Subscribe to Gizbot

ಭಾರತದಲ್ಲಿ ಇ ಕಾಮರ್ಸ್ ತಾಣಗಳ ಅಭಿವೃದ್ಧಿ

Written By:

ಭಾರತೀಯ ಇ ಕಾಮರ್ಸ್ ಉದ್ಯಮ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. 2015 ರಲ್ಲೂ ಹೆಚ್ಚಿನ ಪ್ರಗತಿಯನ್ನು ಕಂಡುಕೊಂಡ ಈ ವ್ಯವಹಾರ 2016 ರಲ್ಲೂ ಅದ್ವಿತೀಯವಾಗಿ ಬೆಳೆಯುವ ನಿರ್ಧಾರದಲ್ಲಿದೆ. ಭಾರತದಲ್ಲಿ ಇ ಕಾಮರ್ಸ್ ವ್ಯವಹಾರ ಹೆಚ್ಚಿನ ಬಳಕೆದಾರರನ್ನು ಪಡೆದುಕೊಂಡಿದ್ದು ಶಾಪಿಂಗ್ ಅನುಕೂಲವನ್ನು ಇದು ಇನ್ನಷ್ಟು ಸರಳಗೊಳಿಸಿದೆ.

ಓದಿರಿ: "ಗೂಗಲ್‌ ಕ್ರೋಮ್‌" ಬ್ರೌಸರ್‌ ವೇಗಗೊಳಿಸುವುದು ಹೇಗೆ ?


ಇಂದಿನ ಲೇಖನದಲ್ಲಿ ಭಾರತದ ಇ ಕಾರ್ಮಸ್ ವ್ಯವಸ್ಥೆಯು ಯಾವೆಲ್ಲಾ ರೀತಿಯಲ್ಲಿ ಬದಲಾವಣೆ ಕಾಲಿರಿಸಿದೆ ಎಂಬುದನ್ನು ನೋಡೋಣ. ಇ ಕಾಮರ್ಸ್ ಸೈಟ್‎ಗಳು ಯಾವ ವಿಧಾನಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ ಇವುಗಳು ಅನುಸರಿಸುತ್ತಿರುವ ತಂತ್ರಗಳೇನು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಕಡಿಮೆ ಡಿಸ್ಕೌಂಟ್ಸ್

ಕಡಿಮೆ ಡಿಸ್ಕೌಂಟ್ಸ್

ಉತ್ತಮ ಡೀಲ್‎ಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಅವರನ್ನು ತಮ್ಮ ಸೈಟ್‎ಗಳತ್ತ ಎಳೆಯುವ ಕಾರ್ಯವನ್ನು ಇ ಕಾಮರ್ಸ್ ತಾಣಗಳು ಮಾಡುತ್ತಿವೆ. ಭಾರತದಲ್ಲಿ ಫ್ಲಿಪ್‎ಕಾರ್ಟ್, ಅಮೆಜಾನ್ ಇಂಡಿಯಾ, ಪೇಟಮ್, ಸ್ನ್ಯಾಪ್‎ಡೀಲ್, ಇಬೇಡಾಟ್‎ಇನ್ ಮತ್ತು ಶಾಪ್‎ಕ್ಲಸ್ ಭಾರತದಲ್ಲಿ 85-90% ಇ ಕಾಮರ್ಸ್ ವ್ಯವಹಾರವನ್ನು ಹೊಂದಿದೆ.

ಕ್ಯಾಶ್ ಆನ್ ಡೆಲಿವರಿ

ಕ್ಯಾಶ್ ಆನ್ ಡೆಲಿವರಿ

ಗ್ರಾಹಕರು ಈ ಬಗೆಯ ವಿಧಾನಕ್ಕೆ ಹೆಚ್ಚು ಆದ್ಯತೆಯನ್ನು ನೀಡುವುದರಿಂದ ಹೆಚ್ಚಿನ ಬಳಕೆದಾರರು ಇದನ್ನು ಆಯ್ಕೆಮಾಡಿಕೊಂಡಿದ್ದಾರೆ. ಸ್ಥಳದಲ್ಲಿಯೇ ಶಾಪಿಂಗ್ ಮಾಡಿ ಪಾವತಿ ಮಾಡುವುದು ಉತ್ತಮ ಆಯ್ಕೆ ಎಂದೆನಿಸಿದೆ.

 ಹೆಚ್ಚಿನ ಟ್ರಾನ್ಸೇಕ್ಶನ್ಸ್

ಹೆಚ್ಚಿನ ಟ್ರಾನ್ಸೇಕ್ಶನ್ಸ್

2015 ರಲ್ಲಿ 50 ಮಿಲಿಯನ್‎ಗಿಂತಲೂ ಹೆಚ್ಚಿನ ಟ್ರಾನ್ಸೇಕ್ಟಿಂಗ್ ಚಟುವಟಿಕೆಗಳು ನಡೆದಿದೆ ಮತ್ತು ಈ ವರ್ಷ ಕನಿಷ್ಟ ಪಕ್ಷ ಇದು 75 ಮಿಲಿಯನ್ ತಲುಪುವ ಸಾಧ್ಯತೆ ಇದೆ ಎಂಬುದಾಗಿ ಗೂಗಲ್ ಸೌತ್ ಈಸ್ಟ್ ಏಷ್ಯಾ ಮತ್ತು ಭಾರತದ ಮ್ಯಾನೇಜಿಂಗ್ ಡೈರೆಕ್ಟರ್ ರಾಜನ್ ಆನಂದನ್ ತಿಳಿಸಿದ್ದಾರೆ.

 ಹೊಸ ವರ್ಗಗಳು

ಹೊಸ ವರ್ಗಗಳು

ತಮ್ಮ ಸೈಟ್‎ಗೆ ಗ್ರಾಹಕರು ಹೆಚ್ಚುವರಿ ಭೇಟಿ ನೀಡಬೇಕು ಎಂಬ ಉದ್ದೇಶಕ್ಕಾಗಿ ಕಂಪೆನಿಗಳು ಅವರುಗಳ ಇಚ್ಛೆಗೆ ಅನುಗುಣವಾದ ಹೊಸ ವರ್ಗಗಳನ್ನು ನಿರ್ಮಿಸಿದೆ. ನೀರು ಮತ್ತು ಹಾಲನ್ನು ವಿತರಿಸುವಂತಹ ಕೆಲಸವನ್ನು ಈ ತಾಣಗಳು ಮಾಡುತ್ತಿವೆ.

ಆನ್‎ಲೈನ್ ಮತ್ತು ಆಫ್‎ಲೈನ್ ವ್ಯತ್ಯಾಸ

ಆನ್‎ಲೈನ್ ಮತ್ತು ಆಫ್‎ಲೈನ್ ವ್ಯತ್ಯಾಸ

ಆನ್‫‎ಲೈನ್ ಮತ್ತು ಆಫ್‎ಲೈನ್ ವ್ಯಾಪಾರ ಇಂದು ಸಮತೋಲವನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾಗಿದ್ದು ಇವುಗಳ ನಡುವೆ ಸಮಾನತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ.

ಸೋಲುಗೆಲುವಿನ ಆಟ

ಸೋಲುಗೆಲುವಿನ ಆಟ

ಇಂದು ರೀಟೈಲ್ ಕ್ಷೇತ್ರ ತೀವ್ರವಾಗಿ ಬೆಳೆಯುತ್ತಿದ್ದು ಒಂದೊಂದು ವರ್ಗದಲ್ಲೂ ಹೊಸ ಹೊಸ ಸ್ಟಾರ್ಟಪ್‎ಗಳು ತಲೆಎತ್ತಿನಿಂತಿದ್ದು ತೀವ್ರ ಪೈಪೋಟಿಯು ಎಲ್ಲಾ ವಿಧಧಲ್ಲಿಯೂ ನಡೆಯುತ್ತಿದೆ. ಸೋಲು ಗೆಲುವಿನ ಆಟವಾಗಿ ಈ ವ್ಯವಹಾರ ಮಾರ್ಪಟ್ಟಿದೆ.

 ಹಳ್ಳಿಗಳಿಗೂ ಪ್ರವೇಶ

ಹಳ್ಳಿಗಳಿಗೂ ಪ್ರವೇಶ

ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೂ ಇ ಕಾಮರ್ಸ್ ವ್ಯವಹಾರ ಬೆಳೆದಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಗ್ರೂಪ್ ಹಳ್ಳಿಗಳಿಗೂ ತಮ್ಮ ಸೇವೆಯನ್ನು ಒದಗಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
More users will help companies build scale, but they will embrace a few changes themselves.Here's a look at 7 key trends for the Indian e-commerce industry for the year 2016...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot