ ವೇಗದ 5G ನೆಟವರ್ಕ್‌ ಭಾರತಕ್ಕೆ ತರಲು ಸರ್ಕಾರ ಯೋಜನೆಯಲ್ಲಿದ್ದು, ಈ ಕುರಿತು ಈಗಾಗಲೇ ಟೆಲಿಕಾಂ ಡಿಪಾರ್ಟಮೆಂಟ್ 5G ಪ್ರಾಯೋಗಿಯ ಪರೀಕ್ಷೆಗೆ ಸಿದ್ಧವಾಗಿದೆ. ರಾಷ್ಟ್ರೀಯ ಡಿಜಿಟಲ್ ಕಮ್ಯೂನಿಕೇಶನ್ ಪಾಲಿಸಿ (NDCP) 2020ರ ವೇಳೆಗೆ 5G ನೆಟರ್ವಕ್‌ಗಾಗಿ ಸುಮಾರು 100 ಬಿಲಿಯನ್ ಇನ್‌ವೇಸ್ಟ್‌ ಮಾಡುವ ಯೋಜನೆ ಇದೆ ಎನ್ನಲಾಗಿದೆ. ಹಾಗೆಯೇ 50ಮೆಗಾಬೈಟ್ಸ್‌ ಸಾಮರ್ಥ್ಯದ 5G ಬ್ರಾಡ್‌ಬ್ಯಾಂಡ್‌ ಸೇವೆಗೆ ಯೋಜನೆ ಇದೆ.

ಓದಿರಿ : AMDಯಿಂದ 3ನೇ ತಲೆಮಾರಿನ ಹೊಸ ಪ್ರೊಸೆಸರ್‌ ಅನಾವರಣ!.ವಿಶೇಷತೆ ಏನು?ಓದಿರಿ : AMDಯಿಂದ 3ನೇ ತಲೆಮಾರಿನ ಹೊಸ ಪ್ರೊಸೆಸರ್‌ ಅನಾವರಣ!.ವಿಶೇಷತೆ ಏನು?

20 ಎಂಹೆಚ್ಝ್ ಬ್ಲಾಕ್‌ಗಳ, 3,300-3,600 ಎಂಹೆಚ್ಝ್ ಬ್ಯಾಂಡ್‌ನಲ್ಲಿ 5 ಜಿ ಸ್ಪೆಕ್ಟ್ರಮ್ ಬ್ಯಾಂಡ್ಗಳಲ್ಲಿ ಪ್ರತಿ ಯೂನಿಟ್‌ಗೆ ರೂ 492 ಕೋಟಿ ಬೆಲೆಗೆ ಎಂದು ಟ್ರಾಯ್ ಪ್ರಸ್ತಾಪಿಸಿದೆ. 5G ನೆಟವರ್ಕ್‌ ಅನ್ನು ಆದಷ್ಟು ಬೇಗನೆ ಹೊಂದುವ ನಿರ್ಧಾರಗಳಿದ್ದು, ಟ್ರಾಯ್‌ ಸಂಸ್ಥೆಯು 5G ಬೆಲೆ ದುಬಾರಿ ಎನಿಸಿರುವದರಿಂದ ಇಲ್ಲಿನ ಟೆಲಿಕಾಂ ಸಂಸ್ಥೆಗಳಿಗೆ ಆರ್ಥಿಕ ಹೊರೆ ಎನಿಸಿದೆ. ಆದರೂ ಈಗಾಗಲೇ ಕೇಲವು ಕಂಪನಿಗಳು 5G ನೆಟರ್ವಕ್‌ ಸ್ಥಾವನೆಗೆ ಮುಂದೆ ಬಂದಿವೆ ಎನ್ನಲಾಗಿದೆ.

'ಪೆನ್‌ಡ್ರೈವ್‌' ವೇಗವನ್ನು ಹೆಚ್ಚಿಸಲು ಇರುವ ಮಾರ್ಗಗಳು!'ಪೆನ್‌ಡ್ರೈವ್‌' ವೇಗವನ್ನು ಹೆಚ್ಚಿಸಲು ಇರುವ ಮಾರ್ಗಗಳು!

5G ನಿರೀಕ್ಷೆಯಲ್ಲಿ

5G ನಿರೀಕ್ಷೆಯಲ್ಲಿ

ಎಲ್ಲರೂ ಇದೀಗ 5G ನೆಟವರ್ಕ್‌ ಅನ್ನು ಎದುರು ನೋಡುತ್ತಿದ್ದು, ಬಳಕೆದಾರರು 4G ನೆಟರ್ವಕ್‌ನಲ್ಲಿ ಕಾಣದ ವೇಗವನ್ನು 5G ಒದಗಿಸಲಿದೆ. ವೈಯಕ್ತಿಕವಾಗಿ ಮತ್ತು ಸಮಾಜದ ಪ್ರತಿ ವಲಯಕ್ಕೂ ಸಹ ಈ ನೆಟವರ್ಕ್‌ ಅಗತ್ಯ ಎಂದು ಹೇಳಬಹುದು. ವೇಗದ ಡಾಟಾ ಟ್ರಾನ್ಸ್ಫರಿಂಗ್‌, ಕಡಿಮೆ ಪವರ್‌ ಬಳಕೆ, ಅತ್ಯುತ್ತಮ ಸೆನ್ಸಾರ್‌ ಸೇವೆಗಳು ಈ ಎಲ್ಲವನ್ನು ಒದಗಿಸುವ 5G ಈಗ ಎಲ್ಲರ ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಸ್ವಯಂಚಾಲಿತ ವಾಹನ, ಮನರಂಜನೇ ಕ್ಷೇತ್ರದಲ್ಲಿ 5G, ಆರೋಗ್ಯ ವಲಯದಲ್ಲಿ, ಹೀಗೆ ಪ್ರತಿ ಕ್ಷೇತ್ರದಲ್ಲಿಯೂ ಹೊಸ ಟೆಕ್ನಾಲಜಿಯು ಸಮಯದ ಉಳಿಕೆಯೊಂದಿಗೆ ಬದಲಾವಣೆಗಳನ್ನು ತರಲಿದೆ. ಇಷ್ಟೇಲ್ಲಾ ಉಪಯೋಗಗಳನ್ನು ನೀಡಲಿರುವ 5G ನೆಟವರ್ಕ್‌ ದೊಡ್ಡ ಡ್ರಾಬ್ಯಾಕ್‌ ಎಂದರೇ ಅದರ ಬೆಲೆ. ಸ್ಪರ್ಧಾತ್ಮಕ ಬೆಲೆಯಲ್ಲಿ 5G ನೆಟವರ್ಕ್‌ ಲಭ್ಯವಾದರೇ ಬಹುಬೇಗನೆ ಹೆಚ್ಚು ವ್ಯಾಪಿಸಿಕೊಳ್ಳಲಿದೆ.

ಓದಿರಿ : ಸ್ಮಾರ್ಟ್‌ಫೋನ್‌ಗಳಿಗೆ ಮಿಂಚಿನ ವೇಗ ನೀಡಲಿದೆ ಹೊಸ 'ಮೀಡಿಯಾ ಟೆಕ್‌ 5G' ಪ್ರೊಸೆಸರ್! ಓದಿರಿ : ಸ್ಮಾರ್ಟ್‌ಫೋನ್‌ಗಳಿಗೆ ಮಿಂಚಿನ ವೇಗ ನೀಡಲಿದೆ ಹೊಸ 'ಮೀಡಿಯಾ ಟೆಕ್‌ 5G' ಪ್ರೊಸೆಸರ್!

ಸದ್ಯ ದೇಶಿಯ ಟೆಲಿಕಾಂ ಸಂಸ್ಥೆಗಳು ಸಹ 5G ತರಲು ಮುಂದಾಗುತ್ತಿವೆ. ಆದರೆ 5G ನೆಟವರ್ಕ್ ಬೆಲೆಯು ದುಬಾರಿ ಆಗಿದ್ದು, ಕಾರ್ಯದಲ್ಲಿ ವಿಳಂಬ ಎನ್ನಲಾಗುತ್ತಿದೆ. ಹೀಗಾಗಿ ವೇಗದ 5G ನೆಟವರ್ಕ್‌ಗಾಗಿ ಭಾರತೀಯರು ಇನ್ನು ಕಾಯಬೇಕಿದೆ.

Best Mobiles in India

English summary
5G isn't just extraordinary internet speed, it's a huge leap forward.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X